ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

WTC ಫೈನಲ್‌ನಲ್ಲಿ ಗೆಲ್ಲುವ ತಂಡ ಹೆಸರಿಸಿದ ದಂತಕತೆ ರಿಚರ್ಡ್ ಹ್ಯಾಡ್ಲೀ

Who will win India vs New Zealand WTC final? legend Richard Hadlee has his say

ವೆಲ್ಲಿಂಗ್ಟನ್: ಇಂಡಿಯನ್ ಪ್ರೀಮಿಯರ್ ಲೀಗ್‌ (ಐಪಿಎಲ್) 2021ರ ಸೀಸನ್ ಕೋವಿಡ್-19ನಿಂದಾಗಿ ಅಮಾನತಾಗಿರುವುದರಿಂದ ಎಲ್ಲರ ಚಿತ್ತ ಮುಂಬರಲಿರುವ ಐಸಿಸಿ ವರ್ಲ್ಡ್ ಟೆಸ್ಟ್ ಚಾಂಪಿಯನ್‌ಶಿಪ್‌ ಫೈನಲ್‌ನತ್ತ ಹೊರಳಿದೆ. ಜೂನ್ 18ರಿಂದ 22ರ ವರೆಗೆ ವರ್ಲ್ಡ್ ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್ ಪಂದ್ಯ ನ್ಯೂಜಿಲೆಂಡ್ ಮತ್ತು ಭಾರತದ ಮಧ್ಯೆ ಇಂಗ್ಲೆಂಡ್‌ನ ಸೌತಾಂಪ್ಟನ್‌ನಲ್ಲಿ ನಡೆಯಲಿದೆ.

 ಪುರುಷ-ಮಹಿಳೆಯರ ಸೇರಿಸಿದ ಭಾರತದ ಅತ್ಯುತ್ತಮ ಟಿ20 XI ಹೇಗಿದೆ ನೋಡಿ! ಪುರುಷ-ಮಹಿಳೆಯರ ಸೇರಿಸಿದ ಭಾರತದ ಅತ್ಯುತ್ತಮ ಟಿ20 XI ಹೇಗಿದೆ ನೋಡಿ!

ಭಾರತ ಮತ್ತು ನ್ಯೂಜಿಲೆಂಡ್ ಮಧ್ಯೆ ಐಸಿಸಿ ವರ್ಲ್ಡ್ ಟೆಸ್ಟ್ ಚಾಂಪಿಯನ್‌ಶಿಪ್‌ ಮೊದಲ ಆವೃತ್ತಿಯ ಫೈನಲ್ ಪಂದ್ಯ ನಡೆಯುತ್ತಿರುವುದರಿಂದ ಪಂದ್ಯ ಕುತೂಹಲ ಮೂಡಿಸಿದೆ. ನ್ಯೂಜಿಲೆಂಡ್ ದಂತಕತೆ ರಿಚರ್ಡ್ ಹ್ಯಾಡ್ಲೀ ಫೈನಲ್ ಪಂದ್ಯದ ಕುರಿತು ತನ್ನ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಫೈನಲ್‌ನಲ್ಲಿ ಯಾರು ಗೆಲ್ಲಲಿದ್ದಾರೆ ಎಂದು ಎಂದು ಹ್ಯಾಡ್ಲೀ ತಿಳಿಸಿದ್ದಾರೆ.

'ಪಂದ್ಯಕ್ಕೆ ಯಾರು ತಯಾರಿ ನಡೆಸಿದ್ದಾರೋ ಮತ್ತು ಯಾರು ಇಂಗ್ಲೆಂಡ್ ಪರಿಸ್ಥಿತಿಗೆ ಬೇಗನೆ ಒಗ್ಗಿಕೊಳ್ಳುತ್ತಾರೋ ಅವರು ಫೈನಲ್‌ ಗೆಲ್ಲುತ್ತಾರೆ. ಹವಾಮಾನ ಕೂಡ ಆಟದ ಫಲಿತಾಂಶದಲ್ಲಿ ಪಾತ್ರ ವಹಿಸುತ್ತದೆ. ಹೆಚ್ಚು ಚಳಿ ಇದ್ದರೆ ನ್ಯೂಜಿಲೆಂಡ್ ಗೆಲ್ಲುವ ನೆಚ್ಚಿನ ತಂಡವಾಗಲಿದೆ,' ಎಂದು ಹ್ಯಾಡ್ಲೀ ಹೇಳಿದ್ದಾರೆ. ಬೌಲಿಂಗ್ ಆಲ್ ರೌಂಡರ್ ಆಗಿದ್ದ ಹ್ಯಾಡ್ಲೀ 86 ಟೆಸ್ಟ್‌ ಪಂದ್ಯಗಳಲ್ಲಿ 3124 ರನ್, 431 ವಿಕೆಟ್ ದಾಖಲೆ ಹೊಂದಿದ್ದಾರೆ.

IPL 2021: ಭಾರತದಲ್ಲಿ ಅನುಭವಿಸಿದ ಕಷ್ಟವನ್ನು ನೆನೆದು ಕಣ್ಣೀರು ಹಾಕಿದ ನ್ಯೂಜಿಲೆಂಡ್ ಕ್ರಿಕೆಟಿಗIPL 2021: ಭಾರತದಲ್ಲಿ ಅನುಭವಿಸಿದ ಕಷ್ಟವನ್ನು ನೆನೆದು ಕಣ್ಣೀರು ಹಾಕಿದ ನ್ಯೂಜಿಲೆಂಡ್ ಕ್ರಿಕೆಟಿಗ

ಮಾತು ಮುಂದುವರೆಸಿದ ಹ್ಯಾಡ್ಲೀ, 'ಇನ್ನು ಡ್ಯೂಕ್‌ ಬಾಲ್ ಎರಡೂ ತಂಡಗಳಿಗೂ ಹೊಂದಿಕೊಳ್ಳುತ್ತದೆ. ಮುಖ್ಯವಾಗಿ ಸ್ವಿಂಗ್ ಮಾಡುವ ವೇಗಿಗಳಿಗೆ ಆ ಚೆಂಡು ಹೆಚ್ಚು ಅನುಕೂಲ ತರಲಿದೆ. ನ್ಯೂಜಿಲೆಂಡ್‌ನ ಟ್ರೆಂಟ್ ಬೌಲ್ಟ್, ಟಿಮ್ ಸೌಥೀ ಮತ್ತು ಕೈಲ್ ಜೇಮಿಸನ್ ಇದರ ಲಾಭ ಪಡೆಯಲಿದ್ದಾರೆ,' ಎಂದು ರಿಚರ್ಡ್ ಅಭಿಪ್ರಾಯಿಸಿದ್ದಾರೆ.

Story first published: Tuesday, May 25, 2021, 15:32 [IST]
Other articles published on May 25, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X