ಪೃಥ್ವಿಗೆ ವಿಶ್ ಮಾಡಿದ ಸ್ವಿಗ್ಗಿ, ಫ್ರೀಚಾರ್ಜ್ ಗೆ ತಲಾ 1 ಕೋಟಿ ದಂಡ?

ಬೆಂಗಳೂರು, ಅಕ್ಟೋಬರ್ 10: ಪ್ರವಾಸಿ ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಶತಕ ಸಿಡಿಸಿ ಮಿಂಚಿ, ದಾಖಲೆ ಬರೆದ ಪೃಥ್ವಿ ಶಾ ಗೆ ಅಭಿನಂದನೆಗಳ ಮಹಾಪೂರವೇ ಹರಿದು ಬಂದಿದ್ದು ಎಲ್ಲರಿಗೂ ಗೊತ್ತಿರಬಹುದು. ಪೃಥ್ವಿ ವಿಶ್ ಮಾಡುವ ಭರದಲ್ಲಿ ಸ್ವಿಗ್ಗಿ, ಫೀ ಚಾರ್ಜ್ ಸಂಸ್ಥೆಗಳು ಎಡವಟ್ಟು ಮಾಡಿಕೊಂಡಿವೆ. ಈ ಎಡವಟ್ಟು ಟ್ವೀಟ್ ಬೆಲೆ ತಲಾ 1 ಕೋಟಿ ರು ಎಂದರೆ ಅಚ್ಚರಿಯಾಗಬಹುದು.
ಕಾಂಡೋಮ್ ಕಂಪನಿ ಡ್ಯುರೆಕ್ಸ್, ಸ್ವಿಗ್ಗಿ, ಫ್ರೀ ಚಾರ್ಜ್ ಸೇರಿದಂತೆ ಕೆಲ ಕಂಪನಿಗಳು ಟ್ರೇಡ್ ಮಾರ್ಕ್ ಕಾಯ್ದೆ1996ರ ಉಲ್ಲಂಘನೆ ಮಾಡಿವೆ ಎಂದು ಸಂಸ್ಥೆಗಳ ವಿರುದ್ಧ ಪೃಥ್ವಿ ಅವರ ಮಾರ್ಕೆಟಿಂಗ್ ವ್ಯವಹಾರ ನೋಡಿಕೊಳ್ಳುತ್ತಿರುವ ಬೇಸ್ಲೈನ್ ವೆಂಚರ್ಸ್ ಸಂಸ್ಥೆಯು 1 ಕೋಟಿ ರೂ. ನೀಡುವಂತೆ ನೋಟಿಸ್ ಜಾರಿ ಮಾಡಿದೆ. ಇದಾದ ಬಳಿಕ ಆ ಸಂಸ್ಥೆಗಳು ಟ್ವೀಟ್ ಡಿಲೀಟ್ ಮಾಡಿವೆ.

ಪೃಥ್ವಿ ಅವರ ಸಾಧನೆಯನ್ನು ಬಳಸಿಕೊಂಡು ತಮ್ಮ ಉತ್ಪನ್ನಗಳನ್ನು ಮಾರ್ಕೆಟಿಂಗ್ ಮಾಡುವುದು ನಿರೀಕ್ಷಿತವಾಗಿತ್ತು. ಆದರೆ, ಕೆಲ ಕಂಪನಿಗಳು ಬಳಸಿದ ಪದ ಹಾಗೂ ವಿನ್ಯಾಸ ಸಹಿಸಲು ಸಾಧ್ಯವಿಲ್ಲ. ಪೃಥ್ವಿ ಅವರ ಗೌರವಕ್ಕೆ ಧಕ್ಕೆ ತರುವಂತೆ ಇದೆ ಎಂದು ಬೇಸ್ ಲೈನ್ ವೆಂಚರ್ಸ್ ನ ವ್ಯವಸ್ಥಾಪಕ ನಿರ್ದೇಶಕ ತುಹಿನ್ ಮಿಶ್ರಾ ಅವರು ಪ್ರತಿಕ್ರಿಯಿಸಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications