ಭಾರತ ಕ್ರಿಕೆಟ್ ತಂಡದ ಮಧ್ಯಮ ಕ್ರಮಾಂಕದ ಸ್ಪೆಷಲಿಸ್ಟ್ ಬ್ಯಾಟ್‌ಮನ್ ಚೇತೇಶ್ವರ ಪೂಜಾರ ಅವರು ಬಾಂಗ್ಲಾದೇಶ ವಿರುದ್ಧದ ಮೊದಲ ಟೆಸ್ಟ್‌ನ ಆರಂಭಿಕ ದಿನದಂದು ಶ್ರೇಯಸ್ ಅಯ್ಯರ್ ಜೊತೆಗೂಡಿ ಭಾರತ ತಂಡವನ್ನು ಸಂಕಷ್ಟದಿಂದ ಪಾರುಮಾಡಿದರು.
ಈ ವೇಳೆ ಅಮೂಲ್ಯ 90 ರನ್‌ಗಳನ್ನು ಬಾರಿಸಿದ ಚೇತೇಶ್ವರ ಪೂಜಾರ, 10 ರನ್‌ಗಳ ಕೊರತೆಯಿಂದ ತಮ್ಮ 19ನೇ ಟೆಸ್ಟ್ ಶತಕವನ್ನು ತಪ್ಪಿಸಿಕೊಂಡರು.
IND vs BAN 1st Test: ಟೆಸ್ಟ್ ಕ್ರಿಕೆಟ್ನಲ್ಲಿ ಈ ಸಾಧನೆ ಮಾಡಿದ ಭಾರತದ 8ನೇ ಬ್ಯಾಟರ್ ರಿಷಭ್ ಪಂತ್
ಚೇತೇಶ್ವರ ಪೂಜಾರ ಮತ್ತು ಶ್ರೇಯಸ್ ಅಯ್ಯರ್ ಐದನೇ ವಿಕೆಟ್‌ಗೆ 149 ರನ್‌ಗಳ ಜೊತೆಯಾಟ ನೀಡಿದರು ಮತ್ತು ಚಟ್ಟೋಗ್ರಾಮ್‌ನಲ್ಲಿ ನಡೆದ ಮೊದಲ ಟೆಸ್ಟ್‌ನ ಮೊದಲ ದಿನದಂದು ಬಾಂಗ್ಲಾದೇಶ ವಿರುದ್ಧ 6 ವಿಕೆಟ್‌ಗೆ 278 ರನ್ ಗಳಿಸಲು ಭಾರತಕ್ಕೆ ನೆರವಾದರು.
34 ವರ್ಷದ ಭಾರತೀಯ ಬ್ಯಾಟರ್ ಚೇತೇಶ್ವರ ಪೂಜಾರ ತಮ್ಮ ಅದ್ಭುತ ಬ್ಯಾಟಿಂಗ್ ಪ್ರದರ್ಶನದ ಹೊರತಾಗಿ ಮತ್ತೊಂದು ಸಾಧನೆ ಮಾಡಿದರು. ಭಾರತ ತಂಡದ ಪರ ಭಾರತದ ಮಾಜಿ ನಾಯಕ ದಿಲೀಪ್ ವೆಂಗ್‌ಸರ್ಕರ್ ಅವರ ದಾಖಲೆಯನ್ನು ಮೀರಿಸಿದರು.
ಚೇತೇಶ್ವರ ಪೂಜಾರ ಭಾರತದ ಮಾಜಿ ನಾಯಕ ದಿಲೀಪ್ ವೆಂಗ್‌ಸರ್ಕರ್ ದಾಖಲೆಯನ್ನು ಹಿಂದಿಕ್ಕಿ, ಟೆಸ್ಟ್ ಕ್ರಿಕೆಟ್ ಸ್ವರೂಪದಲ್ಲಿ ಭಾರತದ ಪರ ಎಂಟನೇ ಅತಿ ಹೆಚ್ಚು ರನ್ ಗಳಿಸಿದ ಬ್ಯಾಟ್ಸ್‌ಮನ್ ಎನಿಸಿದರು.
IND vs BAN 1st Test: ಕ್ಲೀನ್ ಬೌಲ್ಡ್ ಆಗಿದ್ದರೂ ಶ್ರೇಯಸ್ ಅಯ್ಯರ್ ನಾಟೌಟ್; ಆಟಗಾರರಿಗೂ ಶಾಕ್!
ದಿಲೀಪ್ ವೆಂಗ್‌ಸರ್ಕರ್ ಅವರು ಭಾರತ ತಂಡಕ್ಕಾಗಿ 116 ಟೆಸ್ಟ್‌ಗಳಲ್ಲಿ 6,868 ರನ್‌ಗಳೊಂದಿಗೆ ತಮ್ಮ ಟೆಸ್ಟ್ ವೃತ್ತಿಜೀವನವನ್ನು ಮುಗಿಸಿದರು. ಲೆಜೆಂಡರಿ ಮಾಜಿ ಬ್ಯಾಟರ್‌ನನ್ನು ಹಿಂದಿಕ್ಕಿದ ಚೇತೇಶ್ವರ ಪೂಜಾರ 97 ಟೆಸ್ಟ್ ಪಂದ್ಯಗಳಲ್ಲಿ 6,882 ರನ್ ಗಳಿಸಿ ಈಗ ಎಂಟನೇ ಸ್ಥಾನದಲ್ಲಿದ್ದಾರೆ.
ಇನ್ನು 7,212 ರನ್‌ಗಳೊಂದಿಗೆ ತಮ್ಮ ಟೆಸ್ಟ್ ವೃತ್ತಿಜೀವನಕ್ಕೆ ಅಂತ್ಯಹಾಡಿರುವ ಮತ್ತೊಬ್ಬ ಮಾಜಿ ನಾಯಕ ಸೌರವ್ ಗಂಗೂಲಿಗೆ ಹತ್ತಿರವಾಗಿದ್ದಾರೆ.
ಭಾರತದ ಪರ ಅತಿ ಹೆಚ್ಚು ಟೆಸ್ಟ್ ರನ್ ಗಳಿಸಿದ ಆಟಗಾರರ ಪಟ್ಟಿ
ಸಚಿನ್ ತೆಂಡೂಲ್ಕರ್ - 15,921
ರಾಹುಲ್ ದ್ರಾವಿಡ್ - 13,265
ಸುನಿಲ್ ಗವಾಸ್ಕರ್ - 10,122
ವಿವಿಎಸ್ ಲಕ್ಷ್ಮಣ್ - 8,781
ವೀರೇಂದ್ರ ಸೆಹ್ವಾಗ್ - 8,503
ವಿರಾಟ್ ಕೊಹ್ಲಿ* - 8,075
ಸೌರವ್ ಗಂಗೂಲಿ - 7,212
ಚೇತೇಶ್ವರ ಪೂಜಾರ* - 6,882
ಚೇತೇಶ್ವರ ಪೂಜಾರ ಅವರು 12 ರನ್ ಗಳಿಸಿದ್ದಾಗ ಬಾಂಗ್ಲಾದೇಶದ ವಿಕೆಟ್‌ಕೀಪರ್ ನೂರುಲ್ ಹಸನ್ ಜೀವದಾನ ನೀಡಿದರು. ಅಲ್ಲದೆ ಶಕೀಬ್ ಅಲ್ ಹಸನ್ ಬೌಲಿಂಗ್‌ನಲ್ಲಿ ಶ್ರೇಯಸ್ ಅಯ್ಯರ್ ಕಟ್ ಶಾಟ್‌ಗೆ ಪ್ರಯತ್ನಿಸಿದಾಗ ಎಡ್ಜ್ ಆಗಿದ್ದ ಬಾಲ್‌ನ್ನು ವಿಕೆಟ್ ಕೀಪರ್ ಕೈಚೆಲ್ಲಿದರು.
ಬಾಂಗ್ಲಾದೇಶ ಪರ ಬೌಲಿಂಗ್‌ನಲ್ಲಿ ತೈಜುಲ್ ಇಸ್ಲಾಂ ಮೂರು ವಿಕೆಟ್ ಪಡೆದರೆ, ಮೆಹಿದಿ ಹಸನ್ ಮಿರಾಜ್ ಎರಡು ವಿಕೆಟ್ ಪಡೆದರು. ಮೊದಲ ಅವಧಿಯಲ್ಲಿ ಬಿದ್ದ ಕೆಎಲ್ ರಾಹುಲ್ ಅವರ ವಿಕೆಟ್ ಅನ್ನು ಖಲೀದ್ ಅಹ್ಮದ್ ಪಡೆದರು.