ಸಾಮಾಜಿಕ ಜಾಲತಾಣದಲ್ಲಿ ಟೀಕೆಗೆ ಒಳಗಾದ ಭುವಿ: ಟ್ರೋಲ್‌ಗೆ ಪತ್ನಿ ಉತ್ತರ

ಭುವನೇಶ್ವರ್ ಕುಮಾರ್ ಭಾರತ ಕ್ರಿಕೆಟ್ ತಂಡದ ಹಿರಿಯ ವೇಗಿಗಳಲ್ಲಿ ಒಬ್ಬರು. ಸ್ವಿಂಗ್ ಪಿಚ್‌ಗಳಲ್ಲಿ ಭುವಿಯನ್ನು ಮಾಂತ್ರಿಕ ಎಂದು ಬಣ್ಣಿಸಬಹುದು. ಸ್ವಿಂಗ್‌ಗೆ ಪೂರಕವಾದ ಪಿಚ್‌ಗಳಲ್ಲಿ ನ್ಯೂಬಾಲ್‌ ಪಿಚ್‌ಗಳಲ್ಲಿ ಭುವನೇಶ್ವರ್ ಬೌಲಿಂಗ್ ಮಾಡುವುದು ಎದುರಾಳಿಗಳಿಗೆ ದುಃಸ್ವಪ್ನವಾಗಿದೆ. ಭುವಿ ಅವರ ಬಾಲ್‌ಗಳು ಸ್ಟಂಪ್‌ಗೆ ನುಗ್ಗಿ ಹಲವಾರು ಬ್ಯಾಟ್ಸ್‌ಮನ್‌ಗಳ ಆಫ್ ಸ್ಟಂಪ್‌ಗಳನ್ನು ಉರುಳಿಸಿವೆ.

ಆದರೆ ಇತ್ತೀಚೆಗೆ ಭುವಿ ಪ್ರದರ್ಶನಕ್ಕೆ ಸಾಕಷ್ಟು ಟೀಕೆಗಳು ಕೇಳಿ ಬರುತ್ತಿವೆ. ಒಂದು ಕಾಲದಲ್ಲಿ ಡೆತ್ ಓವರ್ ಗಳಲ್ಲಿ ರನ್‌ಗಳಿಗೆ ಕಡಿವಾಣ ಹಾಕುತ್ತಿದ್ದ ಹಾಗೂ ವಿಕೆಟ್ ಪಡೆಯುವಲ್ಲಿ ನಿಷ್ಣಾತರಾಗಿದ್ದ ಭುವಿ ಈಗ ಮಂಕಾಗಿದ್ದಾರೆ. 19ನೇ ಓವರ್ ಎಸೆದು ಪಂದ್ಯ ಸೋಲುವುದು ಭುವಿಗೆ ಅಭ್ಯಾಸವಾಗಿ ಹೋಗಿದೆ. ಆಸ್ಟ್ರೇಲಿಯ ವಿರುದ್ಧದ 1ನೇ ಟಿ20ಯಲ್ಲೂ ಭುವಿ 19ನೇ ಓವರ್‌ನಲ್ಲಿ ನಿರಾಸೆ ಮೂಡಿಸಿದ ಬಳಿಕ ಸಾಮಾಜಿಕ ಜಾಲತಾಣಗಳಲ್ಲಿ ಅವರ ವಿರುದ್ಧ ತೀವ್ರ ಟೀಕೆ ವ್ಯಕ್ತವಾಗಿತ್ತು.

ಭುವಿ ವಿರುದ್ಧ ಸೈಬರ್ ದಾಳಿಯೇ ಹೆಚ್ಚುತ್ತಿದೆ ಎನ್ನಬಹುದು. ಇದೀಗ ಭುವಿ ಮೇಲೆ ಟೀಕೆ ನಡೆಸುತ್ತಿರುವ ನೆಟ್ಟಿಗರ ವಿರುದ್ಧ ಅವರ ಪತ್ನಿಯೇ ಹರಿಹಾಯ್ದಿದ್ದಾರೆ. ಅವರ ಪತ್ನಿ ಇನ್‌ಸ್ಟಾಗ್ರಾಮ್‌ನಲ್ಲಿ ಸುದೀರ್ಘ ಟಿಪ್ಪಣಿಯೊಂದನ್ನ ಪೋಸ್ಟ್ ಮಾಡಿದ್ದಾರೆ.

''ಇತ್ತೀಚಿನ ದಿನಗಳಲ್ಲಿ ಜನರು ನಿಷ್ಪ್ರಯೋಜಕರಾಗುತ್ತಿದ್ದಾರೆ. ದ್ವೇಷ ಮತ್ತು ಅಸೂಯೆಯನ್ನು ಹೊಂದಲು ಅವರಿಗೆ ಸಮಯವಿದೆ. ಇದು ಅವರಿಗೆ ನನ್ನ ಸಲಹೆ. ನಿಮ್ಮ ಮಾತು ಮತ್ತು ಅಸ್ತಿತ್ವದ ಬಗ್ಗೆ ಯಾರೂ ಕಾಳಜಿ ವಹಿಸುವುದಿಲ್ಲ'' ಎಂದು ಭುವಿಯ ಪತ್ನಿ ನೂಪುರ್ ನಾಗರ್ ಬರೆದುಕೊಂಡಿದ್ದಾರೆ,

"ಅವಕಾಶಗಳು ಕಡಿಮೆ ಇದ್ದರೂ, ನಿಮ್ಮನ್ನು ಸುಧಾರಿಸಲು ನಿಮ್ಮ ಸಮಯವನ್ನು ಕಳೆಯಿರಿ." ಎಂದು ಸಲಹೆ ನೀಡಿದ್ದಾರೆ.

ಆಸ್ಟ್ರೇಲಿಯಾ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಭುವಿ ನಾಲ್ಕು ಓವರ್‌ಗಳಲ್ಲಿ 52 ರನ್‌ಗಳನ್ನು ಬಿಟ್ಟುಕೊಟ್ಟಿದ್ದರು. ಒಂದೇ ಒಂದು ವಿಕೆಟ್ ಕೂಡ ಪಡೆದಿಲ್ಲ. ಕಳೆದ ಮೂರು ಪಂದ್ಯಗಳಲ್ಲಿ ಭುವಿ 19ನೇ ಓವರ್ ಬೌಲ್ ಮಾಡಿ 49 ರನ್ ಬಿಟ್ಟುಕೊಟ್ಟಿದ್ದರು. ಇದೆಲ್ಲವೂ ಭಾರತದ ಸೋಲಿಗೆ ಕಾರಣವಾಯಿತು. ಭುವನೇಶ್ವರ್ ಅವರಂತಹ ಹಿರಿಯ ಆಟಗಾರರಿಂದ ಉತ್ತಮ ಪ್ರದರ್ಶನವನ್ನು ಎಲ್ಲರೂ ನಿರೀಕ್ಷಿಸುತ್ತಾರೆ, ಆದರೆ ಅವರ ಪ್ರದರ್ಶನ ನಿರೀಕ್ಷಿತ ಮಟ್ಟದಲ್ಲಿಲ್ಲ.

ಭುವನೇಶ್ವರ್ ಕುಮಾರ್ ಟಿ20 ವಿಶ್ವಕಪ್‌ನಲ್ಲಿ ಭಾರತದ ಪ್ರಮುಖ ವೇಗಿಗಳಲ್ಲಿ ಒಬ್ಬರು. ಭಾರತ ಟಿ20 ವಿಶ್ವಕಪ್‌ನಲ್ಲಿ ಡೆತ್ ಓವರ್‌ಗೆ ಹಿರಿಯ ವೇಗಿಗಳನ್ನು ಪರಿಗಣಿಸಿದರೆ, ಅದು ಹಿನ್ನಡೆಯಾಗುವ ಸಾಧ್ಯತೆ ಹೆಚ್ಚು. ಜಸ್ಪ್ರೀತ್ ಬುಮ್ರಾ, ಭುವನೇಶ್ವರ್ ಕುಮಾರ್, ಹರ್ಷಲ್ ಪಟೇಲ್ ಮತ್ತು ಅರ್ಷದೀಪ್ ಸಿಂಗ್ ವಿಶ್ವಕಪ್‌ನಲ್ಲಿ ಭಾರತದ ಪ್ರಮುಖ ವೇಗಿಗಳು. ಅವರಲ್ಲಿ ಭುವಿಯನ್ನು ಹೊಸ ಚೆಂಡು ಮತ್ತು ಮಧ್ಯಮ ಓವರ್‌ಗಳಲ್ಲಿ ಬಳಸಿದರೆ ಪ್ರಯೋಜನಕಾರಿಯಾಗಬಹುದು. ಡೆತ್‌ ಓವರ್‌ಗಳಲ್ಲಿ ಪರಿಗಣಿಸಿದರೆ, ಹಿನ್ನಡೆಯಾಗುವ ಸಾಧ್ಯತೆಯಿದೆ.

ಶುಕ್ರಾವರ ಆಸ್ಟ್ರೇಲಿಯಾ ವಿರುದ್ಧ ಎರಡನೇ ಟಿ20 ಪಂದ್ಯ ನಡೆಯಲಿದೆ. ಭಾರತ ತಂಡದಲ್ಲಿ ಮೂರು ಬದಲಾವಣೆಗಳನ್ನು ನಿರೀಕ್ಷಿಸಲಾಗಿದೆ. ಭಾರತ ಭುವನೇಶ್ವರ್ ಕುಮಾರ್ ಮತ್ತು ಹರ್ಷಲ್ ಪಟೇಲ್ ಅವರಲ್ಲಿ ಒಬ್ಬರನ್ನು ಕಣಕ್ಕಿಳಿಸಬಹುದು ಎಂಬ ವರದಿಗಳಿವೆ. ಹರ್ಷಲ್ ಪಟೇಲ್ ಮಧ್ಯಮ ಓವರ್‌ಗಳಲ್ಲಿ ಮತ್ತು ಡೆತ್ ಓವರ್‌ಗಳಲ್ಲಿ ವಿಕೆಟ್ ಕಬಳಿಸುವ ಸಾಮರ್ಥ್ಯ ಹೊಂದಿದ್ದರೂ ರನ್ ಬಿಟ್ಟುಕೊಡುವಲ್ಲಿ ಮುಂದಿದ್ದಾರೆ.

For Quick Alerts
Subscribe Now
For Quick Alerts
ALLOW NOTIFICATIONS
For Daily Alerts
Story first published: Thursday, September 22, 2022, 22:08 [IST]
Other articles published on Sep 22, 2022

Latest Videos

  + More
  POLLS
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Yes No
  Settings X