ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

12 ವರ್ಷಗಳ ಬಳಿಕ ಟೆಸ್ಟ್ ಆಡಿ ಭಾವನಾತ್ಮಕ ಪೋಸ್ಟ್ ಹಂಚಿಕೊಂಡ ಜಯದೇವ್ ಉನದ್ಕತ್

Jaydev Unadkat Shares Emotional Post After Making A Stellar Comeback For Team India

ಸತತ 12 ವರ್ಷಗಳ ಕಾಯುವಿಕೆ ಬಳಿಕ ಎಡಗೈ ವೇಗಿ ಜಯದೇವ್ ಉನದ್ಕತ್ ಭಾರತ ಟೆಸ್ಟ್ ತಂಡಕ್ಕೆ ಆಯ್ಕೆಯಾದರು. ಬಾಂಗ್ಲಾದೇಶದ ವಿರುದ್ಧದ ಸರಣಿಯಲ್ಲಿ ಅವಕಾಶ ಪಡೆದ ಉನದ್ಕತ್ ಉತ್ತಮ ಪ್ರದರ್ಶನ ಕೂಡ ನೀಡಿದರು. ಎರಡನೇ ಟೆಸ್ಟ್‌ನಲ್ಲಿ ಆಡುವ ಬಳಗದಲ್ಲಿ ಸ್ಥಾನ ಪಡೆದ ಉನದ್ಕತ್ 3 ವಿಕೆಟ್ ಪಡೆದು ಮಿಂಚಿದರು.

ಬಾಂಗ್ಲಾದೇಶ ವಿರುದ್ಧದ 2ನೇ ಟೆಸ್ಟ್ ಪಂದ್ಯದಲ್ಲಿ ಭಾರತ ಗೆಲುವು ಸಾಧಿಸಿದ ಟೀಂ ಇಂಡಿಯಾ ಸರಣಿಯನ್ನು 2-0 ಅಂತರದಲ್ಲಿ ಗೆದ್ದುಕೊಂಡಿತು. ಟೀಂ ಇಂಡಿಯಾ ಗೆಲುವಿನ ನಂತರ, ಜಯದೇವ್ ಉನದ್ಕತ್, ಸಹ ಆಟಗಾರರು ಮತ್ತು ಸಹಾಯಕ ಸಿಬ್ಬಂದಿಯ ಸಹಿ ಮಾಡಿದ ಜೆರ್ಸಿಯನ್ನು ಪಡೆದರು.

ತಮ್ಮ ಚೊಚ್ಚಲ ಟೆಸ್ಟ್ ಮತ್ತು ಎರಡನೇ ಟೆಸ್ಟ್ ನಡುವಿನ 12 ವರ್ಷಗಳ ಪ್ರಯಾಣದ ಕತೆಯನ್ನು ಎರಡು ಚಿತ್ರಗಳಲ್ಲಿ ವಿವರಿಸಿದ್ದಾರೆ. ಸತತವಾದ ಪ್ರಯತ್ನ, ನಿರಂತರ ಅಭ್ಯಾಸ, ಹೋರಾಟದಿಂದಾಗಿ ಅವರು ಮತ್ತೆ ತಂಡದಲ್ಲಿ ಸ್ಥಾನ ಪಡೆಯುವಲ್ಲಿ ಯಶಸ್ವಿಯಾದರು.

Ind vs SL ODI: ಶ್ರೀಲಂಕಾ ವಿರುದ್ಧದ ಸರಣಿಗೆ ರೋಹಿತ್ ಶರ್ಮಾ ಸಿದ್ಧತೆ, ಅಭ್ಯಾಸ ಆರಂಭಿಸಿದ 'ಹಿಟ್‌ಮ್ಯಾನ್'Ind vs SL ODI: ಶ್ರೀಲಂಕಾ ವಿರುದ್ಧದ ಸರಣಿಗೆ ರೋಹಿತ್ ಶರ್ಮಾ ಸಿದ್ಧತೆ, ಅಭ್ಯಾಸ ಆರಂಭಿಸಿದ 'ಹಿಟ್‌ಮ್ಯಾನ್'

12 ವರ್ಷಗಳ ನಂತರ ಭಾರತ ಟೆಸ್ಟ್ ತಂಡಕ್ಕೆ ಆಯ್ಕೆಯಾಗುವ ಮೂಲಕ ಉನದ್ಕತ್ ಮತ್ತೆ ದೇಶಕ್ಕಾಗಿ ಆಡುವ ವಿಶ್ವಾಸ ಮರಳಿ ಪಡೆದಿದ್ದಾರೆ. ಬಾಂಗ್ಲಾದೇಶದ ವಿರುದ್ಧದ ಸರಣಿಯ ನಂತರ ಮತ್ತೆ ದೇಶೀಯ ಕ್ರಿಕೆಟ್‌ಗೆ ಮರಳಿದ್ದಾರೆ. ರಣಜಿ ಟ್ರೋಫಿಯಲ್ಲಿ ಉತ್ತಮ ಪ್ರದರ್ಶನ ನೀಡುವ ಮೂಲಕ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಗೆ ಭಾರತ ತಂಡಕ್ಕೆ ಆಯ್ಕೆಯಾಗುವ ವಿಶ್ವಾಸದಲ್ಲಿದ್ದಾರೆ.

ಸೌರಾಷ್ಟ್ರ ತಂಡಕ್ಕಾಗಿ ಆಡಲಿರುವ ಜಯದೇವ್ ಉನದ್ಕತ್

2022ರ ವಿಜಯ್ ಹಜಾರೆ ಟ್ರೋಫಿಯಲ್ಲಿ ಸೌರಾಷ್ಟ್ರ ತಂಡ ಚಾಂಪಿಯನ್ ಆಗಿತ್ತು. ಜಯದೇವ್ ಉನದ್ಕತ್ ಸೌರಾಷ್ಟ್ರ ತಂಡದ ನಾಯಕತ್ವ ವಹಿಸಿಕೊಂಡಿದ್ದರು. ದೇಶೀಯ ಕ್ರಿಕೆಟ್‌ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡುವ ಮೂಲಕ ಅವರು ಮತ್ತೆ ಭಾರತ ತಂಡಕ್ಕೆ ಆಯ್ಕೆಯಾಗಿದ್ದರು.

ಬಾಂಗ್ಲಾದೇಶದ ವಿರುದ್ಧದ ಸರಣಿಯ ಬಳಿಕ ಮತ್ತೆ ಸೌರಾಷ್ಟ್ರ ತಂಡಕ್ಕೆ ಮರಳಿರುವ ಅವರು, ರಣಜಿಯಲ್ಲಿ ಟ್ರೋಫಿಯಲ್ಲಿ ಆಡಲಿದ್ದಾರೆ. 2019-2020ರ ಆವೃತ್ತಿಯಲ್ಲಿ ಎಡಗೈ ವೇಗಿ 67 ವಿಕೆಟ್ ಪಡೆಯುವ ಮೂಲಕ ಸೌರಾಷ್ಟ್ರ ಚೊಚ್ಚಲ ರಣಿಜಿ ಟ್ರೋಫಿ ಗೆಲ್ಲುವಲ್ಲಿ ಸಹಾಯ ಮಾಡಿದ್ದರು.

ಜಯದೇವ್ ಉನದ್ಕತ್ ಈವರೆಗೆ 97 ಪ್ರಥಮ ದರ್ಜೆ ಪಂದ್ಯಗಳನ್ನಾಡಿದ್ದು, 356 ವಿಕೆಟ್ ಪಡೆದಿದ್ದಾರೆ. ಆಸ್ಟ್ರೇಲಿಯಾ ವಿರುದ್ಧ ಸರಣಿ ಭಾರತದಲ್ಲಿ ನಡೆಯುವುದರಿಂದ ಜಯದೇವ್‌ ಉನದ್ಕತ್‌ ಈ ಸರಣಿಗೆ ಆಯ್ಕೆಯಾಗುವ ಸಾಧ್ಯತೆ ಹೆಚ್ಚಾಗಿದೆ. ಅದಕ್ಕಾಗಿ ಅವರು ರಣಜಿ ಟ್ರೋಫಿಯಲ್ಲಿ ತಮ್ಮ ಅತ್ಯುತ್ತಮ ಪ್ರದರ್ಶನವನ್ನು ಮುಂದುವರೆಸಬೇಕಾಗಿದೆ.

Story first published: Tuesday, December 27, 2022, 14:13 [IST]
Other articles published on Dec 27, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X