ಢಾಕಾ, ಅಕ್ಟೋಬರ್ , 19: 10ನೇ ಪುರುಷರ ಏಷ್ಯಾಕಪ್ ಹಾಕಿ ಟೂರ್ನಿಯಲ್ಲಿ ಭಾರತ ತನ್ನ ಗೆಲುವಿನ ನಾಗಾಲೋಟ ಮುಂದುವರೆಸಿದೆ.
ಗುರುವಾರ ನಡೆದ 'ಎ' ವಿಭಾಗದ ಪಂದ್ಯದಲ್ಲಿ ಭಾರತ ತಂಡ ಮಲೇಷ್ಯಾ ವಿರುದ್ಧ 6-2 ಅಂತರ ಗೋಲುಗಳಿಂದ ಭರ್ಜರಿ ಜಯ ದಾಖಲಿಸಿದೆ. ಈ ಮೂಲಕ ಭಾರತ ತನ್ನ ಫೈನಲ್ ಹಾದಿಯನ್ನು ಸುಲಭ ಮಾಡಿಕೊಂಡಿತು.

ಭಾರತ ಪರ ಆಕಾಶ್ ದೀಪ್ ಸಿಂಗ್, ಹರ್ಮನ್ ಪ್ರೀತ್ ಸಿಂಗ್, ಉತ್ತಪ್ಪ, ಗುರುಜಂತ್ ಸಿಂಗ್, ಎಸ್.ವಿ ಸುನೀಲ್ ಹಾಗೂ ಸರ್ಧಾರ್ ಸಿಂಗ್ ತಲಾ ಒಂದೊಂದು ಗೋಲು ಬಾರಿಸಿ ತಂಡದ ಗೆಲುವಿಗೆ ಪಾತ್ರರಾದರು.
ಭಾರತ ತನ್ನ ಮೊದಲ ಪಂದ್ಯದಲ್ಲಿ ಜಪಾನ್ ವಿರುದ್ಧ 5-1ರಿಂದ ಗೆಲುವು ಸಾಧಿಸಿತ್ತು. ಬಳಿಕ ಬಾಂಗ್ಲಾದೇಶವನ್ನು 0-7 ಅಂತರದಲ್ಲಿ, ಪಾಕಿಸ್ತಾನವನ್ನು ಭಾರತ 3-1 ಗೋಲುಗಳಿಂದ ಮಣಿಸಿತ್ತು. ಇದೀಗ ಮಲೇಷ್ಯಾ ತಂಡವನ್ನು ಸೋಲಿಸಿರುವ ಭಾರತ ತನ್ನ ಗೆಲುವಿನ ನಾಗಾಲೋಟ ಮುಂದುವರೆಸಿದೆ.