ನನ್ನ ಅತ್ಯುತ್ತಮ ಇನ್ನಿಂಗ್ಸ್: ಡ್ವೇಯ್ನ್ ಬ್ರಾವೊ

Posted By:
IPL 2018: My best-ever innings, says Bravo

ಮುಂಬೈ, ಏಪ್ರಿಲ್ 08: ಮುಂಬೈ ವಿರುದ್ಧ ಶನಿವಾರ ನಡೆದ ಪಂದ್ಯದ ಚಿತ್ರಣವನ್ನೇ ಬದಲಿಸಿ ತಂಡಕ್ಕೆ ಗೆಲುವು ತಂದಿತ್ತ ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‌ಕೆ) ಆಟಗಾರ ವೆಸ್ಟ್ ಇಂಡೀಸ್‌ನ ಡ್ವೇಯ್ನ್ ಬ್ರಾವೊ ಇದು ತಮ್ಮ ಅತ್ಯುತ್ತಮ ಇನ್ನಿಂಗ್ಸ್ ಎಂದು ಹೇಳಿಕೊಂಡಿದ್ದಾರೆ.

ಬ್ರಾವೊ ಕಳೆದ ಎರಡು ಐಪಿಎಲ್ ಆವೃತ್ತಿಗಳಲ್ಲಿ ಗುಜರಾತ್ ಲಯನ್ಸ್ ಪರ ಆಡಿದ್ದರು.

ಎರಡು ವರ್ಷದ ನಿಷೇಧದ ಬಳಿಕ ಸಿಎಸ್‌ಕೆ ಮತ್ತೆ ಇಂಡಿಯನ್ ಪ್ರೀಮಿಯರ್ ಲೀಗ್‌ಗೆ (ಐಪಿಎಲ್) ಮರಳಿದ ಮೊದಲ ಪಂದ್ಯದಲ್ಲೇ ಬ್ರಾವೊ ಭರ್ಜರಿ ಬ್ಯಾಟಿಂಗ್್ನಿಂದ ರೋಚಕ ಜಯಗಳಿಸಿತ್ತು.

ಐಪಿಎಲ್ 2018 : ಮುಂಬೈ ವಿರುದ್ಧ ಚೆನ್ನೈಗೆ ರೋಚಕ ಜಯ

166 ರನ್‌ಗಳ ಗುರಿ ಬೆನ್ನಟ್ಟಿದ್ದ ಸಿಎಸ್‌ಕೆ 17 ಓವರ್‌ಗಳಲ್ಲಿ 118 ರನ್‌ಗಳಿಗೆ 8 ವಿಕೆಟ್‌ ಕಳೆದುಕೊಂಡು ಸೋಲಿನ ಭೀತಿಗೆ ಒಳಗಾಗಿತ್ತು. ಈ ವೇಳೆ ಮಿಂಚಿನ ಆಟವಾಡಿದ್ದ ಬ್ರಾವೊ ತಂಡವನ್ನು ಗೆಕುವಿನ ದಡದವರೆಗೆ ಕೊಂಡೊಯ್ದಿದ್ದರು. ಕೇವಲ 30 ಎಸೆತಗಳಲ್ಲಿ ಏಳು ಸಿಕ್ಸರ್ ಸಹಿತ 68 ರನ್ ಚಚ್ಚಿದ್ದರು.

'ಇದು ನನ್ನ ಅತ್ಯುತ್ತಮ ಇನ್ನಿಂಗ್ಸ್. ಯಾವುದೇ ರೂಪದ ಕ್ರಿಕೆಟ್‌ನಲ್ಲಿ ಈ ಹಿಂದೆ ಇಂತಹ ಅವಿಸ್ಮರಣೀಯ ಇನ್ನಿಂಗ್ಸ್ ಆಡಿರಲಿಲ್ಲ. ಇದು ಬಹು ವಿಶೇಷವಾದುದು' ಎಂದು ಬ್ರಾವೊ ಹೇಳಿದ್ದಾರೆ.

ಫಿಟ್ ಆಟಗಾರರ ಕ್ರೀಡೆ

'ಇದು ಫಿಟ್ ಆಟಗಾರನ ಕ್ರೀಡೆಯೇ ಹೊರತು, ಯುವ ಆಟಗಾರರ ಕ್ರೀಡೆಯಲ್ಲ. ಕಮ್‌ಬ್ಯಾಕ್‌ನಲ್ಲಿ ಇದಕ್ಕಿಂತ ಉತ್ತಮ ಉತ್ತಮ ಆಟ ನಿರೀಕ್ಷಿಸಲಾಗದು' ಎಂದು ಮಾಜಿ ಕ್ರಿಕೆಟಿಗ ದೀಪ್ ದಾಸ್ ಗುಪ್ತಾ ಟ್ವೀಟ್ ಮಾಡಿದ್ದಾರೆ.

ಬೌಂಡರಿ, ಸಿಕ್ಸರ್ ಸುರಿಮಳೆ:
ವಾಂಖೇಡೆ ಕ್ರೀಡಾಂಗಣದಲ್ಲಿ ರನ್ ಸುರಿಮಳೆ ಸುರಿಸಿದ್ದ ಬ್ರಾವೊ, ಏಳು ಸಿಕ್ಸರ್ ಮತ್ತು ಮೂರು ಬೌಂಡರಿಗಳನ್ನು ಬಾರಿಸಿದ್ದರು. ಆರಂಭದಲ್ಲಿ ಪಂದ್ಯದ ಮೇಲೆ ಹಿಡಿತ ಸಾಧಿಸಿದ್ದ ಮುಂಬೈ ತಂಡಕ್ಕೆ ಆಘಾತ ಉಂಟುಮಾಡಿದ್ದರು.

ಐಪಿಎಲ್ ವಿಶೇಷ ಪುಟ | ಪೂರ್ಣವೇಳಾಪಟ್ಟಿ | ಸಿಎಸ್‌ಕೆ ವೇಳಾಪಟ್ಟಿ

'ಅರ್ಧ ಶತಕ ಗಳಿಸಿದಾಗ ನಾನು ಬ್ಯಾಟ್‌ಅನ್ನು ಮೇಲೆತ್ತಿರಲಿಲ್ಲ. ನನ್ನ ಕೆಲಸ ಇನ್ನೂ ಮುಗಿದಿಲ್ಲ ಎನ್ನುವುದು ತಿಳಿದಿತ್ತು. ಇನ್ನೂ ಸಾಕಷ್ಟು ದೂರು ಸಾಗಬೇಕಿತ್ತು. ನನ್ನ ತಂಡಕ್ಕೆ ತಂಡವನ್ನು ಗೆಲ್ಲಿಸುವುದರೆಡೆಗೆ ಮಾತ್ರ ನನ್ನ ಗಮನವಿತ್ತು' ಎಂದು ಬ್ರಾವೊ ತಿಳಿಸಿದ್ದಾರೆ.

'ಕೊನೆಯ ಓವರ್‌ನಲ್ಲಿ ಔಟಾದಾಗ ತುಂಬಾ ನಿರಾಸೆಯಾಯಿತು. ಆದರೆ, ನನ್ನ ತಂಡವನ್ನು ಗೆಲುವಿನ ಹೊಸ್ತಿಲಿನಲ್ಲಿ ನಿಲ್ಲಿಸುವ ಆಟವಾಡಿದ್ದೆ. ಬ್ಯಾಟ್ ಮೂಲಕ ತಂಡಕ್ಕೆ ಕಾಣಿಕೆ ಸಲ್ಲಿಸಲು ಸಾಧ್ಯವಾಗಿದ್ದು ಖುಷಿ ನೀಡಿದೆ. ಹಲವು ಸಮಯದಿಂದ ಉತ್ತಮ ರನ್ ಗಳಿಸಲು ಸಾಧ್ಯವಾಗಿರಲಿಲ್ಲ. ಹೀಗಾಗಿ ಈ ಇನ್ನಿಂಗ್ಸ್‌ ಎಂದಿಗೂ ವಿಶಿಷ್ಟವಾಗಿರಲಿದೆ ಎಂದರು.

ಕ್ರಿಕೆಟನ್ನು ಪ್ರೀತಿಸುತ್ತೀರಾ? ಋಜುವಾತುಪಡಿಸಿ! ಮೈಖೇಲ್ ಫ್ಯಾಂಟಸಿ ಕ್ರಿಕೆಟ್ ಆಟವಾಡಿ

Story first published: Sunday, April 8, 2018, 16:56 [IST]
Other articles published on Apr 8, 2018

myKhel ನಿಂದ ತಾಜಾ ಸುದ್ದಿಗಳನ್ನು ಪಡೆಯಿರಿ