ಕಿವೀಸ್ ಗೆ ಸೂಪರ್ ಓವರ್ ನಲ್ಲಿ ಮತ್ತೆ ಸೋಲು: ಕೊಹ್ಲಿಗೆ ಕನಿಕರ ಅನ್ನೋದೇ ಇಲ್ಲ!

ಐದು ಪಂದ್ಯಗಳ ಸರಣಿಯಲ್ಲಿ, ತೀರಾ ಅಪರೂಪ ಎನ್ನುವಂತೆ, ಇನ್ನೊಂದು ಪಂದ್ಯವೂ ಸೂಪರ್ ಓವರಿಗೆ ಜಾರಿ, ಭಾರತ ಮತ್ತೆ ನ್ಯೂಜಿಲ್ಯಾಂಡ್ ವಿರುದ್ದ ಜಯ ಸಾಧಿಸಿದೆ.

ಸರಣಿಯನ್ನು ಕ್ಲೀನ್ ಸ್ವೀಪ್ ಮಾಡುವತ್ತ ಹೊರಟಿರುವ ಭಾರತ, ಐದನೇ ಮತ್ತು ಕೊನೆಯ ಪಂದ್ಯವನ್ನು ಭಾನುವಾರ (ಫೆ 2) ಬೇ ಓವಲ್ ನಲ್ಲಿ ಆಡಲಿದೆ. ಮೂರನೇ ಪಂದ್ಯದಂತೆ, ನಾಲ್ಕನೇ ಪಂದ್ಯವನ್ನು (ಸುಲಭವಾಗಿ ಗೆಲ್ಲಬಹುದಾದ) ನ್ಯೂಜಿಲ್ಯಾಂಡ್, ಎದುರಾಳಿಗೆ ಬಿಟ್ಟುಕೊಟ್ಟಿದೆ.

ಭಾರತ ಆಡುವ ಎಲ್ಲಾ ಪಂದ್ಯವನ್ನು ತನ್ನ ಜನಪ್ರಿಯ ಯೂಟ್ಯೂಬ್ ಚಾನೆಲ್ ಮೂಲಕ ವಿಶ್ಲೇಷಣ ಮಾಡುವ ಪಾಕ್ ವೇಗಿ ಶೋಹೆಬ್ ಅಖ್ತರ್, ಮತ್ತೊಂದು ಸೂಪರ್ ಓವರಿನ ಪಂದ್ಯದ ಬಗ್ಗೆಯೂ ತನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ನ್ಯೂಜಿಲೆಂಡ್‌ಗೆ ಮತ್ತೆ ಕಾಡಿದ ಸೂಪರ್ ಓವರ್ ಗುಮ್ಮ: ಭಾರತಕ್ಕೆ ಜಯನ್ಯೂಜಿಲೆಂಡ್‌ಗೆ ಮತ್ತೆ ಕಾಡಿದ ಸೂಪರ್ ಓವರ್ ಗುಮ್ಮ: ಭಾರತಕ್ಕೆ ಜಯ

ಲಕ್ಷಾಂತರ ಜನರು ವೀಕ್ಷಿಸುವ ಅಖ್ತರ್ ಅವರ ಚಾನೆಲ್ ನಲ್ಲಿ, ಅವರು ಮಾಡಿದ, ನಾಲ್ಕನೇ ಪಂದ್ಯದ ವಿಶ್ಲೇಷಣೆಯಲ್ಲಿ, "ಭಾರತಕ್ಕೆ ಕನಿಕರ ಅನ್ನೋದು ಇಲ್ಲ ಎನ್ನುವುದು ಮತ್ತೆಮತ್ತೆ ರುಜುವಾತು ಆಗಿದೆ" ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. (ಇದು ಟೀಕೆಯಲ್ಲ). ಅಖ್ತರ್ ಹೇಳಿರುವುದು ಏನು?

ನ್ಯೂಜಿಲ್ಯಾಂಡ್ ಒಂದು ಉತ್ತಮ ತಂಡ

ನ್ಯೂಜಿಲ್ಯಾಂಡ್ ಒಂದು ಉತ್ತಮ ತಂಡ

"ನ್ಯೂಜಿಲ್ಯಾಂಡ್ ಒಂದು ಉತ್ತಮ ತಂಡ, ಆದರೂ, ಸಾಧರಣವಾದ ಮೊತ್ತವನ್ನು ಅವರಿಗೆ ಬೆನ್ನೆತ್ತಲು ಆಗಲಿಲ್ಲ. ಅದನ್ನೂ ಟೈಮಾಡಿಕೊಂಡು, ಸೂಪರ್ ಓವರ್ ನಲ್ಲಿ ಮತ್ತೆ ಸೋತರು. ನ್ಯೂಜಿಲ್ಯಾಂಡ್ ಕಂಡರೆ ನನಗೆ ಅಯ್ಯೋಪಾಪ ಅನಿಸುತ್ತದೆ" - ಶೋಹೆಬ್ ಅಖ್ತರ್.

ಶೋಹೆಬ್ ಅಖ್ತರ್ ವಿಶ್ಲೇಷಣೆ

ಶೋಹೆಬ್ ಅಖ್ತರ್ ವಿಶ್ಲೇಷಣೆ

"ಈವರೆಗೆ ಏಳು ಸೂಪರ್ ಓವರ್ ಪಂದ್ಯವನ್ನು ನ್ಯೂಜಿಲ್ಯಾಂಡ್ ಆಡಿದೆ. ಅದರಲ್ಲಿ ಆರರಲ್ಲಿ ಸೋತಿದೆ, ಸೋಲುವುದರಲ್ಲಿ ಸೂಪರ್ ಟೀಂ ಎನ್ನುವತ್ತ ಸಾಗುತ್ತಿದೆ. ಏನಾಗುತ್ತಿದೆ ನ್ಯೂಜಿಲ್ಯಾಂಡ್ ಟೀಂಗೆ ಅನ್ನುವುದೇ ಅರ್ಥವಾಗುವುದಿಲ್ಲ" - ಶೋಹೆಬ್ ಅಖ್ತರ್.

ಕೆ.ಎಲ್.ರಾಹುಲ್ ಪ್ರಚಂಡ ಫಾರ್ಮ್: ಈ ಇಬ್ಬರು ಆಟಗಾರರಿಗೆ 'ಸದ್ಯಕ್ಕಂತೂ ಬೆಂಚೇ' ಗಟ್ಟಿ

ಪಂದ್ಯ ಗೆಲ್ಲುವ ವಿಚಾರದಲ್ಲಿ ವಿರಾಟ್ ಕೊಹ್ಲಿಗೆ ಯಾವುದೇ ಕನಿಕರವಿಲ್ಲ

ಪಂದ್ಯ ಗೆಲ್ಲುವ ವಿಚಾರದಲ್ಲಿ ವಿರಾಟ್ ಕೊಹ್ಲಿಗೆ ಯಾವುದೇ ಕನಿಕರವಿಲ್ಲ

"ಈ ಪಂದ್ಯದ ನಂತರ, ಒತ್ತಡದಲ್ಲಿ ಭಾರತ ಯಾವುದೇ ಮುಲಾಜಿಲ್ಲದೇ ಆಡುತ್ತದೆ ಎನ್ನುವುದು ಮತ್ತೆ ರುಜುವಾತಾಗಿದೆ. ಪಂದ್ಯ ಗೆಲ್ಲುವ ವಿಚಾರದಲ್ಲಿ ಇಂಡಿಯಾದ ನಾಯಕ ವಿರಾಟ್ ಕೊಹ್ಲಿಗೆ ಯಾವುದೇ ಕನಿಕರವಿಲ್ಲ. ಈ ಹಿಂದೆನೂ ನಾನು ಹೇಳಿದ್ದೆ. ಭಾರತ ಸರಣಿಯನ್ನು ಕ್ಲೀನ್ ಸ್ವೀಪ್ ಮಾಡುತ್ತದೆ" - ಶೋಹೆಬ್ ಅಖ್ತರ್.

ಪ್ರತೀ ಪಂದ್ಯ ನಮಗೆ ಪಾಠ.

ಪ್ರತೀ ಪಂದ್ಯ ನಮಗೆ ಪಾಠ.

"ಕ್ರಿಕೆಟಿಗನಾಗಿ ನಾನು ಹೇಳುವುದಾದರೆ ಪ್ರತೀ ಪಂದ್ಯ ನಮಗೆ ಪಾಠ. ಸೋಲು, ಗೆಲುವಿನಿಂದ ನಾವು ಪಾಠ ಕಲಿಯಬೇಕು. ಆದರೆ, ನ್ಯೂಜಿಲ್ಯಾಂಡ್ ತಂಡ, ಸೋಲಿನಿಂದ ಎಚ್ಚೆತ್ತುಕೊಳ್ಳುತ್ತಿಲ್ಲ. ಅವರದೇ ನೆಲದಲ್ಲಿ ಕಿವೀಸ್ ಪಂದ್ಯವನ್ನು ಆಡುತ್ತಿದೆ. ಭಾರತದ ವೃತ್ತಿಪರತೆ ಮೆಚ್ಚುವಂತದ್ದು" - ಶೋಹೇಬ್ ಅಖ್ತರ್.

ಐಸಿಸಿ ಟಿ20 ವಿಶ್ವಕಪ್ 2021 ಊಹಿಸು
Match 15 - October 24 2021, 03:30 PM
ಶ್ರೀಲಂಕಾ
ಬಾಂಗ್ಲಾದೇಶ್
Predict Now

For Quick Alerts
Subscribe Now
For Quick Alerts
ALLOW NOTIFICATIONS
For Daily Alerts
Story first published: Saturday, February 1, 2020, 10:07 [IST]
Other articles published on Feb 1, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X