ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ರಾಹುಲ್ ದ್ರಾವಿಡ್ ಕೋಚಿಂಗ್‌ನಲ್ಲಿ ಆಡುವುದು ವಿಭಿನ್ನ ಸಂಭ್ರಮ: ಪೃಥ್ವಿ ಶಾ

Team india cricketer Prithvi shaw excited about Rahul Dravid coaching
ದ್ರಾವಿಡ್ ಸರ್ ಜೊತೆ ಸಿಕ್ಕಿರುವ ಅವಕಾಶವನ್ನು ಬಾಚಿಕೊಳ್ತೀನಿ ಎಂದ ಪೃಥ್ವಿ ಶಾ | Oneindia Kannada

ಟೀಮ್ ಇಂಡಿಯಾದ ಯುವ ಆಟಗಾರ ಪೃಥ್ವಿ ಶಾ ರಾಹುಲ್ ದ್ರಾವಿಡ್ ಅವರ ಕೋಚಿಂಗ್‌ನ ಅನುಭವವನ್ನು ಹಂಚಿಕೊಂಡಿದ್ದಾರೆ. ಆಡುವ ಪರಿಸ್ಥಿತಿಯಲ್ಲಿ ಅವರ ಅನುಭವ ಶ್ರೇಷ್ಟಮಟ್ಟದ್ದಾಗಿದೆ. ಅವರ ಕೋಚಿಂಗ್ ಅನುಭವ ನಿಜಕ್ಕೂ ಅದ್ಭುತ ಎಂದು ಪೃಥ್ವಿ ಶಾ ಬಣ್ಣಿಸಿದ್ದಾರೆ.

ರಾಹುಲ್ ದ್ರಾವಿಡ್ ಶ್ರೀಲಂಕಾ ವಿರುದ್ಧದ ಆರು ಸೀಮಿತ ಓವರ್‌ಗಳ ಸರಣಿಗೆ ಕೋಚ್ ಆಗಿ ಭಾರತೀಯ ತಂಡಕ್ಕೆ ಮಾರ್ಗದರ್ಶನವನ್ನು ನೀಡಲಿದ್ದಾರೆ. ಜುಲೈ 13ರಂದು ಕೊಲಂಬೋದ ಆರ್ ಪ್ರೇಮದಾಸ ಸ್ಟೇಡಿಯಂನಲ್ಲಿ ಮೂರು ಪಂದ್ಯಗಳ ಏಕದಿನ ಸರಣಿಗೆ ಚಾಲನೆ ದೊರೆಯಲಿದೆ. ಮೂರು ಏಕದಿನ ಪಂದ್ಯಗಳ ನಂತರ ಧವನ್ ನೇತೃತ್ವದ ತಂಡ ಏಕದಿನ ಸರಣಿಯಲ್ಲಿ ಭಾಗಿಯಾಗಲಿದೆ. ಚುಟುಕು ಸರಣಿ ಜುಲೈ 21ರಿಂದ ಆರಂಭವಾಗಲಿದೆ.

ದ್ವಿತೀಯ ದರ್ಜೆಯ ತಂಡ ಎಂದ ಅರ್ಜುನ್ ರಣತುಂಗಾಗೆ ಆಕಾಶ್ ಚೋಪ್ರ ತಿರುಗೇಟುದ್ವಿತೀಯ ದರ್ಜೆಯ ತಂಡ ಎಂದ ಅರ್ಜುನ್ ರಣತುಂಗಾಗೆ ಆಕಾಶ್ ಚೋಪ್ರ ತಿರುಗೇಟು

"ರಾಹುಲ್ ದ್ರಾವಿಡ್ ಅವರ ಮಾರ್ಗದರ್ಶನದಲ್ಲಿ ಆಡುವುದೆಮದರೆ ಅದೊಂದು ವಿಭಿನ್ನವಾದ ಸಂಭ್ರಮ. ಅವರು ನಮಗೆ ಅಂಡರ್ 19 ತಂಡದ ಕೋಚ್ ಆಗಿದ್ದರು. ಅವರು ಮಾತನಾಡುವ ರೀತಿ, ಅವರು ಕೋಚಿಂಗ್ ಅನುಭವವನ್ನು ಹಂಚಿಕೊಳ್ಳುವ ರೀತಿ ಅದೊಂದು ಅದ್ಭುತವಾಗಿದೆ. ಅವರು ಆಟದ ಬಗ್ಗೆ ಯಾವಾಗ ಮಾತನಾಡುತ್ತಾರೋ ಅವರ ಅನುಭವ ಎಷ್ಟಿದೆ ಎಂಬುದು ಅರಿವಾಗುತ್ತದೆ. ಕ್ರಿಕೆಟ್‌ನ ಪ್ರತಿಯೊಂದು ವಿಚಾರಗಳು ಕೂಡ ಅವರಿಗೆ ತಿಳಿದಿದೆ" ಎಂದು ಪೃಥ್ವಿ ಶಾ ಹೇಳಿದ್ದಾರೆ.

"ರಾಹುಲ್ ದ್ರಾವಿಡ್ ಸರ್ ಇದ್ದಾರೆಂದರೆ ಡ್ರೆಸ್ಸಿಂಗ್ ರೂಮ್‌ನಲ್ಲಿ ಶಿಸ್ತು ಇರುತ್ತದೆ. ರಾಹುಲ್ ಸರ್ ಅವರೊಂದಿಗೆ ಅಭ್ಯಾಸವನ್ನು ಮಾಡಲು ನಾನು ಕಾತುರನಾಗಿದ್ದೇನೆ. ಯಾಕೆಂದರೆ ಅವರೊಂದೊಗೆ ಗಂಟೆಗಳ ಕಾಲ ಮಾತನಾಡುವುದನ್ನು ನಾನು ಇಷ್ಟ ಪಡುತ್ತೇನೆ. ಈ ಪ್ರವಾಸದಲ್ಲಿ ಸಿಕ್ಕ ಅವಕಾಶವನ್ನು ನಾನು ಬಾಚಿಕೊಳ್ಳುತ್ತೇನೆ. ಭಾರತೀಯ ತಂಡಕ್ಕೆ ಮರಳುವುದನ್ನು ನಾನು ಎದುರುನೋಡುತ್ತಿದ್ದೇನೆ" ಎಂದು ಪೃಥ್ವಿ ಶಾ ಇಂಡಿಯನ್‌ ಎಕ್ಸ್‌ಪ್ರೆಸ್‌ಗೆ ನೀಡಿದ ಪ್ರತಿಕ್ರಿಯೆಯಲ್ಲಿ ಹೇಳಿದ್ದಾರೆ.

ಈ ಮಧ್ಯೆ ಇಂಗ್ಲೆಂಡ್‌ನಲ್ಲಿ ಟೆಸ್ಟ್ ಸರಣಿಯನ್ನು ಆಡಲು ತೆರಳಿರುವ ಶುಬ್ಮನ್ ಗಿಲ್ ಗಾಯಗೊಂಡಿರುವ ಹಿನ್ನೆಲೆಯಲ್ಲಿ ಪೃಥ್ವಿ ಶಾ ಅವರನ್ನು ಇಂಗ್ಲೆಂಡ್‌ಗೆ ಕರೆಸಿಕೊಳ್ಳಲಾಗುತ್ತದೆ ಎಂಬ ಮಾತುಗಳು ಕೇಳಿಬರುತ್ತಿವೆ. ಈ ವಿಚಾರವಾಗಿ ಸಾಕಷ್ಟು ಟೀಕೆಗಳು ವ್ಯಕ್ತವಾಗಿದೆ. ಆದರೆ ಬಿಸಿಸಿಐ ಅಥವಾ ಟೀಮ್ ಇಂಡಿಯಾ ಮ್ಯಾನೇಜ್‌ಮೆಂಟ್ ಕಡೆಯಿಂದ ಯಾವುದೇ ಅಧಿಕೃತ ಹೇಳಿಕೆಗಳು ಬಂದಿಲ್ಲ.

Story first published: Monday, July 5, 2021, 16:48 [IST]
Other articles published on Jul 5, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X