ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಪಿಎಲ್ 2018: ರೈನಾ ಹಿಂದಿಕ್ಕಿ ದಾಖಲೆ ಬರೆದ ವಿರಾಟ್ ಕೊಹ್ಲಿ

By Mahesh
IPL 2018 : Virat Kohli leading Run-getter and other records after MI match.

ಬೆಂಗಳೂರು, ಏಪ್ರಿಲ್ 18: ಐಪಿಎಲ್ ಚಾಂಪಿಯನ್ ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ಏಕಾಂಗಿ ಹೋರಾಟ ನಡೆಸಿದ ವಿರಾಟ್ ಕೊಹ್ಲಿ ಅವರು ಹಲವು ದಾಖಲೆಗಳನ್ನು ಬರೆದಿದ್ದಾರೆ.

ಪಂದ್ಯದ ಸ್ಕೋರ್ ಕಾರ್ಡ್

ಮುಖ್ಯವಾಗಿ, ಚೆನ್ನೈ ಸೂಪರ್ ಕಿಂಗ್ಸ್ ನ ಆಟಗಾರ ಸುರೇಶ್ ರೈನಾ ಹೆಸರಿನಲ್ಲಿದ್ದ 'ಐಪಿಎಲ್ ನ ಅತ್ಯಧಿಕ ರನ್ ಗಳಿಕೆ' ದಾಖಲೆಯನ್ನು ಆರ್ ಸಿಬಿ ನಾಯಕ ಕೊಹ್ಲಿ ಮುರಿದಿದ್ದಾರೆ. ಜತೆಗೆ ಈ ಐಪಿಎಲ್ 11ರ ವೈಯಕ್ತಿಕ ರನ್ ಗಳಿಕೆಯಲ್ಲೂ ಅಗ್ರಸ್ಥಾನಕ್ಕೇರಿದ್ದು, ಕಿತ್ತಳೆ ಟೋಪಿ ಧರಿಸಿದ್ದಾರೆ.

ಐಪಿಎಲ್ ವಿಶೇಷ ಪುಟ | ಬೆಂಗಳೂರು ತಂಡ | ಬೆಂಗಳೂರು ವೇಳಾಪಟ್ಟಿ

ಇದೇ ಮೊದಲ ಬಾರಿಗೆ ಐಪಿಎಲ್ 2018ರಲ್ಲಿ ವಿರಾಟ್ ಕೊಹ್ಲಿ ಆರಂಭಿಕ ಆಟಗಾರನಾಗಿ ಕಣಕ್ಕಿಳಿದರು. ಹಾಗೆ ನೋಡಿದರೆ, ಐಪಿಎಲ್ ನ ಎಷ್ಟೋ ದಾಖಲೆಗಳನ್ನು ಕೊಹ್ಲಿ ಅವರು ಓಪನಿಂಗ್ ಬ್ಯಾಟ್ಸ್ ಮನ್ ಆಗಿ ಮುರಿದಿದ್ದು ಎಂಬುದು ವಿಶೇಷ.

ಫ್ಯಾಂಟಸಿ ಲೀಗ್ ಆಡಿ | ಅಂಕಪಟ್ಟಿ

ಏಕಾಂಗಿಯಾಗಿ 214ರನ್ ಗಳ ಮೊತ್ತ ಬೆನ್ನು ಹತ್ತಿದ ಕೊಹ್ಲಿ 62 ಎಸೆತಗಳಲ್ಲಿ 92ರನ್ (7 ಬೌಂಡರಿ, 4ಸಿಕ್ಸರ್) ಗಳಿಸಿ ಅಜೇಯರಾಗಿ ಉಳಿದರು. ಐಪಿಎಲ್ ನಲ್ಲಿ ಅತಿ ಹೆಚ್ಚು ಪಂದ್ಯಗಳನ್ನಾಡಿರುವ ಸುರೇಶ್ ರೈನಾ ಅವರು ಇಲ್ಲಿ ತನಕ ಅತ್ಯಧಿಕ ರನ್ ಗಳಿಕೆ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದರು.

ಐಪಿಎಲ್ ಅತ್ಯಧಿಕ ರನ್ ಗಳಿಕೆ

ಐಪಿಎಲ್ ಅತ್ಯಧಿಕ ರನ್ ಗಳಿಕೆ

ಐಪಿಎಲ್ ಇತಿಹಾಸದಲ್ಲಿ ಅತಿಹೆಚ್ಚು ರನ್ ಗಳಿಕೆ ದಾಖಲೆ ಸುರೇಶ್ ರೈನಾ ಹೆಸರಿನಲ್ಲಿತ್ತು. ಚೆನ್ನೈ ಪರ ದಾಖಲೆಯ ಸತತ ಎಂಟು ಸೀಸನ್ ಆಡಿದ್ದ ರೈನಾ ಅವರು ಕಳೆದ ಬಾರಿ ಗುಜರಾತ್ ಲಯನ್ಸ್ ಪರ ಆಡಿದ್ದರು. ಈಗ ಮತ್ತೊಮ್ಮೆ ಚೆನ್ನೈ ಪರ ಬ್ಯಾಟ್ ಬೀಸುತ್ತಿದ್ದಾರೆ.


ಎಡಗೈ ಬ್ಯಾಟ್ಸ್ ಮನ್ ರೈನಾ ಅವರು 139.05 ಸ್ಟೈಕ್ ರೇಟ್ ನಂತೆ 161 ಪಂದ್ಯ (159ಇನ್ನಿಂಗ್ಸ್)ಗಳಲ್ಲಿ 4,558ರನ್ ಗಳಿಸಿ ದಾಖಲೆ ಬರೆದಿದ್ದರು. ಕೊಹ್ಲಿ ಈಗ 145 ಐಪಿಎಲ್ ಇನ್ನಿಂಗ್ಸ್ ಗಳಲ್ಲಿ ಈ ಗಡಿದಾಟಿದ್ದಾರೆ.

ಐಪಿಎಲ್ 11: ಈ 11 ದಾಖಲೆ ಮುರಿಯಲು ಸಾಧ್ಯವೇ?

ಐಪಿಎಲ್ ರನ್ ಮಷಿನ್ ಕೊಹ್ಲಿ

2016ರ ಐಪಿಎಲ್ ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು(ಆರ್ ಸಿಬಿ) ಯ ನಾಯಕ ವಿರಾಟ್ ಕೊಹ್ಲಿ ಗಳಿಸಿದ ಒಟ್ಟು ಮೊತ್ತ 973 ರನ್. ಇದು ಐಪಿಎಲ್ ಆವೃತ್ತಿಯೊಂದರಲ್ಲಿ ಆಟಗಾರನೊಬ್ಬ ಗಳಿಸಿದ ವೈಯಕ್ತಿಕ ಗರಿಷ್ಠ ಮೊತ್ತ. ಒಟ್ಟು 16 ಇನ್ನಿಂಗ್ಸ್ ಗಳಲ್ಲಿ 4 ಶತಕ ಮತ್ತು 7 ಅರ್ಧಶತಕಗಳನ್ನು ಬಾರಿಸಿರುವ ಕೋಹ್ಲಿ ಈ ಸಾಧನೆ ಮಾಡಿದ್ದಾರೆ. ಈ ದಾಖಲೆ ಇನ್ನೂ ಯಾರು ಮುರಿದಿಲ್ಲ.

ಐಪಿಎಲ್ ಅತ್ಯಧಿಕ ರನ್ ಗಳಿಕೆ ಆಟಗಾರರು

ಐಪಿಎಲ್ ಅತ್ಯಧಿಕ ರನ್ ಗಳಿಕೆ ಆಟಗಾರರಾದ ಪೈಕಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ವಿರಾಟ್ ಕೊಹ್ಲಿ ಅಗ್ರಸ್ಥಾನಕ್ಕೇರಿದ್ದಾರೆ. ಮಿಕ್ಕಂತೆ ಯಾರೆಲ್ಲ ಟಾಪ್ ಆಟಗಾರರಿದ್ದಾರೆ?
* ವಿರಾಟ್ ಕೊಹ್ಲಿ : 4559
* ಸುರೇಶ್ ರೈನಾ : 4558
* ರೋಹಿತ್ ಶರ್ಮ: 4345

* ಗೌತಮ್ ಗಂಭೀರ್ : 4210
* ಡೇವಿಡ್ ವಾರ್ನರ್ : 4014

ಈ ಪೈಕಿ ರೈನಾ ಹಾಗೂ ಕೊಹ್ಲಿ ಮಾತ್ರ 4500 ರನ್ ಸರದಾರರಾಗಿದ್ದಾರೆ. ಸದ್ಯಕ್ಕೆ ರೈನಾ ಮಾತ್ರ ಕೊಹ್ಲಿಗೆ ಪೈಪೋಟಿ ನೀಡಬಲ್ಲರು. ಅತಿ ಹೆಚ್ಚು ಪಂದ್ಯಗಳನ್ನು ಕೂಡಾ ಈ ಇಬ್ಬರು ಆಟಗಾರರು ಆಡಿದ್ದಾರೆ.

ಕೊಹ್ಲಿ-ಬೌಂಡರಿ ಬಾರಿಸಿದ ದಾಖಲೆ

ಅತ್ಯಧಿಕ ರನ್ ಗಳಿಕೆ ಜತೆಗೆ ಕೊಹ್ಲಿ ಅವರು ಐಪಿಎಲ್ ನಲ್ಲಿ 400 ಬೌಂಡರಿ ಸಿಡಿಸಿ ದಾಖಲೆ ಬರೆದಿದ್ದಾರೆ. ಜತೆಗೆ 50ಪ್ಲಸ್ ರನ್ ಗಳಿಕೆಯಲ್ಲಿ ಎರಡನೇ ಸ್ಥಾನಕ್ಕೇರಿದ್ದಾರೆ.

ಒಂದೇ ಪಂದ್ಯದಲ್ಲಿ ಹೆಚ್ಚು ಬೌಂಡರಿ ಗಳಿಕೆ ದಾಖಲೆ ಜಂಟಿಯಾಗಿ ಎಬಿ ಡಿ ವಿಲಿಯರ್ಸ್ ಹಾಗೂ ಪಾಲ್ ವಲ್ತಾಟಿ ಹೆಸರಿನಲ್ಲಿದೆ. ಇಬ್ಬರು ಇನ್ನಿಂಗ್ಸ್ ವೊಂದರಲ್ಲಿ 19 ಬೌಂಡರಿ ಬಾರಿಸಿದ್ದಾರೆ.

Story first published: Wednesday, April 18, 2018, 9:53 [IST]
Other articles published on Apr 18, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X