ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

WTC ಫೈನಲ್‌ ವಿಡಿಯೋ ಮತ್ತೆ ಮತ್ತೆ ನೋಡಿ ಅತ್ತಿದ್ದೆ: ಶೇನ್ ಜುರ್ಗೆನ್ಸನ್

Winning WTC crown is greatest achievement of my coaching career: Shane Jurgensen
WTC ಫೈನಲ್ ಪಂದ್ಯದ ವಿಡಿಯೋ ನೋಡಿ ಕಣ್ಣೀರು ಹಾಕಿದ ಕಿವೀಸ್ ಕೋಚ್ | Oneindia Kannada

ವೆಲ್ಲಿಂಗ್ಟನ್: ಐಸಿಸಿ ವರ್ಲ್ಡ್ ಟೆಸ್ಟ್‌ ಚಾಂಪಿಯನ್‌ಶಿಪ್‌ ಉದ್ಘಾಟನಾ ಆವೃತ್ತಿಯಲ್ಲಿ ನ್ಯೂಜಿಲೆಂಡ್ ತಂಡ ಚಾಂಪಿಯನ್ಸ್ ಆಗಿ ಹೊರಹೊಮ್ಮಿದ್ದು ನನ್ನ ವೃತ್ತಿ ಬದುಕಿನಲ್ಲಿ ಬಹುದೊಡ್ಡ ಸಾಧನೆ. WTC ಫೈನಲ್‌ ವಿಡಿಯೋ ನೋಡಿ ಮತ್ತೆ ಮತ್ತೆ ಅತ್ತಿದ್ದೆ ಎಂದು ನ್ಯೂಜಿಲೆಂಡ್ ಬೌಲಿಂಗ್ ಕೋಚ್ ಶೇನ್ ಜುರ್ಗೆನ್ಸನ್ ಹೇಳಿದ್ದಾರೆ.

ಅಭಿಮಾನಿಯ ಪ್ರಶ್ನೆಗೆ ಭಾವನಾತ್ಮಕವಾಗಿ ಪ್ರತಿಕ್ರಿಯಿಸಿದ ಡೇವಿಡ್ ವಾರ್ನರ್ಅಭಿಮಾನಿಯ ಪ್ರಶ್ನೆಗೆ ಭಾವನಾತ್ಮಕವಾಗಿ ಪ್ರತಿಕ್ರಿಯಿಸಿದ ಡೇವಿಡ್ ವಾರ್ನರ್

ನ್ಯೂಜಿಲೆಂಡ್ ತಂಡದ ವೇಗಿಗಳಾದ ಟಿಮ್ ಸೌಥೀ, ಟ್ರೆಂಟ್ ಬೌಲ್ಟ್, ನೀಲ್ ವ್ಯಾಗ್ನರ್ ಮತ್ತು ಕೈಲ್ ಜೇಮಿಸನ್ ವಿಶ್ವದ ಅತ್ಯುತ್ತಮ ಬೌಲರ್‌ಗಳು ಎಂದೂ ಕೂಡ ಶೇನ್ ಜುರ್ಗೆನ್ಸನ್ ಹೇಳಿದ್ದಾರೆ. ಕಳೆದ ವಾರ ಐಸಿಸಿ ವರ್ಲ್ಡ್ ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್‌ ಪಂದ್ಯದಲ್ಲಿ ಟೀಮ್ ಇಂಡಿಯಾವನ್ನು 8 ವಿಕೆಟ್‌ನಿಂದ ಸೋಲಿಸಿದ್ದ ನ್ಯೂಜಿಲೆಂಡ್ ತನ್ನ ಎರಡನೇ ಐಸಿಸಿ ಟ್ರೋಫಿ ಜಯಿಸಿತ್ತು.

"ನ್ಯೂಜಿಲೆಂಡ್‌ ತಂಡ ಚಾಂಪಿಯನ್‌ಶಿಪ್‌ ಗೆಲ್ಲುವ ಹೊತ್ತು ನಾನು ನನ್ನ ರೂಮಿನಲ್ಲಿ ಬಹಳ ಭಾವುಕನಾಗಿದ್ದೆ. ಕ್ರಿಕೆಟ್‌ ಕಾರಣಕ್ಕಾಗಿ ನನ್ನ ಹೆಂಡತಿಯೂ ಸಾಕಷ್ಟು ದೂರ ಇರಬೇಕಾದ ಪರಿಸ್ಥಿತಿ ಇದ್ದಿದ್ದರಿಂದ ವೈಯಕ್ತಿಕವಾಗಿ ನಾನು ತುಂಬಾ ಭಾವುಕನಾಗಿದ್ದೆ. ನನ್ನ ಪಾಲಿಗೆ ಇದು ನನ್ನ ಕೋಚಿಂಗ್ ವೃತ್ತಿ ಬದುಕಿನ ಅತೀ ದೊಡ್ಡ ಸಾಧನೆ," ಎಂದು ಜುರ್ಗೆನ್ಸನ್ ಪ್ರತಿಕ್ರಿಯಿಸಿದ್ದಾರೆ.

ಶ್ರೀಲಂಕಾ ವಿರುದ್ಧದ ಸರಣಿಯಲ್ಲಿ ಅಬ್ಬರಿಸಲು ಸಜ್ಜಾಗಿದ್ದಾರೆ ಈ ಐವರು ಯುವ ಆಟಗಾರರುಶ್ರೀಲಂಕಾ ವಿರುದ್ಧದ ಸರಣಿಯಲ್ಲಿ ಅಬ್ಬರಿಸಲು ಸಜ್ಜಾಗಿದ್ದಾರೆ ಈ ಐವರು ಯುವ ಆಟಗಾರರು

ಇಂಗ್ಲೆಂಡ್‌ನಿಂದ ನ್ಯೂಜಿಲೆಂಡ್‌ಗೆ ವಾಪಸ್ಸಾದ ಬಳಿಕ 6 ದಿನಗಳ ಕ್ವಾರಂಟೈನ್ ಅವಧಿಯಲ್ಲಿ ತಾನು ಈಗಲೂ 6ನೇ ದಿನದಾಟದ ವಿಡಿಯೋ ಮತ್ತೆ ಮತ್ತೆ ನೋಡಿ ಖುಷಿಯ ಕಣ್ಣೀರು ಹಾಕುತ್ತಿರುವುದಾಗಿ ಜುರ್ಗೆನ್ಸನ್ ಹೇಳಿದ್ದಾರೆ. ಭಾರತ ಮತ್ತು ನ್ಯೂಜಿಲೆಂಡ್ ನವೆಂಬರ್‌ನಲ್ಲಿ ಮತ್ತೆ WTC ಎರಡನೇ ಆವೃತ್ತಿಯ ಪಂದ್ಯದಲ್ಲಿ ಮುಖಾಮುಖಿಯಾಗಲಿದೆ.

Story first published: Tuesday, June 29, 2021, 9:50 [IST]
Other articles published on Jun 29, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X