ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಟಿ20 ವಿಶ್ವಕಪ್‌ ಯೋಜನೆಯಿಂದ KL ರಾಹುಲ್‌ ಔಟ್‌?: ಈ ವರ್ಷ ಒಂದೇ ಒಂದು ಟಿ20 ಪಂದ್ಯ ಆಡಿಲ್ಲ!

KL Rahul

ಭಾರತದ ಟಿ20 ವಿಶ್ವಕಪ್ ಕಾರ್ಯಕ್ರಮದಿಂದ ಕೆಎಲ್ ರಾಹುಲ್ ಹೊರಗುಳಿದಿದ್ದಾರೆ ಎಂದು ವರದಿಯಾಗಿದೆ. ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ 5 ಪಂದ್ಯಗಳ ಟಿ20ಐ ಸರಣಿಯಲ್ಲಿ ಟೀಂ ಇಂಡಿಯಾ ಶುಭಾರಂಭ ಮಾಡಿದ್ದು 1-0 ಮುನ್ನಡೆ ಸಾಧಿಸಿದೆ. ಏಕದಿನ ಸರಣಿಯಲ್ಲಿ ವಿಶ್ರಾಂತಿ ಪಡೆದಿದ್ದ ಎಲ್ಲ ಪ್ರಮುಖ ಆಟಗಾರರು ಟಿ20 ಸರಣಿಗೆ ತಂಡಕ್ಕೆ ಮರಳಿದ್ದಾರೆ.

ಅದಾಗಲೇ ದಕ್ಷಿಣ ಆಫ್ರಿಕಾ, ಐರ್ಲೆಂಡ್ ಇಂಗ್ಲೆಂಡ್ ಸರಣಿ ಮಿಸ್ ಮಾಡಿಕೊಂಡಿದ್ದ ರಾಹುಲ್, ವಿಂಡೀಸ್ ಸರಣಿಗೆ ಮರಳಲು ಸಾಕಷ್ಟು ಕಾತುರರಾಗಿದ್ರು. ಇದಕ್ಕಾಗಿ ಎನ್‌ಸಿಎನಲ್ಲಿ ಅಭ್ಯಾಸ ಕೂಡ ನಡೆಸಿದ್ರು. ಆದ್ರೆ ದುರಾದೃಷ್ಟ ಅಂದ್ರೆ ಇದೇ ಇರಬೇಕು, ಕೊವಿಡ್ ಕಾರಣದಿಂದ ವಿಂಡೀಸ್ ಪ್ರವಾಸವನ್ನೂ ಕಳೆದುಕೊಂಡರು.

ವೆಸ್ಟ್ ಇಂಡೀಸ್ ಟಿ20 ಸರಣಿಯನ್ನೂ ಮಿಸ್ ಮಾಡಿಕೊಂಡ ರಾಹುಲ್

ವೆಸ್ಟ್ ಇಂಡೀಸ್ ಟಿ20 ಸರಣಿಯನ್ನೂ ಮಿಸ್ ಮಾಡಿಕೊಂಡ ರಾಹುಲ್

ವೆಸ್ಟ್‌ ಇಂಡೀಸ್ ವಿರುದ್ಧದ ಟಿ20 ಸರಣಿಗೆ ಆಯ್ಕೆಯಾಗಿದ್ದ ರಾಹುಲ್ ದುರಾದೃಷ್ಟವಶಾತ್ ಸ್ಥಾನ ಪಡೆಯಲು ಸಾಧ್ಯವಾಗಲಿಲ್ಲ. ಕಳೆದ ವಾರ ಭಾರತ ತಂಡದ ಉಪನಾಯಕ ಕೆಎಲ್ ರಾಹುಲ್‌ಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿತ್ತು. ಇದರ ಬೆನ್ನಲ್ಲೇ, ಒಂದು ವಾರದ ಕ್ವಾರಂಟೈನ್ ನಂತರ ಚೇತರಿಸಿಕೊಂಡಿರುವ ಕೆಎಲ್ ರಾಹುಲ್ ಇನ್ನೂ ಪೂರ್ಣ ಫಿಟ್ನೆಸ್ ಮರಳಿ ಪಡೆಯದಿದ್ದು, ಫಿಟ್ನೆಸ್ ಪರೀಕ್ಷೆಯಲ್ಲಿ ಉತ್ತೀರ್ಣರಾಗದ ಕಾರಣ ಸರಣಿಯಿಂದ ಹಿಂದೆ ಸರಿದಿದ್ದಾರೆ. ಕೆ.ಎಲ್ ರಾಹುಲ್ ವಿಕೆಟ್ ಕೀಪರ್ ಬ್ಯಾಟರ್ ಸಂಜು ಸ್ಯಾಮ್ಸನ್ ಅವಕಾಶ ಪಡೆದಿದ್ದಾರೆ.

ಟಿ20 ವಿಶ್ವಕಪ್‌ ಪ್ಲಾನ್‌ನಿಂದಲೂ ರಾಹುಲ್ ಔಟ್‌?

ಟಿ20 ವಿಶ್ವಕಪ್‌ ಪ್ಲಾನ್‌ನಿಂದಲೂ ರಾಹುಲ್ ಔಟ್‌?

ಈ ಪರಿಸ್ಥಿತಿಯಲ್ಲಿ ಕೆಎಲ್ ರಾಹುಲ್ ವೆಸ್ಟ್ ಇಂಡೀಸ್ ಸರಣಿಯಿಂದ ಮಾತ್ರವಲ್ಲದೆ ಟಿ20 ವಿಶ್ವಕಪ್ ತಂಡದಿಂದಲೂ ಸ್ಥಾನ ಕಳೆದುಕೊಳ್ಳುವ ಸಾಧ್ಯತೆಯಿದೆ. ಈ ವರ್ಷದ ಅಕ್ಟೋಬರ್ , ನವೆಂಬರ್‌ನಲ್ಲಿ ಟಿ20 ವಿಶ್ವಕಪ್‌ ಸರಣಿ ನಡೆಯಲಿದೆ. ಭಾರತ ತಂಡದ ಬಳಿ ವೆಸ್ಟ್ ಇಂಡೀಸ್ ಸರಣಿ ಮತ್ತು ಏಷ್ಯಾಕಪ್ ಮಾತ್ರ ಇದೆ. ಆದರೆ ಈ ವರ್ಷ ಕೆಎಲ್ ರಾಹುಲ್ ಒಂದೇ ಒಂದು ಟಿ20 ಅಂತರಾಷ್ಟ್ರೀಯ ಪಂದ್ಯವನ್ನೂ ಆಡಿಲ್ಲ.

Ind vs WI 1st T20: ಮಿಂಚಿನ ಹೆಲಿಕಾಪ್ಟರ್ ಶಾಟ್ ಹೊಡೆದ ಸೂರ್ಯಕುಮಾರ್ ಯಾದವ್

21 ಟಿ20 ಪಂದ್ಯಗಳನ್ನ ಮಿಸ್ ಮಾಡಿಕೊರುವ ರಾಹುಲ್

21 ಟಿ20 ಪಂದ್ಯಗಳನ್ನ ಮಿಸ್ ಮಾಡಿಕೊರುವ ರಾಹುಲ್

ಇದುವರೆಗೆ 2022ರಲ್ಲಿ ಕೆಎಲ್ ರಾಹುಲ್ ಅವರು ವೆಸ್ಟ್ ಇಂಡೀಸ್ (2), ಶ್ರೀಲಂಕಾ, ದಕ್ಷಿಣ ಆಫ್ರಿಕಾ, ಐರ್ಲೆಂಡ್ ಮತ್ತು ಇಂಗ್ಲೆಂಡ್‌ನಲ್ಲಿ ಒಟ್ಟು 6 ಸರಣಿಗಳಲ್ಲಿ 21 ಟಿ20 ಪಂದ್ಯಗಳನ್ನು ಕಳೆದುಕೊಂಡಿದ್ದಾರೆ. ಮೊದಲಿಗೆ ಅವರು ತಮ್ಮ ತೊಡೆ ಸಂದು ಗಾಯದಿಂದ ಬಳಲುತ್ತಿದ್ದರು, ಆದರೆ ಈಗ ಅವರು ಕೊರೊನಾ ವೈರಸ್‌ನಿಂದ ಬಳಲಿ, ಚೇತರಿಸಿಕೊಂಡರು ವಿಶ್ರಾಂತಿ ಪಡೆದಿದ್ದಾರೆ.

ಲೆಜೆಂಡ್ಸ್ ಲೀಗ್ ಕ್ರಿಕೆಟ್: ವಿಶೇಷ ಪಂದ್ಯದಲ್ಲಿ ಆಡಲಿದ್ದಾರೆ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ

ಆತುರ ಪಟ್ಟು ಶುಬ್ಮನ್ ಗಿಲ್ ವಿಚಾರದಲ್ಲಿ ಮಾಡಿದ ಎಡವಟ್ಟಿನಿಂದ RCB ಗೆ ಭಾರಿ ಅವಮಾನ | *Cricket | OneIndia Kannada
ರಾಹುಲ್ ದ್ರಾವಿಡ್‌ ಯೋಜನೆಯಲ್ಲಿ ಕೆ.ಎಲ್ ರಾಹುಲ್ ಇಲ್ವಾ?

ರಾಹುಲ್ ದ್ರಾವಿಡ್‌ ಯೋಜನೆಯಲ್ಲಿ ಕೆ.ಎಲ್ ರಾಹುಲ್ ಇಲ್ವಾ?

ಕೆ.ಎಲ್ ರಾಹುಲ್ ಕಮ್ ಬ್ಯಾಕ್ ಮಾಡುತ್ತಾರೆ ಎಂದು ಕಾಯುತ್ತಿದ್ದ ರಾಹುಲ್ ದ್ರಾವಿಡ್ ಈಗ ತಾಳ್ಮೆ ಕಳೆದುಕೊಂಡಿದ್ದಾರೆ. ಅವರು ಸಂಪೂರ್ಣ ಫಿಟ್ ಆಗದ ಕಾರಣ ಏಷ್ಯಾಕಪ್ ಸರಣಿಯಲ್ಲಿ ಆಡುವುದು ಅನುಮಾನವಾಗಿದೆ. ಹಾಗಾಗಿ ಯಾವುದೇ ಟೂರ್ನಿಯಲ್ಲಿ ಆಡದೆ ನೇರವಾಗಿ ಟಿ20 ವಿಶ್ವಕಪ್ ಗೆ ಕರೆದುಕೊಂಡು ಹೋಗಲು ದ್ರಾವಿಡ್ ಸಿದ್ಧರಿಲ್ಲ ಮತ್ತು ಪ್ಲಾನ್ ನಿಂದ ಹೊರ ಹಾಕಬಹುದು ಎಂದು ಕ್ರಿಕೆಟ್ ಪಂಡಿತರ ಅಂದಾಜಿಸಿದ್ದಾರೆ.

ಹೀಗೆ ಪದೇ ಪದೇ ಗಾಯಗೊಳ್ಳುತ್ತಿರುವ ಭಾರತಕ್ಕೆ ರಾಹುಲ್ ಫಿಟ್ನೆಸ್ ದೊಡ್ಡ ತಲೆನೋವಾಗಿದೆ. ರಾಹುಲ್ ಭಾರತದ ನಿರ್ಣಾಯಕ ಆಟಗಾರರಲ್ಲಿ ಒಬ್ಬರು. ಹೀಗಾಗಿ ರಾಹುಲ್ ಗಾಯಗೊಂಡು ವಿಶ್ವಕಪ್ ನಲ್ಲಿ ಆಡಲು ಸಾಧ್ಯವಾಗದೇ ಇದ್ದರೆ ಭಾರತಕ್ಕೆ ದೊಡ್ಡ ಹಿನ್ನಡೆಯಾಗಲಿದೆ.

Story first published: Saturday, July 30, 2022, 0:02 [IST]
Other articles published on Jul 30, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X