ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ರಾಸ್ ಟೇಲರ್ ಏಕದಿನ ದಾಖಲೆ, ಬಾಂಗ್ಲಾ ವಿರುದ್ಧ ಕಿವೀಸ್‌ಗೆ ಸರಣಿ ಜಯ

Ross Taylor smashes record as Black Caps flay Bangladesh attack

ಡುನೆಡಿನ್, ಫೆಬ್ರವರಿ 20: ನ್ಯೂಜಿಲ್ಯಾಂಡ್ ಪ್ರವಾಸದಲ್ಲಿರುವ ಬಾಂಗ್ಲಾದೇಶದ ವಿರುದ್ಧ ಆತಿಥೇಯ ನ್ಯೂಜಿಲ್ಯಾಂಡ್ ತಂಡ 3ನೇ ಏಕದಿನ ಪಂದ್ಯದಲ್ಲಿ 88 ರನ್ ಗೆಲುವನ್ನಾಚರಿಸಿದೆ. ರಾಸ್ ಟೇಲರ್ ಅಬ್ಬರದ ಬ್ಯಾಟಿಂಗ್ ನೆರವಿನಿಂದ ಕಿವೀಸ್, 3-0ಯಿಂದ ಸರಣಿ ಗೆಲ್ಲುವ ಮೂಲಕ ಪ್ರವಾಸಿ ಬಾಂಗ್ಲಾವನ್ನು ವೈಟ್ ವಾಷ್ ಮುಖಭಂಗಕ್ಕೀಡು ಮಾಡಿದೆ.

ಐಪಿಎಲ್ 2019: ಆರಂಭಿಕ ಪಂದ್ಯಗಳ ವೇಳಾಪಟ್ಟಿ ಪ್ರಕಟಿಸಿದ ಬಿಸಿಸಿಐ!ಐಪಿಎಲ್ 2019: ಆರಂಭಿಕ ಪಂದ್ಯಗಳ ವೇಳಾಪಟ್ಟಿ ಪ್ರಕಟಿಸಿದ ಬಿಸಿಸಿಐ!

ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ನ್ಯೂಜಿಲ್ಯಾಂಡ್ ತಂಡ, ಹೆನ್ರಿ ನಿಕೋಲ್ಸ್ 64, ಟೇಲರ್ 69, ನಾಯಕ ಟಾಮ್ ಲ್ಯಾಥಮ್ 59 ರನ್ ನೆರವಿನೊಂದಿಗೆ 50 ಓವರ್‌ಗಳಲ್ಲಿ 6 ವಿಕೆಟ್ ಕಳೆದು 330 ಬೃಹತ್ ರನ್ ಕಲೆ ಹಾಕಿತು. ಟೇಲರ್ ಈ ಪಂದ್ಯದಲ್ಲಿ ನ್ಯೂಜಿಲ್ಯಾಂಡ್ ಪರ ಏಕದಿನದಲ್ಲಿ ಅತ್ಯಧಿಕ ರನ್ ಗಳಿಸಿದ ಆಟಗಾರನಾಗಿ ದಾಖಲೆ ಬರೆದರು.

Pulwama attack: ವಿಶ್ವಕಪ್‌ನಲ್ಲಿ ಪಾಕಿಸ್ತಾನ ವಿರುದ್ಧ ಭಾರತ ಆಡೋದಿಲ್ಲ?!Pulwama attack: ವಿಶ್ವಕಪ್‌ನಲ್ಲಿ ಪಾಕಿಸ್ತಾನ ವಿರುದ್ಧ ಭಾರತ ಆಡೋದಿಲ್ಲ?!

ಅಂತೂ ನ್ಯೂಜಿಲ್ಯಾಂಡ್ ಪ್ರವಾಸದಲ್ಲಿರುವ ಬಾಂಗ್ಲಾ, ಅಭ್ಯಾಸ ಪಂದ್ಯವನ್ನೂ ಸೇರಿಸಿ ಏಕದಿನ ಸರಣಿಯ ನಾಲ್ಕೂ ಪಂದ್ಯಗಳಲ್ಲಿ ಆತಿಥೇಯರಿಗೆ ತಲೆ ಬಾಗಿದೆ.

ಫ್ಲೆಮಿಂಗ್ ದಾಖಲೆ ಧೂಳೀಪಟ

ಫ್ಲೆಮಿಂಗ್ ದಾಖಲೆ ಧೂಳೀಪಟ

ಮೂರನೇ ಮತ್ತು ಐದನೇ ಪಂದ್ಯದಲ್ಲಿ 69 ರನ್ ಗಳಿಸಿದ್ದ ರಾಸ್ ಟೇಲರ್ 203 ಇನ್ನಿಂಗ್ಸ್‌ಗಳಲ್ಲಿ ಒಟ್ಟು 8,021 ರನ್ ಕಲೆ ಹಾಕುವ ಮೂಲಕ ನ್ಯೂಜಿಲ್ಯಾಂಡ್ ಪರ ಏಕದಿನದಲ್ಲಿ ಅತೀ ಹೆಚ್ಚು ರನ್ ಗಳಿಸಿದ ಆಟಗಾರ ಎಂಬ ಹಿರಿಮೆಗೆ ಪಾತ್ರರಾದರು. ಜೊತೆಗೆ ಸ್ಟೀಫನ್ ಫ್ಲೆಮಿಂಗ್ ಅವರ 8,007 ರನ್ ದಾಖಲೆಯನ್ನೂ ಟೇಲರ್ ಸರಿಗಟ್ಟಿದಂತಾಗಿದೆ (ಚಿತ್ರ ಕೃಪೆ: ಕ್ರಿಕ್ ಇನ್ಫೋ).

ರಹ್ಮಾನ್ ಶತಕದಾಟ

ರಹ್ಮಾನ್ ಶತಕದಾಟ

ಗುರಿ ಬೆನ್ನಟ್ಟಿದ ಬಾಂಗ್ಲಾದೇಶ ಪರ ಸಬ್ಬೀರ್ ರಹ್ಮಾನ್ 102, ಮೊಹಮ್ಮದ್ ಸೈಫುದ್ದೀನ್ 44 ರನ್ ಬೆಂಬಲದೊಂದಿಗೆ 47.2 ಓವರ್‌ನಲ್ಲಿ ಎಲ್ಲಾ ವಿಕೆಟ್ ಕಳೆದು 242 ರನ್ ಪೇರಿಸಿ ಶರಣಾಯಿತು. ಇದರೊಂದಿಗೆ ಮೂರು ಪಂದ್ಯಗಳ ಏಕದಿನ ಸರಣಿ 3-0ಯಿಂದ ನ್ಯೂಜಿಲ್ಯಾಂಡ್ ವಶವಾಗಿದೆ.

ಟಿಮ್ ಸೌಥೀ ಮಿಂಚು

ಟಿಮ್ ಸೌಥೀ ಮಿಂಚು

ನ್ಯೂಜಿಲ್ಯಾಂಡ್ ಗೆಲುವಿಗೆ ಬೌಲರ್ ಟಿಮ್ ಸೌಥೀ ಅವರೂ ಪ್ರಮುಖ ಕಾರಣವೆನಿಸಿದರು. ಬಾಂಗ್ಲಾ ಇನ್ನಿಂಗ್ಸ್‌ ವೇಳೆ 9.2 ಬೌಲಿಂಗ್ ಎಸೆದ ಸೌಥೀ 65 ರನ್ನಿಗೆ 6 ವಿಕೆಟ್ ಮುರಿದರು. ಅಲ್ಲದೆ ಟ್ರೆಂಟ್ ಬೌಲ್ಟ್ 2, ಆಲ್ ರೌಂಡರ್ ಕಾಲಿನ್ ಡೆ ಗ್ರ್ಯಾಂಡ್ ಹೋಮ್ 1 ವಿಕೆಟ್ ಪಡೆದು ಎದುರಾಳಿಯನ್ನು ಕಾಡಿದರು.

ಗಪ್ಟಿಲ್ ಸರಣಿ ಶ್ರೇಷ್ಠ

ಗಪ್ಟಿಲ್ ಸರಣಿ ಶ್ರೇಷ್ಠ

ಸರಣಿಯಲ್ಲಿ ಕ್ರಮವಾಗಿ 117, 118 ಮತ್ತು 29 ರನ್ ಬಾರಿಸಿದ ನ್ಯೂಜಿಲ್ಯಾಂಡ್ ಆರಂಭಿಕ ಆಟಗಾರ ಮಾರ್ಟಿನ್ ಗಪ್ಟಿಲ್ ಸರಣಿಶ್ರೇಷ್ಠರೆನಿಸಿದರು. ಅಂತಿಮ ಪಂದ್ಯದಲ್ಲಿ ಅದ್ಭುತ ಬೌಲಿಂಗ್ ಪ್ರದರ್ಶಿಸಿದ ಮಧ್ಯಮ ವೇಗಿ ಟಿಮ್ ಸೌಥೀ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದುಕೊಂಡರು.

Story first published: Wednesday, February 20, 2019, 13:02 [IST]
Other articles published on Feb 20, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X