ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಟಿ20 ವಿಶ್ವಕಪ್‌ ಗೆಲ್ಲದಿದ್ದರೂ ವಿಶೇಷ ದಾಖಲೆಗಳ ಬರೆದ ಭಾರತೀಯರಿವರು

ICC Womens T20 World Cup 2020, interesting statistics

ಮೆಲ್ಬರ್ನ್, ಮಾರ್ಚ್ 9: ಮಹಿಳಾ ಟಿ20 ವಿಶ್ವಕಪ್‌ನಲ್ಲಿ ಭಾರತದ ವನಿತಾ ತಂಡ ಚೊಚ್ಚಲ ವಿಶ್ವಕಪ್ ಗೆಲ್ಲುವ ಆಸೆ ಭಾರತೀಯರೆಲ್ಲರಲ್ಲಿ ಮೂಡಿದ್ದು ನಿಜ. ಆ ಆಸೆ ಕೈಗೂಡಲಿಲ್ಲ. ಆದರೆ ಭಾರತೀಯ ವನಿತೆಯರು ಟೂರ್ನಿಯಲ್ಲಿ ಅತ್ಯುತ್ತಮ ಪ್ರದರ್ಶನಕ್ಕಾಗಿ ವಿಶ್ವದ ಗಮನ ಸೆಳೆದಿದ್ದನ್ನು ಒಪ್ಪಿಕೊಳ್ಳಲೇಬೇಕು. ತಂಡವಾಗಿ ಮತ್ತು ವೈಯಕ್ತಿಯವಾಗಿಯೂ ಭಾರತದ ಮಹಿಳೆಯರು ಟೂರ್ನಿಯಲ್ಲಿ ವಿಶೇಷ ಸಾಧನೆ ತೋರಿದ್ದಾರೆ. ಅದಕ್ಕೆ ಸಾಕ್ಷಿಯನ್ನು ಮಹಿಳಾ ಟಿ20 ವಿಶ್ವಕಪ್ 2020ರ ಅಂಕಿ ಅಂಶಗಳು ಹೇಳುತ್ತವೆ.

ಧೋನಿ ಭವಿಷ್ಯದ ಬಗ್ಗೆ ಬಾಯ್ತೆರೆದ ಕನ್ನಡಿಗ ಜೋಶಿಯಿರುವ ಆಯ್ಕೆಸಮಿತಿ!ಧೋನಿ ಭವಿಷ್ಯದ ಬಗ್ಗೆ ಬಾಯ್ತೆರೆದ ಕನ್ನಡಿಗ ಜೋಶಿಯಿರುವ ಆಯ್ಕೆಸಮಿತಿ!

ಮೆಲ್ಬರ್ನ್ ಕ್ರಿಕೆಟ್‌ ಗ್ರೌಂಡ್‌ನಲ್ಲಿ ನಡೆದಿದ್ದ ಫೈನಲ್ ಹಣಾಹಣಿಯಲ್ಲಿ ಅಲಿಸಾ ಹೀಲಿ 75 (39 ಎಸೆತ), ಬೆತ್ ಮೂನಿ 78 (54 ಎಸೆತ) ಸ್ಫೋಟಕ ಬ್ಯಾಟಿಂಗ್‌ನೊಂದಿಗೆ ಆಸ್ಟ್ರೇಲಿಯಾ ವನಿತೆಯರು 184 ರನ್ ಕಲೆ ಹಾಕುವಲ್ಲಿ ಮತ್ತು ಎದುರಾಳಿಗೆ ಒತ್ತಡ ಹೇರುವಲ್ಲಿ ಯಶಸ್ವಿಯಾಗಿದ್ದರು.

ಯಜುವೇಂದ್ರ ಚಾಹಲ್ 'ಕನ್ನಡ ಟ್ವೀಟ್' ನಲ್ಲಿ ಏನು ಬರೆದುಕೊಂಡಿದ್ದಾರೆ, ಗೊತ್ತಾ?ಯಜುವೇಂದ್ರ ಚಾಹಲ್ 'ಕನ್ನಡ ಟ್ವೀಟ್' ನಲ್ಲಿ ಏನು ಬರೆದುಕೊಂಡಿದ್ದಾರೆ, ಗೊತ್ತಾ?

ಗರಿಷ್ಠ ರನ್ ಗುರಿ ತಲುಪುವ ಒತ್ತಡದಲ್ಲಿದ್ದ ಭಾರತದ ಮಹಿಳಾ ತಂಡ ಆರಂಭದಲ್ಲೇ ಪ್ರಮುಖ ವಿಕೆಟ್‌ಗಳನ್ನು ಕಳೆದು 99 ರನ್ ಕಲೆ ಹಾಕಿ ಪಂದ್ಯದಲ್ಲಿ ಸೋಲೊಪ್ಪಿಕೊಂಡಿತ್ತು. ಆದರೆ ಟೂರ್ನಿಯಲ್ಲಿನ ಸಾಧನೆ ಪರಿಗಣಿಸಿದರೆ ಭಾರತದ ಮಹಿಳೆಯರೂ ವಿಶೇಷ ದಾಖಲೆಗಳಿಗೆ ಗಮನ ಸೆಳೆದಿದ್ದಾರೆ.

ಟೂರ್ನಿಯಲ್ಲಿ ಅತ್ಯಧಿಕ ಒಟ್ಟು ರನ್

ಟೂರ್ನಿಯಲ್ಲಿ ಅತ್ಯಧಿಕ ಒಟ್ಟು ರನ್

1 ಬೆತ್ ಮೂನಿ, ಆಸ್ಟ್ರೇಲಿಯಾ, 6 ಇನ್ನಿಂಗ್ಸ್, 259 ರನ್, 30 ಬೌಂಡರಿ, 2 ಸಿಕ್ಸರ್
2 ಅಲಿಸಾ ಹೀಲಿ, ಆಸ್ಟ್ರೇಲಿಯಾ, 6 ಇನ್ನಿಂಗ್ಸ್, 236 ರನ್, 28 ಬೌಂಡರಿ, 9 ಸಿಕ್ಸರ್
3 ನಟಾಲಿಯಾ ಸೈವರ್, ಇಂಗ್ಲೆಂಡ್ 4 ಇನ್ನಿಂಗ್ಸ್, 202 ರನ್, 24 ಬೌಂಡರಿ, 1 ಸಿಕ್ಸರ್
4 ಹೀದರ್ ನೈಟ್, ಇಂಗ್ಲೆಂಡ್ 4 ಇನ್ನಿಂಗ್ಸ್, 193 ರನ್, 22 ಬೌಂಡರಿ, 5 ಸಿಕ್ಸರ್
5 ಶಫಾಲಿ ವರ್ಮಾ, ಭಾರತ, 5 ಇನ್ನಿಂಗ್ಸ್, 163 ರನ್, 18 ಬೌಂಡರಿ, 9 ಸಿಕ್ಸರ್

ಅತ್ಯಧಿಕ ವಿಕೆಟ್‌ಗಳು

ಅತ್ಯಧಿಕ ವಿಕೆಟ್‌ಗಳು

1 ಮೇಗನ್ ಶಟ್, ಆಸ್ಟ್ರೇಲಿಯಾ, 6 ಪಂದ್ಯಗಳು, 13 ವಿಕೆಟ್‌ಗಳು
2 ಪೂನಮ್ ಯಾದವ್, ಭಾರತ 5 ಪಂದ್ಯಗಳು, 10 ವಿಕೆಟ್‌ಗಳು
3 ಜೆಸ್ ಜಾನ್ಸನ್, ಆಸ್ಟ್ರೇಲಿಯಾ, 6 ಪಂದ್ಯಗಳು, 10 ವಿಕೆಟ್‌ಗಳು
4 ಸೋಫಿ ಎಕ್ಲೆಸ್ಟೋನ್, ಇಂಗ್ಲೆಂಡ್, 4 ಪಂದ್ಯಗಳು, 8 ವಿಕೆಟ್‌ಗಳು
5 ಅನ್ಯಾ ಪೊದೆಸಸ್ಯ, ಇಂಗ್ಲೆಂಡ್, 4 ಪಂದ್ಯಗಳು, 8 ವಿಕೆಟ್‌ಗಳು

ಅತ್ಯಧಿಕ ಸ್ಟ್ರೈಕ್ ರೇಟ್

ಅತ್ಯಧಿಕ ಸ್ಟ್ರೈಕ್ ರೇಟ್

1 ಶೆಫಾಲಿ ವರ್ಮಾ, ಭಾರತ, 5 ಇನ್ನಿಂಗ್ಸ್, 163 ರನ್, 32.60 ಸರಾಸರಿ, 158.25 ಸ್ಟ್ರೈಕ್ ರೇಟ್
2 ಅಲಿಸಾ ಹೀಲಿ, ಆಸ್ಟ್ರೇಲಿಯಾ, 6 ಇನ್ನಿಂಗ್ಸ್, 236 ರನ್, 39.33 ಸರಾಸರಿ, 156.29 ಸ್ಟ್ರೈಕ್ ರೇಟ್
3 ಲಾರಾ ವೊಲ್ವಾರ್ಡ್, ದಕ್ಷಿಣ ಆಫ್ರಿಕಾ, 2 ಇನ್ನಿಂಗ್ಸ್, 94 ರನ್, 0 ಸರಾಸರಿ, 149.21 ಸ್ಟ್ರೈಕ್ ರೇಟ್
4 ಲಿಜೆಲ್ ಲೀ, ದಕ್ಷಿಣ ಆಫ್ರಿಕಾ, 4 ಇನ್ನಿಂಗ್ಸ್, 119 ರನ್, 29.75 ಸರಾಸರಿ, 138.37 ಸ್ಟ್ರೈಕ್ ರೇಟ್
5 ಹೀದರ್ ನೈಟ್, ಇಂಗ್ಲೆಂಡ್, 4 ಇನ್ನಿಂಗ್ಸ್, 193 ರನ್, 64.33 ಸರಾಸರಿ, 136.88 ಸ್ಟ್ರೈಕ್ ರೇಟ್

ಬೆಸ್ಟ್ ಬೌಲಿಂಗ್ ಫಿಗರ್

ಬೆಸ್ಟ್ ಬೌಲಿಂಗ್ ಫಿಗರ್

1 ಶಶಿಕಲಾ ಸಿರಿವರ್ಧನೆ, ಶ್ರೀಲಂಕಾ, 4.0 ಓವರ್‌ಗಳು, 4 ವಿಕೆಟ್‌ಗಳು, 16 ಕೊಟ್ಟ ರನ್‌ಗಳು
2 ರಿತು ಮೋನಿ, ಬಾಂಗ್ಲಾದೇಶ, 4.0 ಓವರ್‌ಗಳು, 4 ವಿಕೆಟ್‌ಗಳು, 18 ಕೊಟ್ಟ ರನ್‌ಗಳು
3 ಮೆಗಾನ್ ಸ್ಕೂಟ್, ಆಸ್ಟ್ರೇಲಿಯಾ, 3.1 ಓವರ್‌ಗಳು, 4 ವಿಕೆಟ್‌ಗಳು, 18 ಕೊಟ್ಟ ರನ್‌ಗಳು
4 ಪೂನಂ ಯಾದವ್, ಭಾರತ, 4.0 ಓವರ್‌ಗಳು, 4 ವಿಕೆಟ್‌ಗಳು, 19 ಕೊಟ್ಟ ರನ್‌ಗಳು
5 ರಾಧಾ ಯಾದವ್, ಭಾರತ, 4.0 ಓವರ್‌ಗಳು, 4 ವಿಕೆಟ್‌ಗಳು, 23 ಕೊಟ್ಟ ರನ್‌ಗಳು

ಅತ್ಯಧಿಕ ಸಿಕ್ಸರ್‌ಗಳು

ಅತ್ಯಧಿಕ ಸಿಕ್ಸರ್‌ಗಳು

1 ಅಲಿಸಾ ಹೀಲಿ, ಆಸ್ಟ್ರೇಲಿಯಾ, 6 ಇನ್ನಿಂಗ್ಸ್, 236 ರನ್‌ಗಳು, 9 ಸಿಕ್ಸ್
2 ಶೆಫಾಲಿ ವರ್ಮಾ, ಭಾರತ, 5 ಇನ್ನಿಂಗ್ಸ್, 163 ರನ್‌ಗಳು, 9 ಸಿಕ್ಸ್
3 ಚಮರಿ ಅತಪಟು, ಶ್ರೀಲಂಕಾ, 4 ಇನ್ನಿಂಗ್ಸ್, 154 ರನ್‌ಗಳು, 7 ಸಿಕ್ಸ್
4 ಹೀದರ್ ನೈಟ್, ಇಂಗ್ಲೆಂಡ್, 4 ಇನ್ನಿಂಗ್ಸ್, 193 ರನ್‌ಗಳು, 5 ಸಿಕ್ಸ್
5 ಮ್ಯಾಡ್ ಗ್ರೀನ್, ನ್ಯೂಜಿಲೆಂಡ್, 4 ಇನ್ನಿಂಗ್ಸ್, 92 ರನ್‌ಗಳು, 4 ಸಿಕ್ಸ್

Story first published: Monday, March 9, 2020, 19:09 [IST]
Other articles published on Mar 9, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X