ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಆಸಿಸ್ ಬೌಲರ್‌ಗಳಿಗೆ ಪಾಂಟಿಂಗ್ ಚಾಟಿ: ಶಾರ್ದೂಲ್- ಸುಂದರ್ ಆಟಕ್ಕೆ ಮೆಚ್ಚುಗೆ

Rickey ponting statement on india fight back, lauds Sundar and Shardul show

ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಮಾಜಿ ನಾಯಕ ರಿಕಿ ಪಾಂಟಿಂಗ್ ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಬ್ರಿಸ್ಬೇನ್ ಟೆಸ್ಟ್ ಪಂದ್ಯದ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ಈ ಸಂದರ್ಭದಲ್ಲಿ ಮಾಜಿ ಆಸಿಸ್ ನಾಯಕ ಭಾರತೀಯ ಕ್ರಿಕೆಟಿಗರಾದ ವಾಶಿಂಗ್ಟನ್ ಸುಂದರ್ ಹಾಗೂ ಶಾರ್ದೂಲ್ ಠಾಕೂರ್ ಅವರ ಶಿಸ್ತುಬದ್ದ ಹಾಗೂ ಅದ್ಭುತವಾದ ಪ್ರದರ್ಶನಕ್ಕೆ ಮೆಚ್ಚುಗೆಯನ್ನು ಸೂಚಿಸಿದ್ದಾರೆ.

"ಬ್ಯಾಟ್ಸ್‌ಮನ್ ಓರ್ವನ ನಿಜವಾದ ನಿಲುವು ಆತನ ಅಪ್ಲಿಕೇಶನ್ ಹಾಗೂ ಏಕಾಗ್ರಥೆ. ಅವರು ಅದನ್ನೂ ಎಲ್ಲಿಗೂ ಬಿಟ್ಟುಕೊಡಲಿಲ್ಲ. ಅವರ ಜೊತೆಯಾಟ ಶ್ರೇಷ್ಠಮಟ್ಟದ್ದು. ಭಾರತಕ್ಕೆ ಆ ಸಂದರ್ಭದಲ್ಲಿ ಯಾವುದು ಅಗತ್ಯವಾಗಿತ್ತೋ ಅದನ್ನು ಆ ಆಟಗಾರರು ಕೆಲವೇ ಟೆಸ್ಟ್ ಪಂದ್ಯಗಳಲ್ಲಿ ನೀಡುವಲ್ಲಿ ಯಶಸ್ವಿಯಾಗಿದ್ದಾರೆ" ಎಂದು ಕ್ರಿಕೆಟ್.ಕಾಮ್.ಎಯು ಗೆ ನೀಡಿದ ಸಂದರ್ಶನದಲ್ಲಿ ಪಾಂಟಿಂಗ್ ಪ್ರಶಂಸಿಸಿದ್ದಾರೆ.

ಮೆಗಾ ಮಿಲಿಯನ್ ಜಾಕ್‌ಪಾಟ್‌ ಮೌಲ್ಯ ಈಗ 640 ಮಿಲಿಯನ್‌ ಡಾಲರ್‌ಮೆಗಾ ಮಿಲಿಯನ್ ಜಾಕ್‌ಪಾಟ್‌ ಮೌಲ್ಯ ಈಗ 640 ಮಿಲಿಯನ್‌ ಡಾಲರ್‌

ಕೆಟ್ಟ ಹೊಡೆತಗಳು ಇರಲಿಲ್ಲ

ಕೆಟ್ಟ ಹೊಡೆತಗಳು ಇರಲಿಲ್ಲ

"ಶಾರ್ದೂಲ್ ಅಂತ್ಯದಲ್ಲಿ ದೊಡ್ಡ ಹೊಡೆತವನ್ನು ಬಾರಿಸಲು ಮುಂದಾಗಿ ವಿಕೆಟ್ ಒಪ್ಪಿಸಿ ಹೊರನಡೆದರು. ಆದರೆ ಅದಕ್ಕಿಂತ ಮೊದಲು ಅವರ ಬ್ಯಾಟಿಂಗ್‌ನಲ್ಲಿ ಕೆಟ್ಟ ಹೊಡೆತಗಳು ಇರಲಿಲ್ಲ" ಎಂದು ಶಾರ್ದೂಲ್ ಠಾಕೂರ್ ಬಗ್ಗೆ ವಿಶೇಷವಾಗಿ ಪಾಂಟಿಂಗ್ ಉಲ್ಲೇಖ ಮಾಡಿದ್ದಾರೆ.

ಆಕ್ರಮಣಕಾರಿತನ ಇಲ್ಲ

ಆಕ್ರಮಣಕಾರಿತನ ಇಲ್ಲ

ಇನ್ನು ಇದೇ ಸಂದರ್ಭದಲ್ಲಿ ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಮಾಜಿ ನಾಯಕ ಪಾಂಟಿಂಗ್ ಆಸ್ಟ್ರೇಲಿಯಾ ಬೌಲಿಂಗ್ ವಿಭಾಗಕ್ಕೆ ಕಠಿಣ ಮಾತುಗಳಲ್ಲಿ ಚಾಟಿ ಬೀಸಿದರು. ಆಸ್ಟ್ರೇಲಿಯಾ ಬೌಲಿಂಗ್ ವಿಭಾಗದಲ್ಲಿ ಆಕ್ರಮಣಕಾರಿತನ ಇರಲಿಲ್ಲ ಎಂದಿದ್ದಾರೆ.

ಬ್ಯಾಟ್ಸ್‌ಮನ್‌ಗಳು ಬಯಸುವಂತೆ ಬೌಲಿಂಗ್

ಬ್ಯಾಟ್ಸ್‌ಮನ್‌ಗಳು ಬಯಸುವಂತೆ ಬೌಲಿಂಗ್

"ಆಸ್ಟ್ರೇಲಿಯಾ ಬೌಲರ್‌ಗಳ ಆಕ್ರಮಣಕಾರಿತನ ಸಾಕಾಗಲಿಲ್ಲ ಎಂದು ನನಗೆ ಅನಿಸುತ್ತದೆ. ಅವರು ಶಾರ್ಟ್ ಎಸೆತಗಳಲ್ಲಿ ಅಗತ್ಯವಾದಷ್ಟು ಎಸೆಯಲಿಲ್ಲ. ಭಾರತೀಯ ಬ್ಯಾಟ್ಸ್‌ಮನ್‌ಗಳು ಕ್ರೀಸ್‌ನಲ್ಲಿ ನೆಲೆಯೂರಲು ಅವರು ಅವಕಾಶ ಮಾಡಿಕೊಟ್ಟರು. ಬ್ಯಾಟ್ಸ್‌ಮನ್ ಓರ್ವ ತನಗೆ ಯಾವ ರೀತಿ ಬೇಕೆಂದು ಬಯಸುತ್ತಾನೋ ಅದೇ ರೀತಿಯಲ್ಲಿ ಅವರು ಬೌಲಿಂಗ್ ಮಾಡಿದ್ದರು" ಎಂದು ಪಾಂಟಿಂಗ್ ಹೇಳಿದ್ದಾರೆ.

Story first published: Monday, January 18, 2021, 9:50 [IST]
Other articles published on Jan 18, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X