ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಇನ್ನೂ ಎಷ್ಟು ಡಿಕ್ಕಿ ಹೊಡೆದುಕೊಳ್ಳುವುದು ಬಾಕಿ ಇದೆಯೋ: ಪಾಕಿಸ್ತಾನ ಫೀಲ್ಡಿಂಗ್ ಬಗ್ಗೆ ಶೋಯೆಬ್ ಅಖ್ತರ್ ಅಸಮಾಧಾನ

ದುಬೈನಲ್ಲಿ ನಡೆದ ಏಷ್ಯಾಕಪ್‌ 2022ರ ಫೈನಲ್ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ ಪಾಕಿಸ್ತಾನ ಬ್ಯಾಟಿಂಗ್ ಮಾಡಿದ ರೀತಿಗೆ ಶೋಯೆಬ್ ಅಖ್ತರ್ ತೀವ್ರ ನಿರಾಸೆ ವ್ಯಕ್ತಪಡಿಸಿದ್ದಾರೆ. ಆರಂಭಿಕ ಆಟಗಾರ ಮೊಹಮ್ಮದ್ ರಿಜ್ವಾನ್ ನಿಧಾನ ಗತಿಯ ಬ್ಯಾಟಿಂಗ್‌ ಮತ್ತು ಪಾಕಿಸ್ತಾನದ ಫೀಲ್ಡಿಂಗ್‌ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಪಾಕಿಸ್ತಾನ ಸೋಲಲು ಕಾರಣವಾದ ಅಂಶಗಳನ್ನು ಪಟ್ಟಿ ಮಾಡಿರುವ ಪಾಕಿಸ್ತಾನದ ಮಾಜಿ ವೇಗದ ಬೌಲರ್ ಶೋಯೆಬ್ ಅಖ್ತರ್‍, ಅದರಲ್ಲೂ ಫೈನಲ್‌ನಂತಹ ಪ್ರಮುಖ ಪಂದ್ಯದಲ್ಲಿ ನಿಧಾನ ಗತಿಯ ಬ್ಯಾಟಿಂಗ್‌ನಿಂದ ಪಾಕಿಸ್ತಾನಕ್ಕೆ ಸೋಲಾಯಿತು ಎಂದು ಹೇಳಿದ್ದಾರೆ.

ಸದ್ಯ ಟಿ20 ಮಾದರಿಯಲ್ಲಿ ನಂಬರ್ 1 ಬ್ಯಾಟರ್ ಆಗಿರುವ ಮೊಹಮ್ಮದ್ ರಿಜ್ವಾನ್, ಶ್ರೀಲಂಕಾ ವಿರುದ್ಧದ ಫೈನಲ್‌ನಲ್ಲಿ 55 ರನ್‌ ಗಳಿಸಿದರು, ಆದರೆ ಅಷ್ಟು ರನ್ ಗಳಿಸಲು ಬರೋಬ್ಬರಿ 49 ಎಸೆತಗಳನ್ನು ತೆಗೆದುಕೊಂಡಿದ್ದರ ಬಗ್ಗೆ ಶೋಯೆಬ್ ಅಖ್ತರ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

Asia Cup 2022: ಪಂದ್ಯಾವಳಿಯ ಅತಿ ಹೆಚ್ಚು ರನ್-ಸ್ಕೋರರ್ & ವಿಕೆಟ್ ಟೇಕರ್‌ಗಳ ಪಟ್ಟಿAsia Cup 2022: ಪಂದ್ಯಾವಳಿಯ ಅತಿ ಹೆಚ್ಚು ರನ್-ಸ್ಕೋರರ್ & ವಿಕೆಟ್ ಟೇಕರ್‌ಗಳ ಪಟ್ಟಿ

ಮೊಹಮ್ಮದ್ ರಿಜ್ವಾನ್ ನಿಧಾನಗತಿಯಲ್ಲಿ ಬ್ಯಾಟಿಂಗ್ ಮಾಡಿದ್ದರಿಂದಲೇ ಸ್ಫೋಟಕ ಬ್ಯಾಟರ್‌ಗಳಾದ ಫಖರ್ ಜಮಾನ್ ಮತ್ತು ಇಫ್ತಿಕರ್ ಅಹ್ಮದ್ ಮೇಲೆ ಹೆಚ್ಚಿನ ಒತ್ತಡ ಉಂಟಾಯಿತು. ಅನಿವಾರ್ಯವಾಗಿ ದೊಡ್ಡ ಹೊಡೆತಗಳಿಗೆ ಮುಂದಾದ ಇಬ್ಬರು ಬ್ಯಾಟರ್ ಗಳು ಔಟಾದರು ಎಂದು ಶೋಯೆಬ್ ಅಖ್ತರ್ ಹೇಳಿದ್ದಾರೆ.

ರಿಜ್ವಾನ್ ವೇಗವಾಗಿ ರನ್ ಗಳಿಸಬೇಕಿತ್ತು

ರಿಜ್ವಾನ್ ವೇಗವಾಗಿ ರನ್ ಗಳಿಸಬೇಕಿತ್ತು

ಒಂದು ವೇಳೆ ರಿಜ್ವಾನ್ ವೇಗವಾಗಿ ರನ್ ಗಳಿಸಿದ್ದರೆ, ಇತರೆ ಬ್ಯಾಟರ್ ಗಳ ಮೇಲೆ ಹೆಚ್ಚಿನ ಒತ್ತಡ ಬಿದ್ದಿದ್ದರಿಂದ ಅವರು ಬೇಗನೆ ವಿಕೆಟ್ ಕಳೆದುಕೊಂಡರು. ಏಷ್ಯಾಕಪ್ ಟೂರ್ನಿಯಲ್ಲಿ ಆರಂಭದಿಂದಲೂ ಉತ್ತಮ ಫಾರ್ಮ್‌ನಲ್ಲಿದ್ದ ಮೊಹಮ್ಮದ್ ರಿಜ್ವಾನ್ ಫೈನಲ್ ಪಂದ್ಯದಲ್ಲಿ ರನ್ ಗಳಿಸಲು ಪರದಾಡಿದರು.

ಆರಂಭಿಕ ಆಟಗಾರರ ಮೇಲೆ ಪಾಕಿಸ್ತಾನ ತಂಡ ಅತಿಯಾಗಿ ಅವಲಂಬಿಸಿದೆ ಎಂದು ಮತ್ತೊಮ್ಮೆ ಸಾಬೀತಾಗಿದೆ ಎಂದು ಶೋಯೆಬ್ ಅಖ್ತರ್ ಹೇಳಿದ್ದಾರೆ. ಫಖರ್ ಜಮಾನ್ ಗೋಲ್ಡನ್ ಡಕ್‌ಗೆ ಔಟಾದರು, ಆದರೆ ಅಹ್ಮದ್ ಕೇವಲ 32 ರನ್ ಗಳಿಸಲು 31 ಎಸೆತಗಳನ್ನು ತೆಗೆದುಕೊಂಡರು.

ಶ್ರೀಲಂಕಾ ಏಷ್ಯಾ ಕಪ್ ಚಾಂಪಿಯನ್: ಫೈನಲ್‌ನಲ್ಲಿ ಲಂಕಾ ಕ್ರಿಕೆಟ್‌ಗೆ ಹೊಸ ರಂಗು ತುಂಬಿದ ಹಸರಂಗ!

ಪಾಕಿಸ್ತಾನ ಅತ್ಯಂತ ಕೆಟ್ಟ ಆಟವಾಡಿತು

ಪಾಕಿಸ್ತಾನ ಅತ್ಯಂತ ಕೆಟ್ಟ ಆಟವಾಡಿತು

ಆಸಿಫ್ ಅಲಿ (0) ಮತ್ತು ಶಾದಾಬ್ ಖಾನ್ (8) ಕೂಡ ರನ್ ಗಳಿಸಲು ವಿಫಲರಾದರು. ಪಾಕಿಸ್ತಾನ ಕೇವಲ 54 ರನ್‌ ಗಳಿಸುವಷ್ಟರಲ್ಲಿ ಕೊನೆಯ 8 ವಿಕೆಟ್ ಕಳೆದುಕೊಂಡಿತು. ತನ್ನ ಯೂಟ್ಯೂಬ್ ಚಾನೆಲ್‌ನಲ್ಲಿನ ವೀಡಿಯೊದಲ್ಲಿ, ಪಾಕಿಸ್ತಾನದ ಅಸ್ಥಿರ ಮಧ್ಯಮ ಕ್ರಮಾಂಕದ ಬಗ್ಗೆ ಶೋಯೆಬ್ ಅಖ್ತರ್ ಭಾರಿ ಟೀಕೆ ಮಾಡಿದ್ದಾರೆ.

"ಪಾಕಿಸ್ತಾನ ತಂಡ ನಿಜವಾಗಿಯೂ ಕೆಟ್ಟ ಕ್ರಿಕೆಟ್ ಅನ್ನು ಆಡಿದೆ, ಸಂಪೂರ್ಣವಾಗಿ ಭಯಾನಕವಾಗಿದೆ. ಅವರು ಫಖರ್, ಇಫ್ತಿಕರ್ ಮತ್ತು ಪಾಕಿಸ್ತಾನದ ಮಧ್ಯಮ ಕ್ರಮಾಂಕದ ಉಳಿದ ಆಟಗಾರರನ್ನು ನೋಡಬೇಕಾಗಿದೆ. ರಿಜ್ವಾನ್ ತ್ವರಿತ ಗತಿಯಲ್ಲಿ ರನ್ ಗಳಿಸಲಿಲ್ಲ. ಫೈನಲ್‌ನಂತಹ ಮುಖ್ಯವಾದ ಪಂದ್ಯದಲ್ಲಿ ಟಿ20 ಮಾದರಿಯಲ್ಲಿ ಬಾಲಿಗೆ ಒಂದರಂತೆ ಯಾರು ರನ್ ಗಳಿಸುತ್ತಾರೆ? ಈ ರೀತಿಯ ಆಟದಿಂದ ನೀವು ಪಂದ್ಯವನ್ನು ಗೆಲ್ಲಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ"

ಪಾಕಿಸ್ತಾನದ ಫೀಲ್ಡಿಂಗ್ ಬಗ್ಗೆಯೂ ಟೀಕೆ

ಪಾಕಿಸ್ತಾನದ ಫೀಲ್ಡಿಂಗ್ ಬಗ್ಗೆಯೂ ಟೀಕೆ

ಫೈನಲ್ ಪಂದ್ಯದಲ್ಲಿ ಪಾಕಿಸ್ತಾನದ ಕಳಪೆ ಫೀಲ್ಡಿಂಗ್ ಬಗ್ಗೆ ಶೋಯೆಬ್ ಅಖ್ತರ್ ಟೀಕೆ ಮಾಡಿದ್ದಾರೆ. ಎರಡೂ ತಂಡಗಳ ನಡುವಿನ ಮುಖ್ಯ ವ್ಯತ್ಯಾಸಗಳಲ್ಲಿ ಫೀಲ್ಡಿಂಗ್ ಕೂಡ ಒಂದು ಎಂದು ಹೇಳಿದ್ದಾರೆ. ಶ್ರೀಲಂಕಾ ಮೈದಾನದಲ್ಲಿ ಸಂಪೂರ್ಣವಾಗಿ ಸಂವೇದನಾಶೀಲವಾಗಿದ್ದರೂ, ಪಾಕಿಸ್ತಾನವು ಹಲವಾರು ಪ್ರಮುಖ ಕ್ಯಾಚ್‌ಗಳನ್ನು ಕೈಬಿಟ್ಟಿತು. ಟಿ20 ಮಾದರಿಯಲ್ಲಿ ಫೀಲ್ಡಿಂಗ್ ಕೂಡ ಅತಿ ಮುಖ್ಯ ಎಂದು ಹೇಳಿದ್ದಾರೆ.

ಭಾನುಕಾ ರಾಜಪಕ್ಸೆ ನೀಡಿದ ಎರಡು ಕ್ಯಾಚ್‌ಗಳನ್ನು ಕೈಬಿಟ್ಟದ್ದು ಅತ್ಯಂತ ದುಬಾರಿಯಾಯಿತು ಎಂದು ಹೇಳಿದ್ದಾರೆ. 45 ಎಸೆತಗಳಲ್ಲಿ ಅಜೇಯ 71 ರನ್ ಗಳಿಸಿದ ರಾಜಪಕ್ಸೆ ಶ್ರೀಲಂಕಾ 170 ರನ್ ಕಲೆಹಾಕಲು ಕಾರಣವಾದರು.

ಇನ್ನೂ ಎಷ್ಟು ಡಿಕ್ಕಿಗಳು ಬಾಕಿ ಇವೆ ಗೊತ್ತಿಲ್ಲ

ಇನ್ನೂ ಎಷ್ಟು ಡಿಕ್ಕಿಗಳು ಬಾಕಿ ಇವೆ ಗೊತ್ತಿಲ್ಲ

ಪಾಕಿಸ್ತಾನ ಫಿಲ್ಡಿಂಗ್ ಬಗ್ಗೆ ಭಾರಿ ಕೋಪಗೊಂಡಿರುವ ಶೋಯೆಬ್ ಅಖ್ತರ್, "ಶ್ರೀಲಂಕಾದ ಫೀಲ್ಡಿಂಗ್ ಅತ್ಯುತ್ತಮವಾಗಿತ್ತು. ಹೆಚ್ಚಿನ ಕ್ಯಾಚ್‌ಗಳನ್ನು ಹಿಡಿಯುವಾಗ ಅವರು ತಪ್ಪು ಮಾಡಲಿಲ್ಲ. ಆದರೆ ಪಾಕಿಸ್ತಾನ ಫೀಲ್ಡಿಂಗ್ ಮಾತ್ರ ಕಳಪೆಯಾಗಿದೆ. ಇನ್ನೂ ಎಷ್ಟು ಡಿಕ್ಕಿಗಳು ಬಾಕಿ ಉಳಿದಿವೆ ಎಂದು ತಿಳಿದಿಲ್ಲ. ಫಖರ್ ಜಮಾನ್ ಡಿಕ್ಕಿಹೊಡೆಯುತ್ತಿದ್ದಾರೆ, ಶಾದಾಬ್ ಖಾನ್ ಆಸಿಫ್ ಅಲಿಗೆ ಡಿಕ್ಕಿ ಹೊಡೆಯುತ್ತಿದ್ದಾರೆ. ಪಾಕಿಸ್ತಾನ ತಮ್ಮನ್ನು ತಾವು ಅತಿಯಾಗಿ ಪ್ರಚಾರ ಮಾಡಿಕೊಂಡಿದ್ದಾರೆ." ಎಂದು ಅಸಮಾಧಾನ ವ್ಯಕ್ತಪಡಿಸಿಕೊಂಡಿದ್ದಾರೆ.

ಏಷ್ಯಾಕಪ್ ಫೈನಲ್‌ನಲ್ಲಿ ಸೋಲನುಭವಿಸಿದ ನಂತರ ಪಾಕಿಸ್ತಾನ ಪಾಳಯದಲ್ಲಿ ಇದ್ದಕ್ಕಿದ್ದಂತೆ ಹಲವಾರು ಪ್ರಶ್ನಾರ್ಥಕ ಚಿಹ್ನೆಗಳು ಕಾಣಿಸಿಕೊಂಡಿವೆ. ಮುಂಬರುವ ಟಿ20 ವಿಶ್ವಕಪ್‌ಗೆ ಮುಂಚಿತವಾಗಿ ತಂಡದ ಫೀಲ್ಡಿಂಗ್‌ ಸುಧಾರಣೆಯಾಗಬೇಕು, ಮಧ್ಯಮ ಕ್ರಮಾಂಕದ ಬ್ಯಾಟಿಂಗ್ ಬಲಿಷ್ಠವಾಗಬೇಕು ಎಂದು ಹೇಳಿದ್ದಾರೆ.

Story first published: Monday, September 12, 2022, 15:42 [IST]
Other articles published on Sep 12, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X