ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

IND vs BAN 2nd ODI : ಈತ ಎರಡನೇ ಏಕದಿನ ಪಂದ್ಯದಲ್ಲಿ ಆಡಬೇಕು ಎಂದ ಆಕಾಶ್ ಚೋಪ್ರಾ

Ishan Kishan Should Be In Indias Playing XI In 2nd ODI Against Bangladesh: Aakash Chopra

ಭಾರತ-ಬಾಂಗ್ಲಾದೇಶ ನಡುವಿನ ಏಕದಿನ ಸರಣಿಯ ಎರಡನೇ ಪಂದ್ಯ ಡಿಸೆಂಬರ್ 7ರಂದು ಬುಧವಾರ ನಡೆಯಲಿದೆ. ಮೊದಲ ಏಕದಿನ ಪಂದ್ಯದಲ್ಲಿ ಸೋಲನುಭವಿಸಿರುವ ಟೀಂ ಇಂಡಿಯಾ ಎರಡನೇ ಪಂದ್ಯದಲ್ಲಿ ಗೆಲ್ಲಲೇಬೇಕಾದ ಒತ್ತಡಕ್ಕೆ ಸಿಲುಕಿದೆ.

ಮೊದಲನೇ ಏಕದಿನ ಪಂದ್ಯದಲ್ಲಿ ಭಾರತದ ಬ್ಯಾಟಿಂಗ್ ಉತ್ತಮವಾಗಿರಲಿಲ್ಲ, ಆದ್ದರಿಂದ ಎರಡನೇ ಪಂದ್ಯದಲ್ಲಿ ಟೀ ಇಂಡಿಯಾ ಆಡುವ ಬಳಗದಲ್ಲಿ ಇಶಾನ್ ಕಿಶನ್ ಅವರನ್ನು ಸೇರಿಸಿಕೊಳ್ಳಬೇಕು ಎಂದು ಮಾಜಿ ಕ್ರಿಕೆಟಿಗ ಆಕಾಶ್ ಚೋಪ್ರಾ ಅಭಿಪ್ರಾಯಪಟ್ಟಿದ್ದಾರೆ.

ಇಂಗ್ಲೆಂಡ್‌ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಪಾಕಿಸ್ತಾನ ಸೋತರೆ ಭಾರತ ತಂಡಕ್ಕೆ ಇದೆ ಲಾಭ!ಇಂಗ್ಲೆಂಡ್‌ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಪಾಕಿಸ್ತಾನ ಸೋತರೆ ಭಾರತ ತಂಡಕ್ಕೆ ಇದೆ ಲಾಭ!

ಭಾನುವಾರ ನಡೆದ ಮೊದಲನೇ ಏಕದಿನ ಪಂದ್ಯದಲ್ಲಿ ಇಬ್ಬರು ಆಲ್‌ರೌಂಡರ್, ನಾಲ್ವರು ಬೌಲರ್, ಐವರು ಬ್ಯಾಟರ್ ಭಾರತ ತಂಡದ ಆಡುವ ಬಳಗದಲ್ಲಿ ಸ್ಥಾನ ಪಡೆದಿದ್ದರು. ಭಾರತ ತಂಡ 186 ರನ್‌ಗಳಿಗೆ ಆಲೌಟ್ ಆದರೆ, ಬಾಂಗ್ಲಾದೇಶ 9 ವಿಕೆಟ್ ಕಳೆದುಕೊಂಡು ಗುರಿ ತಲುಪಿತ್ತು. ಭಾರತ ತಂಡದ ಬೌಲಿಂಗ್ ಉತ್ತಮವಾಗಿದ್ದರು, ಬ್ಯಾಟಿಂಗ್ ಕೈಕೊಟ್ಟಿದ್ದು ಸೋಲಿಗೆ ಪ್ರಮುಖ ಕಾರಣವಾಗಿತ್ತು.

ಯೂಟ್ಯೂಬ್ ಚಾನೆಲ್‌ನಲ್ಲಿ ಹಂಚಿಕೊಂಡ ವೀಡಿಯೊದಲ್ಲಿ ಮಾತನಾಡಿರುವ ಆಕಾಶ್ ಚೋಪ್ರಾ, ಭಾರತ ತಂಡದಲ್ಲಿ ಕೆಲವು ಬದಲಾವಣೆ ಮಾಡಬೇಕು ಎಂದು ಹೇಳಿದ್ದಾರೆ. ಪ್ರಮುಖವಾಗಿ ಎರಡನೇ ಏಕದಿನ ಪಂದ್ಯದಲ್ಲಿ ಇಶಾನ್ ಕಿಶನ್ ಕಣಕ್ಕಿಳಿಯಬೇಕು ಎಂದು ಹೇಳಿದ್ದಾರೆ.

ಲಭ್ಯವಿರುವ ಆಯ್ಕೆಗಳ ಕಡೆ ಗಮನಕೊಡಿ

ಲಭ್ಯವಿರುವ ಆಯ್ಕೆಗಳ ಕಡೆ ಗಮನಕೊಡಿ

ಭಾರತ ತಂಡದ ಪ್ಲೇಯಿಂಗ್ XIನಲ್ಲಿ ಬದಲಾವಣೆ ಮಾಡುವ ಬಗ್ಗೆ ಪ್ರತಿಕ್ರಿಯೆ ನೀಡಿರುವ ಆಕಾಶ್ ಚೋಪ್ರಾ, ಭಾರತ ತಂಡದಲ್ಲಿ ಹಲವು ಬೌಲಿಂಗ್ ಆಯ್ಕೆಗಳನ್ನು ಹೊಂದಿರುವುದು ಕೆಲವೊಮ್ಮೆ ಸಮಸ್ಯೆಯಾಗುತ್ತದೆ. ಉತ್ತಮ ಆಟಗಾರರು ತಂಡದಲ್ಲಿದ್ದಾಗ ಯಾರನ್ನು ಯಾವಾಗ ಬಳಸಬೇಕು ಎನ್ನುವುದು ಮ್ಯಾನೇಜ್‌ಮೆಂಟ್‌ಗೆ ತಿಳಿದರಬೇಕು ಎಂದು ಹೇಳಿದರು.

ಮೊದಲನೇ ಪಂದ್ಯದಲ್ಲಿ ವಾಷಿಂಗ್ಟನ್ ಸುಂದರ್ ಕೇವಲ 5 ಓವರ್ ಬೌಲಿಂಗ್ ಮಾಡಿದರು. 5 ಓವರ್ ನಲ್ಲಿ 17 ರನ್ ನೀಡಿ 2 ವಿಕೆಟ್ ಪಡೆದರು. ಆದರೂ ಅವರಿಗೆ ಸಂಪೂರ್ಣವಾಗಿ 10 ಓವರ್ ಬೌಲಿಂಗ್ ಮಾಡಲು ಅವಕಾಶ ನೀಡಲಿಲ್ಲ ಎಂದು ಹೇಳಿದರು.

Ind vs Ban 2nd ODI: ಗೆಲ್ಲಲೇ ಬೇಕಾದ ಒತ್ತಡದಲ್ಲಿ ಭಾರತ, ಸಂಭಾವ್ಯ XI, ನೇರಪ್ರಸಾರದ ಮಾಹಿತಿ

 ಬೌಲಿಂಗ್‌ಗೆ ಸಹಕಾರಿಯಾದ ಪಿಚ್

ಬೌಲಿಂಗ್‌ಗೆ ಸಹಕಾರಿಯಾದ ಪಿಚ್

ಬೌಲಿಂಗ್‌ಗೆ ಸಹಕಾರಿಯಾಗಿರುವ ಪಿಚ್‌ಗಳಲ್ಲಿ ಹೆಚ್ಚುವರಿ ಬೌಲರ್ ಆಡಿಸುವ ಅಗತ್ಯವಿಲ್ಲ ಎಂದು ಆಕಾಶ್ ಚೋಪ್ರಾ ಅಭಿಪ್ರಾಯಪಟ್ಟಿದ್ದಾರೆ. ಬಾಂಗ್ಲಾದೇಶದಲ್ಲಿರುವ ಪಿಚ್‌ಗಳು ಬೌಲರ್‌ಗಳಿಗೆ ಹೆಚ್ಚಿನ ಸಹಕಾರಿಯಾಗಿರುತ್ತವೆ.

45ನೇ ಓವರ್ ನಲ್ಲಿ ಕೂಡ ಚೆಂಡು ಸ್ವಿಂಗ್ ಆಗುತ್ತಿತ್ತು. ಸ್ಪಿನ್ನರ್‌ಗಳಿಗೆ ಕೂಡ ಪಿಚ್ ಸಹಕಾರಿಯಾಗಿದೆ. ಚೆಂಡು ಸುಲಭವಾಗಿ ಬ್ಯಾಟ್‌ಗೆ ಬರುವುದಿಲ್ಲ, ಅಲ್ಲಿ ರನ್‌ ಗಳಿಸುವುದು ಸುಲಭವಲ್ಲ, ಆದ್ದರಿಂದ ತಂಡದಲ್ಲಿ ಬ್ಯಾಟರ್ ಸಂಖ್ಯೆಯನ್ನು ಹೆಚ್ಚಿಸಬೇಕು ಎಂದು ಹೇಳಿದರು. ಅಕ್ಷರ್ ಪಟೇಲ್ ಫಿಟ್ ಆಗಿದ್ದರೆ, ಶಹಬಾಜ್ ಅಹ್ಮದ್ ಬದಲಿಗೆ ತಂಡದಲ್ಲಿ ಅವಕಾಶ ಪಡೆಯಬೇಕು ಎಂದು ಹೇಳಿದರು.

ಬ್ಯಾಟಿಂಗ್ ವಿಭಾಗ ಬಲಗೊಳಿಸಲಿ

ಬ್ಯಾಟಿಂಗ್ ವಿಭಾಗ ಬಲಗೊಳಿಸಲಿ

ಬಾಂಗ್ಲಾದೇಶದಲ್ಲಿ ವಿರುದ್ಧದ ಎರಡನೇ ಪಂದ್ಯದಕ್ಕೆ ಐವರು ಬೌಲರ್ ಇದ್ದರೆ ಸಾಕು ಎಂದು ಆಕಾಶ್ ಚೋಪ್ರಾ ಹೇಳಿದ್ದಾರೆ. ತಂಡದಲ್ಲಿ ಆರನೇ ಬೌಲರ್ ಅಗತ್ಯವಿಲ್ಲ ಬದಲಾಗಿ ಇನ್ನೊಬ್ಬ ಬ್ಯಾಟರ್ ತಂಡದಲ್ಲಿ ಆಡಬೇಕು ಎಂದು ಹೇಳಿದರು.

ಕೆಎಲ್ ರಾಹುಲ್ ಮೊದಲನೇ ಪಂದ್ಯದಲ್ಲಿ ಕ್ಯಾಚ್ ಬಿಟ್ಟರು. ಎರಡನೇ ಪಂದ್ಯದಲ್ಲಿ ಇಶಾನ್ ಕಿಶನ್ ವಿಕೆಟ್ ಕೀಪಿಂಗ್ ಮಾಡಬಹುದು. ಅವರು ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುವ ಸಾಮರ್ಥ್ಯ ಹೊಂದಿದ್ದಾರೆ. ಶಕೀಬ್ ಅಲ್ ಹಸನ್ ಬೌಲಿಂಗ್‌ ಅನ್ನು ಅವರು ಸಮರ್ಥವಾಗಿ ಎದುರಿಸಬಲ್ಲರು ಎಂದು ಆಕಾಶ್ ಚೋಪ್ರಾ ಅಭಿಪ್ರಾಯಪಟ್ಟಿದ್ದಾರೆ.

ಇಶಾನ್ ಕಿಶನ್ 9 ಏಕದಿನ ಪಂದ್ಯಗಳಲ್ಲಿ 33.37 ಸರಾಸರಿಯಲ್ಲಿ 267 ರನ್ ಗಳಿಸಿದ್ದಾರೆ. ರಿಷಬ್ ಪಂತ್ ಅನುಪಸ್ಥಿತಿಯಲ್ಲಿ ಇಶಾನ್ ಕಿಶನ್ ಉತ್ತಮ ಆಯ್ಕೆಯಾಗಿದ್ದಾರೆ.

Story first published: Tuesday, December 6, 2022, 15:38 [IST]
Other articles published on Dec 6, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X