ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಭಾರತ-ದಕ್ಷಿಣ ಆಫ್ರಿಕಾ ಮೊದಲ ಟೆಸ್ಟ್ ಪಂದ್ಯ ಇಂದು

By Manjunatha
Test match between India-Africa starting today

ಕೇಪ್‌ಟೌನ್, ಜನವರಿ 05: ಮಹಾತ್ಮಾ ಗಾಂಧಿ ಮತ್ತು ನೆಲ್ಸನ ಮಂಡೇಲಾ ಸ್ಮರಣಾರ್ಥ ನಡೆಯುತ್ತಿರುವ ಫ್ರೀಡಂ ಕ್ರಿಕೆಟ್ ಸರಣಿಯ ಮೊದಲ ಟೆಸ್ಟ್ ಪಂದ್ಯ ದಕ್ಷಿಣ ಆಫ್ರಿಕಾದ ಕೇಪ್‌ಟೌನ್‌ನಲ್ಲಿ ಇಂದು ಮಧ್ಯಾಹ್ನ 2 ಗಂಟೆಗೆ ಪ್ರಾರಂಭವಾಗಲಿದೆ.

ತವರು ನೆಲದಲ್ಲಿ ಸತತವಾಗಿ ಜಯಗಳಿಸಿರುವ ಭಾರತ ಕ್ರಿಕೆಟ್ ತಂಡ ಬಹಳಾ ದಿನಗಳ ನಂತರ ವಿದೇಶ ನೆಲದಲ್ಲಿ ಟೆಸ್ಟ್ ಆಡುತ್ತಿದ್ದು, ಇದು ಸವಾಲಿನ ಸರಣಿ ಆಗಿರಲಿದೆ. ಆಫ್ರಿಕಾ ತಂಡದಿಂದ ಗಾಯದ ಸಮಸ್ಯೆಯಿಂದ ಹೊರಗುಳಿದಿದ್ದ ಎ.ಬಿ ಡಿವಿಲಿಯರ್ಸ್ ಮತ್ತು ವೇಗಿ ಡೇಲ್ ಸ್ಟೇನ್ ಅವರು ತಂಡಕ್ಕೆ ಮರು ಪ್ರೇವಿಶಿಸಿರುವುದು ಭಾರತದ ತಲೆನೋವು ಹೆಚ್ಚುವಂತೆ ಮಾಡಿದೆ.

ಟೆಸ್ಟ್ ತಂಡದ ನಾಯಕನಾಗಿ ವಿರಾಟ್ ಕೋಹ್ಲಿ ಅವರಿಗೆ ಇದು ಮೊದಲ ವಿದೇಶಿ ನೆಲದ ಟೆಸ್ಟ್ ಸರಣಿ ಆಗಲಿದೆ. ಇತ್ತೀಚೆಗಷ್ಟೆ ಗೃಹಸ್ಥಾಶ್ರಮಕ್ಕೆ ಕಾಲಿಟ್ಟಿರುವ ಅವರಿಗೆ 'ಲೇಡಿ ಲಕ್' ಜೊತೆ ಆಗುವುದೋ ಕಾದು ನೋಡಬೇಕಿದೆ.

ಮೂರು ಟೆಸ್ಟ್ ಪಂದ್ಯದ ಈ ಸರಣಿಯನ್ನು ದಕ್ಷಿಣ ಆಫ್ರಿಕಾ ಗೆಲ್ಲಲೇಬೇಕಾದ ಒತ್ತತಡದಲ್ಲಿದೆ, ಅದರ ಐಸಿಸಿ ರ್ಯಾಂಕ್ ಉತ್ತಮಪಡಿಸಿಕೊಳ್ಳಲು ಟೆಸ್ಟ್ ಸರಣಿ ಗೆಲವು ಅನಿವಾರ್ಯವಾಗಿದೆ. ಆದರೆ ಭಾರತ ಈಗಾಗಲೇ ನಂ1 ಪಟ್ಟದಲ್ಲಿದ್ದು, ಸರಣಿ ಸೋತರೂ ನಂ1 ಪಟ್ಟ ಹಾಗೆಯೇ ಮುಂದುವರೆಯಲಿದೆ. ಆದರೆ ಸರಣಿ ಸೋಲು ನಾಯಕ ಕೋಹ್ಲಿ ಹಾಗೂ ಹಿರಿಯ ಆಟಗಾರರ ಸ್ಥಾನದ ಮೇಲೆ ವ್ಯತಿರಿಕಕ್ತ ಪರಿಣಾಮ ಬೀರುವ ಸಾಧ್ಯತೆ ಇದೆ.

25 ವರ್ಷದಿಂದ ಗೆದ್ದಿಲ್ಲ
ಭಾರತವು ದಕ್ಷಿಣ ಆಫ್ರಿಕಾದಲ್ಲಿ 25 ವರ್ಷದಿಂದ ಒಂದೂ ಟೆಸ್ಟ್ ಸರಣಿ ಗೆದ್ದಿಲ್ಲ, ಹಾಗಾಗಿ ಈ ಬಾರಿ ಗೆದ್ದು ಇತಿಹಾಸದ ಕರಾಳ ನೆನಪನ್ನು ಕೊನೆಗಾಣಿಸುವ ಉತ್ಸಾಹದಲ್ಲಿ ಕೋಹ್ಲಿ ಪಡೆ ಇದೆ. ವೇಗದ ಬೌಲರ್‌ಗಳಿಗೆ ಹೆಚ್ಚು ನೆರವು ನೀಡುವ ದಕ್ಷಿಣ ಆಫ್ರಿಕಾ ಪಿಚ್‌ಗಳಲ್ಲಿ ಭಾರತ ಬ್ಯಾಟ್ಸ್‌ಮನ್‌ಗಳು ಯಾವ ರೀತಿಯ ಪ್ರದರ್ಶನ ನೀಡುತ್ತಾರೆ ಎಂಬುದು ಕುತೂಹಲದ ವಿಷಯ.

Story first published: Friday, January 5, 2018, 13:13 [IST]
Other articles published on Jan 5, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X