ಐಸಿಸಿಯ ಮೊದಲ ಮಹಿಳಾ ನಿರ್ದೇಶಕಿ ಇಂದ್ರಾ ನೂಯಿ ನೇಮಕ

Written By:
Pepsico Chairman Indra Nooyi appointed as ICC Board female director

ಬೆಂಗಳೂರು, ಫೆಬ್ರವರಿ 09: ಪೆಪ್ಸಿಕೋ ಕಂಪನಿಯ ಚೇರ್ಮನ್ ಹಾಗೂ ಸಿಇಒ ಇಂದ್ರಾ ನೂಯಿ ಅವರು ಐಸಿಸಿಯ ಮೊದಲ ಮಹಿಳಾ ನಿರ್ದೇಶಕಿಯಾಗಿ ಆಯ್ಕೆಯಾಗಿದ್ದಾರೆ. ಜೂನ್ ತಿಂಗಳಿನಲ್ಲಿ ಅವರು ಅಧಿಕೃತವಾಗಿ ಐಸಿಸಿ ಬೋರ್ಡ್ ಸೇರಲಿದ್ದಾರೆ.

ಎರಡು ವರ್ಷಗಳ ಅವಧಿಗೆ ಐಸಿಸಿ ಸ್ವತಂತ್ರ ನಿರ್ದೇಶಕಿಯಾಗಿ ಇಂದ್ರಾ ನೂಯಿ ಅವರನ್ನು ಆಯ್ಕೆ ಮಾಡಲಾಗಿದೆ. ಅವರ ಅಧಿಕಾರ ಅವಧಿ ಗರಿಷ್ಠ 6 ವರ್ಷಗಳವರೆಗೂ ಇರಲಿದೆ ಎಂದು ಐಸಿಸಿ ಆಡಳಿತ ಹೇಳಿದೆ. ಕಳೆದ ಜೂನ್ ತಿಂಗಳಿನಲ್ಲಿ ನಡೆದ ಐಸಿಸಿ ಸಭೆಯಲ್ಲಿ ಮಹಿಳಾ ನಿರ್ದೇಶಕಿ ಆಯ್ಕೆ ಮಾಡುವ ಬಗ್ಗೆ ತೀರ್ಮಾನ ಕೈಗೊಳ್ಳಲಾಗಿತ್ತು.

ಇಂದ್ರಾ ನೂಯಿ ಜಗತ್ತಿನ ಅತ್ಯಂತ ಪ್ರಭಾವಿ ಮಹಿಳೆ, ಉದ್ಯಮಿಗಳಲ್ಲಿ ಒಬ್ಬರೆನಿಸಿದ್ದಾರೆ. ಪೆಪ್ಸಿಕೋ ಚೇರ್ಮನ್ ಇಂದ್ರಾ ನೂಯಿ ಅವರಿಗೆ ಹಾರ್ದಿಕ ಸ್ವಾಗತ ಎಂದು ಐಸಿಸಿ ಚೇರ್ಮನ್ ಶಶಾಂಕ್ ಮನೋಹರ್ ತಿಳಿಸಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಇಂದ್ರಾ ನೂಯಿ, 'ನನಗೆ ಕ್ರಿಕೆಟ್ ಆಟ ತುಂಬಾ ಇಷ್ಟ, ನಾನು ನನ್ನ ಟೀನೇಜ್ ನಲ್ಲಿ ಕ್ರಿಕೆಟ್ ಆಡಿದ್ದೆ, ಕಾಲೇಜು ದಿನಗಳಿಂದ ಇಲ್ಲಿ ತನಕ ಕ್ರಿಕೆಟ್ ಕೆಲವು ಒಳ್ಳೆ ವಿಷಯಗಳನ್ನು ಕಲಿಸಿದೆ. ಟೀಮ್ ವರ್ಕ್, ಸ್ಪರ್ಧಾತ್ಮಕ ಪೈಪೋಟಿ, ಪರಸ್ಪರ ಗೌರವ ನೀಡುವುದನ್ನು ಕ್ರಿಕೆಟ್ ಕಲಿಸಿದೆ ಎಂದರು ಹೇಳಿದ್ದಾರೆ.

ಕ್ರಿಕೆಟನ್ನು ಪ್ರೀತಿಸುತ್ತೀರಾ? ಋಜುವಾತುಪಡಿಸಿ! ಮೈಖೇಲ್ ಫ್ಯಾಂಟಸಿ ಕ್ರಿಕೆಟ್ ಆಟವಾಡಿ

Story first published: Friday, February 9, 2018, 15:49 [IST]
Other articles published on Feb 9, 2018

myKhel ನಿಂದ ತಾಜಾ ಸುದ್ದಿಗಳನ್ನು ಪಡೆಯಿರಿ