ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ನ್ಯೂಜಿಲೆಂಡ್‌ನ ಮಾಜಿ ಕ್ರಿಕೆಟಿಗ ರಿಚರ್ಡ್ ಹ್ಯಾಡ್ಲಿಗೆ ಕರುಳಿನ ಕ್ಯಾನ್ಸರ್

richard hadlee diagnosed with bowel cancer

ಕ್ರೈಸ್ಟ್ ಚರ್ಚ್, ಜೂನ್ 13: ಜಗತ್ತಿನ ಶ್ರೇಷ್ಠ ಆಟಗಾರರಲ್ಲಿ ಒಬ್ಬರಾದ ನ್ಯೂಜಿಲೆಂಡ್‌ನ ಮಾಜಿ ಕ್ರಿಕೆಟಿಗ ರಿಚರ್ಡ್ ಹ್ಯಾಡ್ಲಿ ಅವರು ಕರುಳಿನ ಕ್ಯಾನ್ಸರ್‌ಗೆ ತುತ್ತಾಗಿದ್ದಾರೆ.

66 ವರ್ಷದ ಹ್ಯಾಡ್ಲಿ ಅವರು ಕಳೆದ ತಿಂಗಳು ಕೊಲೊನೊಸ್ಕೋಪಿ ತಪಾಸಣೆಗೆ ಒಳಗಾದಾಗ ಅವರಲ್ಲಿ ಕರುಳಿನ ಕ್ಯಾನ್ಸರ್ ಇರುವುದು ಪತ್ತೆಯಾಗಿದೆ.

ಭಾರತ ತಂಡಕ್ಕೆ ಸೈನಿ ಆಯ್ಕೆ: ಬೇಡಿ, ಚೌಹಾಣ್‌ಗೆ ಗಂಭೀರ್ ಸಂತಾಪ!ಭಾರತ ತಂಡಕ್ಕೆ ಸೈನಿ ಆಯ್ಕೆ: ಬೇಡಿ, ಚೌಹಾಣ್‌ಗೆ ಗಂಭೀರ್ ಸಂತಾಪ!

ಕರುಳಿನಲ್ಲಿರುವ ಕ್ಯಾನ್ಸರ್ ಗಡ್ಡೆಯನ್ನು ತೆರವುಗೊಳಿಸಲು ಅವರನ್ನು ಶಸ್ತ್ರಚಿಕಿತ್ಸೆಗೆ ಒಳಪಡಿಸಲಾಗಿದೆ.

ಹ್ಯಾಡ್ಲಿ ಅವರು ಶೀಘ್ರದಲ್ಲಿಯೇ ಸಂಪೂರ್ಣವಾಗಿ ಚೇತರಿಸಿಕೊಳ್ಳುವ ನಿರೀಕ್ಷೆಯಿದೆ ಎಂದು ಅವರ ಪತ್ನಿ ಲೇಡಿ ಡಿಯಾನ್ನೆ ಹೇಳಿಕೆ ನೀಡಿದ್ದಾರೆ.

ಅನಗತ್ಯ ಊಹಾಪೋಹ ಮತ್ತು ಸುಳ್ಳು ಸುದ್ದಿಗಳನ್ನು ತಪ್ಪಿಸುವ ಸಲುವಾಗಿ ನಾವು ಈ ಮಾಹಿತಿಯನ್ನು ಬಹಿರಂಗಪಡಿಸಿದ್ದೇವೆ. ಮುಂದಿನ ಕೆಲವು ತಿಂಗಳವರೆಗೆ ನಮಗೆ ಖಾಸಗಿತನದ ಅವಶ್ಯಕತೆಯಿದೆ. ಇದನ್ನು ಜನರು ಅರ್ಥಮಾಡಿಕೊಂಡು ಸಹಕರಿಸುತ್ತರೆಂದು ಭಾವಿಸುತ್ತೇವೆ ಎಂಬುದಾಗಿ ಅವರ ಕುಟುಂಬ ಹೇಳಿದೆ.

ಐದೇ ಸೆಕೆಂಡಿನಲ್ಲಿ ಮುಗಿದಿತ್ತು ಸಿಎಸ್‌ಕೆ ಕೊನೆಯ ಮೀಟಿಂಗ್!ಐದೇ ಸೆಕೆಂಡಿನಲ್ಲಿ ಮುಗಿದಿತ್ತು ಸಿಎಸ್‌ಕೆ ಕೊನೆಯ ಮೀಟಿಂಗ್!

86 ಟೆಸ್ಟ್ ಮತ್ತು 115 ಏಕದಿನ ಪಂದ್ಯಗಳನ್ನು ಆಡಿರುವ ರಿಚರ್ಡ್ ಹ್ಯಾಡ್ಲಿ ಒಟ್ಟು 589 ವಿಕೆಟ್‌ಗಳನ್ನು ಪಡೆದಿದ್ದಾರೆ. ಜಗತ್ತಿನ ಶ್ರೇಷ್ಠ ಬೌಲರ್‌ಗಳಲ್ಲಿ ಒಬ್ಬರು ಎಂದು ಹ್ಯಾಡ್ಲಿ ಅವರನ್ನು ಪರಿಗಣಿಸಲಾಗಿದೆ.

Story first published: Wednesday, June 13, 2018, 10:43 [IST]
Other articles published on Jun 13, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X