ಶ್ರೀಲಂಕಾ ವಿರುದ್ಧದ ಟಿ20 ಸರಣಿಗೆ ರೋಹಿತ್ ಶರ್ಮ ನಾಯಕ

Posted By:

ಬೆಂಗಳೂರು, ಡಿಸೆಂಬರ್ 04: ಪ್ರವಾಸಿ ಶ್ರೀಲಂಕಾ ವಿರುದ್ಧದ ಮೂರು ಪಂದ್ಯಗಳ ಟಿ20ಐ ಸರಣಿಗೆ ಭಾರತ ತಂಡವನ್ನು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಸೋಮವಾರ ಸಂಜೆ ಪ್ರಕಟಿಸಿದೆ.

ನಿರೀಕ್ಷೆಯಂತೆ ಏಕದಿನ ಸರಣಿ ಆಡುವ ತಂಡದ ಜತೆಗೆ ಟಿ20ಐ ತಂಡಕ್ಕೂ ರೋಹಿತ್ ಶರ್ಮ ಅವರು ನಾಯಕರಾಗಿ ಆಯ್ಕೆಯಾಗಿದ್ದಾರೆ. ನಾಯಕ ವಿರಾಟ್ ಕೊಹ್ಲಿಗೆ ವಿಶ್ರಾಂತಿ ನೀಡಲಾಗಿದೆ.

ಲಂಕಾ ವಿರುದ್ಧ ಏಕದಿನ ಸರಣಿಗೆ ರೋಹಿತ್ ನಾಯಕ, ಕೊಹ್ಲಿಗೆ ರೆಸ್ಟ್

ಡಿಸೆಂಬರ್ 10ರಿಂದ ಏಕದಿನ ಸರಣಿ ಆರಂಭವಾಗಲಿದೆ. ಮೂರು ಟಿ20 ಪಂದ್ಯಗಳ ಸರಣಿ ಡಿಸೆಂಬರ್ 20ರಂದು ಕಟಕ್ ನಲ್ಲಿ ಆರಂಭವಾಗಲಿದೆ.

Team India for Paytm T20Is against Sri Lanka announced

ಟಿ20 ಅಂತಾರಾಷ್ಟ್ರೀಯ ಪಂದ್ಯಗಳು
ಮೊದಲ ಟಿ20ಐ: ಡಿಸೆಂಬರ್ 20 (ಕಟಕ್) - ಬುಧವಾರ
ಎರಡನೇ ಟಿ20ಐ: ಡಿಸೆಂಬರ್ 22 (ಇಂದೋರ್) - ಶುಕ್ರವಾರ
ಮೂರನೇ ಟಿ20ಐ: ಡಿಸೆಂಬರ್ 24 (ಮುಂಬೈ) - ಭಾನುವಾರ

ತಂಡ ಇಂತಿದೆ: ರೋಹಿತ್ ಶರ್ಮ(ನಾಯಕ), ಕೆಎಲ್ ರಾಹುಲ್, ಶ್ರೇಯಸ್ ಅಯ್ಯರ್, ಮನೀಶ್ ಪಾಂಡೆ, ದಿನೇಶ್ ಕಾರ್ತಿಕ್, ಎಂಎಸ್ ಧೋನಿ, ಹಾರ್ದಿಕ್ ಪಾಂಡ್ಯ, ವಾಷಿಂಗ್ಟನ್ ಸುಂದರ್, ಯಜುವೇಂದ್ರ ಚಾಹಲ್, ಕುಲದೀಪ್ ಯಾದವ್, ದೀಪಕ್ ಹೂಡಾ, ಜಸ್ ಪ್ರೀತ್ ಬೂಮ್ರಾ, ಮೊಹಮ್ಮದ್ ಸಾಜ್, ಬಸಿಲ್ ಥಂಪಿ, ಜಯದೇವ್ ಉನದ್ಕತ್.

Story first published: Monday, December 4, 2017, 20:44 [IST]
Other articles published on Dec 4, 2017

myKhel ನಿಂದ ತಾಜಾ ಸುದ್ದಿಗಳನ್ನು ಪಡೆಯಿರಿ