ದ್ರಾವಿಡ್ ತಂಡ ವಿರುದ್ಧ ಬಾಂಡ್ ತಂಡ, ಕಿವೀಸ್ ಎ ಭಾರತ ಪ್ರವಾಸ

Posted By:

ಬೆಂಗಳೂರು, ಸೆ. 08: ನ್ಯೂಜಿಲೆಂಡ್ ಹಿರಿಯರ ತಂಡದಿಂದ ಭಾರತ ಪ್ರವಾಸ ಕೈಗೊಳ್ಳುವುದಕ್ಕೂ ಮುನ್ನ ಕಿವೀಸ್ 'ಎ' ತಂಡ ಭಾರತಕ್ಕೆ ಬರಲಿದೆ. ಕಿರಿಯರ ತಂಡದ ಕೋಚ್ ಗಳಾದ ರಾಹುಲ್ ದ್ರಾವಿಡ್ ಹಾಗೂ ಶೇನ್ ಬಾಂಡ್ ಮಾರ್ಗದರ್ಶನ ತಂಡಗಳ ಕಾದಾಟ ಕುತೂಹಲ ಕೆರಳಿಸಿದೆ.

ಪ್ರವಾಸಿ ನ್ಯೂಜಿಲೆಂಡ್ 'ಎ' ವಿರುದ್ಧ ಭಾರತ 'ಎ' ತಂಡವು ನಾಲ್ಕು ದಿನಗಳ ಎರಡು ಪಂದ್ಯಗಳು ಹಾಗೂ ಐದು ಏಕದಿನ ಪಂದ್ಯಗಳನ್ನಾಡಲಿದೆ. ಸರಣಿಯ ವೇಳಾಪಟ್ಟಿಯನ್ನು ಬಿಸಿಸಿಐ ಪ್ರಕಟಿಸಿದೆ. ಸೆಪ್ಟೆಂಬರ್ 23 ರಿಂದ ಅಕ್ಟೋಬರ್ 13ರ ತನಕ ಪಂದ್ಯಗಳು ನಡೆಯಲಿವೆ.

New Zealand 'A' to tour India from September 23

ಬ್ಯಾಟ್ಸ್​ಮನ್ ಹೆನ್ರಿ ನಿಕೋಲಸ್ ನೇತೃತ್ವದ ಕಿವೀಸ್ ತಂಡದಲ್ಲಿ 16 ಆಟಗಾರರ ಪೈಕಿ 13 ಮಂದಿ ರಾಷ್ಟ್ರೀಯ ತಂಡದ ಪರ ಆಡಿದ ಅನುಭವ ಹೊಂದಿದ್ದಾರೆ. ಮಾಜಿ ವೇಗಿ ಶೇನ್ ಬಾಂಡ್ ತಂಡದ ಮುಖ್ಯ ಕೋಚ್ ಆಗಿದ್ದಾರೆ.

ಸೆಪ್ಟೆಂಬರ್ 19ರಂದು ಭಾರತಕ್ಕೆ ತಂಡದ ಆಗಮನ
ಸೆಪ್ಟೆಂಬರ್ 23-26 ಹಾಗೂ ಸೆಪ್ಟೆಂಬರ್ 30 ರಿಂದ ಅಕ್ಟೋಬರ್ 03 : ವಿಜಯವಾಡದಲ್ಲಿ ನಾಲ್ಕುದಿನಗಳ ಪಂದ್ಯಗಳು
ಅಕ್ಟೋಬರ್ 6 8, 10, 13 ಹಾಗೂ 15ರಂದು ವಿಶಾಖಪಟ್ಟಣಂನಲ್ಲಿ ಐದು ಏಕದಿನ ಪಂದ್ಯಗಳು

ತಂಡ: ಹೆನ್ರಿ ನಿಕೋಲಸ್(ನಾಯಕ), ಟಾಡ್ ಆಸ್ಲೆ, ಟಾಮ್ ಬ್ಲಂಡೆಲ್, ಟಾಮ್ ಬ್ರೂಸ್, ಲಾಕಿ ಫರ್ಗುಸನ್, ಮ್ಯಾಟ್ ಹೆನ್ರಿ, ಸ್ಕಾಟ್ ಕುಗೆಲೆಜ್ನ್,ಕಾಲಿನ್ ಮನ್ರೋ, ಗ್ಲೆನ್ ಫಿಲಿಫ್, ಸೇಥ್ ರಾನ್ಸ್, ಜೀತ್ ರಾವಲ್, ಟಿಮ್ ಸೈಫೆರ್, ಇಶ್ ಸೋಧಿ, ಸೀನ್ ಸೋಲಿಯಾ, ಜಾರ್ಜ್ ವರ್ಕರ್, ವಿಲ್ ಯಂಗ್

Story first published: Friday, September 8, 2017, 17:30 [IST]
Other articles published on Sep 8, 2017

myKhel ನಿಂದ ತಾಜಾ ಸುದ್ದಿಗಳನ್ನು ಪಡೆಯಿರಿ