ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಅಡಿಲೇಡ್ ಟೆಸ್ಟ್ : ಆಸ್ಟ್ರೇಲಿಯಾ ವಿರುದ್ಧ ಭಾರತದ ಸಂಭಾವ್ಯ XI

Probable playing XI for India vs Australia 1st Test match Adelaide Oval

ಅಡಿಲೇಡ್, ಡಿಸೆಂಬರ್ 04: ಬಾರ್ಡರ್- ಗವಾಸ್ಕರ್ ಟ್ರೋಫಿಗಾಗಿ ನಡೆಯುವ ಆಸ್ಟ್ರೇಲಿಯಾ ಹಾಗೂ ಪ್ರವಾಸಿ ಭಾರತ ವಿರುದ್ಧದ ನಾಲ್ಕು ಟೆಸ್ಟ್ ಪಂದ್ಯಗಳ ಟೆಸ್ಟ್ ಸರಣಿಯ ಮೊದಲ ಪಂದ್ಯ ಅಡಿಲೇಡ್ ಓವಲ್ ನಲ್ಲಿ ಡಿಸೆಂಬರ್ 06ರಂದು ಆರಂಭವಾಗಲಿದೆ. ಮೊದಲ ಪಂದ್ಯಕ್ಕಾಗಿ ಉಭಯ ತಂಡಗಳ ಸಂಭಾವ್ಯ XI ಪಟ್ಟಿ ಇಲ್ಲಿದೆ.

ಭಾರತದಿಂದ ಆಸ್ಟ್ರೇಲಿಯಾ ಪ್ರವಾಸ: 4 ಟೆಸ್ಟ್, 3 ಒಡಿಐ ವೇಳಾಪಟ್ಟಿಭಾರತದಿಂದ ಆಸ್ಟ್ರೇಲಿಯಾ ಪ್ರವಾಸ: 4 ಟೆಸ್ಟ್, 3 ಒಡಿಐ ವೇಳಾಪಟ್ಟಿ

ಮೂರು ಪಂದ್ಯಗಳ ಟಿ20 ಸರಣಿಯಲ್ಲಿ ಆಸ್ಟ್ರೇಲಿಯಾ ಹಾಗೂ ಭಾರತ ಸಮಬಲ ಸಾಧಿಸಿದವು. ಈಗ ಅಡಿಲೇಡ್, ಪರ್ತ್, ಮೆಲ್ಬೋರ್ನ್ ಹಾಗೂ ಸಿಡ್ನಿಯಲ್ಲಿ ಟೆಸ್ಟ್ ಆಡಲು ಸಜ್ಜಾಗಿವೆ.

ಟೆಸ್ಟ್ ಸರಣಿ : ಗವಾಸ್ಕರ್, ಸಚಿನ್ ದಾಖಲೆ ಮುರಿಯಲು ಸಜ್ಜಾದ ಕೊಹ್ಲಿಟೆಸ್ಟ್ ಸರಣಿ : ಗವಾಸ್ಕರ್, ಸಚಿನ್ ದಾಖಲೆ ಮುರಿಯಲು ಸಜ್ಜಾದ ಕೊಹ್ಲಿ

ಕೆಂಪು ಚೆಂಡಿನ ದೀರ್ಘಾವಧಿ ಆಟದಲ್ಲಿ 94 ಬಾರಿ ಉಭಯ ತಂಡಗಳು ಎದುರಾಗಿವೆ. ಭಾರತ 26 ಬಾರಿ ಹಾಗೂ ಆಸ್ಟ್ರೇಲಿಯಾ 41 ಬಾರಿ ಗೆಲುವು ಸಾಧಿಸಿದೆ. 27 ಪಂದ್ಯಗಳು ಡ್ರಾನಲ್ಲಿ ಅಂತ್ಯ ಕಂಡಿದೆ.

ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಗೆ ಭಾರತ ತಂಡ, ರೋಹಿತ್ ಇನ್ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಗೆ ಭಾರತ ತಂಡ, ರೋಹಿತ್ ಇನ್

ಚೆಂಡು ವಿರೂಪ ಪ್ರಕರಣದಲ್ಲಿ ಸಿಲುಕಿ, ಅಮಾನತುಗೊಂಡು ಒಂದು ವರ್ಷಗಳ ನಿಷೇಧಕ್ಕೆ ನಾಯಕ ಸ್ಟೀವನ್ ಸ್ಮಿತ್ ಹಾಗೂ ಉಪ ನಾಯಕ ಡೇವಿಡ್ ವಾರ್ನರ್ ಅವರಿಲ್ಲದೆ ತಂಡವನ್ನು ಮುಂದುವರೆಸುವ ಜವಾಬ್ದಾರಿಯನ್ನು ವಿಕೆಟ್ ಕೀಪರ್ ಟಿಮ್ ಪೈನ್ ವಹಿಸಿಕೊಂಡಿದ್ದಾರೆ.

ಭಾರತದ ಆರಂಭಿಕ ಆಟಗಾರರು

ಭಾರತದ ಆರಂಭಿಕ ಆಟಗಾರರು

ಅಭ್ಯಾಸ ಪಂದ್ಯದಲ್ಲಿ ಯುವ ಆಟಗಾರ ಪೃಥ್ವಿ ಶಾ ಅವರು ಗಾಯಗೊಂಡಿರುವುದರಿಂದ ಲೋಕೇಶ್ ರಾಹುಲ್ ಅಥವಾ ರೋಹಿತ್ ಶರ್ಮ ಅವರಿಗೆ ಮುರಳಿ ವಿಜಯ್ ಜತೆ ಆರಂಭಿಕ ಆಟಗಾರರಾಗಿ ಕಣಕ್ಕಿಳಿಯುವ ಅವಕಾಶ ಸಿಗಲಿದೆ. 2014-15ರ ಸರಣಿಯಲ್ಲಿ ನೀಡಿದ್ದ ಪ್ರದರ್ಶನದ ಪುನಾರಾರ್ವತನೆಯನ್ನು ಕೊಹ್ಲಿ ನಿರೀಕ್ಷಿಸಿದ್ದಾರೆ. ಮೊದಲ ವಿಕೆಟ್ ಗೆ ಶತಕದ ಜೊತೆಯಾಟ ಸಾಧಿಸಿದರೆ ಭಾರತಕ್ಕೆ ಪಂದ್ಯದ ಮೇಲೆ ಹಿಡಿತ ಪಡೆಯಲು ನೆರವಾಗುತ್ತದೆ ಎಂಬ ನಂಬಿಕೆಯಿದೆ.

ಮಧ್ಯಮ ಕ್ರಮಾಂಕದಲ್ಲಿ ಯಾರು

ಮಧ್ಯಮ ಕ್ರಮಾಂಕದಲ್ಲಿ ಯಾರು

ಮಧ್ಯಮ ಕ್ರಮಾಂಕದಲ್ಲಿ ಚೇತೇಶ್ವರ್ ಪೂಜಾರಾ, ವಿರಾಟ್ ಕೊಹ್ಲಿ, ಅಜಿಂಕ್ಯ ರಹಾನೆ ಹಾಗೂ ರಿಷಬ್ ಪಂತ್ ಆಡುವ ಸಾಧ್ಯತೆಯಿದೆ. ಎಲ್ಲರೂ ಅಭ್ಯಾಸ ಪಂದ್ಯದಲ್ಲಿ ಅರ್ಧಶತಕ ಬಾರಿಸಿ, ಲಯಕ್ಕೆ ಮರಳಿದ್ದಾರೆ. ರಿಷಬ್ ಪಂತ್ ಅವರು ಟೆಸ್ಟ್ ಕ್ರಿಕೆಟ್ ಉತ್ತಮ ಆರಂಭ ಪಡೆದಿದ್ದು, ಇನ್ನೂ ಕಲಿಕೆಯ ದಿನಗಳಾಗಿವೆ.

ಬೌಲಿಂಗ್ ಪಡೆ

ಬೌಲಿಂಗ್ ಪಡೆ

ಮೊಹಮ್ಮದ್ ಶಮಿ ಹಾಗೂ ಭುವನೇಶ್ವರ್ ಕುಮಾರ್ ಅವರು ತಂಡದ ಪ್ರಮುಖ ಬೌಲರ್ ಗಳಾಗಿ ಕಣಕ್ಕಿಳಿಯಲಿದ್ದಾರೆ.

ಇಶಾಂತ್ ಶರ್ಮ, ಜಸ್ ಪ್ರೀತ್ ಬೂಮ್ರಾ ನಡುವೆ ಒಬ್ಬರಿಗೆ ಅವಕಾಶ ಸಿಗಬಹುದು. ಉಮೇಶ್ ಯಾದವ್, ರವೀಂದ್ರ ಜಡೇಜ ಅವರು ಮೊದಲ ಪಂದ್ಯಕ್ಕೆ ಆಯ್ಕೆ ಆಗುವ ಸಾಧ್ಯತೆ ಕಡಿಮೆ.

ಆಲ್ ರೌಂಡರ್ಸ್

ಆಲ್ ರೌಂಡರ್ಸ್

ಟೀಂ ಇಂಡಿಯಾದಲ್ಲಿ ಸದ್ಯ ಹಾರ್ದಿಕ್ ಪಾಂಡ್ಯ ಅವರು ಇಲ್ಲದ ಕಾರಣ, ಆರ್ ಅಶ್ವಿನ್ ಅಥವಾ ರವೀಂದ್ರ ಜಡೇಜ ಅವರನ್ನು ಆಲ್ ರೌಂಡರ್ ರೂಪದಲ್ಲಿ ತಂಡಕ್ಕೆ ಸೇರಿಸಿಕೊಳ್ಳಬಹುದಾಗಿದೆ. ಆದರೆ, ಜಡೇಜ ಹಾಗೂ ಅಶ್ವಿನ್ ಅವರನ್ನು ಬಿಟ್ಟು ಸ್ಪಿನ್ನರ್ ಕುಲದೀಪ್ ಯಾದವ್ ಗೆ ಅವಕಾಶ ನೀಡಿದರೆ ಲೆಕ್ಕಾಚಾರ ಬದಲಾಗಲಿದೆ.

ಭಾರತ ಹಾಗೂ ಆಸ್ಟ್ರೇಲಿಯಾದ ಸಂಭಾವ್ಯ ತಂಡ

ಭಾರತ ಹಾಗೂ ಆಸ್ಟ್ರೇಲಿಯಾದ ಸಂಭಾವ್ಯ ತಂಡ

ಭಾರತ : ಮುರಳಿ ವಿಜಯ್, ಲೋಕೇಶ್ ರಾಹುಲ್, ಚೇತೇಶ್ವರ್ ಪೂಜಾರಾ, ವಿರಾಟ್ ಕೊಹ್ಲಿ(ನಾಯಕ), ರಿಷಬ್ ಪಂತ್(ವಿಕೆಟ್ ಕೀಪರ್), ಅಜಿಂಕ್ಯ ರಹಾನೆ,ಹನುಮ ವಿಹಾರಿ, ಆರ್ ಅಶ್ವಿನ್, ಮೊಹಮ್ಮದ್ ಶಮಿ, ಭುವನೇಶ್ವರ್ ಕುಮಾರ್, ಜಸ್ ಪ್ರೀತ್ ಬೂಮ್ರಾ.

ಆಸ್ಟ್ರೇಲಿಯಾ ತಂಡ : ಟಿಮ್ ಪೈನ್ (ನಾಯಕ, ವಿಕೆಟ್ ಕೀಪರ್), ಅರೋನ್ ಫಿಂಚ್, ಉಸ್ಮಾನ್ ಖವಾಜ, ಪೀಟರ್ ಹ್ಯಾಂಡ್ಸ್ ಕೊಂಬ್, ಪ್ಯಾಟ್ ಕುಮಿನ್ಸ್, ನಾಥನ್ ಲಿಯಾನ್, ಶಾನ್ ಮಾರ್ಷ್, ಟ್ರಾವಿಸ್ ಹೆಡ್, ಮಿಚೆಲ್ ಮಾರ್ಷ್, ಮಿಚೆಲ್ ಸ್ಟಾರ್ಕ್.

Story first published: Tuesday, December 4, 2018, 16:16 [IST]
Other articles published on Dec 4, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X