ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ವೆಸ್ಟ್ ಇಂಡೀಸ್ ವಿರುದ್ಧ 'ಸರಣಿ ಶ್ರೇಷ್ಠ' ಪೃಥ್ವಿ ಮುರಿದ ದಾಖಲೆಗಳು

IND v/s WI : ಪೃಥ್ವಿ ಶಾ ದಾಖಲೆಗಳಿವು | Oneindia Kannada
Prithvi Shaw becomes youngest ever to score winning in Test for India

ಹೈದರಾಬಾದ್, ಅಕ್ಟೋಬರ್ 15: ವೆಸ್ಟ್ ಇಂಡೀಸ್ ವಿರುದ್ಧದ ಎರಡನೇ ಹಾಗೂ ಕೊನೆಯ ಟೆಸ್ಟ್ ಪಂದ್ಯವನ್ನು ಟೀಂ ಇಂಡಿಯಾವು ಸುಲಭವಾಗಿ ಗೆದ್ದುಕೊಂಡಿದೆ. ಈ ಮೊದಲ ಬಾರಿಗೆ ಭಾರತ ತಂಡವು 10 ವಿಕೆಟ್ ಗಳ ಜಯ ದಾಖಲಿಸಿದೆ. ಸತತವಾಗಿ ತವರು ನೆಲದಲ್ಲಿ ಟೆಸ್ಟ್ ಸರಣಿ ಗೆದ್ದ ಸಾಧನೆಯನ್ನು ಮಾಡಿದೆ.

2ನೇ ಟೆಸ್ಟ್ ಸ್ಕೋರ್ : ವೆಸ್ಟ್ ಇಂಡೀಸ್ ವಿರುದ್ಧ ಭಾರತ

ಎರಡನೇ ಟೆಸ್ಟ್ ಪಂದ್ಯ ಗೆಲ್ಲಲು ಭಾರತಕ್ಕೆ 72ರನ್ ಗಳ ಗುರಿ ನೀಡಲಾಗಿತ್ತು. ಪಂದ್ಯದ ಮೂರನೇ ದಿನವಾದ ಭಾನುವಾರದಂದು ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರಿಕೆಟ್ ಮೈದಾನದಲ್ಲಿ ಈ ಗುರಿಯನ್ನು ಆರಂಭಿಕ ಆಟಗಾರರು ಸುಲಭವಾಗಿ ಮುಟ್ಟಿದರು.

Prithvi Shaw becomes youngest ever to score winning in Test for India

ಹೈದರಾಬಾದ್ ಟೆಸ್ಟ್: ಭಾರತಕ್ಕೆ ಹತ್ತು ವಿಕೆಟ್ ಭರ್ಜರಿ ಜಯ ಹೈದರಾಬಾದ್ ಟೆಸ್ಟ್: ಭಾರತಕ್ಕೆ ಹತ್ತು ವಿಕೆಟ್ ಭರ್ಜರಿ ಜಯ

ಪೃಥ್ವಿ ಶಾ ಹಾಗೂ ಕೆಎಲ್ ರಾಹುಲ್ ತಲಾ 33ರನ್ ಗಳಿಸಿ, ಭಾರತಕ್ಕೆ ಜಯ ತಂದಿತ್ತರು. ಆರಂಭಿಕರಾಗಿ ಕಣಕ್ಕೆ ಇಳಿದ ಪೃಥ್ವಿ ಶಾ 45 ಎಸೆತಗಳಲ್ಲಿ 4 ಬೌಂಡರಿಗಳ ಸಮೇತ 33 ರನ್ ಸಿಡಿಸಿದರು. 16 ಓವರ್ ಮೊದಲ ಎಸೆತವನ್ನು ಬೌಂಡರಿಗಟ್ಟುವ ಮೂಲಕ ಶಾ ಈ ಅಪರೂಪದ ದಾಖಲೆ ಬರೆದರು.ಇದಕ್ಕೂ ಮುನ್ನ ವೇಗಿ ಉಮೇಶ್ ಯಾದವ್ ಅವರು ಎರಡು ಇನ್ನಿಂಗ್ಸ್ ಸೇರಿ 10 ವಿಕೆಟ್ ಗಳಿಸಿದ ಸಾಧನೆ ಮಾಡಿದರು.

ಗೆಲುವಿನ ರನ್ ಬಾರಿಸಿದ ಕಿರಿಯ ಆಟಗಾರ

ಟೀಂ ಇಂಡಿಯಾ ಪರ ಟೆಸ್ಟ್ ಕ್ರಿಕೆಟ್ ನಲ್ಲಿ ಪಾದಾರ್ಪಣೆ ಮಾಡಿರುವ ಪೃಥ್ವಿ ಶಾ ಶತಕ ಸಿಡಿಸುವ ಮೂಲಕ ದಾಖಲೆ ಬರೆದಿದ್ದರು. ಇದರ ಬೆನ್ನಲ್ಲೇ ವಿಂಡೀಸ್ ವಿರುದ್ಧ ಅಂತ್ಯಗೊಂಡ 2ನೇ ಟೆಸ್ಟ್ ಪಂದ್ಯದಲ್ಲಿ ಭಾರತದ ಪರ ಗೆಲುವಿನ ರನ್ ಬಾರಿಸಿದ ಕಿರಿಯ ಆಟಗಾರ ಎಂಬ ದಾಖಲೆ ನಿರ್ಮಿಸಿದ್ದಾರೆ.

ವಿಶ್ವದ ಎರಡನೇ ಅತಿ ಕಿರಿಯ ಆಟಗಾರ

ಚೊಚ್ಚಲ ಸರಣಿಯಲ್ಲಿ ತಂಡದ ಪರ ಗೆಲುವಿನ ರನ್ ಗಳಿಸಿದ ಭಾರತದ ಅತ್ಯಂತ ಕಿರಿಯ ಆಟಗಾರ ಎನಿಸಿಕೊಂಡಿರುವ ಪೃಥ್ವಿಶಾ ಅವರು ವಿಶ್ವದ ಎರಡನೇ ಅತಿ ಕಿರಿಯ ಆಟಗಾರ ಎನಿಸಿಕೊಂಡಿದ್ದಾರೆ. ಪ್ಯಾಟ್ ಕುಮಿನ್ಸ್ ಕೆಲ ದಿನಗಳ ಕಾಲ ಪೃಥ್ವಿಶಾ ಚಿಕ್ಕವರಾಗಿದ್ದಾಗ ಈ ಸಾಧನೆ ಮಾಡಿದ್ದಾರೆ. ಪೃಥ್ವಿ ಶಾ 18 ವರ್ಷ 339 ದಿನಗಳು, ಪ್ಯಾಟ್ ಕುಮಿನ್ಸ್ 18 ವರ್ಷ 198 ದಿನಗಳು.

ಭಾರತ vs ವೆಸ್ಟ್ ಇಂಡೀಸ್: ಪಾದಾರ್ಪಣೆ ಪಂದ್ಯದಲ್ಲಿ ಪೃಥ್ವಿ 'ಪಂದ್ಯ ಶ್ರೇಷ್ಠ'!

ಚೊಚ್ಚಲ ಸರಣಿಯಲ್ಲೇ ದಾಖಲೆ ಬರೆದ ಪೃಥ್ವಿ

ಚೊಚ್ಚಲ ಸರಣಿಯಲ್ಲೇ ಪಂದ್ಯ ಶ್ರೇಷ್ಠ ಹಾಗೂ ಸರಣಿ ಶ್ರೇಷ್ಠ ಪ್ರಶಸ್ತಿ ಗಳಿಸಿದ ಸಾಧನೆ. ಈ ಸಾಧನೆ ಮಾಡಿದ ಭಾರತದ ಅತ್ಯಂತ ಕಿರಿಯ ಆಟಗಾರ ಎಂಬ ಹೆಗ್ಗಳಿಕೆ ಪೃಥ್ವಿ ಶಾ ಪಾಲಾಗಿದೆ.

ಸರಣಿಯಲ್ಲಿ ಉತ್ತಮ ರನ್ ಸರಾಸರಿ

ಸರಣಿ ಶ್ರೇಷ್ಠ ಪೃಥ್ವಿ ಶಾ ಮುರಿದ ದಾಖಲೆಗಳು
ಸರಣಿಯಲ್ಲಿ ಉತ್ತಮ ರನ್ ಸರಾಸರಿ
ಪೃಥ್ವಿ ಶಾ (ಭಾರತ): 118.50 ರನ್ ಸರಾಸರಿ
ಆಂಡಿ ಗಾಂಟುಮೆ (ವೆಸ್ಟ್ ಇಂಡೀಸ್) : 99.94
ಡಾನ್ ಬ್ರಾಡ್ಮನ್ (ಆಸ್ಟ್ರೇಲಿಯಾ) : 99.94ರನ್ ಸರಾಸರಿ

ಪೃಥ್ವಿಗೆ ವಿಶ್ ಮಾಡಿದ ಸ್ವಿಗ್ಗಿ, ಫ್ರೀಚಾರ್ಜ್ ಗೆ ತಲಾ 1 ಕೋಟಿ ದಂಡ?

Story first published: Monday, October 15, 2018, 12:17 [IST]
Other articles published on Oct 15, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X