ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಪಿಎಲ್ 2020: ಧೋನಿ ಶೈಲಿಯನ್ನು ಅನುಕರಿಸಲಾರೆ, ಆದರೆ.. :ಡೇವಿಡ್ ಮಿಲ್ಲರ್

Want To Finish Games In Ipl Like Ms Dhoni Does: David Miller

ನಿಗದಿಗಿಂತ ಆರು ತಿಂಗಳು ತಡವಾಗಿ ಐಪಿಎಲ್ 13ನೇ ಆವೃತ್ತಿಗೆ ಕೊನೆಗೂ ಯುಎಇನಲ್ಲಿ ಚಾಲನೆ ಸಿಗಲು ಇನ್ನು ಬೆರಳೆಣಿಕೆಯ ದಿನಗಳು ಮಾತ್ರವೇ ಉಳಿದಿದೆ. ಕೊರೊನಾ ವೈರಸ್‌ ಹಿನ್ನೆಲೆಯಲ್ಲಿ ಸಾಕಷ್ಟು ಮುನ್ನೆಚ್ಚರಿಕೆಯೊಂದಿಗೆ ಐಪಿಎಲ್‌ಗೆ ಸಿದ್ಧತೆಗಳನ್ನು ನಡೆಸಲಾಗುತ್ತಿದೆ. ಈ ಸಂದರ್ಭದಲ್ಲಿ ರಾಜಸ್ಥಾನ್ ರಾಯಲ್ಸ್ ತಂಡದ ಪವರ್ ಹಿಟ್ಟರ್ ಡೇವಿಡ್ ಮಿಲ್ಲರ್ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಎಂ ಎಸ್ ಧೋನಿ ಬಗ್ಗೆ ಭಾರೀ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.

ದಕ್ಷಿಣ ಆಫ್ರಿಕಾದ ಬ್ಯಾಟ್ಸ್‌ಮನ್ ಡೇವಿಡ್ ಮಿಲ್ಲರ್ ಧೋನಿಯ ಬ್ಯಾಟಿಂಗ್‌ನ ಜಾಣ್ಮೆಯನ್ನು ಇಷ್ಟಪಡುವುದಾಗಿ ಹೇಳಿದ್ದಾರೆ. ಆದರೆ ಹಿರಿಯ ಆಟಗಾರನ ಬ್ಯಾಟಿಂಗ್‌ಅನ್ನು ಅನುಕರಿಸಲು ಬಯಸದೆ ಅವರ ಶೈಲಿಯಲ್ಲಿ ಪಂದ್ಯವನ್ನು ಮುಗಿಸಲು ಇಷ್ಟಪಡುತ್ತೇನೆ ಎಂದು ಡೇವಿಡ್ ಮಿಲ್ಲರ್ ಹೇಳಿದ್ದಾರೆ. ಜೊತೆಗೆ ತಾನು ಎಂಎಸ್ ಧೋನಿಯ ಅಭಿಮಾನಿ ಎಂಬುದಾಗಿಯೂ ಮಿಲ್ಲರ್ ಬಹಿರಂಗಪಡಿಸಿದ್ದಾರೆ.

ಐಪಿಎಲ್ 2020: ಕಣಕ್ಕಿಳಿಯಲಿರುವ ತಂಡಗಳ ಸಂಪೂರ್ಣ ಆಟಗಾರರು ಹಾಗೂ ನಾಯಕರುಐಪಿಎಲ್ 2020: ಕಣಕ್ಕಿಳಿಯಲಿರುವ ತಂಡಗಳ ಸಂಪೂರ್ಣ ಆಟಗಾರರು ಹಾಗೂ ನಾಯಕರು

ತನ್ನ ಜವಾಬ್ಧಾರಿಯನ್ನು ನಿರ್ವಹಿಸಲು ಧೋನಿ ತೆಗೆದುಕೊಳ್ಳುವ ಮಾರ್ಗವನ್ನು ನಾನು ಇಷ್ಟಪಡುತ್ತೇನೆ. ಅದರ ಜೊತೆಗೆ ಆತನ ಶಾಂತ ಚಿತ್ತತೆಯನ್ನು ಕೂಡ ನಾನು ಪ್ರಿತಿಸುತ್ತೇನೆ ಎಂದಿದ್ದಾರೆ ಡೇವಿಡ್ ಮಿಲ್ಲರ್. ಧೋನಿ ತನ್ನನ್ನು ಬಿಂಬಿಸಿಕೊಳ್ಳುವ ರೀತಿಯನ್ನು ನಾನು ತುಂಬಾ ಮೆಚ್ಚಿಕೊಳ್ಳುತ್ತೇನೆ ಹಾಗೂ ಅದನ್ನು ಆನಂದಿಸುತ್ತೇನೆ. ನಾನು ಕೂಡ ಅದೇ ರೀತಿಯಲ್ಲಿರಲು ಪ್ರಯತ್ಸಿಸುತ್ತೇನೆ ಎಂದಿದ್ದಾರೆ ಮಿಲ್ಲರ್.

ಎಂಎಸ್ ಧೋನಿ ಕ್ರಿಕೆಟ್‌ ಇತಿಹಾಸದ ಶ್ರೇಷ್ಠ ಫಿನಿಷರ್‌ಗಳಲ್ಲಿ ಒಬ್ಬರು. ಇದನ್ನು ಎಂಎಸ್ ಧೋನಿ ಹಲವು ಸಂದರ್ಭಗಳಲ್ಲಿ ಸಾಬೀತುಪಡಿಸಿದ್ದಾರೆ. ಆತನ ಆಟವನ್ನು ನೋಡುವುದು ನನಗೆ ತುಂಬಾ ಇಷ್ಟವಾದ ಸಂಗತಿ ಎಂದು ಡೇವಿಡ್ ಮಿಲ್ಲರ್ ಧೋನಿಯ ಬಗ್ಗೆ ಮೆಚ್ಚುಗೆಯ ಮಾತುಗಳನ್ನು ಆಡಿದ್ದಾರೆ.

ಡೇವಿಡ್ ಮಿಲ್ಲರ್ ಕಳೆದ 8 ಆವೃತ್ತಿಗಳಲ್ಲಿ ಕಿಂಗ್ಸ್ XI ಪಂಜಾಬ್ ತಂಡದ ಪ್ರಮುಖ ಸದಸ್ಯನಾಗಿದ್ದರು. ಕಳೆದ ಹರಾಜಿನಲ್ಲಿ ಡೇವಿಡ್ ಮಿಲ್ಲರ್ ಅವರನ್ನು ರಾಜಸ್ಥಾನ್ ರಾಯಲ್ಸ್ ತನ್ನ ತೆಕ್ಕೆಗೆ ಹಾಕಿಕೊಂಡಿದೆ. ಹಾಗಾಗಿ ಸ್ವೀವ್ ಸ್ಮಿತ್ ನಾಯಕತ್ವದಲ್ಲಿ ಡೇವಿಡ್ ಮಿಲ್ಲರ್ ಪ್ರದರ್ಶನ ಹೇಗಿರಲಿದೆ ಎಂಬುದನ್ನು ಕಾದು ನೋಡಬೇಕಿದೆ.

Story first published: Monday, September 14, 2020, 18:06 [IST]
Other articles published on Sep 14, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X