ಐಪಿಎಲ್: ನ್ಯೂಜಿಲೆಂಡ್‌ಗೆ ಪ್ರಯಾಣ ನಿರ್ಬಂಧದಿಂದ ಆಟಗಾರರಿಗೆ ಸಮಸ್ಯೆ

ನವದೆಹಲಿ: ಮುಂದಿನ ಭಾನುವಾರದಿಂದ ಭಾರತದಿಂದ ನ್ಯೂಜಿಲೆಂಡ್‌ಗೆ ಪ್ರಯಾಣಕ್ಕೆ ನಿರ್ಬಂಧ ಹೇರಲಾಗಿದೆ. ಇದರಿಂದ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಪಾಲ್ಗೊಳ್ಳುವ ನ್ಯೂಜಿಲೆಂಡ್ ಆಟಗಾರರಿಗೆ ಸಮಸ್ಯೆಯಾಗುವ ಸಾಧ್ಯತೆಯಿದೆ. ಕೊರೊನಾವೈರಸ್ ಕಾರಣದಿಂದಾಗಿ ಆಟಗಾರರು ತೊಂದರೆ ಎದುರಿಸಬೇಕಾಗಿ ಬಂದಿದೆ.
ಭಾರತದಲ್ಲಿ ಕೊರೊನಾವೈರಸ್ ಪ್ರಕರಣಗಳು ಹೆಚ್ಚುತ್ತಿರುವುದರಿಂದ ಭಾರತದಿಂದ ಪ್ರಯಾಣಿಕರನ್ನು ನ್ಯೂಜಿಲೆಂಡ್ ನಿಷೇಧಿಸಿದೆ. ಹೀಗಾಗಿ ಐಪಿಎಲ್ ಸಲುವಾಗಿ ಸದ್ಯ ಭಾರತದಲ್ಲಿರುವ ನ್ಯೂಜಿಲೆಂಡ್ ಕ್ರಿಕೆಟರ್ಸ್ ಮುಂಬರಲಿರುವ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಗಾಗಿ ಭಾರತದಿಂದ ನೇರವಾಗಿ ಯುನೈಟೆಡ್ ಕಿಂಗ್ಡಮ್‌ಗೆ ಹೋಗಬೇಕಿದೆ.
ಐಪಿಎಲ್ 2021: ಸುದ್ದಿ, ವಿಶ್ಲೇಷಣೆ, ಅಂಕಿ ಅಂಶಗಳುಳ್ಳ ವಿಶೇಷ ಪುಟದ ಲಿಂಕ್
'ಐಪಿಎಲ್ ಒಪ್ಪಂದದಲ್ಲಿರುವ ಫ್ರಾಂಚೈಸಿಗಳೊಂದಿಗೆ ಸಂವಹನ ಮಾಡುತ್ತ ನಾವು ಪರಿಸ್ಥಿತಿಗಳನ್ನು ಗಮನಿಸುತ್ತಿದ್ದೇವೆ. ಏಕೆಂದರೆ ಪಂದ್ಯಾವಳಿ ಸ್ವಲ್ಪ ಸಮಯದವರೆಗೆ ಹೋಗಬೇಕಿದೆ,' ಎಂದು ನ್ಯೂಜಿಲೆಂಡ್‌ನ ಸಾರ್ವಜನಿಕ ವ್ಯವಹಾರಗಳ ವ್ಯವಸ್ಥಾಪಕ ರಿಚರ್ಡ್ ಬೂಕ್ ಹೇಳಿದ್ದಾರೆ.
ಐಪಿಎಲ್‌ನಲ್ಲಿ ಸನ್ ರೈಸರ್ಸ್ ಹೈದರಾಬಾದ್‌ನಲ್ಲಿ ಕೇನ್ ವಿಲಿಯಮ್ಸನ್, ಮುಂಬೈ ಇಂಡಿಯನ್ಸ್‌ನಲ್ಲಿ ಟ್ರೆಂಟ್ ಬೌಲ್ಟ್, ರಾಯಲ್ ಚಾಲೆಂಜರ್ಸ್ ಬೆಂಗಳೂರಿನಲ್ಲಿ ಕೈಲ್ ಜೇಮಿಸನ್ ಆಡುತ್ತಿದ್ದಾರೆ. ಐಪಿಎಲ್ ಬಳಿಕ ಮೇ-ಜೂನ್‌ನಲ್ಲಿ ಇಂಗ್ಲೆಂಡ್ ವಿರುದ್ಧ ಕಿವೀಸ್‌ಗೆ ಎರಡು ಪಂದ್ಯಗಳ ಟೆಸ್ಟ್ ಸರಣಿ ನಡೆಯಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications