1st ಟಿ20 : ಶ್ರೀಲಂಕಾ ವಿರುದ್ಧ ಭಾರತದ 'ಸಂಭಾವ್ಯ' ತಂಡ

Posted By:
ಇಂಡಿಯಾ vs ಲಂಕಾ ಟೀ20 : ಶ್ರೀಲಂಕಾ ವಿರುದ್ಧ ಭಾರತದ 'ಸಂಭಾವ್ಯ' ತಂಡ | Oneindia Kannada
Nidahas Trophy T20I: Probable India XI against Sri Lanka on March 6

ಕೊಲಂಬೋ, ಮಾರ್ಚ್ 06: ನಿದಹಾಸ್ ಟ್ರೋಫಿ ಟಿ20 ಸರಣಿಯ ಮೊದಲ ಪಂದ್ಯದಲ್ಲಿ ಅತಿಥೇಯ ಶ್ರೀಲಂಕಾ ತಂಡವನ್ನು ಭಾರತ ತಂಡ ಮಾರ್ಚ್ 06ರಂದು ಎದುರಿಸಲಿದೆ. ರೋಹಿತ್ ಶರ್ಮ ನೇತೃತ್ವದ ಯುವಪಡೆಯ ಶಕ್ತಿ, ಸಾಮರ್ಥ್ಯ ಅಳೆಯಲು ಈ ಸರಣಿ ಉತ್ತಮ ವೇದಿಕೆ ಒದಗಿಸಲಿದೆ.

ಭಾರತ-ಶ್ರೀಲಂಕಾ-ಬಾಂಗ್ಲಾ ತ್ರಿಕೋನ ಸರಣಿ ವೇಳಾಪಟ್ಟಿ

ಕಳೆದ ವರ್ಷ ಭಾರತ ಪ್ರವಾಸ ಕೈಗೊಂಡಿದ್ದ ಶ್ರೀಲಂಕಾ ವಿರುದ್ಧದ ಟಿ20 ಸರಣಿಯನ್ನು ರೋಹಿತ್ ಶರ್ಮ ಅವರ ನಾಯಕತ್ವದಲ್ಲೇ 3-0 ಅಂತರದಲ್ಲಿ ಗೆದ್ದಿದ್ದನ್ನು ಇಲ್ಲಿ ಸ್ಮರಿಸಬಹುದು.

ಭಾರತ ತಂಡದಲ್ಲಿ ಉಪ ನಾಯಕ ಶಿಖರ್ ಧವನ್, ಮಧ್ಯಮ ಕ್ರಮಾಂಕದಲ್ಲಿ ಸುರೇಶ್ ರೈನಾ, ಮನೀಶ್ ಪಾಂಡೆ ಆಡುವ ಹನ್ನೊಂದರಲ್ಲಿ ಸ್ಥಾನಗಳಿಸುವುದು ಖಚಿತ. ಆದರೆ, ಕೆಎಲ್ ರಾಹುಲ್ ಅವರು ಆರಂಭಿಕ ಆಟಗಾರರಾಗಿ ಕಣಕ್ಕಿಳಿಯುವುದು ಅನುಮಾನ.

ವಿಕೆಟ್ ಕೀಪರ್ ಗಳಾಗಿ ದಿನೇಶ್ ಕಾರ್ತಿಕ್ ಹಾಗೂ ರಿಷಬ್ ಪಂತ್ ಇದ್ದಾರೆ. ಇವರ ಪೈಕಿ ದಿನೇಶ್ ಕಾರ್ತಿಕ್ ಗೆ ಮಣೆ ಹಾಕುವ ಸಾಧ್ಯತೆಯಿದೆ.

ಶ್ರೀಲಂಕಾ ವಿರುದ್ಧದ 1st ಟಿ20ಗೆ ಸಂಭಾವ್ಯ ಭಾರತ ತಂಡ
ಆಡುವ ಹನ್ನೊಂದು:
1. ರೋಹಿತ್ ಶರ್ಮ
2. ಶಿಖರ್ ಧವನ್.
3. ಸುರೇಶ್ ರೈನಾ.
4. ಮನೀಶ್ ಪಾಂಡೆ
5. ದಿನೇಶ್ ಕಾರ್ತಿಕ್
6. ವಿಜಯ್ ಶಂಕರ್
7. ವಾಷಿಂಗ್ಟನ್ ಸುಂದರ್
8. ಅಕ್ಷರ್ ಪಟೇಲ್
9. ಯಜುವೇಂದ್ರ ಚಾಹಲ್
10. ಶಾರ್ದೂಲ್ ಠಾಕೂರ್
11 ಜಯದೇವ್ ಉನದ್ಕತ್

ಸರಣಿಗೆ ಭಾರತ ತಂಡ:
ರೋಹಿತ್ ಶರ್ಮ (ನಾಯಕ), ಶಿಖರ್ ಧವನ್‌ (ಉಪನಾಯಕ), ಕೆ.ಎಲ್.ರಾಹುಲ್‌, ಸುರೇಶ್ ರೈನಾ, ಮನೀಷ್ ಪಾಂಡೆ, ದಿನೇಶ್ ಕಾರ್ತಿಕ್‌ (ವಿಕೆಟ್ ಕೀಪರ್‌), ರಿಷಭ್ ಪಂತ್‌ (ವಿಕೆಟ್ ಕೀಪರ್‌), ದೀಪಕ್ ಹೂಡ, ವಾಷಿಂಗ್ಟನ್‌ ಸುಂದರ್‌, ಯಜುವೇಂದ್ರ ಚಾಹಲ್‌, ಅಕ್ಷರ್‌ ಪಟೇಲ್‌, ವಿಜಯ್‌ ಶಂಕರ್‌, ಶಾರ್ದೂಲ್ ಠಾಕೂರ್‌, ಜಯದೇವ್ ಉನದ್ಕತ್‌, ಮಹಮ್ಮದ್ ಸಿರಾಜ್‌.

ಶಾರ್ದೂಲ್ ಠಾಕೂರ್ ಹಾಗೂ ಜಯದೇವ್ ಉನದ್ಕತ್ ನಡುವೆ ಆಯ್ಕೆ ಪೈಪೋಟಿ ನಡೆಯಬಹುದು. ಆಲ್ ರೌಂಡರ್ ಗಳ ಪೈಕಿ ಅಕ್ಷರ್ ಪಟೇಲ್ ಹಾಗೂ ವಿಜಯ್ ಶಂಕರ್ ಪೈಕಿ ಒಬ್ಬರು ತಂಡ ಸೇರಲಿದ್ದಾರೆ. ಸ್ಪಿನ್ ವಿಭಾಗದಲ್ಲಿ ಯಜುವೇಂದ್ರ ಚಾಹಲ್, ವಾಷಿಂಗ್ಟನ್ ಸುಂದರ್ ಆಯ್ಕೆಯಾಗುವ ಸಾಧ್ಯತೆ ಹೆಚ್ಚಿದೆ.

Story first published: Tuesday, March 6, 2018, 8:50 [IST]
Other articles published on Mar 6, 2018

myKhel ನಿಂದ ತಾಜಾ ಸುದ್ದಿಗಳನ್ನು ಪಡೆಯಿರಿ