ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

IND vs AUS 2022: ಒಂದೆರಡು ಪ್ರದರ್ಶನ ನೀಡಿದ ಮಾತ್ರಕ್ಕೆ ಕೆಟ್ಟ ಬೌಲರ್ ಆಗಲಾರ

ಸದ್ಯ ಕಳಪೆ ಬೌಲಿಂಗ್ ಪ್ರದರ್ಶನದಿಂದ ಭಾರತದ ಅನುಭವಿ ಬೌಲರ್ ಭುವನೇಶ್ವರ್ ಕುಮಾರ್ ಅವರನ್ನು ಭಾರತದ ಮಾಜಿ ಆಟಗಾರ ಮೊಹಮ್ಮದ್ ಕೈಫ್ ಬೆಂಬಲಿಸಿದ್ದಾರೆ. ಮುಂಬರುವ ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ನೀಡುತ್ತಾರೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಮಂಗಳವಾರ (ಸೆಪ್ಟೆಂಬರ್ 20) ಮೊಹಾಲಿಯಲ್ಲಿ ಆಸ್ಟ್ರೇಲಿಯಾ 209 ರನ್‌ಗಳ ದಾಖಲೆಯ ಗುರಿಯನ್ನು ಯಶಸ್ವಿಯಾಗಿ ಬೆನ್ನಟ್ಟಿದರು. ಈ ಪಂದ್ಯದಲ್ಲಿ 4 ಓವರ್ ಬೌಲಿಂಗ್ ಮಾಡಿದ್ದ ಭುವನೇಶ್ವರ್ ಕುಮಾರ್ 52 ರನ್ ಬಿಟ್ಟುಕೊಟ್ಟಿದ್ದರು. ಏಷ್ಯಾಕಪ್‌ನಲ್ಲೂ ಶ್ರೀಲಂಕಾ ಮತ್ತು ಪಾಕಿಸ್ತಾನ ವಿರುದ್ಧದ ಪಂದ್ಯಗಳಲ್ಲಿ ನಿರ್ಣಾಯಕ 19ನೇ ಓವರ್ ಬೌಲಿಂಗ್ ಮಾಡಿದ್ದ ಭುವನೇಶ್ವರ್ ಕುಮಾರ್ ಹೆಚ್ಚಿನ ರನ್ ಬಿಟ್ಟುಕೊಟ್ಟಿದ್ದರು. ಅವರ, ಆಟದ ಬಗ್ಗೆ ಈಗಾಗಲೇ ಸಾಕಷ್ಟು ಟೀಕೆ ವ್ಯಕ್ತವಾಗುತ್ತಿದೆ, ಅದರಲ್ಲೂ 19ನೇ ಓವರ್ ಬೌಲಿಂಗ್ ಮಾಡಲು ಕೊಟ್ಟ ರೋಹಿತ್ ಶರ್ಮಾ ವಿರುದ್ಧವೂ ಟೀಕಿಸಲಾಗುತ್ತಿದೆ.

Ind Vs Aus T20I: 5ನೇ ಓವರ್‌ನಲ್ಲಿ ಔಟ್ ಆಗಿದ್ದ ಗ್ರೀನ್, ಧೋನಿಯನ್ನು ಮಿಸ್ ಮಾಡಿಕೊಳ್ಳುತ್ತಿದ್ದೇವೆ ಎಂದ ರವಿಶಾಸ್ತ್ರಿInd Vs Aus T20I: 5ನೇ ಓವರ್‌ನಲ್ಲಿ ಔಟ್ ಆಗಿದ್ದ ಗ್ರೀನ್, ಧೋನಿಯನ್ನು ಮಿಸ್ ಮಾಡಿಕೊಳ್ಳುತ್ತಿದ್ದೇವೆ ಎಂದ ರವಿಶಾಸ್ತ್ರಿ

ಆದಾಗ್ಯೂ, ಮೊಹಮ್ಮದ್ ಕೈಫ್ ಪ್ರತಿನಿಧಿಸುವ ಮಾಜಿ ಉತ್ತರ ಪ್ರದೇಶದ ತಂಡದ ಸಹ ಆಟಗಾರ ಭುವನೇಶ್ವರ್ ಕುಮಾರ್ ಅವರನ್ನು ಬೆಂಬಲಿಸಿದ್ದಾರೆ. ಆತ ಅನುಭವಿ ವೇಗದ ಬೌಲರ್, ಇಂತಹ ಕಷ್ಟದ ಸಂದರ್ಭಗಳನ್ನು ಹೇಗೆ ಎದುರಿಸಬೇಕು ಎಂದು ಆತನಿಗೆ ಗೊತ್ತಿದೆ ಎಂದು ಮೊಹಮ್ಮಮದ್ ಕೈಫ್ ಹೇಳಿದ್ದಾರೆ.

ಉತ್ತಮ ಪ್ರದರ್ಶನ ನೀಡುವ ವಿಶ್ವಾಸ

ಉತ್ತಮ ಪ್ರದರ್ಶನ ನೀಡುವ ವಿಶ್ವಾಸ

"ಭುವನೇಶ್ವರ್ ಕುಮಾರ್ ಬಗ್ಗೆ ನನಗೆ ಯಾವುದೇ ಚಿಂತೆ ಇಲ್ಲ. ಆತ ಸಾಕಷ್ಟು ಅನುಭವಿ ಆಟಗಾರ, ಕೆಲ ಪಂದ್ಯಗಳಿಂದ ಉತ್ತಮ ಪ್ರದರ್ಶನ ನೀಡದೇ ಇರಬಹುದು. ಆದರೂ, ಆತ ಹೊಸ ಚೆಂಡಿನಲ್ಲಿ ವಿಕೆಟ್ ತೆಗೆಯುವ ಸಾಮರ್ಥ್ಯ ಹೊಂದಿದ್ದಾನೆ. ಇಂಗ್ಲೆಂಡ್‌ ಪ್ರವಾಸದಲ್ಲಿ ಆತ ಉತ್ತಮ ಪ್ರದರ್ಶನ ನೀಡಿದ್ದಾನೆ. 1-2 ಕೆಟ್ಟ ಪಂದ್ಯಗಳನ್ನು ಹೊಂದಿದ ಮಾತ್ರಕ್ಕೆ ಕೆಟ್ಟ ಬೌಲರ್ ಆಗಲಾರ" ಎಂದು ಹೇಳಿದ್ದಾರೆ.

ಭಾರತದ ಬೌಲಿಂಗ್ ಸಮಸ್ಯೆಗಳ ಮೇಲೆ ಎಲ್ಲಾ ಗಮನ ಕೇಂದ್ರೀಕೃತವಾಗಿರುವಾಗ, ಇಕ್ಕಟ್ಟಿನ ಸಂದರ್ಭಗಳಲ್ಲಿ ಟೀಂ ಇಂಡಿಯಾದ ಬ್ಯಾಟಿಂಗ್ ಪ್ರದರ್ಶನ ಉತ್ತಮವಾಗಬೇಕು ಎಂದು ಕೈಫ್ ಅಭಿಪ್ರಾಯಪಟ್ಟಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಟೀಕೆಗೆ ಒಳಗಾದ ಭುವಿ: ಟ್ರೋಲ್‌ಗೆ ಪತ್ನಿ ಉತ್ತರ

ಟೀಂ ಇಂಡಿಯಾ ಇನ್ನೂ ಉತ್ತಮ ಬ್ಯಾಟಿಂಗ್ ಮಾಡಬೇಕಿದೆ

ಟೀಂ ಇಂಡಿಯಾ ಇನ್ನೂ ಉತ್ತಮ ಬ್ಯಾಟಿಂಗ್ ಮಾಡಬೇಕಿದೆ

"ಜನರು ಬೌಲಿಂಗ್ ಬಗ್ಗೆ ಮಾತನಾಡುತ್ತಿದ್ದಾರೆ, ಆದರೆ ಒತ್ತಡದಲ್ಲಿ ಅದು ಚೆನ್ನಾಗಿರುತ್ತದೆ ಎಂದು ನಾನು ಭಾವಿಸುತ್ತೇನೆ. ನಾವು ಚೆನ್ನಾಗಿ ಬ್ಯಾಟಿಂಗ್ ಮಾಡಬೇಕಾಗಿದೆ. ಬೌಲಿಂಗ್ ನಿಜವಾಗಿಯೂ ಪ್ರಬಲವಾಗಿದೆ. ಭುವನೇಶ್ವರ್ ಹೊಸ ಚೆಂಡಿನ ಮಾಸ್ಟರ್ ಆಗಿದ್ದಾರೆ ಮತ್ತು ಬುಮ್ರಾ ಮರಳಿ ಬಂದು ಡೆತ್ ಓವರ್‌ಗಳನ್ನು ನೋಡಿಕೊಳ್ಳುತ್ತಾರೆ. ಅಕ್ಷರ್ ಪಟೇಲ್ ಮತ್ತು ಚಾಹಲ್ ಕೂಡ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಹಾಗಾಗಿ ನಾವು ಪ್ರತಿ ಪಂದ್ಯದಲ್ಲಿ 170-180 ರನ್ ಗಳಿಸಿದರೆ, ಭಾರತ ತಂಡವನ್ನು ಸೋಲಿಸುವುದು ಕಷ್ಟವಾಗಲಿದೆ" ಎಂದು ಹೇಳಿದ್ದಾರೆ.

ವಿಶ್ವಕಪ್ ಗೆಲ್ಲಲು ತಂಡ ಸಮರ್ಥವಾಗಿದೆ

ವಿಶ್ವಕಪ್ ಗೆಲ್ಲಲು ತಂಡ ಸಮರ್ಥವಾಗಿದೆ

ಏಷ್ಯಾಕಪ್‌ನಲ್ಲಿ ಸೂಪರ್ 4 ಹಂತದಲ್ಲಿ ಸೋಲುವ ಮೂಲಕ ಟೀಂ ಇಂಡಿಯಾ ಟೂರ್ನಿಯಿಂದ ಹೊರಬಿದ್ದಿತು. ನಂತರ, ಆಸ್ಟ್ರೇಲಿಯಾ ವಿರುದ್ಧದ ಮೊದಲನೇ ಟಿ20 ಪಂದ್ಯದಲ್ಲೂ ನಿರಾಶಾದಾಯಕ ಪ್ರದರ್ಶನ ನೀಡಿದ ನಂತರವೂ ಭಾರತ ತಂಡ ಈ ಬಾರಿ ವಿಶ್ವಕಪ್ ಗೆಲ್ಲಲು ಸಮರ್ಥವಾಗಿದೆ ಎಂದು ಮೊಹಮ್ಮದ್ ಕೈಫ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಟಿ20 ವಿಶ್ವಕಪ್‌ನಲ್ಲಿ ಆಡಲು ತೆರಳುತ್ತಿರುವ ಭಾರತ ತಂಡವು ಅನೇಕ ಮ್ಯಾಚ್ ವಿನ್ನರ್‌ಗಳಿಂದ ಕೂಡಿದೆ ಎಂದು ಗಮನಸೆಳೆದ ಮೊಹಮ್ಮದ್ ಕೈಫ್, ಭಾರತವು ಈ ಬಾರಿ ವಿಶ್ವಕಪ್‌ ಗೆಲ್ಲದಿದ್ದರೆ ಖಂಡಿತವಾಗಿಯೂ ನಿರಾಸೆಯಾಗುತ್ತದೆ ಎಂದು ಹೇಳಿದ್ದಾರೆ.

ಸಮತೋಲನದಿಂದ ಕೂಡಿರುವ ತಂಡ

ಸಮತೋಲನದಿಂದ ಕೂಡಿರುವ ತಂಡ

ಟಿ 20 ವಿಶ್ವಕಪ್‌ಗೆ ಆಯ್ಕೆಯಾದ ಭಾರತೀಯ ತಂಡವು ಸಮತೋಲಿತವಾಗಿದೆ. ಹಾರ್ದಿಕ್ ಪಾಂಡ್ಯ, ರೋಹಿತ್ ಶರ್ಮಾ, ಕೆಎಲ್ ರಾಹುಲ್, ವಿರಾಟ್ ಕೊಹ್ಲಿ, ಇವರೆಲ್ಲರೂ ಮ್ಯಾಚ್ ವಿನ್ನರ್‌ಗಳು ಎಂದು ಮೊಹಮ್ಮದ್ ಕೈಫ್ ಹೇಳಿದ್ದಾರೆ.

ಈ ಬಾರಿ ಟಿ20 ವಿಶ್ವಕಪ್‌ನಲ್ಲಿ ಭಾರತ ತಂಡ ಉತ್ತಮ ಪ್ರದರ್ಶನ ನೀಡುತ್ತದೆ ಎಂದು ಅವರು ಹೇಳಿದ್ದಾರೆ. ಭಾರತ ತಂಡವೇ ಈ ಬಾರಿ ವಿಶ್ವಕಪ್ ಗೆಲ್ಲುವ ನೆಚ್ಚಿನ ತಂಡವಾಗಿದೆ ಎಂದು ಕೈಫ್ ಅಭಿಪ್ರಾಯಪಟ್ಟಿದ್ದಾರೆ.

Story first published: Friday, September 23, 2022, 0:08 [IST]
Other articles published on Sep 23, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X