'ಅತಿ ಕೆಟ್ಟ ಪದಗಳಿಂದ ಈ ತಂಡದ ಎಲ್ಲಾ ಆಟಗಾರರು ನನ್ನನ್ನು ನಿಂದಿಸಿದ್ದರು'; ಕಹಿ ಘಟನೆ ನೆನೆದ ಸೆಹ್ವಾಗ್

ಸದ್ಯ ಕ್ರಿಕೆಟ್ ಜಗತ್ತಿನಲ್ಲಿ ಅತಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿರುವ ವಿಷಯವೆಂದರೆ ಅದು ಭಾರತ ಮತ್ತು ಇಂಗ್ಲೆಂಡ್ ನಡುವೆ ನಡೆಯುತ್ತಿರುವ 5 ಪಂದ್ಯಗಳ ಟೆಸ್ಟ್ ಸರಣಿ. ಈ ಟೆಸ್ಟ್ ಸರಣಿಯ ಕುರಿತು ತಮ್ಮ ಕೆಲವೊಂದಷ್ಟು ಅಭಿಪ್ರಾಯಗಳನ್ನು ಈ ಹಿಂದೆ ವ್ಯಕ್ತಪಡಿಸಿದ್ದ ವಿರೇಂದ್ರ ಸೆಹ್ವಾಗ್ ಇದೀಗ ಕಹಿ ಘಟನೆಯನ್ನು ಮೆಲುಕು ಹಾಕುವುದರ ಮೂಲಕ ದೊಡ್ಡ ಮಟ್ಟದಲ್ಲಿ ಸುದ್ದಿ ಮಾಡುತ್ತಿದ್ದಾರೆ.

ಕಳಪೆ ಪ್ರದರ್ಶನ ನೀಡಿದರೂ ಆ ಒಬ್ಬನಿಗೆ ತಂಡದಲ್ಲಿ ಸ್ಥಾನ; ನಾಲ್ಕನೇ ಟೆಸ್ಟ್‌ಗೆ ವಿವಿಎಸ್ ಲಕ್ಷ್ಮಣ್ ಸಲಹೆಕಳಪೆ ಪ್ರದರ್ಶನ ನೀಡಿದರೂ ಆ ಒಬ್ಬನಿಗೆ ತಂಡದಲ್ಲಿ ಸ್ಥಾನ; ನಾಲ್ಕನೇ ಟೆಸ್ಟ್‌ಗೆ ವಿವಿಎಸ್ ಲಕ್ಷ್ಮಣ್ ಸಲಹೆ

ಹೌದು, ಸದಾ ತಮಗನ್ನಿಸಿದ್ದನ್ನು ಸಂದರ್ಶನಗಳಲ್ಲಿ ಯಾವುದೇ ರೀತಿಯ ಮುಚ್ಚುಮರೆಯಿಲ್ಲದೆ ನೇರವಾಗಿ ಹೇಳಿಕೆ ನೀಡುವುದರ ಮೂಲಕ ಆಗಾಗ ಚರ್ಚೆಗೀಡಾಗುವ ವಿರೇಂದ್ರ ಸೆಹ್ವಾಗ್ ಇದೀಗ ಮತ್ತೊಂದು ನೇರವಾದ ಹೇಳಿಕೆಯನ್ನು ನೀಡುವುದರ ಮೂಲಕ ಸಾಕಷ್ಟು ಚರ್ಚೆಗಳು ಸೃಷ್ಟಿಯಾಗಲು ಕಾರಣಕರ್ತರಾಗಿದ್ದಾರೆ. ತಾವು ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ ಮೊದಲನೇ ಪಂದ್ಯದಲ್ಲಿಯೇ ಎದುರಿಸಿದ ನಿಂದನೆಗಳು ಮತ್ತು ಅವಮಾನಗಳನ್ನು ನೆನಪಿಸಿಕೊಂಡಿರುವ ವೀರೇಂದ್ರ ಸೆಹ್ವಾಗ್ ಅವುಗಳ ಕುರಿತು ಮಾತನಾಡಿದ್ದು ಇದೀಗ ಎಲ್ಲೆಡೆ ಸಾಕಷ್ಟು ಚರ್ಚೆಗಳಿಗೆ ಕಾರಣವಾಗಿದೆ.

ಈತನನ್ನು ಓವಲ್ ಟೆಸ್ಟ್‌ನಿಂದ ಕೈಬಿಟ್ಟರೆ ಭಾರತಕ್ಕೆ ಗೆಲುವು ಖಚಿತ ಎಂದು ಭವಿಷ್ಯ ನುಡಿದ ಕನೇರಿಯಾಈತನನ್ನು ಓವಲ್ ಟೆಸ್ಟ್‌ನಿಂದ ಕೈಬಿಟ್ಟರೆ ಭಾರತಕ್ಕೆ ಗೆಲುವು ಖಚಿತ ಎಂದು ಭವಿಷ್ಯ ನುಡಿದ ಕನೇರಿಯಾ

ತಾವು ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ ಮೊದಲನೇ ಪಂದ್ಯದಲ್ಲಿ ಎದುರಾಳಿ ತಂಡದ ಪ್ರಮುಖ ಆಟಗಾರರು ಸೇರಿದಂತೆ ತಂಡದ ಎಲ್ಲಾ ಆಟಗಾರರು ತಮ್ಮನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದನ್ನು ನೆನಪಿಸಿಕೊಂಡಿರುವ ವಿರೇಂದ್ರ ಸೆಹ್ವಾಗ್ ಅವರು ಬಳಸಿದ್ದ ಕೆಲ ಕೆಟ್ಟ ಪದಗಳ ಅರ್ಥವೇ ನನಗೆ ತಿಳಿದಿರಲಿಲ್ಲ ಎಂದು ಹೇಳಿಕೆ ನೀಡುವುದರ ಮೂಲಕ ಪದಾರ್ಪಣೆ ಮಾಡಿದ ಮೊದಲನೇ ಪಂದ್ಯದಲ್ಲಿಯೇ 25000 ಪ್ರೇಕ್ಷಕರ ನಡುವೆ ತಾವು ಎದುರಿಸಿದ ಆ ಕೆಟ್ಟ ಅನುಭವವನ್ನು ಈ ಕೆಳಕಂಡಂತೆ ಹಂಚಿಕೊಂಡಿದ್ದಾರೆ.

ಇಡೀ ತಂಡವೇ ಸೆಹ್ವಾಗ್ ನಿಂದನೆ ಮಾಡಿತ್ತು!

ಇಡೀ ತಂಡವೇ ಸೆಹ್ವಾಗ್ ನಿಂದನೆ ಮಾಡಿತ್ತು!

ಸೆಹ್ವಾಗ್ ಎದುರಾಳಿ ತಂಡದ ಎಲ್ಲ ಆಟಗಾರರು ತನ್ನನ್ನು ಮೈದಾನದಲ್ಲಿಯೇ ನಿಂದಿಸಿದ್ದರು ಎಂದು ಹೇಳಿಕೆ ನೀಡಿ ಆರೋಪ ಮಾಡಿರುವುದು ಭಾರತ ತಂಡದ ಬದ್ಧ ವೈರಿ ಪಾಕಿಸ್ತಾನದ ವಿರುದ್ಧ. ಹೌದು, 1999ರಲ್ಲಿ ಭಾರತ ಮತ್ತು ಪಾಕಿಸ್ತಾನ ತಂಡಗಳ ನಡುವೆ ಮೊಹಾಲಿ ಕ್ರೀಡಾಂಗಣದಲ್ಲಿ ನಡೆಯುತ್ತಿದ್ದ ಪೆಪ್ಸಿ ಏಕದಿನ ಸರಣಿಯ ಆರನೇ ಪಂದ್ಯದಲ್ಲಿ ವಿರೇಂದ್ರ ಸೆಹ್ವಾಗ್ ಅಂತಾರಾಷ್ಟ್ರೀಯ ಕ್ರಿಕೆಟ್‍ಗೆ ಪಾದಾರ್ಪಣೆಯನ್ನು ಮಾಡಿದರು. ಈ ಪಂದ್ಯದಲ್ಲಿ ಏಳನೇ ಬ್ಯಾಟ್ಸ್‌ಮನ್‌ ಆಗಿ ಕಣಕ್ಕಿಳಿದ ವಿರೇಂದ್ರ ಸೆಹ್ವಾಗ್ ವಿರುದ್ಧ ಇಡೀ ಪಾಕಿಸ್ತಾನ ತಂಡವೇ ಕೆಟ್ಟ ಪದಗಳನ್ನು ಉಪಯೋಗಿಸಿ ನಿಂದನೆ ಮಾಡಿತ್ತಂತೆ. ಬ್ಯಾಟಿಂಗ್ ಮಾಡಲು ಮೈದಾನಕ್ಕೆ ಪ್ರವೇಶಿಸುವ ಸಂದರ್ಭದಲ್ಲಿ ತಂಡದ ಪ್ರಮುಖ ಆಟಗಾರರು ಸೇರಿದಂತೆ ಎಲ್ಲರೂ ಕೆಟ್ಟ ಪದಗಳನ್ನು ಉಪಯೋಗಿಸಿ ನಿಂದನೆ ಮಾಡಿದ್ದರು ಎಂದು ವಿರೇಂದ್ರ ಸೆಹ್ವಾಗ್ ಹಳೆಯ ಕಹಿ ಘಟನೆಯನ್ನು ಮೆಲುಕು ಹಾಕಿದ್ದಾರೆ.

ಆಗ ನಾನಿನ್ನೂ ಚಿಕ್ಕ ಹುಡುಗ

ಆಗ ನಾನಿನ್ನೂ ಚಿಕ್ಕ ಹುಡುಗ

ಇನ್ನೂ ಮುಂದುವರೆದು ಪಾಕಿಸ್ತಾನ ವಿರುದ್ಧ ನಡೆದ ಆ ಕಹಿ ಘಟನೆಯ ಕುರಿತು ಮಾತನಾಡಿರುವ ವಿರೇಂದ್ರ ಸೆಹ್ವಾಗ್ 'ಆಗಿನ್ನೂ ನನಗೆ 20 ರಿಂದ 21 ವರ್ಷ, 25000 ಪ್ರೇಕ್ಷಕರು ನೆರೆದಿದ್ದ ಮೊಹಾಲಿ ಕ್ರೀಡಾಂಗಣದಲ್ಲಿ ಬ್ಯಾಟಿಂಗ್ ಮಾಡಲು ಮೈದಾನವನ್ನು ಪ್ರವೇಶಿಸಿದ್ದೆ. ಶಾಹಿದ್ ಅಫ್ರಿದಿ, ಶೋಯಬ್ ಅಕ್ತರ್ ಹಾಗೂ ಮಹಮ್ಮದ್ ಯೂಸುಫ್ ಸೇರಿದಂತೆ ಇನ್ನೂ ಹಲವಾರು ಪಾಕಿಸ್ತಾನದ ಕ್ರಿಕೆಟಿಗರು ಕೆಟ್ಟ ಪದಗಳನ್ನು ಉಪಯೋಗಿಸಿ ನಿಂದಿಸುತ್ತಿದ್ದರು. ಅವರು ಬಳಸುತ್ತಿದ್ದ ಎಷ್ಟೋ ಕೆಟ್ಟ ಪದಗಳ ಅರ್ಥವೇ ನನಗೆ ಆಗ ತಿಳಿದಿರಲಿಲ್ಲ, ಆಗಿನ್ನೂ ನಾನು ಚಿಕ್ಕ ಹುಡುಗನಾದ್ದರಿಂದ ಅವರಿಗೆ ಹೇಗೆ ಸ್ಪಂದಿಸಬೇಕು ಎಂಬುದು ಸಹ ನನಗೆ ತಿಳಿಯಲಿಲ್ಲ' ಎಂದು ಕೆಟ್ಟ ಅನುಭವವನ್ನು ಹಂಚಿಕೊಂಡಿದ್ದಾರೆ. ಹಾಗೂ ಆ ಪಂದ್ಯದಲ್ಲಿ 2 ಎಸೆತಗಳನ್ನು ಎದುರಿಸಿದ್ದ ವಿರೇಂದ್ರ ಸೆಹ್ವಾಗ್ 1 ರನ್ ಗಳಿಸಿ ಔಟ್ ಆಗಿದ್ದರು.

ಶ್ರೀಲಂಕಾದಲ್ಲಿ ಆಹಾರಕ್ಕೆ ಹಾಹಾಕಾರ: ಆರ್ಥಿಕ ಬಿಕ್ಕಟ್ಟಿನಿಂದ ತುರ್ತುಪರಿಸ್ಥಿತಿ ಘೋಷಣೆ | Oneindia Kannada
ನಂತರದ ಸರಣಿಗಳಲ್ಲಿ ಸರಿಯಾದ ಉತ್ತರ ಕೊಟ್ಟಿದ್ದ ಸೆಹ್ವಾಗ್

ನಂತರದ ಸರಣಿಗಳಲ್ಲಿ ಸರಿಯಾದ ಉತ್ತರ ಕೊಟ್ಟಿದ್ದ ಸೆಹ್ವಾಗ್

ವಿರೇಂದ್ರ ಸೆಹ್ವಾಗ್ ಪದಾರ್ಪಣೆ ಮಾಡಿದ ಮೊದಲನೇ ಪಂದ್ಯದಲ್ಲಿಯೇ ಅತಿ ಕೆಟ್ಟ ಪದಗಳನ್ನು ಉಪಯೋಗಿಸಿ ಪಾಕಿಸ್ತಾನದ ಆಟಗಾರರು ಸೆಹ್ವಾಗ್ ಅವರನ್ನು ನಿಂದಿಸಿದ್ದರು. ಆದರೆ ಇದಕ್ಕೆ ಪ್ರತ್ಯುತ್ತರವನ್ನು ಆ ಪಂದ್ಯದಲ್ಲಿಯೇ ನೀಡಲಾಗದ ವಿರೇಂದ್ರ ಸೆಹ್ವಾಗ್ ಮುಂದಿನ ದಿನಗಳಲ್ಲಿ ನಡೆದ ಪಾಕಿಸ್ತಾನ ವಿರುದ್ಧದ ಸರಣಿಗಳಲ್ಲಿ ಅಬ್ಬರದ ಬ್ಯಾಟಿಂಗ್ ಪ್ರದರ್ಶನ ನೀಡುವುದರ ಮೂಲಕ ತಕ್ಕ ಉತ್ತರವನ್ನು ನೀಡಿದ್ದಾರೆ. ಹೌದು, 2003-04ರಲ್ಲಿ ನಡೆದ ಭಾರತ ಮತ್ತು ಪಾಕಿಸ್ತಾನ ತಂಡಗಳ ನಡುವಿನ ಸರಣಿಯಲ್ಲಿ ವಿರೇಂದ್ರ ಸೆಹ್ವಾಗ್ ತ್ರಿಶತಕ ಸಿಡಿಸುವುದರ ಮೂಲಕ ತಮ್ಮ ಸೇಡನ್ನು ತೀರಿಸಿಕೊಂಡೆ ಎಂಬುದನ್ನು ಇದೇ ವೇಳೆ ಬಹಿರಂಗಪಡಿಸಿದ್ದಾರೆ.

For Quick Alerts
ALLOW NOTIFICATIONS
For Daily Alerts
Story first published: Friday, September 3, 2021, 10:30 [IST]
Other articles published on Sep 3, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X