ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

'ಧೋನಿ 20ರ ಹರೆಯದವರಂತೆ ಬ್ಯಾಟಿಂಗ್ ಮಾಡೋದನ್ನು ನಿರೀಕ್ಷಿಸುತ್ತಿದ್ದೇವೆ'

Kapil backs Dhoni, says people expect him to play like a 20-year-old

ನವದೆಹಲಿ, ನವೆಂಬರ್ 19: ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ, ದಿಗ್ಗಜ ಕಪಿಲ್ ದೇವ್ ಅವರು ಎಂಎಸ್‌ ಧೋನಿ ಅವರ ಬೆಂಬಲಕ್ಕೆ ನಿಂತಿದ್ದಾರೆ. ಹಿರಿಯ ಆಟಗಾರ ಧೋನಿ ಈಗಲೂ 20ರ ಹರೆಯದವರಂತೆ ಬ್ಯಾಟಿಂಗ್ ಮಾಡುವುದನ್ನು ಜನ ನಿರೀಕ್ಷಿಸುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ.

'ತಾನು ಬಯಸಿದ್ದನ್ನೆಲ್ಲಾ ಮಾಡುವ ಕೊಹ್ಲಿಗೆ ನಾವು ಕುಮ್ಮಕ್ಕು ನೀಡುತ್ತಿದ್ದೇವೆ!''ತಾನು ಬಯಸಿದ್ದನ್ನೆಲ್ಲಾ ಮಾಡುವ ಕೊಹ್ಲಿಗೆ ನಾವು ಕುಮ್ಮಕ್ಕು ನೀಡುತ್ತಿದ್ದೇವೆ!'

ಎನ್‌ಡಿಟಿವಿ ಜೊತೆ ಸಂದರ್ಶನವೊಂದರಲ್ಲಿ ಮಾತನಾಡುತ್ತ ಕಪಿಲ್, 'ಧೋನಿ ಏನೆಲ್ಲ ಕರ್ತವ್ಯ ನಿರ್ವಹಿಸಿದ್ದಾರೋ ಅವೆಲ್ಲವೂ ಶ್ರೇಷ್ಠ ಕಾರ್ಯಗಳೆಂದು ನಾನು ಭಾವಿಸುತ್ತೇನೆ. ಆದರೆ ಧೋನಿ ಈಗಲೂ 20-25ರ ಹರೆಯದವರಂತೆ ಬ್ಯಾಟಿಂಗ್ ಮಾಡಬೇಕು ಅಂತ ನಾವು ನಿರೀಕ್ಷಿಸುತ್ತಿದ್ದೇವಲ್ಲ? ಅದು ಕೆಟ್ಟದ್ದು' ಎಂದರು.

33 ಎಸೆತಗಳಿಗೆ 80 ರನ್ ಚಚ್ಚಿ 'ಡರ್ಬನ್ ಹೀಟ್' ದಂಗುಬಡಿಸಿದ ಆಸಿಫ್!33 ಎಸೆತಗಳಿಗೆ 80 ರನ್ ಚಚ್ಚಿ 'ಡರ್ಬನ್ ಹೀಟ್' ದಂಗುಬಡಿಸಿದ ಆಸಿಫ್!

ಧೋನಿ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸುತ್ತ ಕಪಿಲ್, ಧೋನಿಯ ಅಗತ್ಯ ಇನ್ನೂ ಕೊಂಚ ದಿನಗಳವರೆಗೆ ತಂಡಕ್ಕೆ ಇದೆ ಎಂದು ತಿಳಿಸಿದ್ದಾರೆ.

ಆ ನಿರೀಕ್ಷೆಗೆ ಅರ್ಥವಿಲ್ಲ

ಆ ನಿರೀಕ್ಷೆಗೆ ಅರ್ಥವಿಲ್ಲ

'ಹಿರಿಯ ಆಟಗಾರನಿಂದ ನಾವು ಯುವಕನ ಆಟವನ್ನು ನಿರೀಕ್ಷಿಸುವುದರಲ್ಲಿ ಅರ್ಥವಿಲ್ಲ' ಎಂದು ಕಪಿಲ್ ವಿವರಿಸಿದರು. ತಂಡದಲ್ಲಿ ಹಿರಿಯ ಆಟಗಾರರ ಉಪಸ್ಥಿತಿ ತಂಡಕ್ಕೆ ಅಗತ್ಯ ಸಂದರ್ಭದಲ್ಲಿ ಮಾಗರ್ದರ್ಶನ ನಿಟ್ಟಿನಲ್ಲಿ ನೆರವಾಗುತ್ತದೆ ಎಂಬರ್ಥದಲ್ಲಿ ಕಪಿಲ್ ಮಾತನಾಡಿದರು.

ಅನುಭವಿಗಳು ಬೇಕೇ ಬೇಕು!

ಅನುಭವಿಗಳು ಬೇಕೇ ಬೇಕು!

ಎದುರಾಳಿ ತಂಡವನ್ನು ಮಾನಸಿಕವಾಗಿ ಹಿಮ್ಮೆಟ್ಟಿಸಲು ಅನುಭವಿ ಆಟಗಾರರ ಉಪಸ್ಥಿತಿ ತಂಡಕ್ಕೆ ಅಗತ್ಯವಿರುತ್ತದೆ. ಯಾಕೆಂದರೆ ಅನುಭವಿ ಆಟಗಾರರು ಯಾವ ಕ್ಷಣದಲ್ಲಾದರೂ ಸಿಡಿದು ನಿಲ್ಲುವ ಸಾಧ್ಯತೆಯಿರುತ್ತದೆ. ಹೀಗಾಗಿ ಎದುರಾಳಿ ತಂಡ ಸಣ್ಣ ಮಟ್ಟಿನ ಭಯ ಹೊಂದಿಯೇ ಹೊಂದಿರುತ್ತದೆ ಎಂದು ದೇವ್ ವಿವರಿಸಿದರು.

ವಿಶ್ವಕಪ್ ವಿಜೇತ ನಾಯಕ

ವಿಶ್ವಕಪ್ ವಿಜೇತ ನಾಯಕ

1983ರಲ್ಲಿ ಐಸಿಸಿ ವಿಶ್ವಕಪ್ ವಿಜೇತ ಭಾರತ ತಂಡದ ನಾಯಕರಾಗಿದ್ದ ಕಪಿಲ್, 2011ರ ವಿಶ್ವಕಪ್ ವಿಜೇತ ತಂಡದ ನಾಯಕ, 37ರ ಹರೆಯದ ಧೋನಿಯನ್ನು ಸಮರ್ಥಿ, 'ಧೋನಿಯ ಅನುಭವ ಅನೇಕ ರೀತಿಯಲ್ಲಿ ತಂಡಕ್ಕೆ, ಯುವ ಆಟಗಾರರಿಗೆ ನೆರವಾಗುವುದನ್ನು ನಾವು ನೋಡಿದ್ದೇವೆ. ಇದಕ್ಕೇ ಧೋನಿ ಈಗಲೂ ತಂಡದ ಆಸ್ತಿಯಾಗಿ ಗೋಚರಿಸುತ್ತಾರೆ' ಎಂದರು.

Story first published: Monday, November 19, 2018, 22:10 [IST]
Other articles published on Nov 19, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X