ಏಷ್ಯಾ ಕಪ್‌: ಪಾಕ್ ಬಗ್ಗುಬಡಿದ ಭಾರತಕ್ಕೆ ಮಲೇಷ್ಯಾ ಸವಾಲು!

Posted By:

ಢಾಕಾ, ಅಕ್ಟೋಬರ್ 22: ಬಾಂಗ್ಲಾದೇಶದಲ್ಲಿ ನಡೆಯುತ್ತಿರುವ ಏಷ್ಯಾ ಕಪ್‌ ಪುರುಷರ ಹಾಕಿ ಟೂರ್ನಿಯ ಫೈನಲ್‌ ನಲ್ಲಿ ಮಲೇಷಿಯಾ ತಂಡವನ್ನು ಭಾರತ ತಂಡ ಎದುರಿಸಲಿದೆ.

ಶನಿವಾರ ನಡೆದ ಪಂದ್ಯದಲ್ಲಿ ಸೂಪರ್‌ -4 ಗೇಮ್‌ನ ಅಂತಿಮ ಪಂದ್ಯದಲ್ಲಿ ಪಾಕಿಸ್ತಾನ ತಂಡವನ್ನು ಸೋಲಿಸಿದ ಭಾರತ ಫೈನಲ್‌ಗೆ ಲಗ್ಗೆ ಇಟ್ಟಿದೆ. ಪಾಕಿಸ್ತಾನವನ್ನು 4-0 ಗೋಲುಗಳ ಅಂತರದಿಂದ ಭರ್ಜರಿ ಗೆಲುವು ದಾಖಲಿಸಿತು.

Hockey Asia Cup 2017 final:where to watch India vs Malaysia

ಸತ್ಬೀರ್‌ ಸಿಂಗ್‌, ಹರ್ಮನ್‌ಪ್ರೀತ್‌ ಸಿಂಗ್‌‌, ಲಲಿತ್‌ ಉಪಾಧ್ಯಾಯ ಹಾಗೂ ಗುರ್‌ಜಂತ್‌ ಸಿಂಗ್‌ ತಲಾ ಒಂದು ಗೋಲು ಬಾರಿಸಿದರು. ಭಾರತವು ಫೈನಲ್ ನಲ್ಲಿ ಮಲೇಷಿಯಾವನ್ನು ಅಕ್ಟೋಬರ್ 22ರಂದು ಎದುರಿಸಲಿದೆ.

ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಪಾಕ್‌ ವಿರುದ್ಧ ಭಾರತ ಜಯ ಸಾಧಿಸಿದ್ದ ಭಾರತ, ಈ ಹಿಂದೆ ಲಂಡನ್‌ನಲ್ಲಿ ನಡೆದ ವಿಶ್ವ ಹಾಕಿ ಲೀಗ್‌ನ ಸೆಮಿಫೈನಲ್‌ನಲ್ಲೂ ಗೆಲುವು ಸಾಧಿಸಿತ್ತು.

ಎಲ್ಲಿ?: ಢಾಕಾದ ಮೌಲಾನಾ ಭಷಾನಿ ರಾಷ್ಟ್ರೀಯ ಹಾಕಿ ಸ್ಟೇಡಿಯಂ.
ಯಾವ ಚಾನೆಲ್: ಸ್ಟಾರ್ ಸ್ಫೋರ್ಟ್ 2 ಹಾಗೂ ಸ್ಟಾರ್ ಸ್ಫೋರ್ಟ್ಸ್ ಎಚ್ ಡಿ2
ಯಾವಾಗ?: ಸಂಜೆ 5 PM IST.
ಮೊಬೈಲ್ ನಲ್ಲಿ: ಹಾಟ್ ಸ್ಟಾರ್ ನಲ್ಲಿ ಲಭ್ಯ.

Story first published: Sunday, October 22, 2017, 10:33 [IST]
Other articles published on Oct 22, 2017
POLLS

myKhel ನಿಂದ ತಾಜಾ ಸುದ್ದಿಗಳನ್ನು ಪಡೆಯಿರಿ