ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

CSK ತಂಡದಲ್ಲೇ ಉಳಿದ ರವೀಂದ್ರ ಜಡೇಜಾ: 3 ಪದದ ಟ್ವೀಟ್‌ನಲ್ಲಿ, ಧೋನಿಗೆ ಧನ್ಯವಾದ ತಿಳಿಸಿದ ಜಡ್ಡು

Ravindra jadeja

ಐಪಿಎಲ್ 16ನೇ ಸೀಸನ್‌ಗೆ ಪೂರ್ವಭಾವಿಯಾಗಿ ನಡೆದ ಆಟಗಾರರ ರೀಟೈನ್ ಮತ್ತು ರಿಲೀಸ್ ಪ್ರಕ್ರಿಯೆ ಮಂಗಳವಾರ (ನ.15) ಮುಕ್ತಾಯಗೊಂಡಿದೆ. 10 ಫ್ರಾಂಚೈಸಿಗಳು ತಮಗಿಷ್ಟವಾದ, ಯೋಗ್ಯವಾದೆನಿಸಿದ ಆಟಗಾರರನ್ನ ಉಳಿಸಿಕೊಂಡು ಬೇಡವಾದ ಆಟಗಾರರನ್ನ ರಿಲೀಸ್ ಮಾಡಿವೆ. ಇನ್ನು ಕೆಲ ಫ್ರಾಂಚೈಸಿಗಳು ಬೇರೆ ಫ್ರಾಂಚೈಸಿಗಳಿಂದ ಆಟಗಾರರನ್ನ ಟ್ರೇಡ್ ಮಾಡಿವೆ.

ನಾಲ್ಕು ಬಾರಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ಕೂಡ ಈ ಬಾರಿ ಹಿರಿಯ ಆಟಗಾರರನ್ನ ತನ್ನಲ್ಲೇ ಉಳಿಸಿಕೊಂಡಿದ್ದು, ಡ್ವೇನ್ ಬ್ರಾವೋ ಹಾಗೂ ರಾಬಿನ್ ಉತ್ತಪ್ಪನನ್ನು ಕೈ ಬಿಟ್ಟಿದೆ. ಕಳೆದ ಸೀಸನ್‌ನಲ್ಲಿ ಭಾರೀ ವಿವಾದಕ್ಕೆ ಕಾರಣವಾಗಿ ರವೀಂದ್ರ ಜಡೇಜಾರನ್ನು ಧೋನಿಯ ಅಣತಿಯಂತೆ ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿ ರೀಟೈನ್ ಮಾಡಿಕೊಂಡಿದೆ.

ಇದಕ್ಕೂ ಮುನ್ನ ರವೀಂದ್ರ ಜಡೇಜಾರನ್ನ ಸಿಎಸ್‌ಕೆ ರಿಲೀಸ್ ಮಾಡಲಿದೆ ಎಂದೇ ವರದಿಯಾಗಿತ್ತು. ಫ್ರಾಂಚೈಸಿಯೊಂದಿಗೆ ಜಡ್ಡು ತಿಕ್ಕಾಟವಾಗಿದೆ, ಇನ್‌ಸ್ಟಾಗ್ರಾಮ್‌ನಲ್ಲಿ ಸಿಎಸ್‌ಕೆ ಜೊತೆಗಿನ ಫೋಟೋಗಳನ್ನೆಲ್ಲಾ ಡಿಲೀಟ್ ಮಾಡಿದ್ದಾರೆ ಎಂದೆಲ್ಲಾ ಸುದ್ದಿಯಾಗಿತ್ತು. ಆದ್ರೆ ಸಿಎಸ್‌ಕೆ ಜಡ್ಡುರನ್ನ ರೀಟೈನ್ ಮಾಡಿಕೊಳ್ಳುವ ಮೂಲಕ ಎಲ್ಲಾ ಅನುಮಾನಗಳಿಗೆ ತೆರೆ ಎಳೆದಿದೆ.

ಮೂರು ಪದದ ಟ್ವೀಟ್ ಮಾಡಿದ ಜಡೇಜಾ

ಜಡೇಜಾ ರೀಟೈನ್ ಮಾಡಿಕೊಳ್ಳುವ ಸುದ್ದಿ ಹೊರಬೀಳುತ್ತಿದ್ದಂತೆ ಎಡಗೈ ಆಲ್‌ರೌಂಡರ್ ಮೂರು ಪದಗಳ ಟ್ವೀಟ್ ಮಾಡಿದ್ದಾರೆ. ಟ್ವೀಟ್‌ನಲ್ಲಿ ''ಎಲ್ಲವೂ ಸರಿಯಾಗಿದೆ'' ಎಂದು ಹಳದಿ ಬಣ್ಣದ ಹಾರ್ಟ್ ಎಮೋಜಿಯನ್ನು ಹಾಕುವುದರ ಜೊತೆಗೆ ಹ್ಯಾಷ್‌ಟ್ಯಾಗ್ ರೀಸ್ಟಾರ್ಟ್‌ (#RESTART) ಎಂದು ಶೀರ್ಷಿಕೆ ನೀಡಿದ್ದಾರೆ. ಈ ಪೋಸ್ಟ್‌ನಲ್ಲಿ ಧೋನಿಗೆ ಜಡೇಜಾ ಗೌರವಿಸುತ್ತಿರುವ ಫೋಟೋವಿದ್ದು, ಪರೋಕ್ಷವಾಗಿ ತನ್ನನ್ನು ತಂಡದಲ್ಲಿ ಉಳಿಸಿಕೊಂಡ ಮಾಹಿಗೆ ಧನ್ಯವಾದ ತಿಳಿಸಿದ್ದಾರೆ.

ರವೀಂದ್ರ ಜಡೇಜಾ ಈ ಫೋಟೋ ಹಾಗೂ ಟ್ವೀಟ್ ಸಾಕಷ್ಟು ವೈರಲ್ ಆಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದೆ.

IPL 2023: ಪಂಜಾಬ್ ಕಿಂಗ್ಸ್‌ ತಂಡದಿಂದ ಮಯಾಂಕ್ ಅಗರ್ವಾಲ್ ಹೊರಕ್ಕೆ: ರೀಟೈನ್ ಆದ ಆಟಗಾರರ ಪಟ್ಟಿ

ರವೀಂದ್ರ ಜಡೇಜಾ ವರ್ಸಸ್ ಸಿಎಸ್‌ಕೆ ಗಲಾಟೆ ಏನು?

ರವೀಂದ್ರ ಜಡೇಜಾ ವರ್ಸಸ್ ಸಿಎಸ್‌ಕೆ ಗಲಾಟೆ ಏನು?

ಐಪಿಎಲ್ 2022ರ ಸೀಸನ್‌ನಲ್ಲಿ ಅನಿರೀಕ್ಷಿತವಾಗಿ ತಂಡದ ನಾಯಕತ್ವ ವಹಿಸಿಕೊಂಡಿದ್ದ ಆಲ್‌ರೌಂಡರ್ ರವೀಂದ್ರ ಜಡೇಜಾ, ಕಳಪೆ ಫಾರ್ಮ್‌ನಿಂದಾಗಿ ಇಡೀ ಸೀಸನ್‌ನಲ್ಲಿ ಟೀಕೆಗೆ ಒಳಗಾಗಿದ್ದರು. ದೀರ್ಘ ಕಾಲದಿಂದ ಸಿಎಸ್‌ಕೆ ತಂಡದ ನಿರ್ಣಾಯಕ ಭಾಗವಾಗಿದ್ದ ಜಡೇಜಾ ಕಳೆದ ಸೀಸನ್‌ನಲ್ಲಿ ಅನಿರೀಕ್ಷಿತವಾಗಿ ತಂಡದ ನಾಯಕತ್ವಕ್ಕೆ ಬಂದಿದ್ದರು.

ಜಡ್ಡು ನಿರೀಕ್ಷೆಗೆ ತಕ್ಕಂತೆ ಆಡಲು ವಿಫಲವಾದ ನಂತರ, ಅವರು ಗಾಯಗಳಿಂದ ಹೊರಗುಳಿದರು ಮತ್ತು ಸೀಸನ್‌ ಕಳೆದುಕೊಂಡರು. ಪರಿಣಾಮ ಮತ್ತೆ ಎಂಎಸ್ ಧೋನಿ ನಾಯಕರಾಗಿ ಮುಂದುವರೆದರು.

ಈ ಸಂದರ್ಭದಲ್ಲಿ ಜಡೇಜಾ ನಾಯಕತ್ವದ ಟೀಕೆ ಎದುರಿಸಿ ಹೊರಬಂದಾಗಿನಿಂದ, ಸಿಎಸ್‌ಕೆ ಮತ್ತು ಜಡೇಜಾ ನಡುವೆ ಭಿನ್ನಾಭಿಪ್ರಾಯವಿದೆ ಎಂಬ ವರದಿಗಳು ಬಂದವು. ಜೊತೆಗೆ ಇದಕ್ಕೆ ಪುಷ್ಟಿ ನೀಡುವಂತೆ ಜಡೇಜಾ ಕಳೆದ ಎರಡು ಸೀಸನ್‌ಗಳಲ್ಲಿ ಸಿಎಸ್‌ಕೆಗೆ ಸಂಬಂಧಿಸಿದ ಎಲ್ಲಾ ಪೋಸ್ಟ್‌ಗಳು ಮತ್ತು ಚಿತ್ರಗಳನ್ನು ತಮ್ಮ ಟ್ವಿಟರ್ ಖಾತೆಯಿಂದ ತೆಗೆದುಹಾಕಿದರು. ಇದರೊಂದಿಗೆ ಜಡೇಜಾ ಸಿಎಸ್‌ಕೆ ತೊರೆಯುತ್ತಿದ್ದಾರೆ ಎಂಬ ವದಂತಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಯಿತು.

ಆದ್ರೆ ಐಪಿಎಲ್ 2023ರ ಸೀಸನ್‌ಗೆ ಜಡೇಜಾ ರೀಟೈನ್ ಆಗುವ ಮೂಲಕ ಎಲ್ಲಾ ವಿವಾದಗಳು ತಣ್ಣಗಾಗಿವೆ.

IPL 2023: ಆತ ನಮ್ಮೊಂದಿಗೆ ಉಳಿದಿದ್ದೇ 8ನೇ ಅದ್ಭುತ; ಸಿಎಸ್‌ಕೆ ಟ್ವೀಟ್ ವೈರಲ್

ಸಿಎಸ್‌ಕೆ ರೀಟೈನ್ ಮತ್ತು ರಿಲೀಸ್ ಮಾಡಿದ ಆಟಗಾರರು

ಸಿಎಸ್‌ಕೆ ರೀಟೈನ್ ಮತ್ತು ರಿಲೀಸ್ ಮಾಡಿದ ಆಟಗಾರರು

ಎಂಎಸ್ ಧೋನಿ, ಅಂಬಟಿ ರಾಯುಡು, ರುತುರಾಜ್ ಗಾಯಕ್ವಾಡ್, ಡೆವೊನ್ ಕಾನ್ವೆ, ಎಸ್‌ ಸೇನಾಪತಿ, ರವೀಂದ್ರ ಜಡೇಜಾ, ಮೊಯಿನ್ ಅಲಿ, ಮಿಚೆಲ್ ಸ್ಯಾಂಟ್ನರ್, ಡ್ವೇನ್ ಪ್ರಿಟೋರಿಯಸ್, ಶಿವಂ ದುಬೆ, ಆರ್. ಹಂಗರ್‌ಗೇಕರ್, ದೀಪಕ್ ಚಹಾರ್, ಮುಕೇಶ್ ಚೌದರಿ, ಮಹೀಶ್ ತೀಕ್ಷಣ, ತುಶಾರ್ ದೇಶಪಾಂಡೆ, ಸಿಮ್ರಾನ್‌ಜಿತ್ ಸಿಂಗ್, ಮಹೀಶ್ ಪ್ರಥಿರನ, ಪ್ರಶಾಂತ್ ಸೋಲಂಕಿ


ರಿಲೀಸ್ ಆದ ಆಟಗಾರರು: ಡ್ವೇನ್ ಬ್ರಾವೋ, ರಾಬಿನ್ ಉತ್ತಪ್ಪ ಆ್ಯಡಂ ಮಿಲ್ನೆ, ಹರಿ ನಿಶಾಂತ್, ಕ್ರಿಸ್ ಜೋರ್ಡಾನ್, ಭಗತ್ ವರ್ಮಾ, ಕೆಎಂ ಆಸಿಫ್, ನಾರಾಯಣ ಜಗದೀಶನ್


ಉಳಿದಿರುವ ಪರ್ಸ್‌ ವ್ಯಾಲ್ಯೂ : 20.45 ಕೋಟಿ ರೂಪಾಯಿ

ಖರೀದಿಸಬಹುದಾದ ವಿದೇಶಿ ಆಟಗಾರರ ಸಂಖ್ಯೆ: 2

Story first published: Tuesday, November 15, 2022, 23:56 [IST]
Other articles published on Nov 15, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X