ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಆತ ಭಾರತ ತಂಡದ ಭವಿಷ್ಯದ ಸೂಪರ್ ಸ್ಟಾರ್ ಎಂದು ಹಾಡಿ ಹೊಗಳಿದ ಇರ್ಫಾನ್ ಪಠಾಣ್

Shubman Gill Will Be Upcoming Superstar In Team India - Irfan Pathan

ಶ್ರೀಲಂಕಾ ವಿರುದ್ಧದ ಏಕದಿನ ಸರಣಿಯ ಅಂತಿಮ ಪಂದ್ಯದಲ್ಲಿ ಶುಭಮನ್‌ ಗಿಲ್ ಭರ್ಜರಿ ಶತಕ ಸಿಡಿಸುವ ಮೂಲಕ ಮಿಂಚಿದ್ದಾರೆ. ಶುಭಮನ್‌ ಗಿಲ್ ಆಟಕ್ಕೆ ಹಲವು ಮಾಜಿ ಕ್ರಿಕೆಟಿಗರು, ಹಾಲಿ ಕ್ರಿಕೆಟಿಗರು ಕೂಡ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಶುಭಮನ್ ಗಿಲ್ ಆಟಕ್ಕೆ ಮನಸೋತಿರುವ ಇರ್ಫಾನ್ ಪಠಾಣ್ ಮನಸಾರೆ ಹೊಗಳಿದ್ದಾರೆ. ಗಿಲ್ ಮುಂದಿನ ದಿನಗಳಲ್ಲಿ ಭಾರತ ತಂಡದ ಸೂಪರ್ ಸ್ಟಾರ್ ಆಟಗಾರನಾಗುತ್ತಾರೆ ಎಂದು ಭವಿಷ್ಯ ನುಡಿದಿದ್ದಾರೆ.

ಐಪಿಎಲ್ 2023: ಪಂಜಾಬ್ ಕಿಂಗ್ಸ್ ತಂಡಕ್ಕೆ ಸ್ಪಿನ್ ಬೌಲಿಂಗ್ ಕೋಚ್ ಆಗಿ ಕನ್ನಡಿಗ ಸುನಿಲ್ ಜೋಶಿ ನೇಮಕಐಪಿಎಲ್ 2023: ಪಂಜಾಬ್ ಕಿಂಗ್ಸ್ ತಂಡಕ್ಕೆ ಸ್ಪಿನ್ ಬೌಲಿಂಗ್ ಕೋಚ್ ಆಗಿ ಕನ್ನಡಿಗ ಸುನಿಲ್ ಜೋಶಿ ನೇಮಕ

ಜನವರಿ 15 ರಂದು ತಿರುವನಂತಪುರಂನಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಟೀಂ ಇಂಡಿಯಾ 50 ಓವರ್ ಗಳಲ್ಲಿ 5 ವಿಕೆಟ್‌ ನಷ್ಟಕ್ಕೆ 390 ರನ್‌ಗಳ ಬೃಹತ್ ಮೊತ್ತ ಪೇರಿಸಿತ್ತು. ಶುಭಮನ್ ಗಿಲ್ 97 ಎಸೆತಗಳಲ್ಲಿ 116 ರನ್ ಗಳಿಸಿದರು. ಶ್ರೀಲಂಕಾ ತಂಡವನ್ನು 73 ರನ್‌ಗಳಿಗೆ ಆಲೌಟ್ ಮಾಡುವ ಮೂಲಕ ಭಾರತ 317 ರನ್‌ಗಳ ವಿಶ್ವದಾಖಲೆಯ ಜಯ ಸಾಧಿಸಿತು.

18 ಏಕದಿನ ಪಂದ್ಯಗಳನ್ನಾಡಿರುವ ಶುಭಮನ್ ಗಿಲ್ ತಮ್ಮ ಎರಡನೇ ಶತಕವನ್ನು ಗಳಿಸಿದರು. ಅಲ್ಲದೆ ಏಕದಿನ ಮಾದರಿಯಲ್ಲಿ ಸ್ಥಿರ ಪ್ರದರ್ಶನ ನೀಡುವ ಮೂಲಕ ತಂಡದಲ್ಲಿ ತಮ್ಮ ಸ್ಥಾನವನ್ನು ಖಚಿತಪಡಿಸಿಕೊಂಡಿದ್ದಾರೆ.

ಭವಿಷ್ಯದ ಸೂಪರ್ ಸ್ಟಾರ್

ಭವಿಷ್ಯದ ಸೂಪರ್ ಸ್ಟಾರ್

ಶುಭಮನ್ ಗಿಲ್ ಬ್ಯಾಟಿಂಗ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿರುವ ಇರ್ಫಾನ್ ಪಠಾಣ್, "ಆತ ಖಂಡಿತವಾಗಿಯೂ ಭವಿಷ್ಯದಲ್ಲಿ ಭಾರತದ ಸೂಪರ್ ಸ್ಟಾರ್ ಆಗುತ್ತಾರೆ, ಇದರಲ್ಲಿ ಯಾವುದೇ ಸಂದೇಹವಿಲ್ಲ. ಅವರನ್ನು ಟೆಸ್ಟ್ ಮತ್ತು ಏಕದಿನ ಮಾದರಿಯಲ್ಲಿ ನೋಡಿದ್ದೇವೆ. ಟಿ20 ಮಾದರಿಯಲ್ಲಿ ಅವರು ಸ್ಟ್ರೈಕ್‌ರೇಟ್ ಸುಧಾರಿಸಿಕೊಳ್ಳಬೇಕಿದೆ. ಟಿ20 ಮಾದರಿಯಲ್ಲೂ ಅವರು ಉತ್ತಮ ಆಟಗಾರನಾಗುತ್ತಾರೆ" ಎಂದು ಹೇಳಿದ್ದಾರೆ.

ಕೊಹ್ಲಿಯ ಬ್ಯಾಟಿಂಗ್ ಅಲ್ಲ: ಈತನ ಪ್ರದರ್ಶನವೇ ಭಾರತಕ್ಕೆ ದೊಡ್ಡ ಭರವಸೆ ಎಂದ ಮೊಹಮ್ಮದ್ ಕೈಫ್

ಬ್ಯಾಟಿಂಗ್ ಮೇಲೆ ನಿಯಂತ್ರಣ

ಬ್ಯಾಟಿಂಗ್ ಮೇಲೆ ನಿಯಂತ್ರಣ

ಕಷ್ಟಕರವಾದ ಪರಿಸ್ಥಿತಿಗಳಲ್ಲೂ ಅವರು ಉತ್ತಮವಾಗಿ ಇನ್ನಿಂಗ್ಸ್ ಆಡುತ್ತಾರೆ ಎಂದು ಇರ್ಫಾನ್ ಪಠಾಣ್ ಹೇಳಿದರು. "ತಿರುವನಂತಪುರಂನ ಪಿಚ್‌ ಕಷ್ಟಕರವಾಗಿರಲಿಲ್ಲ, ಆದರೆ ಶ್ರೀಲಂಕಾ ಬೌಲರ್‌ಗಳು ನಿರಂತರವಾಗಿ ಹಾರ್ಡ್ ಲೆಂತ್ ಬೌಲಿಂಗ್ ಮಾಡುತ್ತಿದ್ದರು. ಮೊದಲ ಐದು ಓವರ್‌ಗಳಲ್ಲಿ ರೋಹಿತ್ ಶರ್ಮಾ ಕೂಡ ರನ್ ಗಳಿಸಿದರು, ಆದರೆ ನಂತರ ಅದನ್ನು ಮುಂದುವರೆಸಲು ಆಗಿಲ್ಲ. ಆದರೆ ಶುಭಮನ್ ಗಿಲ್ ಮಾತ್ರ ಬ್ಯಾಟಿಂಗ್ ಮೇಲೆ ಸಂಪೂರ್ಣ ನಿಯಂತ್ರಣ ಹೊಂದಿದ್ದರು" ಎಂದು ಹೇಳಿದರು.

ಒಂದೇ ಓವರ್‌ನಲ್ಲಿ ಸತತ ನಾಲ್ಕು ಬೌಂಡರಿಗಳನ್ನು ಸಿಡಿಸಿ ಆರಂಭದಲ್ಲೇ ವೇಗವಾಗಿ ರನ್ ಗಳಿಸಿದರು. 18 ಪಂದ್ಯಗಳನ್ನಾಡಿರುವ ಗಿಲ್‌ ಏಕದಿನ ಮಾದರಿಯಲ್ಲಿ 100 ಕ್ಕಿಂತ ಅಧಿಕ ಸ್ಟ್ರೈಕ್‌ ರೇಟ್ ಹೊಂದಿದ್ದಾರೆ.

ಸ್ಥಿರವಾದ ಪ್ರದರ್ಶನ

ಸ್ಥಿರವಾದ ಪ್ರದರ್ಶನ

ಶುಭಮನ್ ಗಿಲ್ ಆರಂಭದಿಂದಲೂ ದೊಡ್ಡ ಮೊತ್ತ ಗಳಿಸುವತ್ತ ಹೆಚ್ಚಿನ ಗಮನ ಹರಿಸುತ್ತಾರೆ. ಏಕದಿನ ಮಾದರಿಯಲ್ಲಿ ಅವರು ಸ್ಥಿರವಾಗಿ ಪ್ರದರ್ಶನ ನೀಡಿದ್ದಾರೆ. ಇದುವರೆಗೂ 18 ಏಕದಿನ ಪಂದ್ಯಗಳನ್ನಾಡಿರುವ ಗಿಲ್ 59.6 ಸರಾಸರಿ ಮತ್ತು 103.71 ಸ್ಟ್ರೈಕ್‌ರೇಟ್‌ನಲ್ಲಿ 894 ರನ್ ಗಳಿಸಿದ್ದಾರೆ. ಇದುವರೆಗೂ 2 ಶತಕ ಮತ್ತು 5 ಅರ್ಧಶತಕಗಳನ್ನು ಬಾರಿಸುವ ಮೂಲಕ ಭಾರತ ತಂಡದ ಗೆಲುವಿಗೆ ಮಹತ್ವದ ಕೊಡುಗೆ ನೀಡಿದ್ದಾರೆ.

"ಶುಭಮನ್ ಗಿಲ್ ಕೆಲವು ಅದ್ಭುತ ಹೊಡೆತಗಳನ್ನು ಆಡಿದರು. ಆಫ್‌ಸೈಡ್ ಮತ್ತು ಲೆಗ್‌ಸೈಡ್‌ನಲ್ಲಿ ಚೆಂಡನ್ನು ಹೊಡೆದರು. ಆರಂಭದಿಂದಲೇ ಉತ್ತಮವಾಗಿ ಆಡುತ್ತಿದ್ದರು. ಆರಂಭದಿಂದಲೇ ಹೆಚ್ಚಿನ ಸ್ಕೋರ್ ಗಳಿಸುವ ಉದ್ದೇಶದಿಂದ ಬ್ಯಾಟಿಂಗ್ ಮಾಡುವಂತೆ ತೋರುತ್ತದೆ" ಎಂದು ಇರ್ಫಾನ್ ಪಠಾಣ್ ಹೇಳಿದ್ದಾರೆ.

Story first published: Monday, January 16, 2023, 19:19 [IST]
Other articles published on Jan 16, 2023
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X