Breaking News: ಐಪಿಎಲ್‌ಗೆ ನಿವೃತ್ತಿ ಘೋಷಣೆ ಮಾಡಿದ ಅಂಬಾಟಿ ರಾಯುಡು

ಚೆನ್ನೈ ಸೂಪರ್ ಕಿಂಗ್ಸ್‌ನ ಅನುಭವಿ ಬ್ಯಾಟ್ಸ್‌ಮನ್ ಅಂಬಾಟಿ ರಾಯುಡು ಮಹತ್ವದ ಘೋಷಣೆ ಮಾಡಿದ್ದಾರೆ. 2022ರ ಐಪಿಎಲ್ ಋತುವಿನ ಬಳಿಕ ಇಂಡಿಯನ್ ಪ್ರೀಮಿಯರ್ ಲೀಗ್‌ನಿಂದ ನಿವೃತ್ತಿ ಹೊಂದುವುದಾಗಿ ಅಂಬಾಟಿ ರಾಯುಡು ಘೋಷಣೆ ಮಾಡಿದ್ದಾರೆ. ಮಧ್ಯಮ ಕ್ರಮಾಂಕದ ಪ್ರಮುಖ ಆಟಗಾರನಾಗಿ ಗುರಿತಿಸಿಕೊಂಡಿರುವ ಹೈದರಾಬಾದ್ ಮೂಲದ ಈ ಕ್ರಿಕೆಟಿಗ ಕಳೆದ ಹಲವು ವರ್ಷಗಳಿಂದ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಆಧಾರಸ್ತಂಭವಾಗಿದ್ದಾರೆ. ಅನೇಕ ಮಹತ್ವದ ಇನ್ನಿಂಗ್ಸ್‌ಗಳನ್ನು ಸಿಎಸ್‌ಕೆ ಪರವಾಗಿ ರಾಯುಡು ನೀಡಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ತಮ್ಮ ನಿವೃತ್ತಿಯ ಬಗ್ಗೆ ರಾಯುಡು ಘೋಷಣೆ ಮಾಡಿದ್ದಾರೆ. ಟ್ವಿಟ್ಟರ್‌ನಲ್ಲಿ ಅವರು "ಇದು ನನ್ನ ವೃತ್ತಿ ಜೀವನದ ಅಂತಿಮ ಐಪಿಎಲ್ ಆವೃತ್ತಿ ಎಂದು ಹೇಳಲು ನಾನು ಸಂತೋಷಪಡುತ್ತಿದ್ದೇನೆ. ಇಲ್ಲಿ ನಾನು ಆಡುತ್ತಾ ಸದ್ಭುತವಾದ ಸಮಯವನ್ನು ಕಳೆದಿದ್ದೇನೆ. ಕಳೆದ 13 ವರ್ಷಗಳಲ್ಲಿ ನಾನು ಎರಡು ಶ್ರೇಷ್ಠ ತಂಡಗಳಲ್ಲಿ ಆಡುವ ಅವಕಾಶ ಪಡೆದುಕೊಂಡಿದ್ದೇನೆ. ನನ್ನ ಈ ಪ್ರಯಾಣವನ್ನು ಸುಂದರವಾಗಿಸಿದ್ದಕ್ಕೆ ಮುಂಬೈ ಇಂಡಿಯನ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ನಾನು ತುಂಬು ಹೃದಯದಿಂದ ಧನ್ಯವಾದ ಹೇಳುತ್ತಿದ್ದೇನೆ" ಎಂದು ಅಂಬಾಟಿ ರಾಯುಡು ಹೇಳಿದ್ದಾರೆ.

For Quick Alerts
ALLOW NOTIFICATIONS
For Daily Alerts
Story first published: Saturday, May 14, 2022, 13:44 [IST]
Other articles published on May 14, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X