ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಸಚಿನ್ ತೆಂಡೂಲ್ಕರ್, ಲೆಜೆಂಡ್ಸ್‌ ಲೀಗ್‌ನಲ್ಲಿ ಆಡುತ್ತಿಲ್ಲ: ತಪ್ಪು ದಾರಿಗೆ ಎಳೆಯದಿರಿ ಎಂದ SRT ಕಂಪನಿ

Sachin Tendulkar

ಇದೇ ತಿಂಗಳಿನಲ್ಲಿ ಪ್ರಾರಂಭಗೊಳ್ಳಲಿರುವ ಲೆಜೆಂಡ್ಸ್‌ ಲೀಗ್ ಕ್ರಿಕೆಟ್ 2022ರಲ್ಲಿ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಭಾಗವಹಿಸುತ್ತಿಲ್ಲ. ಈ ಕುರಿತಾಗಿ ಸುಳ್ಳು ವದಂತಿಗಳನ್ನ ಹರಡದಿರಿ ಎಂದು ಎಸ್‌ಆರ್‌ಟಿ ಸ್ಪೋರ್ಟ್ಸ್‌ ಮ್ಯಾನೇಜ್‌ಮೆಂಟ್ ತಿಳಿಸಿದೆ.

ಪಂದ್ಯಾವಳಿಯು ಜನವರಿ 20, 2022 ರಂದು ಪ್ರಾರಂಭವಾಗುತ್ತದೆ ಮತ್ತು ಇದು ಜನವರಿ 29, 2022 ರವರೆಗೆ ನಡೆದು ಮುಕ್ತಾಯಗೊಳ್ಳಲಿದೆ. ಓಮಾನ್‌ನ ಅಲ್ ಎಮಿರೇಟ್ಸ್ ಕ್ರಿಕೆಟ್ ಸ್ಟೇಡಿಯಂನಲ್ಲಿ ಈ ಟೂರ್ನಿ ನಡೆಯಲಿದ್ದು, ಟೂರ್ನಮೆಂಟ್‌ಗೆ ಎಲ್ಲಾ ಸಿದ್ಧತೆಗಳು ಪೂರ್ಣಗೊಂಡಿವೆ.

ಏತನ್ಮಧ್ಯೆ, ಬ್ರಾಂಡ್ ಅಂಬಾಸಿಡರ್ ಅಮಿತಾಭ್ ಬಚ್ಚನ್ ಒಳಗೊಂಡಿರುವ ಸ್ಪರ್ಧೆಯ ಪ್ರೋಮೋದಲ್ಲಿ ಸಚಿನ್ ಹೆಸರನ್ನು ಉಲ್ಲೇಖಿಸಿದ್ದರಿಂದ ಭಾರತದ ಬ್ಯಾಟಿಂಗ್ ದಂತಕಥೆ ಸಚಿನ್ ತೆಂಡೂಲ್ಕರ್ ಅವರು ಪಂದ್ಯಾವಳಿಯಲ್ಲಿ ಭಾಗವಹಿಸುತ್ತಾರೆ ಎಂಬ ವರದಿಗಳಿವೆ.

ಸಚಿನ್ ತೆಂಡೂಲ್ಕರ್ ಟೂರ್ನಿಯಲ್ಲಿ ಭಾಗವಹಿಸುತ್ತಿಲ್ಲ!

ಹೀಗಾಗಿ ತೆಂಡೂಲ್ಕರ್ ಅವರ ಕಂಪನಿ SRT ಸ್ಪೋರ್ಟ್ಸ್ ಮ್ಯಾನೇಜ್‌ಮೆಂಟ್ ಪ್ರೈವೇಟ್ ಲಿಮಿಟೆಡ್, ಶನಿವಾರ (ಜನವರಿ 8) ಎಲ್ಲಾ ವದಂತಿಗಳನ್ನು ತಳ್ಳಿಹಾಕಿದ್ದು, ಸಚಿನ್ ಈ ಟೂರ್ನಿಯಲ್ಲಿ ಭಾಗವಹಿಸುತ್ತಿಲ್ಲ ಎಂದು ದೃಢಪಡಿಸಿದೆ. ಇದಲ್ಲದೆ ಈ ಮೂಲಕ ಅಭಿಮಾನಿಗಳಿಗೆ ಮತ್ತು ಅಮಿತಾಬ್ ಬಚ್ಚನ್‌ಗೆ ಸುಳ್ಳು ಮಾಹಿತಿ ನೀಡದಂತೆ ಟೂರ್ನಿ ಸಂಘಟಕರಿಗೆ ಸಂಸ್ಥೆ ಒತ್ತಾಯಿಸಿದೆ.

"ಲೆಜೆಂಡ್ಸ್ ಲೀಗ್ ಕ್ರಿಕೆಟ್'ನಲ್ಲಿ sachin_rt ಭಾಗವಹಿಸುವ ಸುದ್ದಿ ನಿಜವಲ್ಲ. ಸಂಘಟಕರು ಕ್ರಿಕೆಟ್ ಅಭಿಮಾನಿಗಳನ್ನ ಮತ್ತು ಶ್ರೀ ಅಮಿತಾಭ್ ಬಚ್ಚನ್ ಅವರನ್ನು ದಾರಿತಪ್ಪಿಸುವುದನ್ನು ತಪ್ಪಿಸಬೇಕು'' ಎಂದು SRT ಸ್ಪೋರ್ಟ್ಸ್ ಮ್ಯಾನೇಜ್ಮೆಂಟ್ ಪ್ರೈ. ಲಿಮಿಟೆಡ್ನ ಅಧಿಕೃತ ವಕ್ತಾರರು ತಿಳಿಸಿದ್ದಾರೆ.

ಅಮಿತಾಬ್ ಬಚ್ಚನ್ ಲೆಜೆಂಡ್ಸ್ ಲೀಗ್ ಪ್ರಚಾರದ ಪ್ರೋಮೋದ ಪೋಸ್ಟ್‌ಗೆ ಪ್ರತಿಕ್ರಿಯಿಸುವಾಗ SRT ಸ್ಪೋರ್ಟ್ಸ್‌ ಮ್ಯಾನೇಜ್‌ಮೆಂಟ್ ಸಂಸ್ಥೆಯು ತನ್ನ ಟ್ವೀಟ್‌ನಲ್ಲಿ ಈ ಮೇಲಿನಂತೆ ಬರೆದಿದೆ.

ಸಚಿನ್ ಮಗಳು ಸಾರಾ ಮತ್ತು ಶುಭ್ಮನ್ ಗಿಲ್‌ ಡೇಟಿಂಗ್? ಫೋಟೊಗಳಿಂದ ನೆಟಿಜನ್‌ಗಳ ಕೈಗೆ ಸಿಕ್ಕಿಬಿದ್ದರು!

ಟೂರ್ನಿ ಸಂಘಟಕರ ಕ್ಷಮೆ ಯಾಚನೆಗೆ ಆಗ್ರಹ

ಟೂರ್ನಿ ಸಂಘಟಕರ ಕ್ಷಮೆ ಯಾಚನೆಗೆ ಆಗ್ರಹ

ಸಚಿನ್ ತೆಂಡೂಲ್ಕರ್ ಕುರಿತಾಗಿ ಸುಳ್ಳು ಸುದ್ದಿ ಹರಡದಿರಿ ಎಂದು ಸಂಸ್ಥೆ ಪ್ರಕಟಿಸುತ್ತಿದ್ದಂತೆ ಕಾಮೆಂಟ್ ಬಾಕ್ಸ್‌ನಲ್ಲಿ ಸಚಿನ್ ಅಭಿಮಾನಿಗಳು ಟೂರ್ನಿ ಸಂಘಟಕರ ವಿರುದ್ಧ ಕಿಡಿ ಕಾರಿದ್ದಾರೆ. ಸುಳ್ಳು ಮಾಹಿತಿ ನೀಡಿದ್ದಕ್ಕಾಗಿ ಕ್ಷಮೆಯಾಚಿಸಲು ಆಗ್ರಹಿಸಿದ್ದಾರೆ.

ಲೆಜೆಂಡ್ಸ್ ಲೀಗ್ ಕ್ರಿಕೆಟ್‌ನಲ್ಲಿ ಭಾರತ, ಶ್ರೀಲಂಕಾ, ಪಾಕಿಸ್ತಾನ, ಆಸ್ಟ್ರೇಲಿಯಾ, ಇಂಗ್ಲೆಂಡ್ ಮತ್ತು ಇತರ ಕ್ರಿಕೆಟ್ ರಾಷ್ಟ್ರಗಳ ಹಲವಾರು ಮಾಜಿ ಕ್ರಿಕೆಟಿಗರು ಭಾಗವಹಿಸಲಿದ್ದಾರೆ. ಈ ಎಲ್ಲಾ ಆಟಗಾರರನ್ನು ಭಾರತ, ಏಷ್ಯಾ ಮತ್ತು ಪ್ರಪಂಚದ ಇತರ ಭಾಗಗಳನ್ನು ಪ್ರತಿನಿಧಿಸುವ ಮೂರು ತಂಡಗಳಾಗಿ ವಿಂಗಡಿಸಲಾಗಿದೆ. ಗಮನಾರ್ಹವಾಗಿ, ಎಲ್ಲಾ ಪಂದ್ಯಗಳು ಓಮನ್‌ನ ಅಲ್ ಅಮರತ್ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯುತ್ತವೆ.

ಇಂಡಿಯಾ ಮಹರಾಜಸ್ ತಂಡದಲ್ಲಿ ವೀರೇಂದ್ರ ಸೆಹ್ವಾಗ್, ಯುವರಾಜ್ ಸಿಂಗ್ ಭಾಗಿ!

ಇಂಡಿಯಾ ಮಹರಾಜಸ್ ತಂಡದಲ್ಲಿ ವೀರೇಂದ್ರ ಸೆಹ್ವಾಗ್, ಯುವರಾಜ್ ಸಿಂಗ್ ಭಾಗಿ!

ಭಾರತದ ಪ್ರಮುಖ ಮಾಜಿ ಆಟಗಾರರನ್ನೊಳಗೊಂಡ ಇಂಡಿಯಾ ಮಹಾರಾಜಸ್ ತಂಡದ ಭಾರತ ಕ್ರಿಕೆಟ್‌ನ ದಿಗ್ಗಜರು ಕಣಕ್ಕಿಳಿಯಲಿದ್ದಾರೆ. ವೀರೇಂದ್ರ ಸೆಹ್ವಾಗ್, ಯುವರಾಜ್ ಸಿಂಗ್ ಸೇರಿದಂತೆ ಹರ್ಭಜನ್ ಸಿಂಗ್, ಇರ್ಫಾನ್ ಪಠಾಣ್, ಯೂಸುಫ್ ಪಠಾಣ್, ಬದ್ರಿನಾಥ್, ಆರ್‌ಪಿ ಸಿಂಗ್, ಪ್ರಗ್ಯಾನ್ ಓಜಾ, ನಮನ್ ಓಜಾ, ಮನ್‌ಪ್ರೀತ್ ಗೋನಿ, ಹೇಮಾಂಗ್ ಬದಾನಿ, ವೇಣುಗೋಪಾಲ್ ರಾವ್, ಮುನಾಫ್ ಪಟೇಲ್, ಸಂಜಯ್ ಬಂಗಾರ್, ನಯನ್ ಮೊಂಗಿಯಾ ಮತ್ತು ಅಮಿತ್ ಭಂಡಾರಿ ಆಡಲಿದ್ದಾರೆ.

ಭಾರತದ ಬೌಲರ್ಸ್ ನನ್ನ ಔಟ್ ಮಾಡಬೇಕಾದ್ರೆ, ನಂದು ಯಾವುದಾದ್ರೂ ಮೂಳೆ ಮುರೀಬೇಕು: ಡೀನ್ ಎಲ್ಗರ್

ಉತ್ತಮ ನಾಯಕನಾಗಲು Virat ಬಳಿ ಸಲಹೆ ಕೇಳ್ತಾರಾ Rahul? | Oneindia Kannada
ಮೂರು ತಂಡಗಳು ತಲಾ ಎರಡು ಪಂದ್ಯ ಆಡಲಿವೆ

ಮೂರು ತಂಡಗಳು ತಲಾ ಎರಡು ಪಂದ್ಯ ಆಡಲಿವೆ

ಒಟ್ಟು ಮೂರು ತಂಡಗಳು ಟೂರ್ನಿಯಲ್ಲಿ ಭಾಗವಹಿಸುತ್ತಿದ್ದು, ಭಾರತದ ತಂಡವನ್ನ ಕೂಡ ಇಲ್ಲಿ ನೋಡಬಹುದಾಗಿದೆ. ಏಷ್ಯಾ ಲಯನ್ಸ್, ಇಂಡಿಯಾ ಮಹರಾಜಸ್, ವರ್ಲ್ಡ್ ಜಾಯಿಂಟ್ಸ್ ಈ ಟೂರ್ನಮೆಂಟ್‌ನಲ್ಲಿ ಆಡಲಿದ್ದು, ಮೂರು ತಂಡಗಳು ಪ್ರತಿ ತಂಡಗಳ ವಿರುದ್ಧ ಎರಡು ಪಂದ್ಯಗಳನ್ನ ಆಡಲಿವೆ. ಈ ಮೂಲಕ ಇಂಡಿಯಾ ಮಹಾರಾಜಸ್ ತಂಡವು ಏಷ್ಯಾ ಲಯನ್ಸ್ ಹಾಗೂ ವರ್ಲ್ಡ್‌ ಜಾಯಂಟ್ಸ್ ವಿರುದ್ಧ ತಲಾ ಎರಡು ಪಂದ್ಯ ಆಡಲಿದೆ. ಹೀಗೆ ಪಾಯಿಂಟ್ಸ್ ಪಟ್ಟಿಯಲ್ಲಿ ಲೀಡ್ ಪಡೆದ ಎರಡು ತಂಡಗಳು ಜನವರಿ 29, 2022ರಂದು ಫೈನಲ್ ಪಂದ್ಯವನ್ನಾಡಲಿವೆ.

Story first published: Monday, January 10, 2022, 10:30 [IST]
Other articles published on Jan 10, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X