ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಆರ್‌ಸಿಬಿ ತಂಡದಲ್ಲಿ ಪ್ರಮುಖ ಬದಲಾವಣೆ : ವೇಗಿ ಅಲಭ್ಯ, ಆಸಿಸ್ ಸ್ಪಿನ್ನರ್ ಸೇರ್ಪಡೆ

Ipl 2020: Adam Zampa Replaced Kane Richardson In Rcb

ಈ ಬಾರಿಯ ಐಪಿಎಲ್‌ನಲ್ಲಿ ಆರ್‌ಸಿಬಿ ತಂಡದಲ್ಲಿ ಮಹತ್ವದ ಬದಲಾವಣೆಯೊಂದು ನಡೆದಿದೆ. ಆಸ್ಟ್ರೇಲಿಯಾದ ಸ್ಪಿನ್ ಬೌಲರ್ ಆ್ಯಡಂ ಜಂಪಾ ಆರ್‌ಸಿಬಿ ತಂಡಕ್ಕೆ ಸೇರ್ಪಡೆಯಾಗಿದ್ದಾರೆ. ಪಂದ್ಯಾವಳಿಯ ಆರಂಭಕ್ಕೆ ಇನ್ನು ಮೂರು ವಾರಗಳಿಗೂ ಕಡಿಮೆ ಅವಧಿ ಇರುವ ಸಂದರ್ಭದಲ್ಲಿ ಈ ಬೆಳವಣಿಗೆ ನಡೆದಿದೆ.

ಆಸ್ಟ್ರೇಲಿಯಾದ ವೇಗಿ ಕೇನ್ ರಿಚರ್ಡ್ಸನ್ ಆರ್‌ಸಿಬಿ ತಂಡದ ಭಾಗವಾಗಿದ್ದರು. ಆದರೆ ಅವರು ಈ ಬಾರಿ ಟೂರ್ನಿಯಿಂದ ಹಿಂದಕ್ಕೆ ಸರಿಯುವ ನಿರ್ಧಾರವನ್ನು ತೆಗೆದುಕೊಂದ್ದಾರೆ. ಈ ಕಾರಣದಿಂದಾಗಿ ಆಸ್ಟ್ರೇಲಿಯಾ ಮೂಲದವರೇ ಆದ ಸ್ಪಿನ್ನರ್‌ನನ್ನು ಆರ್‌ಸಿಬಿ ತಂಡಕ್ಕೆ ಸೇರ್ಪಡೆಗೊಳಿಸಿದೆ.

ಐಪಿಎಲ್ 2020: ಸಿಎಸ್‌ಕೆಗೆ ಕೊರೊನಾ ಕಂಟಕ, ಆರಂಭಿಕ ಪಂದ್ಯದಲ್ಲಿ ಆರ್‌ಸಿಬಿ?ಐಪಿಎಲ್ 2020: ಸಿಎಸ್‌ಕೆಗೆ ಕೊರೊನಾ ಕಂಟಕ, ಆರಂಭಿಕ ಪಂದ್ಯದಲ್ಲಿ ಆರ್‌ಸಿಬಿ?

ಕೇನ್ ಅಲಭ್ಯತೆಗೆ ಕಾರಣ

ಕೇನ್ ಅಲಭ್ಯತೆಗೆ ಕಾರಣ

ಮೂಲಗಳ ಮಾಹಿತಿ ಪ್ರಕಾರ ಕೇನ್ ರಿಚರ್ಡ್ಸನ್ ದಂಪತಿ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಈ ಕಾರಣದಿಂದಾಗಿ ಈ ಬಾರಿಯ ಟೂರ್ನಿಯನ್ನು ತೊರೆಯುವ ನಿರ್ಧಾರ ಕೈಗೊಂಡಿದ್ದಾರೆ ಎನ್ನಲಾಗಿದೆ. ಆದರೆ ವೇಗಿಯ ಸ್ಥಾನಕ್ಕೆ ಸ್ಪಿನ್ನರ್ ಆಯ್ಕೆ ಮಾಡಿಕೊಂಡು ಆರ್‌ಸಿಬಿ ಫ್ರಾಂಚೈಸಿ ಅಚ್ಚರಿ ಮೂಡಿಸಿದೆ.

ಝಂಪಾ ಉತ್ತಮ ದಾಖಲೆ

ಝಂಪಾ ಉತ್ತಮ ದಾಖಲೆ

ಆ್ಯಡಂ ಝಂಪಾ ಐಪಿಎಲ್‌ನಲ್ಲಿ ಉತ್ತಮ ದಾಖಲೆಯನ್ನು ಹೊಂದಿದ್ದಾರೆ. ಐಪಿಎಲ್ ಇತಿಹಾಸದಲ್ಲಿ 6 ವಿಕೆಟ್ ಪಡೆದ ಏಕೈಕ ಸ್ಪಿನ್ ಬೌಲರ್ ಎಂಬ ಹೆಗ್ಗಳಿಕೆ ಝಂಪಾ ಅವರಿಗಿದೆ. 28 ವರ್ಷದ ಝಂಪಾ 2016-2017ರಲ್ಲಿ ರೈಸಿಂಗ್ ಪುಣೆ ಸುಪರ್ ಜೇಂಟ್ಸ್ ತಂಡದ ಭಾಗವಾಗಿದ್ದರು. 11 ಪಂದ್ಯಗಳಿಂದ 19 ವಿಕೆಟ್ ಪಡೆದು ದಾಖಲೆಯನ್ನು ಬರೆದಿದ್ದಾರೆ ಮಿಂಚಿದ್ದಾರೆ. ಆದರೂ ಈ ಬಾರಿಯ ಐಪಿಎಲ್ ಟೂರ್ನಿಗಾಗಿ ನಡೆದ ಹರಾಜಿನಲ್ಲಿ ಯಾವುದೇ ತಂಡದ ಪಾಲಾಗದೆ ಉಳಿದುಕೊಂಡಿದ್ದರು.

ಯುಎಇನಲ್ಲಿ ಪರಿಣಾಮಕಾರಿಯಾಗಲಿದ್ದಾರಾ ಝಂಪಾ?

ಯುಎಇನಲ್ಲಿ ಪರಿಣಾಮಕಾರಿಯಾಗಲಿದ್ದಾರಾ ಝಂಪಾ?

ಆರ್‌ಸಿಬಿ ತಂಡಕ್ಕೆ ಆ್ಯಡಂ ಝಂಪಾ ಸೇರ್ಪಡೆಯಾಗುತ್ತಿರುವುದು ಸ್ಪಿನ್ ವಿಭಾಗವನ್ನು ಮತ್ತಷ್ಟು ಬಲಿಷ್ಠಗೊಳಿಸಿದೆ. ಈಗಾಗಲೇ ಆರ್‌ಸಿಬಿಯಲ್ಲಿ ಯುಜುವೇಂದ್ರ ಚಾಹಲ್, ವಾಶಿಂಗ್ಟನ್ ಸುಂದರ್, ಮೊಯೀನ್ ಅಲಿ ಪವನ್ ನೇಗಿ ಹಾಗೂ ಶಹ್ಬಾಜ್ ಅಹ್ಮದ್ ಇದ್ದಾರೆ. ಅದರಲ್ಲೂ ಯುಎಇ ಪಿಚ್‌ನಲ್ಲಿ ಝಂಪಾ ಪರಿಣಾಮಕಾರಿಯಾಗುವ ನಿರೀಕ್ಷೆಯಿದೆ. ಇಷ್ಟು ಪೈಪೋಟಿಯಲ್ಲಿ ಆಡುವ ಬಳಗದಲ್ಲಿಅವಕಾಶ ಗಿಟ್ಟಿಸಿಕೊಳ್ಳುವುದೇ ಸಾಹಸವಾಗಲಿದೆ.

ವೇಳಾಪಟ್ಟಿ ವಿಳಂಬ

ವೇಳಾಪಟ್ಟಿ ವಿಳಂಬ

ಐಪಿಎಲ್ 13ನೇ ಆವೃತ್ತಿ ಸೆಪ್ಟೆಂಬರ್ 19ರಿಂದ ಆರಂಭವಾಗಲಿದೆ. ಫೈನಲ್‌ ಪಂದ್ಯ ನವೆಂಬರ್ 10ರಂದು ಆಯೋಜನೆಯಾಗಲಿದೆ. ಆದರೆ ಪಂದ್ಯದ ಅಂತಿಮ ವೇಳಾಪಟ್ಟಿ ಇನ್ನು ಕೂಡ ಪ್ರಕಟವಾಗದೆ ಉಳಿದುಕೊಂಡಿದೆ. ಕೊರೊನಾ ವೈರಸ್‌ನಿಂದಾಗಿ ಅಬುದಾಬಿ-ದುಬೈ ಪ್ರಯಾಣದಲ್ಲಿ ನಿರ್ಬಂಧ ಹಾಗೂ ಸಿಎಸ್‌ಕೆ ಪಾಳಯದಲ್ಲಿ ಕೊರೊನಾ ವೈರಸ್ ಕಾಣಿಸಿಕೊಂಡಿರುವುದು ಐಪಿಎಲ್ ವೇಳಾಪಟ್ಟಿ ಮತ್ತಷ್ಟು ತಡವಾಗಲು ಕಾರಣವಾಗಿದೆ.

Story first published: Tuesday, September 1, 2020, 15:27 [IST]
Other articles published on Sep 1, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X