ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಮಹಿಳಾ ವಿಶ್ವಕಪ್‌: ಮಳೆಯಿಂದ ಸೆಮಿ ಫೈನಲ್ ರದ್ದು, ಫೈನಲ್‌ಗೆ ಭಾರತ

Womens T20 World Cup: India Qualify For Maiden Final
ICC Women's T20 World Cup: India qualify for maiden final, Women cricket in maiden Worldcup Final|

ಮಹಿಳಾ ವಿಶ್ವಕಪ್‌ ಸೆಮಿ ಫೈನಲ್ ಪಂದ್ಯ ಮಳೆಯಿಂದಾಗಿ ರದ್ದಾಗಿದೆ. ಹೀಗಾಗಿ ಟೀಮ್ ಇಂಡಿಯಾ ವನಿತೆಯರ ತಂಡ ಚೊಚ್ಚಲ ಬಾರಿಗೆ ಟಿ20 ವಿಶ್ವಕಪ್‌ನ ಫೈನಲ್ ಪ್ರವೇಶವನ್ನು ಪಡೆದುಕೊಂಡಿದ್ದಾರೆ. ಇಂಗ್ಲೆಂಡ್ ವಿರುದ್ಧ ಇಂಡು ಟೀಮ್ ಇಂಡಿಯಾ ಮಹಿಳೆಯರು ಸೆಣೆಸಾಡಬೇಕಾಗಿತ್ತು.

ಟೀಮ್ ಇಂಡಿಯಾ ತಂಡ ಲೀಗ್ ಹಂತದಲ್ಲಿ ಅದ್ಭುತ ಆಟವನ್ನು ಪ್ರದರ್ಶಿಸಿತ್ತು. ಆಡಿದ ಎಲ್ಲಾ ಪಂದ್ಯಗಳಲ್ಲೂ ಜಯವನ್ನು ಗಳಿಸಿತ್ತು. ಇದು ಟೀಮ್ ಇಂಡಿಯಾದ ಫೈನಲ್ ಪ್ರವೇಶಕ್ಕೆ ಟಿಕೆಟ್ ಪಡೆಯುವಂತೆ ಮಾಡಿದೆ.

ಮಹಿಳಾ ವರ್ಲ್ಡ್‌ಕಪ್ ಸೆಮಿಫೈನಲ್: ಇತಿಹಾಸ ನಿರ್ಮಿಸಲು ಟೀಮ್ ಇಂಡಿಯಾ ಸಜ್ಜುಮಹಿಳಾ ವರ್ಲ್ಡ್‌ಕಪ್ ಸೆಮಿಫೈನಲ್: ಇತಿಹಾಸ ನಿರ್ಮಿಸಲು ಟೀಮ್ ಇಂಡಿಯಾ ಸಜ್ಜು

ಲೀಗ್‌ ಹಂತದಲ್ಲಿ ಟೀಮ್ ಇಂಡಿಯಾ ಮಹಿಳೆಯರ ತಂಡ 8 ಅಂಕಗಳನ್ನು ಪಡೆದುಕೊಂಡಿತ್ತು. ಆದರೆ ಇಂಗ್ಲೆಂಡ್ ಒಂದು ಪಂದ್ಯವನ್ನು ಲೀಗ್ ಹಂತದಲ್ಲಿ ಸೋತು ಕೇವಲ 6 ಅಂಕವನ್ನಷ್ಟೇ ಪಡೆದುಕೊಂಡಿತು. ಹೀಗಾಗಿ ಹರ್ಮನ್ ಪ್ರೀತ್‌ಕೌರ್ ನೇತೃತ್ವದ ತಂಡ ಚೊಚ್ಚಲ ಬಾರಿಗೆ ಫೈನಲ್ ಟಿಕೆಟ್ ಪಡೆದುಕೊಂಡಿದೆ.

ಟಿ20 ವಿಶ್ವಕಪ್‌ನಲ್ಲಿ ಭಾರತ ಈವರೆಗೂ ಫೈನಲ್ ಪ್ರವೇಶ್ವನ್ನು ಮಾಡಿರಲಿಲ್ಲ. ಕಳೆದ ವಿಶ್ವಕಪ್‌ನಲ್ಲಿ ಸೆಮಿ ಫೈನಲ್ ಪ್ರವೇಶಿಸಿದ್ದೇ ಈವರೆಗಿನ ಅತ್ಯುತ್ತಮ ಸಾಧನೆಯಾಗಿತ್ತು. ಆದರೆ ಈ ಬಾರಿ ಟೀಮ್ ಇಂಡಿಯಾ ವನಿತೆಯರು ಅದ್ಭುತ ಆಟವನ್ನು ಪ್ರದರ್ಶಿಸುತ್ತಿದ್ದು ಚಾಂಪಿಯನ್ ಆಗುವ ಕನಸು ಕಾಣುತ್ತಿದೆ.

ಅಂತಾರಾಷ್ಟ್ರೀಯ ಟಿ20 ದಾಖಲೆ ನಿರ್ಮಿಸಿದ 16ರ ಹುಡುಗಿ ಶೆಫಾಲಿ ವರ್ಮಾ!ಅಂತಾರಾಷ್ಟ್ರೀಯ ಟಿ20 ದಾಖಲೆ ನಿರ್ಮಿಸಿದ 16ರ ಹುಡುಗಿ ಶೆಫಾಲಿ ವರ್ಮಾ!

ಇಂದು ಮಧ್ಯಾಹ್ನ ಎರಡನೇ ಸೆಮಿ ಫೈನಲ್ ಪಂದ್ಯ ನಡೆಯಲಿದೆ. ಈ ಪಂದ್ಯವೂ ಕೂಡ ಸಿಡ್ನಿ ಕ್ರಿಕೆಟ್ ಗ್ರೌಂಡ್‌ನಲ್ಲೇ ನಡೆಯಲಿದೆ. ಭಾರತೀಯ ಕಾಲಮಾನ ಮಧ್ಯಾಹ್ನ 1.30ಕ್ಕೆ ನಡೆಯಲಿದೆ. ಇದರಲ್ಲಿ ಗೆದ್ದ ತಂಡ ಫೈನಲ್‌ನಲ್ಲಿ ಟೀಮ್ ಇಂಡಿಯಾ ಮಹಿಳೆಯರನ್ನು ಎದುರಿಸಲಿದೆ.

Story first published: Thursday, March 5, 2020, 11:37 [IST]
Other articles published on Mar 5, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X