ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಟಿ20 ವಿಶ್ವಕಪ್‌ 2022: ರವೀಂದ್ರ ಜಡೇಜಾ ಬದಲಿಗೆ ಈತನನ್ನು ಆಯ್ಕೆ ಮಾಡಿ; ಸಂಜಯ್ ಮಾಂಜ್ರೇಕರ್

T20 World Cup 2022: India Will Choose Axar Patel To Replace Ravindra Jadeja Says Sanjay Manjrekar

ಭಾರತ ತಂಡವು ಭಾನುವಾರ ಮತ್ತು ಮಂಗಳವಾರದಂದು ಐರ್ಲೆಂಡ್ ವಿರುದ್ಧ ಎರಡು ಪಂದ್ಯಗಳ ಟಿ20 ಸರಣಿಯನ್ನು ಎದುರಿಸಲು ಸಜ್ಜಾಗಿದೆ. ಅಲ್ಲಿ ಭಾರತವು ಹೊಸ ಮುಖಗಳೊಂದಿಗೆ ಗೆಲುವಿನ ನಿರೀಕ್ಷೆಯಲ್ಲಿದೆ.

ಇಂಡಿಯನ್ ಪ್ರೀಮಿಯರ್ ಲೀಗ್‌ನ ಹಲವಾರು ಸೀಸನ್‌ಗಳಿಂದ ರಾಷ್ಟ್ರೀಯ ತಂಡದ ಬಾಗಿಲು ತಟ್ಟುತ್ತಿರುವ ತಾರೆಗಳು ಈಗ ಹೇಳಿಕೊಳ್ಳುವಂತಹ ಪ್ರದರ್ಶನ ನೀಡದಿದ್ದರೂ, ಭಾರತೀಯ ತಂಡಕ್ಕೆ ಪ್ರವೇಶಿಸುವಲ್ಲಿ ಯಶಸ್ವಿಯಾಗಿದ್ದಾರೆ ಮತ್ತು ಟಿ20 ವಿಶ್ವಕಪ್‌ಗೆ ಆಯ್ಕೆಗಾರರ ಗಮನ ಸೆಳೆಯಲು ಆಶಿಸುತ್ತಿದ್ದಾರೆ.

IRE vs IND: ಎರಡು ಪಂದ್ಯಗಳ ಟಿ20 ಸರಣಿಯ ಬಗ್ಗೆ ತಿಳಿದುಕೊಳ್ಳಬೇಕಾದ ಅಂಶಗಳುIRE vs IND: ಎರಡು ಪಂದ್ಯಗಳ ಟಿ20 ಸರಣಿಯ ಬಗ್ಗೆ ತಿಳಿದುಕೊಳ್ಳಬೇಕಾದ ಅಂಶಗಳು

ಇಂತಹ ಸಮಯದಲ್ಲಿ ಮೊದಲ ಆಡುವ 11ರ ಬಳಗದ ಪ್ರತಿ ಸ್ಥಾನಕ್ಕೆ ಅನೇಕ ಆಟಗಾರರು ಸ್ಪರ್ಧಿಸುವ ಮೂಲಕ ಭಾರತ ತಂಡದ ಮ್ಯಾನೇಜ್‌ಮೆಂಟ್‌ ಮೇಲೆ ಪ್ರಚಂಡ ಆಯ್ಕೆಯ ತಲೆನೋವು ತರಿಸಿದೆ. ಐಪಿಎಲ್‌ನಲ್ಲಿ ದಯನೀಯವಾಗಿ ಸಂಪರ್ಕದಿಂದ ದೂರವಿರುವ ಆಲ್‌ರೌಂಡರ್ ರವೀಂದ್ರ ಜಡೇಜಾ ಅವರಂತಹವರಿಗೆ ಇದು ದೊಡ್ಡ ಸಮಸ್ಯೆಯಾಗಲಿದೆ ಎಂದು ಭಾರತದ ಮಾಜಿ ಆಟಗಾರ ಸಂಜಯ್ ಮಂಜ್ರೇಕರ್ ತಿಳಿಸಿದ್ದಾರೆ.

ರವೀಂದ್ರ ಜಡೇಜಾ ಅವರು ಫಾರ್ಮ್‌ನಲ್ಲಿರುವ ಭಾರತದ ತಾರೆ

ರವೀಂದ್ರ ಜಡೇಜಾ ಅವರು ಫಾರ್ಮ್‌ನಲ್ಲಿರುವ ಭಾರತದ ತಾರೆ

ಸೋನಿ ಸ್ಪೋರ್ಟ್ಸ್ ನೆಟ್‌ವರ್ಕ್ ಸಂವಾದದಲ್ಲಿ ಮಾತನಾಡಿದ ಮಾಜಿ ಆಟಗಾರ ಸಂಜಯ್ ಮಂಜ್ರೇಕರ್, ರವೀಂದ್ರ ಜಡೇಜಾ ಅವರು ಫಾರ್ಮ್‌ನಲ್ಲಿರುವ ಭಾರತದ ತಾರೆಗಳಲ್ಲೊಬ್ಬರು. ಆದರೆ ಈ ಸಮಯದಲ್ಲಿ ಅವರಿಗಿಂತ ಉತ್ತಮವಾಗಿ ಕಾರ್ಯನಿರ್ವಹಿಸುವವರು ಇರುವುದುರಿಂದ ಆಯ್ಕೆಯ ಪಟ್ಟಿಯಿಂದ ಹೊರಬರಬಹುದು ಎಂದು ಹೇಳಿದರು.

"ಸ್ಪಷ್ಟವಾಗಿ ದಿನೇಶ್ ಕಾರ್ತಿಕ್ ಅವರು ಶುದ್ಧ ಬ್ಯಾಟರ್ ಆಗಿ 6 ಅಥವಾ 7 ಕ್ರಮಾಂಕದಲ್ಲಿ ಕ್ರೀಸ್‌ಗೆ ಬರಬಹುದು ಎಂದು ತೋರಿಸಿದ್ದಾರೆ. ಅವರು ಮಾಡುತ್ತಿರುವ ಪ್ರಭಾವವು ಅಸಾಧಾರಣವಾಗಿದೆ ಮತ್ತು ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಪಂದ್ಯಗಳಲ್ಲಿ ಮತ್ತು ಐಪಿಎಲ್‌ನಲ್ಲಿಯೂ ನಾವು ನೋಡಿದ್ದೇವೆ. ಆದ್ದರಿಂದ ರವೀಂದ್ರ ಜಡೇಜಾ ಅವರ ಸ್ಥಾನವನ್ನು ಪಡೆದುಕೊಳ್ಳುವುದು ನಿಜವಾಗಿಯೂ ಸುಲಭವಲ್ಲ ಮತ್ತು ಭಾರತವು ಅಕ್ಷರ್ ಪಟೇಲ್ ಅವರಂತಹ ಯಾರೊಬ್ಬರನ್ನಾದರೂ ಆಯ್ಕೆ ಮಾಡಿಕೊಳ್ಳಬಹುದು," ಎಂದು ಸಂಜಯ್ ಮಂಜ್ರೇಕರ್ ಅಭಿಪ್ರಾಯಪಟ್ಟಿದ್ದಾರೆ.

ಅಕ್ಷರ್ ಪಟೇಲ್ ಮುಂದೆ ರವೀಂದ್ರ ಜಡೇಜಾ ತಂಡಕ್ಕೆ ಅಗತ್ಯವಿಲ್ಲ

ಅಕ್ಷರ್ ಪಟೇಲ್ ಮುಂದೆ ರವೀಂದ್ರ ಜಡೇಜಾ ತಂಡಕ್ಕೆ ಅಗತ್ಯವಿಲ್ಲ

ಮಾಜಿ ನಾಯಕ ವಿರಾಟ್ ಕೊಹ್ಲಿ, ಹಾಲಿ ನಾಯಕ ರೋಹಿತ್ ಶರ್ಮಾ, ಟಿ20 ಸ್ಪೆಷಲಿಸ್ಟ್ ಕೆಎಲ್ ರಾಹುಲ್, ಜಸ್ಪ್ರೀತ್ ಬುಮ್ರಾ ಮತ್ತು ಭುವನೇಶ್ವರ್ ಕುಮಾರ್ ಅವರು ತಂಡದಲ್ಲಿನ ಹಿರಿತನದ ಕಾರಣದಿಂದ ತಮ್ಮ ಸ್ಥಾನಗಳನ್ನು ಸಮರ್ಥವಾಗಿ ಭದ್ರಪಡಿಸಿಕೊಂಡಿದ್ದಾರೆ. ತಂಡದ ಉಳಿದ ಆಯ್ಕೆಗಳಿಗೆ ವಿಷಯಗಳು ತುಂಬಾ ಬಿಗಿಯಾಗುತ್ತವೆ. ಇತ್ತೀಚಿನ ದಿನಗಳಲ್ಲಿ ಚೆಂಡಿನೊಂದಿಗೆ ಹೆಚ್ಚು ಉತ್ತಮ ಪ್ರದರ್ಶನ ನೀಡಿದ ಅಕ್ಷರ್ ಪಟೇಲ್ ಅವರ ಮುಂದೆ ರವೀಂದ್ರ ಜಡೇಜಾ ತಂಡಕ್ಕೆ ಅಗತ್ಯವಿಲ್ಲವೆಂದು ಸಂಜಯ್ ಮಂಜ್ರೇಕರ್ ಸ್ಪಷ್ಟವಾಗಿ ಹೇಳಿದ್ದಾರೆ.

ಪಾಂಡ್ಯ, ಕಾರ್ತಿಕ್‌ರಿಂದ ಬ್ಯಾಟಿಂಗ್ ಕ್ರಮಾಂಕದ ತಲೆಬಿಸಿ ಕಡಿಮೆ

ಪಾಂಡ್ಯ, ಕಾರ್ತಿಕ್‌ರಿಂದ ಬ್ಯಾಟಿಂಗ್ ಕ್ರಮಾಂಕದ ತಲೆಬಿಸಿ ಕಡಿಮೆ

"ಈ ತಂಡದಲ್ಲಿ ಈಗ ಹಾರ್ದಿಕ್ ಪಾಂಡ್ಯ, ದಿನೇಶ್ ಕಾರ್ತಿಕ್ ಬ್ಯಾಟಿಂಗ್ ಕ್ರಮಾಂಕದ ತಲೆಬಿಸಿಯನ್ನು ಕಡಿಮೆ ಮಾಡಿದ್ದಾರೆ, ರಿಷಭ್ ಪಂತ್‌ ಕೂಡ ಇದ್ದಾರೆ. ಹಾಗಾಗಿ ಅದು ಜಡೇಜಾ ಆಯ್ಕೆ ಅಷ್ಟು ಸುಲಭವಲ್ಲ. ಆದರೆ ರವೀಂದ್ರ ಜಡೇಜಾ ಯಾವ ರೀತಿಯ ಆಟಗಾರ ಎಂದು ತಿಳಿದುಕೊಂಡು ಆಯ್ಕೆದಾರರು ತಲೆನೋವು ಕಡಿಮೆಯಾಗುವಂತೆ ನೋಡಿಕೊಳ್ಳುತ್ತಾರೆ," ಎಂದು ಮಂಜ್ರೇಕರ್ ತಿಳಿಸಿದರು.

ಐರ್ಲೆಂಡ್ ಸರಣಿಗೆ ಮುನ್ನ ಮಾತನಾಡಿದ ರಾಹುಲ್ ದ್ರಾವಿಡ್, ವಿಶ್ವಕಪ್‌ಗೆ ಮುನ್ನ ಸ್ವಲ್ಪ ಸ್ಪಷ್ಟತೆ ಪಡೆಯಲು ಶೀಘ್ರದಲ್ಲೇ ತಂಡವನ್ನು ಅಂತಿಮಗೊಳಿಸಲು ಬಯಸುವುದಾಗಿ ಹೇಳಿದ್ದರು. ಭಾರತವು ಐರ್ಲೆಂಡ್ ಮತ್ತು ಇಂಗ್ಲೆಂಡ್ ವಿರುದ್ಧ ಒಟ್ಟು ಐದು ಟಿ20 ಪಂದ್ಯಗಳನ್ನು ಆಡಲಿದೆ. ಈ ವೇಳೆ ರಾಹುಲ್ ದ್ರಾವಿಡ್ ಅಂತಿಮ 15-20 ಸದಸ್ಯರನ್ನು ಲೆಕ್ಕಾಚಾರ ಮಾಡಲು ಪ್ರಾರಂಭಿಸುತ್ತಾರೆ ಎಂದು ನಿರೀಕ್ಷಿಸಲಾಗಿದೆ.

ಐರ್ಲೆಂಡ್ ವಿರುದ್ಧದ ಸರಣಿಗೆ ಸಂಭಾವ್ಯ ಭಾರತ ತಂಡ

ಐರ್ಲೆಂಡ್ ವಿರುದ್ಧದ ಸರಣಿಗೆ ಸಂಭಾವ್ಯ ಭಾರತ ತಂಡ

ಭಾರತ ತಂಡ: ಹಾರ್ದಿಕ್ ಪಾಂಡ್ಯ (ನಾಯಕ), ಭುವನೇಶ್ವರ್ ಕುಮಾರ್ (ಉಪ ನಾಯಕ), ರುತುರಾಜ್ ಗಾಯಕ್ವಾಡ್, ಇಶಾನ್ ಕಿಶನ್, ಸೂರ್ಯಕುಮಾರ್ ಯಾದವ್, ಸಂಜು ಸ್ಯಾಮ್ಸನ್, ರಾಹುಲ್ ತ್ರಿಪಾಠಿ, ದೀಪಕ್ ಹೂಡಾ, ವೆಂಕಟೇಶ್ ಅಯ್ಯರ್, ಅಕ್ಷರ್ ಪಟೇಲ್, ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್), ಅವೇಶ್ ಖಾನ್, ಹರ್ಷಲ್ ಪಟೇಲ್ ಉಮ್ರಾನ್ ಮಲಿಕ್, ಅರ್ಶ್ದೀಪ್ ಸಿಂಗ್, ಯುಜ್ವೇಂದ್ರ ಚಹಾಲ್, ರವಿ ಬಿಷ್ಣೋಯ್.

Story first published: Saturday, June 25, 2022, 11:30 [IST]
Other articles published on Jun 25, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X