ಹಾಕಿ: ಜಿದ್ದಾಜಿದ್ದಿನ ಪಂದ್ಯದಲ್ಲಿ ಬೆಲ್ಜಿಯಂ ವಿರುದ್ಧ ಭಾರತಕ್ಕೆ ಜಯ

Posted By:
Indian Hockey team beat Belgium by 5-4

ಹ್ಯಾಮಲ್‌ಟನ್, ಜನವರಿ 25: ನ್ಯೂಜಿಲೆಂಡ್‌ನಲ್ಲಿ ನಡೆಯುತ್ತಿರುವ ನಾಲ್ಕು ದೇಶದಳ ಆಹ್ವಾನಿತ ಹಾಕಿ ಪಂದ್ಯಾವಳಿಯಲ್ಲಿ ಭಾರತ ಹಾಕಿ ತಂಡ ಬೆಲ್ಜಿಯಂ ಅನ್ನು ಸೋಲಿಸುವ ಮೂಲಕ ಶುಭಾರಂಭ ಮಾಡಿದೆ.

ನಿನ್ನೆ ನಡೆದ ಪಂದ್ಯದಲ್ಲಿ ಶಕ್ತಿಯುತ ತಂಡ ಬೆಲ್ಜಿಯಂ ಅನ್ನು 5-4 ಅಂತರದಲ್ಲಿ ಸೋಲಿಸಿ ಭಾರತ ಹಾಕಿ ತಂಡ ಗೆಲುವಿನ ನಗೆ ಬೀರಿದೆ. ಮೊದಲಿನಿಂದ ಕೊನೆಯ ವರೆಗೆ ಜಿದ್ದಾಜಿದ್ದಿನ ಹೊರಾಟ ಇದ್ದ ಪಂದ್ಯದಲ್ಲಿ ಗುಣಮಟ್ಟದ ಆಟ ಪ್ರದರ್ಶಿಸಿದ ಭಾರತ ತಂಡ ಗೆಲುವು ಸಾಧಿಸಿ ಬೀಗಿತು.

ಪಂದ್ಯದ ಆರಂಭದಿಂದಲೂ ಆಕ್ರಮಣಕಾರಿ ಆಟಕ್ಕೆ ಮೊರೆಹೋದ ಭಾರತದ ಆಟಗಾರರಿಗೆ ನಾಲ್ಕನೇ ನಿಮಿಷದಲ್ಲಿಯೇ ಫಲ ದೊರೆತಿತು. ರೂಪಿಂದರ್ ಪಾಲ್ ಸಿಂಗ್ ಅವರು ಭಾರತಕ್ಕೆ ಮೊದಲ ಗೋಲು ಗಳಿಸಿಕೊಟ್ಟರು.

17 ನಿಮಿಷದಲ್ಲಿ ಭಾರತೀಯ ಗೋಲ್‌ಪೋಸ್ಟ್‌ ಮೇಲೆ ಪ್ರತಿದಾಳಿ ನಡೆಸಿದ ಬಿಲ್ಜಿಯಂನ ಜಾನ್ ಗೋಲು ಗಳಿಸಿ ಗೋಲು ಸಂಖ್ಯೆಯನ್ನು ಸಮ ಮಾಡಿದರು. ಆ ನಂತರ ಮತ್ತೆ ಬೆಲ್ಜಿಯಂ ಗೋಲು ಗಳಿಸುವ ಮೂಲಕ 2-1 ಮುನ್ನಡೆ ಸಾಧಿಸಿತು. ಮತ್ತೆ ಭಾರತದ ಸಹಾಯಕ್ಕೆ ಬಂದ ರೂಪಿಂದರ್ ಸಿಂಗ್ ಎರಡನೇ ಗೋಲು ಗಳಿಸಿ ಗೋಲು ಸಮ ಮಾಡಿದರು.

ನಂತರ ಸತತವಾಗಿ ಎರಡೂ ತಂಡಗಳು ಎದುರಾಳಿ ಗೋಲ್‌ಪೋಸ್ಟ್‌ ಮೇಲೆ ಆಕ್ರಮಣ ನಡೆಸುತ್ತಲೇ ಇದ್ದವು, ಎರಡೂ ತಂಡಗಳು ತಲಾ ಎರಡು ಗೋಲು ಗಳಿಸಿ 4-4 ರಲ್ಲಿದ್ದವು. ಆದರೆ ಇನ್ನೇನು ಆಟ ಮುಗಿಯಲು ಕೆಲವೇ ನಿಮಿಷಗಳಿದ್ದಾಗ 59 ನಿಮಿಷದಲ್ಲಿ ಭಾರತ ತಂಡದ ಪಾರ್ವರ್ಡ್‌ ಆಟಗಾರ ದಿಲ್‌ಪ್ರೀತ್ ಸಿಂಗ್‌ ಅವರು ಗೋಲು ಗಳಿಸಿ ಭಾರತಕ್ಕೆ ಗೆಲವು ತಂದುಕೊಟ್ಟರು.

Story first published: Thursday, January 25, 2018, 15:16 [IST]
Other articles published on Jan 25, 2018

myKhel ನಿಂದ ತಾಜಾ ಸುದ್ದಿಗಳನ್ನು ಪಡೆಯಿರಿ