ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ಐಪಿಎಲ್ ವೇಳಾಪಟ್ಟಿ

Posted By:
ipl 2018 full schedule of Kolkata knight riders

ಬೆಂಗಳೂರು, ಮಾರ್ಚ್ 21: ಹೆಚ್ಚಿನ ಪಾಲು ಯುವ ಆಟಗಾರರನ್ನೇ ಹೊಂದಿರುವ ಶಾರುಕ್ ಖಾನ್, ಜೂಹಿ ಚಾವ್ಲಾ ಒಡೆತನದ ಕೊಲ್ಕತ್ತಾ ನೈಟ್ ರೈಡರ್ಸ್ ತಂಡ ಈ ಬಾರಿಯ ಐಪಿಎಲ್‌ನಲ್ಲಿ ಹೊಸ ಉತ್ಸಾಹದೊಂದಿಗೆ ಕಣಕ್ಕಿಳಿಯಲಿದೆ.

ಗೌತಮ್ ಗಂಭೀರ್ ಅವರನ್ನು ತಂಡದಿಂದ ಹೊರಗೆ ಕಳುಹಿಸಿರುವ ಕೊಲ್ಕತ್ತಾಕ್ಕೆ ಈ ಬಾರಿ ದಿನೇಶ್ ಕಾರ್ತಿಕ್ ನಾಯಕತ್ವ ವಹಿಸಿಕೊಂಡಿದ್ದು, ಕರ್ನಾಟಕದ ರಾಬಿನ್ ಉತ್ತಪ್ಪ ಉಪನಾಯಕ ಸ್ಥಾನ ಅಲಂಕರಿಸಿದ್ದಾರೆ. ಈ ತಂಡದ ಸ್ಟಾರ್ ಆಟಗಾರ ಸುನಿಲ್ ನರೇನ್ ಅವರನ್ನು ರೈಟ್‌ ಟು ಮ್ಯಾಚ್ ಅಡಿಯಲ್ಲಿ ತಂಡದಲ್ಲೇ ಉಳಿಸಿಕೊಂಡ ಕೊಲ್ಕತ್ತಾ ಹರಾಜು ಸಮಯದಲ್ಲಿ ರಾಬಿನ್ ಉತ್ತಪ್ಪ ಮತ್ತು ಆಂಡ್ರೆ ರಸೆಲ್ ಅವರನ್ನು ಉಳಿಸಿಕೊಂಡಿತು. ಇದೇ ತಂಡದಲ್ಲಿ ಕರ್ನಾಟಕದ ಬೌಲರ್ ವಿನಯ್ ಕುಮಾರ್ ಕೂಡಾ ಸ್ಥಾನ ಪಡೆದಿದ್ದಾರೆ.

ಐಪಿಎಲ್ 2018: ಆರ್ ಸಿಬಿ ಪಂದ್ಯಗಳ ವೇಳಾಪಟ್ಟಿ

ಕೊಲ್ಕತ್ತಾ ತಂಡವು ತನ್ನ ಮೊದಲ ಪಂದ್ಯವನ್ನು ಏಪ್ರಿಲ್ 8ರಂದು ಆರ್‌ಸಿಬಿ ವಿರುದ್ಧ ಕೊಲ್ಕತ್ತಾದಲ್ಲಿ ಆಡಲಿದೆ. ಕೊಲ್ಕತ್ತಾವು ಹದಿನಾಲ್ಕು ಪಂದ್ಯಗಳನ್ನು ಆಡಲಿದ್ದು, ಏಳು ಪಂದ್ಯಗಳು ತವರು ನೆಲದಲ್ಲಿ ನಡೆಯಲಿವೆ.

ಕೊಲ್ಕತ್ತಾ ನೈಟ್‌ರೈಡರ್ಸ್ ತಂಡದ ವೇಳಾಪಟ್ಟಿ ಇಂತಿದೆ.

ಐಪಿಎಲ್ 11ರ ವೇಳಾಪಟ್ಟಿ: ಚೆನ್ನೈ -ಮುಂಬೈ ಮೊದಲ ಪಂದ್ಯ

IPL- 2018: ಕೊಲ್ಕತ್ತಾ ನೈಟ್‌ ರೈಡರ್ಸ್‌ (KKR) ಏಪ್ರಿಲ್ ತಿಂಗಳ ಪಂದ್ಯಗಳ ವೇಳಾಪಟ್ಟಿ

ದಿನಾಂಕ ವಾರ ಯಾವ ತಂಡದ ವಿರುದ್ಧ ಸ್ಥಳ
ಏಪ್ರಿಲ್ 8 ಭಾನುವಾರ ರಾಯಲ್ ಚಾಲೆಂಜರ್ಸ್ ಬೆಂಗಳೂರು ಕೊಲ್ಕತ್ತಾ
ಏಪ್ರಿಲ್ 10 ಮಂಗಳವಾರ ಚೆನ್ನೈ ಸೂಪರ್‌ ಕಿಂಗ್‌ ಚೆನ್ನೈ
ಏಪ್ರಿಲ್ 14 ಶನಿವಾರ ಸನ್‌ರೈಸಸ್ ಹೈದರಾಬಾದ್ ಕೊಲ್ಕತ್ತಾ
ಏಪ್ರಿಲ್ 16 ಸೋಮವಾರ ಡೆಲ್ಲಿ ಡೇರ್‌ಡೆವಿಲ್ಸ್‌ ಕೊಲ್ಕತ್ತಾ
ಏಪ್ರಿಲ್ 18 ಬುಧವಾರ ರಾಜಸ್ಥಾನ ರಾಯಲ್ಸ್‌ ಜೈಪುರ
ಏಪ್ರಿಲ್ 21 ಶನಿವಾರ ಕಿಂಗ್ಸ್‌ಇಲೆವನ್ ಪಂಜಾಬ್‌ ಕೊಲ್ಕತ್ತಾ
ಏಪ್ರಿಲ್ 27 ಶುಕ್ರವಾರ ಡೆಲ್ಲಿ ಡೇರ್‌ಡೆವಿಲ್ಸ್‌ ದೆಹಲಿ
ಏಪ್ರಿಲ್ 29 ಭಾನುವಾರ ರಾಯಲ್ ಚಾಲೆಂಜರ್ಸ್ ಬೆಂಗಳೂರು ಬೆಂಗಳೂರು

IPL- 2018: ಕೊಲ್ಕತ್ತಾ ನೈಟ್‌ ರೈಡರ್ಸ್‌ (KKR) ಮೇ ತಿಂಗಳ ಪಂದ್ಯಗಳ ವೇಳಾಪಟ್ಟಿ

ದಿನಾಂಕ ವಾರ ಯಾವ ತಂಡದ ವಿರುದ್ಧ ಸ್ಥಳ
ಮೇ 3 ಗುರವಾರ ಚೆನ್ನೈ ಸೂಪರ್ ಕಿಂಗ್ಸ್‌ ಕೊಲ್ಕತ್ತಾ
ಮೇ 6 ಭಾನುವಾರ ಮುಂಬೈ ಇಂಡಿಯನ್ಸ್‌ ಮುಂಬೈ
ಮೇ 9 ಬುಧವಾರ ಮುಂಬೈ ಇಂಡಿಯನ್ಸ್‌ ಕೊಲ್ಕತ್ತಾ
ಮೇ 12 ಶನಿವಾರ ಕಿಂಗ್ಸ್ ಇಲೆವನ್ ಪಂಜಾಬ್ ಇಂಧೋರ್
ಮೇ 15 ಮಂಗಳವಾರ ರಾಜಸ್ಥಾನ ರಾಯಲ್ಸ್‌ ಕೊಲ್ಕತ್ತಾ
ಮೇ 19 ಶನಿವಾರ ಸನ್‌ರೈಸಸ್ ಹೈದರಾಬಾದ್ ಹೈದರಾಬಾದ್

ಕ್ರಿಕೆಟನ್ನು ಪ್ರೀತಿಸುತ್ತೀರಾ? ಋಜುವಾತುಪಡಿಸಿ! ಮೈಖೇಲ್ ಫ್ಯಾಂಟಸಿ ಕ್ರಿಕೆಟ್ ಆಟವಾಡಿ

Story first published: Wednesday, March 21, 2018, 16:07 [IST]
Other articles published on Mar 21, 2018

myKhel ನಿಂದ ತಾಜಾ ಸುದ್ದಿಗಳನ್ನು ಪಡೆಯಿರಿ