ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಶ್ರೀಲಂಕಾ ಕ್ರಿಕೆಟರ್, ಆರ್‌ಸಿಬಿ ಪ್ಲೇಯರ್ ಇಸುರು ಉದಾನ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿ

Sri Lanka cricketer and RCB Player Isuru Udana has retired from international cricket

ಕೊಲಂಬೋ: ಶ್ರೀಲಂಕಾದ ಬೌಲಿಂಗ್ ಆಲ್ ರೌಂಡರ್ ಇಸುರು ಉದಾನ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ಶನಿವಾರ (ಜುಲೈ 31) ನಿವೃತ್ತಿ ಘೋಷಿಸಿದ್ದಾರೆ. ಭಾರತದ ಶ್ರೀಲಂಕಾ ಪ್ರವಾಸ ಸರಣಿ ಮುಕ್ತಾಯವಾದ ಬೆನ್ನಲ್ಲೇ ಉದಾನ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ದೂರ ಉಳಿಯುವ ನಿರ್ಧಾರ ಪ್ರಕಟಿಸಿದ್ದಾರೆ. ಏಕದಿನ ಮತ್ತು ಟಿ20 ಕ್ರಿಕೆಟ್ ಎರಡರಲ್ಲೂ ಒಂದೊಂದು ಅರ್ಧ ಶತಕ ಉದಾನ ಹೆಸರಿನಲ್ಲಿದೆ.

ಶ್ರೀಲಂಕಾದ ಈ ಸ್ಪಿನ್ನರ್ ಖರೀದಿಗಾಗಿ RCB ಮಾಡ್ತಿದೆ ಬಿಗ್ ಪ್ಲ್ಯಾನ್ | Oneindia Kannada

ಟೋಕಿಯೋ ಒಲಿಂಪಿಕ್ಸ್: ಭಾರತದ ಹೊಸ ಪದಕ ವಿಜೇತೆ ಲವ್ಲಿನಾ ಬೊರ್ಗೊಹೈನ್ ಬಗ್ಗೆ ಕುತೂಹಲಕಾರಿ ಮಾಹಿತಿ!ಟೋಕಿಯೋ ಒಲಿಂಪಿಕ್ಸ್: ಭಾರತದ ಹೊಸ ಪದಕ ವಿಜೇತೆ ಲವ್ಲಿನಾ ಬೊರ್ಗೊಹೈನ್ ಬಗ್ಗೆ ಕುತೂಹಲಕಾರಿ ಮಾಹಿತಿ!

ಇಂಡಿಯನ್ ಪ್ರೀಮಿಯರ್ ಲೀಗ್‌ (ಐಪಿಎಲ್) ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರ ಆಡುವ ಇಸುರು ಉದಾನ ಶ್ರೀಲಂಕಾ ರಾಷ್ಟ್ರೀಯ ತಂಡದ ಪರ 21 ಏಕದಿನ ಪಂದ್ಯಗಳು, 34 ಟಿ20ಐ ಪಂದ್ಯಗಳನ್ನಾಡಿದ್ದಾರೆ. ಐಪಿಎಲ್‌ನಲ್ಲಿ 10 ಪಂದ್ಯಗಳಲ್ಲಿ ಆಡಿದ್ದಾರೆ.

ಪಾದಾರ್ಪಣೆ, ಕಡೇ ಪಂದ್ಯ

ಪಾದಾರ್ಪಣೆ, ಕಡೇ ಪಂದ್ಯ

21 ಏಕದಿನ ಪಂದ್ಯಗಳಲ್ಲಿ 237 ರನ್, 18 ವಿಕೆಟ್‌, 34 ಟಿ20ಐ ಪಂದ್ಯಗಳಲ್ಲಿ 256 ರನ್, 27 ವಿಕೆಟ್‌ ದಾಖಲೆ ಹೊಂದಿದ್ದಾರೆ. ಇನ್ನು 10 ಐಪಿಎಲ್ ಪಂದ್ಯಗಳಲ್ಲಿ 15 ರನ್, 8 ವಿಕೆಟ್ ದಾಖಲೆ ಹೊಂದಿದ್ದಾರೆ. ಉದಾನ ಅವರಿಗೀಗ 33ರ ಹರೆಯ. ಉದಾನ ಅಂತಾರಾಷ್ಟ್ರೀಯ ಏಕದಿನಕ್ಕೆ ಪಾದಾರ್ಪಣೆ ಮಾಡಿದ್ದು ಭಾರತ ವಿರುದ್ಧ 24 ಜುಲೈ 2012ರಲ್ಲಿ ಮಹಿಂದ ರಾಜಪಕ್ಸ ಸ್ಟೇಡಿಯಂನಲ್ಲಿ ನಡೆದಿದ್ದ ಪಂದ್ಯದಲ್ಲಿ. ಏಕದಿನ ಕಡೇ ಪಂದ್ಯ ಆಡಿದ್ದು ಕೂಡ ಭಾರತ ವಿರುದ್ಧ 18 ಜುಲೈನಲ್ಲಿ ಆರ್‌ ಪ್ರೇಮದಾಸ್ ಸ್ಟೇಡಿಯಂನಲ್ಲಿ ನಡೆದಿದ್ದ ಪಂದ್ಯದಲ್ಲಿ. ಇನ್ನು ಟಿ20ಐಗೆ ಪಾದಾರ್ಪಣೆ ಮಾಡಿದ್ದು 2009ರಂದು ಟ್ರೆಂಟ್‌ಬ್ರಿಡ್ಜ್‌ನಲ್ಲಿ ನಡೆದಿದ್ದ ಆಸ್ಟ್ರೇಲಿಯಾ ವಿರುದ್ದದ ಪಂದ್ಯದಲ್ಲಿ. ಕಡೇಯ ಟಿ20ಐ ಪಂದ್ಯ ಆಡಿದ್ದು ಜುಲೈ 28ರಂದು ಭಾರತ ವಿರುದ್ಧ ಕೊಲಂಬೋದ ಆರ್‌ ಪ್ರೇಮದಾಸ ಸ್ಟೇಡಿಯಂನಲ್ಲಿ ನಡೆದಿದ್ದ ಪಂದ್ಯದಲ್ಲಿ.

ಆರ್‌ಸಿಬಿಯಲ್ಲಿದ್ದ ಅಟಗಾರ

ಆರ್‌ಸಿಬಿಯಲ್ಲಿದ್ದ ಅಟಗಾರ

ಇಂಡಿಯನ್ ಪ್ರೀಮಿಯರ್ ಲೀಗ್ 2020ರ ಅವೃತ್ತಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ ಉದಾನ ಅವರನ್ನು ಹರಾಜಿನ ವೇಳೆ 50 ಲಕ್ಷ ರೂ.ಗೆ ಖರೀದಿಸಿತ್ತು. ಈ ಸೀಸನ್‌ನಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಸೆಪ್ಟೆಂಬರ್ 28ರಂದು ದುಬೈ ಸ್ಟೇಡಿಯನಲ್ಲಿ ನಡೆದಿದ್ದ ಪಂದ್ಯದಲ್ಲಿ ಉದಾನ ಪಾದಾರ್ಪಣೆ ಪಂದ್ಯ ಆಡಿದ್ದರು. ನವೆಂಬರ್‌ 2ರಂದು ಯುಎಇಯ ಶೈಕ್ ಝಾಯೆದ್ ಸ್ಟೇಡಿಯಂನಲ್ಲಿ ನಡೆದಿದ್ದ ಪಂದ್ಯದಲ್ಲಿ ಕೊನೇ ಸಾರಿ ಆರ್‌ಸಿಬಿ ಪರ ಆಡಿದ್ದರು. ಒಟ್ಟು 10 ಐಪಿಎಲ್ ಪಂದ್ಯಗಳನ್ನಾಡಿರುವ ಉದಾನ 9.75 ಎಕಾನಮಿ, 35.25 ಸರಾಸರಿಯಲ್ಲಿ 8 ವಿಕೆಟ್ ಪಡೆದಿದ್ದಾರೆ. ಆರ್‌ಸಿಬಿ ಬಿಟ್ಟರೆ ಉದಾನ ಸೇಂಟ್ ಕೈಟ್ಸ್ ಆ್ಯಂಡ್ ನೇವಿಸ್ ಪ್ಯಾಟ್ರಿಯೋಟ್ಸ್, ಟ್ರಿಂಬಾಗೋ ನೈಟ್ ರೈಡರ್ಸ್, ಕ್ಯಾಂಡಿ, ಮಾಂಟ್ರಿಯಲ್ ಟೈಗರ್ಸ್, ಶ್ರೀಲಂಕಾ ಬೋರ್ಡ್ ಪ್ರೆಸಿಡೆಂಟ್ಸ್ ಇಲೆವೆನ್, ಡಂಬುಲ್ಲಾ, ಪಾಕ್ತಿಯಾ ಪ್ಯಾಂಥರ್ಸ್, ಶ್ರೀಲಂಕಾ ಇಲೆವೆನ್, ರಾಜ್‌ಶಾಹಿ ಕಿಂಗ್ಸ್, ಸಿಂಧಿಸ್ ಇತ್ಯಾದಿ ತಂಡಗಳಿಗೆ ಆಡಿದ್ದಾರೆ.

ಮುಂದಿನ ಪೀಳಿಗೆಗೆ ದಾರಿಯಾಗಲಿ

ಮುಂದಿನ ಪೀಳಿಗೆಗೆ ದಾರಿಯಾಗಲಿ

"ಮುಂದಿನ ಪೀಳಿಗೆಯ ಆಟಗಾರರಿಗೆ ದಾರಿ ಮಾಡುವ ಸಮಯ ಬಂದಿದೆ ಎಂದು ನಾನು ನಂಬುತ್ತೇನೆ. ನಾನು ನನ್ನ ದೇಶವನ್ನು ಪ್ರತಿನಿಧಿಸುವ ಅವಕಾಶ ಪಡೆದಿದ್ದೇನೆ ಎನ್ನಲು ನನಗೆ ಅತೀವ ಖುಷಿ, ಹೆಮ್ಮೆಯಾಗುತ್ತಿದೆ." ಎಂದು ನಿವೃತ್ತಿ ನೀಡುವಾಗ ಇಸುರು ಉದಾನ ಹೇಳಿದ್ದಾರೆ. ಭಾರತ-ಶ್ರೀಲಂಕಾ ಸರಣಿಯಲ್ಲಿ ಉದಾನಗೆ ಹೆಚ್ಚಿನ ಪಂದ್ಯಗಳಲ್ಲಿ ಅವಕಾಶ ಸಿಕ್ಕಿರಲಿಲ್ಲ. ಸಿಕ್ಕಿದ ಪಂದ್ಯಗಳಲ್ಲಿ ಉದಾನ ಅಂಥ ಪ್ರದರ್ಶನ ನೀಡಿರಲಿಲ್ಲ. ಇತ್ತಂಡಗಳ ನಡುವಿನ ಏಕದಿನ ಸರಣಿ 2-1ರಿಂದ ಪ್ರವಾಸಿ ಭಾರತ ಗೆದ್ದುಕೊಂಡರೆ, ಮೂರು ಪಂದ್ಯಗಳ ಟಿ20ಐ ಸರಣಿಯನ್ನು ಆತಿಥೇಯ ಶ್ರೀಲಂಕಾ 2-1ರಿಂದ ಜಯಿಸಿದೆ. ಜುಲೈ 29ರಂದು ಭಾರತ-ಶ್ರೀಲಂಕಾ ಸರಣಿ ಕೊನೆಗೊಂಡಿತ್ತು.

Story first published: Saturday, July 31, 2021, 13:46 [IST]
Other articles published on Jul 31, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X