ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಮಹಿಳಾ ಟಿ20 ವಿಶ್ವಕಪ್‌ : ದೊಡ್ಡ ಕನಸು ಬೆನ್ನತ್ತಿದ ಟೀಮ್ ಇಂಡಿಯಾ ವನಿತೆಯರು

Winning The T20 World Cup Will Be A Massive Achievement

ಮಹಿಳಾ ವಿಶ್ವಕಪ್‌ಗೆ ದಿನಗಣನೆ ಆಟರಂಭವಾಗಿದೆ. ಇದೇ ತಿಂಗಳ 21ನೇ ತಾರೀಕಿನಂದು ವಿಶ್ವಕಪ್‌ಗೆ ಚಾಲನೆ ದೊರೆಯಲಿದೆ. ಈ ಬಾರಿಯ ಮಹಿಳಾ ಟಿ20 ವಿಶ್ವಕಪ್‌ಗೆ ಆಸ್ಟ್ರೇಲಿಯಾ ಆತಿಥ್ಯವನ್ನು ವಹಿಸಲಿದೆ. ಮೊದಲ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಹೋರಾಟವನ್ನು ನಡೆಸಲಿದೆ.

ಟೀಮ್ ಇಂಡಿಯಾ ವನಿತೆಯರು ಈ ಬಾರಿಯ ವಿಶ್ವಕಪ್‌ನಲ್ಲಿ ಚಾಂಪಿಯನ್ ಆಗಲು ಕಾತುರರಾಗಿದ್ದಾರೆ. ಆಸ್ಟ್ರೇಲಿಯಾದಲ್ಲಿ ಗೆದ್ದು ಇತಿಹಾಸವನ್ನು ನಿರ್ಮಿಸುವ ಉತ್ಸಾಹದಲ್ಲಿದ್ದಾರೆ ಟೀಮ್ ಇಂಡಿಯಾದ ಆಟಗಾರ್ತಿಯರು. ಈ ಬಾರಿಯ ವಿಶ್ವಕಪ್‌ನಲ್ಲಿ ಟೀಮ್ ಇಂಡಿಯಾ ಕೂಡ ಫೇವರೀಟ್ ತಂಡಗಳಲ್ಲಿ ಒಂದೆನಿಸಿದೆ.

ಆರ್‌ಸಿಬಿ ತಂಡದ ಪಂದ್ಯಗಳು ಎಲ್ಲೆಲ್ಲಿ ಯಾವಾಗ? ಸಂಪೂರ್ಣ ಮಾಹಿತಿ ಇಲ್ಲಿದೆಆರ್‌ಸಿಬಿ ತಂಡದ ಪಂದ್ಯಗಳು ಎಲ್ಲೆಲ್ಲಿ ಯಾವಾಗ? ಸಂಪೂರ್ಣ ಮಾಹಿತಿ ಇಲ್ಲಿದೆ

ಟೀಮ್ ಇಂಡಿಯಾದ ಇಬ್ಬರು ಪ್ರಮುಖ ಆಟಗಾರ್ತಿಯರು ತಂಡದಿಂದ ದೂರವಾಗಿದ್ದಾರೆ. ಅನುಭವಿಗಳಾದ ಮಿಥಾಲಿ ರಾಜ್ ಕಳೆದ ವರ್ಷ ಟಿ20 ಕ್ರಿಕೆಟ್‌ಗೆ ನಿವೃತ್ತಿಯನ್ನು ಘೋಷಿಸಿದ್ದಾರೆ. ಮತ್ತೊಂದೆಡೆ ತಂಡದ ವೇಗದ ಬೌಲರ್ ಜೂಲನ್ ಗೋಸ್ವಾಮಿ ಟಿ20 ಕ್ರಿಕೆಟ್‌ನಿಂದ 2018ರಲ್ಲೇ ದೂರವಾಗಿದ್ದಾರೆ. ಈ ಇಬ್ಬರು ಅನುಭವಿಗಳ ಕೊರತೆ ಟೀಮ್ ಇಂಡಿಯಾಗೆ ಕಾಡುವುದರಲ್ಲಿ ಅನುಮಾನವಿಲ್ಲ.

ಟೀಮ್ ಇಂಡಿಯಾ ನಾಯಕಿ ಹರ್ಮನ್‌ಪ್ರೀತ್ ಕೌರ್ ಈ ಬಗ್ಗೆ ಮಾತಾಡಿದ್ದಾರೆ. ಅನುಭವಿ ಆಟಗಾರ್ತಿಯರನ್ನು ತಂಡದಲ್ಲಿ ಈಗಾಗಲೇ ಮಿಸ್ ಮಾಡಿಕೊಳ್ಳುತ್ತಿದ್ದೇವೆ. ಆದರೆ ಯುವ ಆಟಗಾರ್ತಿಯರು ಅತ್ಯುತ್ತಮ ಆಟವನ್ನಾಡುವ ಸಾಮರ್ಥ್ಯವನ್ನು ಹೊಂದಿದ್ದಾರೆ ಎಂಬ ಮಾತನ್ನು ಹೇಳಿದ್ದಾರೆ.

ಆಸ್ಟ್ರೇಲಿಯಾ ವಿರುದ್ಧ ಡೇ-ನೈಟ್ ಟೆಸ್ಟ್‌ ಪಂದ್ಯವನ್ನಾಡಲಿದೆ ಟೀಮ್ ಇಂಡಿಯಾಆಸ್ಟ್ರೇಲಿಯಾ ವಿರುದ್ಧ ಡೇ-ನೈಟ್ ಟೆಸ್ಟ್‌ ಪಂದ್ಯವನ್ನಾಡಲಿದೆ ಟೀಮ್ ಇಂಡಿಯಾ

2017ರ ವಿಶ್ವಕಪ್‌ನಲ್ಲಿ ಟೀಮ್ ಇಂಡಿಯಾ ವನಿತೆಯರ ತಂಡ ಅಂತಿಮ ಹಂತದಲ್ಲಿ ಕೈಚೆಲ್ಲಿತ್ತು. ಗೆಲ್ಲುವ ಹಂತದಲ್ಲಿದ್ದ ಪಂದ್ಯದಲ್ಲಿ ಟೀಮ್ ಇಂಡಿಯಾ ವನಿತೆಯರು ಅಂತಿಮ ಹಂತದಲ್ಲಿ ವಿಕೆಟ್ ಕಳೆದುಕೊಂಡು 9 ರನ್‌ಗಳಿಂದ ಇಂಗ್ಲೆಂಡ್‌ಗೆ ಶರಣಾಗಿತ್ತು. ಈ ಮೂಲಕ ಇಂಗ್ಲೆಂಡ್ ಚಾಂಪಿಯನ್ ಆಗಿತ್ತು. ಈ ಸೋಲಿನ ನೋವು ಟೀಮ್ ಇಂಡಿಯಾ ನಾಯಕಿ ಹರ್ಮನ್‌ಪ್ರೀತ್‌ ಕೌರ್ ಅವರನ್ನು ಇನ್ನೂ ಕಾಡುತ್ತಿದೆ.

Story first published: Monday, February 17, 2020, 18:06 [IST]
Other articles published on Feb 17, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X