ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಈ ಕೆಟ್ಟ ಆಟಗಾರನಿಗೆ ಅವಕಾಶ ಕೊಟ್ಟಿದ್ದೇ ಹಿನ್ನಡೆಗೆ ಕಾರಣ; ಕೊಹ್ಲಿ ವಿರುದ್ಧ ಕಿಡಿಕಾರಿದ ಮಾಜಿ ಕ್ರಿಕೆಟಿಗ!

Michael Vaughan questions Virat Kohli’s tactics to open the bowling with Ishant Sharma on Day 2

ಭಾರತ ಮತ್ತು ಇಂಗ್ಲೆಂಡ್ ನಡುವಿನ 5 ಪಂದ್ಯಗಳ ಟೆಸ್ಟ್ ಸರಣಿಯ ಮೊದಲೆರಡು ಪಂದ್ಯಗಳು ಈಗಾಗಲೇ ಮುಗಿದಿದ್ದು ಇಂಗ್ಲೆಂಡ್ ವಿರುದ್ಧ ಟೀಂ ಇಂಡಿಯಾ 1-0 ಅಂತರದ ಮುನ್ನಡೆಯನ್ನು ಸಾಧಿಸಿದೆ. ಭಾರತ ಮತ್ತು ಇಂಗ್ಲೆಂಡ್ ನಡುವಿನ ಮೊದಲ ಟೆಸ್ಟ್ ಪಂದ್ಯ ಡ್ರಾನಲ್ಲಿ ಅಂತ್ಯವಾಗಿತ್ತು, ನಂತರ ಕ್ರಿಕೆಟ್ ಕಾಶಿ ಎಂದೇ ಖ್ಯಾತಿಯನ್ನು ಹೊಂದಿರುವ ಲಾರ್ಡ್ಸ್ ಕ್ರೀಡಾಂಗಣದಲ್ಲಿ ನಡೆದ ಭಾರತ ಮತ್ತು ಇಂಗ್ಲೆಂಡ್ ನಡುವಿನ ಎರಡನೇ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಭಾರತ 151 ರನ್‌ಗಳ ಭರ್ಜರಿ ಗೆಲುವನ್ನು ಸಾಧಿಸಿತು.

ರೋಹಿತ್ ಶರ್ಮಾ ತನಗಾಗಿ ಮಾತ್ರ ಆಡುತ್ತಿದ್ದಾರೆ; ಕಳಪೆ ಪ್ರದರ್ಶನದ ಬೆನ್ನಲ್ಲೇ ಕೇಳಿಬಂತು ಮಹಾ ಆರೋಪ!ರೋಹಿತ್ ಶರ್ಮಾ ತನಗಾಗಿ ಮಾತ್ರ ಆಡುತ್ತಿದ್ದಾರೆ; ಕಳಪೆ ಪ್ರದರ್ಶನದ ಬೆನ್ನಲ್ಲೇ ಕೇಳಿಬಂತು ಮಹಾ ಆರೋಪ!

ಹೀಗೆ ಲಾರ್ಡ್ಸ್ ಟೆಸ್ಟ್ ಪಂದ್ಯದಲ್ಲಿ ಗೆಲುವು ಸಾಧಿಸುವುದರ ಮೂಲಕ ಸರಣಿ ಮೇಲೆ ಹಿಡಿತವನ್ನು ಸಾಧಿಸಿದ್ದ ಟೀಮ್ ಇಂಡಿಯಾ ಆಟಗಾರರು ಇಂಗ್ಲೆಂಡ್ ವಿರುದ್ಧ ಲೀಡ್ಸ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಮೂರನೇ ಟೆಸ್ಟ್ ಪಂದ್ಯದಲ್ಲಿಯೂ ಉತ್ತಮ ಪ್ರದರ್ಶನವನ್ನು ನೀಡಲಿದ್ದಾರೆ ಎಂದೇ ಎಣಿಸಲಾಗಿತ್ತು. ಆದರೆ ಲೀಡ್ಸ್ ಅಂಗಳದಲ್ಲಿ ನಡೆದದ್ದೇ ಬೇರೆ, ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ವಿರಾಟ್ ಕೊಹ್ಲಿ ಪಡೆ ಯಾರೂ ಊಹಿಸಿರದ ರೀತಿ ಕಳಪೆ ಪ್ರದರ್ಶನ ನೀಡಿ ಮೊದಲನೇ ಇನ್ನಿಂಗ್ಸ್‌ನಲ್ಲಿ ಕೇವಲ 78 ರನ್‌ಗಳಿಗೆ ಆಲ್ ಔಟ್ ಆಗುವುದರ ಮೂಲಕ ಮಂಕಾಯಿತು.

ಕೇವಲ ಬ್ಯಾಟಿಂಗ್‌ನಲ್ಲಿ ಮಾತ್ರವಲ್ಲದೇ ಬೌಲಿಂಗ್‌ನಲ್ಲಿಯೂ ಸಹ ಟೀಮ್ ಇಂಡಿಯಾ ತನ್ನ ಕಳಪೆ ಪ್ರದರ್ಶನವನ್ನು ಮುಂದುವರಿಸಿದೆ. ಇಂಗ್ಲೆಂಡ್ ಬೌಲಿಂಗ್ ದಾಳಿಗೆ ತತ್ತರಿಸಿ 78 ರನ್‌ಗಳಿಗೆ ಆಲ್ ಔಟ್ ಆದ ಟೀಮ್ ಇಂಡಿಯಾ ಇಂಗ್ಲೆಂಡ್ ಆಟಗಾರರ ವಿಕೆಟ್ ಪಡೆಯುವಲ್ಲಿಯೂ ಸಹ ಹರಸಾಹಸ ಪಡುತ್ತಿದೆ. ಮೂರನೇ ಟೆಸ್ಟ್ ಪಂದ್ಯದ ಮೊದಲನೇ ದಿನ ಇಂಗ್ಲೆಂಡ್ ತಂಡದ ಯಾವುದೇ ವಿಕೆಟ್ ಪಡೆದುಕೊಳ್ಳುವಲ್ಲಿ ಟೀಮ್ ಇಂಡಿಯಾ ಬೌಲರ್‌ಗಳು ಯಶಸ್ವಿಯಾಗಿರಲಿಲ್ಲ. ಹೀಗೆ ಮೊದಲನೇ ದಿನವೇ ಬೌಲಿಂಗ್‌ನಲ್ಲಿ ಎಡವಿದ್ದ ಟೀಮ್ ಇಂಡಿಯಾ ಎರಡನೇ ದಿನವೂ ಸಹ ಹೇಳಿಕೊಳ್ಳುವಂತಹ ಬೌಲಿಂಗ್ ಪ್ರದರ್ಶನವನ್ನು ನೀಡುವಲ್ಲಿ ಸಫಲವಾಗಿಲ್ಲ. ಎರಡನೇ ದಿನದಾಟದಂತ್ಯಕ್ಕೆ ಇಂಗ್ಲೆಂಡ್ 8 ವಿಕೆಟ್ ಕಳೆದುಕೊಂಡರೂ ಸಹ 423 ರನ್ ಬಾರಿಸುವುದರ ಮೂಲಕ 345 ರನ್‌ಗಳ ಮುನ್ನಡೆಯನ್ನು ಕಾಯ್ದುಕೊಂಡಿದೆ.

ಭಾರತ vs ಇಂಗ್ಲೆಂಡ್ ತೃತೀಯ ಟೆಸ್ಟ್: ತಾನು ಮಾಡಿದ ತಪ್ಪಿನ ಕುರಿತು ಮಾತನಾಡಿದ ರಿಷಭ್ ಪಂತ್ಭಾರತ vs ಇಂಗ್ಲೆಂಡ್ ತೃತೀಯ ಟೆಸ್ಟ್: ತಾನು ಮಾಡಿದ ತಪ್ಪಿನ ಕುರಿತು ಮಾತನಾಡಿದ ರಿಷಭ್ ಪಂತ್

ಹೀಗೆ ಇಂಗ್ಲೆಂಡ್ ತಂಡದ ವಿರುದ್ಧ ನಡೆದ ಮೂರನೇ ಟೆಸ್ಟ್ ಪಂದ್ಯದ ಎರಡನೇ ದಿನದಾಟದಲ್ಲಿ ಉತ್ತಮ ಬೌಲಿಂಗ್ ಮಾಡುವಲ್ಲಿ ಎಡವಿರುವ ಟೀಮ್ ಇಂಡಿಯಾ ವಿರುದ್ಧ ಇದೀಗ ಇಂಗ್ಲೆಂಡ್ ತಂಡದ ಮಾಜಿ ನಾಯಕ ಮೈಕಲ್ ವಾನ್ ಈ ಕೆಳಕಂಡಂತೆ ಕಿಡಿಕಾರಿದ್ದಾರೆ.

ಎರಡನೇ ದಿನದಾಟದ ಆರಂಭದಲ್ಲಿ ಕೆಟ್ಟ ಬೌಲರ್‌ಗೆ ಬೌಲಿಂಗ್ ನೀಡಿದ್ದು ತಪ್ಪು

ಎರಡನೇ ದಿನದಾಟದ ಆರಂಭದಲ್ಲಿ ಕೆಟ್ಟ ಬೌಲರ್‌ಗೆ ಬೌಲಿಂಗ್ ನೀಡಿದ್ದು ತಪ್ಪು

ಭಾರತ ಮತ್ತು ಇಂಗ್ಲೆಂಡ್ ನಡುವೆ ಲಾರ್ಡ್ಸ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಮೂರನೇ ಟೆಸ್ಟ್ ಪಂದ್ಯದ ಎರಡನೇ ದಿನದಾಟದ ಆರಂಭದಲ್ಲಿ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಇಶಾಂತ್ ಶರ್ಮಾಗೆ ಬೌಲಿಂಗ್ ಮಾಡುವ ಅವಕಾಶವನ್ನು ನೀಡಿದರು. ವಿರಾಟ್ ಕೊಹ್ಲಿ ತೆಗೆದುಕೊಂಡ ಈ ನಿರ್ಣಯದ ವಿರುದ್ಧ ಕಿಡಿಕಾರಿರುವ ಮೈಕಲ್ ವಾನ್ ಪಂದ್ಯದಲ್ಲಿ ಕಳಪೆ ಪ್ರದರ್ಶನ ನೀಡಿರುವ ಇಶಾಂತ್ ಶರ್ಮಾಗೆ ದಿನದ ಆರಂಭದಲ್ಲಿ ಬೌಲಿಂಗ್ ನೀಡಿದ ವಿರಾಟ್ ಕೊಹ್ಲಿ ಆಯ್ಕೆ ಸರಿಯಾದದ್ದಲ್ಲ, ತಂಡದಲ್ಲಿ ಮೊಹಮ್ಮದ್ ಶಮಿ ಮತ್ತು ಜಸ್ ಪ್ರೀತ್ ಬೂಮ್ರಾರಂತಹ ಉತ್ತಮ ಬೌಲರ್‌ಗಳಿರುವಾಗ ಇಶಾಂತ್ ಶರ್ಮಾಗೆ ಬೌಲಿಂಗ್ ನೀಡಿದ್ದು ಕೆಟ್ಟ ನಿರ್ಣಯ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಅದೇ ಹಳೆ ಮಂತ್ರ ಜಪಿಸುವುದನ್ನು ಬಿಡಬೇಕು

ಅದೇ ಹಳೆ ಮಂತ್ರ ಜಪಿಸುವುದನ್ನು ಬಿಡಬೇಕು

ವಿರಾಟ್ ಕೊಹ್ಲಿ ಇಂಗ್ಲೆಂಡ್ ವಿರುದ್ಧದ ಮೂರನೇ ಟೆಸ್ಟ್ ಪಂದ್ಯದ ಮೊದಲನೇ ಇನ್ನಿಂಗ್ಸ್‌ನಲ್ಲಿ ಬೌಲರ್‌ಗಳನ್ನು ಬಳಸಿದ ಕ್ರಮಾಂಕದ ಕುರಿತು ಮೈಕಲ್ ವಾನ್ ಬೇಸರ ವ್ಯಕ್ತಪಡಿಸಿದ್ದಾರೆ. ಹಿಂದಿನ ಪಂದ್ಯಗಳ ರೀತಿಯೇ ಈ ಪಂದ್ಯದಲ್ಲಿಯೂ ಬೌಲರ್‌ಗಳ ಆಯ್ಕೆಯನ್ನು ಮಾಡಲಾಗಿದೆ. ತಂಡ ಒತ್ತಡದಲ್ಲಿದ್ದಾಗ ಬೌಲಿಂಗ್ ಕ್ರಮಾಂಕದಲ್ಲಿ ಬದಲಾವಣೆಯನ್ನು ಮಾಡುವುದರ ಮೂಲಕ ವಿಕೆಟ್ ಪಡೆಯುವ ಪ್ರಯತ್ನ ಮಾಡಬೇಕೇ ಹೊರತು ಹಿಂದಿನ ಪಂದ್ಯಗಳಲ್ಲಿ ಅನುಸರಿಸಿದ್ದ ಬೌಲಿಂಗ್ ಕ್ರಮವನ್ನೇ ಅನುಸರಿಸಬಾರದು ಎಂದು ಮೈಕಲ್ ವಾನ್ ಅಭಿಪ್ರಾಯಪಟ್ಟಿದ್ದಾರೆ.

ಸಿರಾಜ್ ಹಾಗು ಕೊಹ್ಲಿ ಸೇರಿ ಪಂತ್ ಮಾತಿಗೆ ವಿರುದ್ಧವಾಗಿ ನಡೆದಾಗ | Oneindia Kannada
ಇಶಾಂತ್ ಶರ್ಮ ಕಳಪೆ ಪ್ರದರ್ಶನ

ಇಶಾಂತ್ ಶರ್ಮ ಕಳಪೆ ಪ್ರದರ್ಶನ

ಭಾರತ ಮತ್ತು ಇಂಗ್ಲೆಂಡ್ ನಡುವೆ ಲಾರ್ಡ್ಸ್ ಅಂಗಳದಲ್ಲಿ ನಡೆದ ಎರಡನೇ ಟೆಸ್ಟ್ ಪಂದ್ಯದಲ್ಲಿ 5 ವಿಕೆಟ್‍ಗಳನ್ನು ಪಡೆದು ಮಿಂಚಿದ್ದ ಇಶಾಂತ್ ಶರ್ಮಾ ಹೆಡಿಂಗ್ಲೆ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಮೂರನೇ ಟೆಸ್ಟ್ ಪಂದ್ಯದಲ್ಲಿ ಅಕ್ಷರಶಃ ಮಂಕಾಗಿದ್ದಾರೆ. ಹೇಡಿಂಗ್ಲೆ ಟೆಸ್ಟ್ ಪಂದ್ಯದ ಮೊದಲನೇ ಇನ್ನಿಂಗ್ಸ್‌ನಲ್ಲಿ ಇದುವರೆಗೂ 22 ಓವರ್ ಬೌಲಿಂಗ್ ಮಾಡಿರುವ ಇಶಾಂತ್ ಶರ್ಮಾ 92 ರನ್ ನೀಡಿದ್ದು ಯಾವುದೇ ವಿಕೆಟ್ ಪಡೆದುಕೊಂಡಿಲ್ಲ. ಹೀಗೆ ಮೂರನೇ ಟೆಸ್ಟ್ ಪಂದ್ಯದಲ್ಲಿ ಕಳಪೆ ಪ್ರದರ್ಶನ ನೀಡಿರುವ ಇಶಾಂತ್ ಶರ್ಮಾ ವಿರುದ್ಧ ಇದೀಗ ಭಾರಿ ಟೀಕೆಗಳು ವ್ಯಕ್ತವಾಗುತ್ತಿವೆ.

Story first published: Friday, August 27, 2021, 15:02 [IST]
Other articles published on Aug 27, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X