ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ವಿಶ್ವಕಪ್‌ ಪ್ರವಾಸಕ್ಕೆ ಬಾಳೆಹಣ್ಣು, ಮಡದಿಯರು ಬೇಕೆಂದ ಟೀಮ್ ಇಂಡಿಯಾ!

Team India wants bananas, wives on tour during 2019 World Cup

ನವದೆಹಲಿ, ಅಕ್ಟೋಬರ್ 30: ಮುಂಬರಲಿರುವ ವಿಶ್ವಕಪ್ ಕ್ರಿಕೆಟ್ ಗಾಗಿ ಇಂಗ್ಲೆಂಡ್ ಗೆ ಭಾರತ ಕ್ರಿಕೆಟ್ ತಂಡ ಪ್ರವಾಸ ಕೈಗೊಳ್ಳಲಿದೆ. ಈ ವೇಳೆ ದೊಡ್ಡ ಪ್ರಮಾಣದಲ್ಲಿ ಬಾಳೆ ಹಣ್ಣುಗಳು ಬೇಕು ಎಂದು ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮತ್ತು ತಂಡ ನಿರ್ವಹಣಾ ಸಮಿತಿ ಆಯೋಜಕರಲ್ಲಿ ವಿನಂತಿಸಿಕೊಂಡಿರುವುದಾಗಿ ವರದಿಯಾಗಿದೆ.

ಭಾರತ Vs ವೆಸ್ಟ್ ಇಂಡೀಸ್: ಹಲವು ಹೊಸ ದಾಖಲೆಗಳನ್ನು ಬರೆದ ಭಾರತಭಾರತ Vs ವೆಸ್ಟ್ ಇಂಡೀಸ್: ಹಲವು ಹೊಸ ದಾಖಲೆಗಳನ್ನು ಬರೆದ ಭಾರತ

ಅಷ್ಟೇ ಅಲ್ಲ, ಈ ಪ್ರತಿಷ್ಠಿತ ಟೂರ್ನಿಗಾಗಿ ತೆರಳುವಾಗಿ ರಿಸರ್ವ್ಡ್ ಟ್ರೇನ್ ಕೋಚ್ ಮತ್ತು ಆಟಗಾರರ ಪತ್ನಿಯರು ಜೊತೆಗಿರಲು ಅನುಮತಿಯನ್ನೂ ನೀಡಬೇಕೆಂದು ಟೀಮ್ ಇಂಡಿಯಾ ವಿನಂತಿಸಿಕೊಂಡಿರುವುದಾಗಿ ಇಂಡಿಯನ್ ಎಕ್ಸ್ ಪ್ರೆಸ್ ವರದಿ ಮಾಡಿದೆ.

ಮಿಂಚಿನ ವೇಗದಲ್ಲಿ ಸ್ಟಂಪಿಂಗ್, ಧೋನಿಗೆ ಸರಿಸಾಟಿ ಯಾರು ಇಲ್ಲ!ಮಿಂಚಿನ ವೇಗದಲ್ಲಿ ಸ್ಟಂಪಿಂಗ್, ಧೋನಿಗೆ ಸರಿಸಾಟಿ ಯಾರು ಇಲ್ಲ!

ಅಂತಾರಾಷ್ಟ್ರೀಯ ಪ್ರವಾಸ ಪಂದ್ಯಗಳ ಪೂರ್ಣಾವಧಿಯಲ್ಲಿ ಆಟಗಾರರ ಪತ್ನಿಯರು ಜೊತೆಯಲ್ಲಿರಬೇಕೋ ಬೇಡವೋ ಎಂಬ ಕುರಿತ ಗೊಂದಲ ಇನ್ನೂ ಪೂರ್ಣ ಬಗೆಹರಿದಿಲ್ಲ. ಈ ನಡುವೆ ಪತ್ನಿಯರು ವಿಶ್ವಕಪ್ ಪ್ರವಾಸದ ವೇಳೆ ಜೊತೆಗಿರಲು ಅವಕಾಶ ಮಾಡಿಕೊಡಬೇಕು ಎಂಬ ಬೇಡಿಕೆಗೆ ಕ್ರಿಕೆಟ್ ತಂಡ ಒತ್ತು ನೀಡಿದೆ.

ವಿಂಡೀಸ್ ಟೆಸ್ಟ್ ವೇಳೆ ಸಭೆ

ವಿಂಡೀಸ್ ಟೆಸ್ಟ್ ವೇಳೆ ಸಭೆ

ಹೈದರಾಬಾದ್ ನಲ್ಲಿ ನಡೆದಿದ್ದ ವೆಸ್ಟ್ ಇಂಡೀಸ್ ವಿರುದ್ಧ ಎರಡನೇ ಟೆಸ್ಟ್ ಗೂ ಮುನ್ನ, 2019ರಲ್ಲ್ ಇಂಗ್ಲೆಂಡ್ ನಲ್ಲಿ ನಡೆಯಲಿರುವ ವಿಶ್ವಕಪ್ ಪ್ರವಾಸ ಸಂದರ್ಭ ತಂಡಕ್ಕೆ ಏನೇನು ಅಗತ್ಯವಿದೆ ಎಂಬುದಕ್ಕೆ ಸಂಬಂಧಿಸಿ ಕರೆಯಲಾದ ಸಭೆಯ ವೇಳೆ ಇಂಥೆಲ್ಲಾ ಬೇಡಿಕೆಗಳು ತಂಡದಿಂದ ಕೇಳಿ ಬಂದಿದ್ದವು.

ನಿರಾಕರಿಸಿದ ಇಂಗ್ಲೆಂಡ್

ನಿರಾಕರಿಸಿದ ಇಂಗ್ಲೆಂಡ್

'ಪ್ರವಾಸದ ವೇಳೆ ಆಯಾ ತಂಡಗಳು ಬಯಸುವ ಹಣ್ಣುಗಳನ್ನು ಒದಗಿಸಲು ಇಂಗ್ಲೆಂಡ್ ಕ್ರಿಕೆಟ್ ಬೋರ್ಡ್ ನಿರಾಕರಿಸಿದೆ. ಆದರೆ ಆಟಗಾರರ ವಿನಂತಿಯನ್ನು ಪರಿಗಣಿಸಿರುವ ಕಮಿಟಿ ಆಫ್ ಅಡ್ಮಿನಿಸ್ಟ್ರೇಟರ್ (ಸಿಒಎ), ಬಿಸಿಸಿಐ ಖರ್ಚಿನಲ್ಲಿ ಬಾಳೆಹಣ್ಣುಗಳನ್ನು ಖರೀದಿಸುವಂತೆ ಆಟಗಾರರು ಟೀಮ್ ಮ್ಯಾನೇಜರ್ ನಲ್ಲಿ ಹೇಳುವಂತೆ ತಿಳಿಸಿದೆ' ಎಂದು ಎಂದು ಮೂಲವೊಂದು ಹೇಳಿದೆ.

ಜಿಮ್ ಸಹಿತ ಹೋಟೆಲ್

ಜಿಮ್ ಸಹಿತ ಹೋಟೆಲ್

'ಪ್ರವಾಸದ ವೇಳೆ ಜಿಮ್ ಸಹಿತ ಹೋಟೆಲ್ ಗಳನ್ನು ಬುಕ್ ಮಾಡಬೇಕು. ಆಟಗಾರರ ಮಡದಿಯರು ಜೊತೆಗಿರುವಂತೆ ಅವಕಾಶ ಮಾಡಿಕೊಡಬೇಕು; ಇದಕ್ಕೆ ಸಂಬಂಧಿಸಿ ಚರ್ಚೆಯೂ ನಡೆಯಬೇಕು ಎಂಬ ಬೇಡಿಕೆಯೂ ಆಟಗಾರರಿಂದ ಕೇಳಿ ಬಂದಿದೆ ಎನ್ನಲಾಗಿದೆ.

ರಿವ್ಯೂ ಮೀಟಿಂಗ್

ರಿವ್ಯೂ ಮೀಟಿಂಗ್

ವಿಶ್ವಕಪ್ ಪ್ರವಾಸದ ಬಗ್ಗೆ ನಡೆದ ಈ ರಿವ್ಯೂ ಮೀಟಿಂಗ್ ನಲ್ಲಿ ನಾಯಕ ಕೊಹ್ಲಿ, ಟೆಸ್ಟ್ ಉಪನಾಯಕ ಅಜಿಂಕ್ಯ ರಹಾನೆ, ಏಕದಿನ ಉಪನಾಯಕ ರೋಹಿತ್ ಶರ್ಮಾ, ಕೋಚ್ ರವಿಶಾಸ್ತ್ರಿ, ಅಯ್ಕೆ ಸಮಿತಿಯ ಅಧ್ಯಕ್ಷ ಎಂಎಸ್‌ಕೆ ಪ್ರಸಾದ್ ಇದ್ದರು ಎಂದು ತಿಳಿದುಬಂದಿದೆ.

ಇಂಗ್ಲೆಂಡ್-ದಕ್ಷಿಣ ಆಫ್ರಿಕಾ ಮುಖಾಮುಖಿ

ಇಂಗ್ಲೆಂಡ್-ದಕ್ಷಿಣ ಆಫ್ರಿಕಾ ಮುಖಾಮುಖಿ

ಐಸಿಸಿ ವರ್ಲ್ಡ್ ಕಪ್ ಕ್ರಿಕೆಟ್ 2019ರ ಮೇ 30ರಂದು ಆರಂಭಗೊಂಡು ಜುಲೈ 14ಕ್ಕೆ ಕೊನೆಗೊಳ್ಳಲಿದೆ. ಆರಂಭಿಕ ಪಂದ್ಯ ಲಂಡನ್ ನ ಕೆನ್ನಿಂಗ್ಟನ್ ಓವಲ್ ನಲ್ಲಿ ನಡೆಯಲಿದ್ದು, ಇಂಗ್ಲೆಂಡ್ ಮತ್ತು ದಕ್ಷಿಣ ಆಫ್ರಿಕಾ ತಂಡಗಳು ಕಾದಾಡಲಿವೆ. ಪಂದ್ಯ 3.00pmಗೆ ಆರಂಭಗೊಳ್ಳಲಿದೆ.

Story first published: Tuesday, October 30, 2018, 17:05 [IST]
Other articles published on Oct 30, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X