ಟೋಕಿಯೋ ಒಲಿಂಪಿಕ್ಸ್: ಪುರುಷರ ಹಾಕಿ ಸೆಮಿಫೈನಲ್‌ನಲ್ಲಿ ಭಾರತಕ್ಕೆ ನಿರಾಸೆ

ಟೋಕಿಯೋ: ಟೋಕಿಯೋ ಒಲಿಂಪಿಕ್ಸ್ ಪುರುಷರ ಹಾಕಿ ಸೆಮಿಫೈನಲ್ ಪಂದ್ಯದಲ್ಲಿ ಭಾರತಕ್ಕೆ ನಿರಾಸೆಯಾಗಿದೆ. 41 ವರ್ಷಗಳ ಸುದೀರ್ಘ ಸಮಯದ ಬಳಿಕ ಒಲಿಂಪಿಕ್ಸ್‌ನಲ್ಲಿ ಸೆಮಿಫೈನಲ್‌ಗೆ ಪ್ರವೇಶಿಸಿದ್ದ ಪುರುಷರ ಹಾಕಿ ತಂಡ ಉತ್ತಮ ಪೈಪೋಟಿಯೊಂದಿಗೆ ಬೆಲ್ಜಿಯಂ ವಿರುದ್ಧ 2-5ರ ಅಂತರದಿಂದ ಸೋಲನುಭವಿಸಿದೆ. ಆದರೆ ಭಾರತಕ್ಕೆ ಇನ್ನೂ ಪದಕದ ನಿರೀಕ್ಷೆಯಿದೆ. ಸೆಮಿಫೈನಲ್‌ನಲ್ಲಿ ಸೋತ ಹಾಕಿ ತಂಡಕ್ಕೆ ಕಂಚಿನ ಪದಕಕ್ಕಾಗಿ ಸ್ಪರ್ಧೆ ನಡೆಯಲಿದೆ.

ಒಲಿಂಪಿಕ್ಸ್: ಡಿಸ್ಕಸ್‌ ಎಸೆತದಲ್ಲಿ ಭಾರತಕ್ಕೆ ನಿರಾಸೆ, 6ನೇ ಸ್ಥಾನ ಪಡೆದ ಕಮಲ್‌ಪ್ರೀತ್‌ ಕೌರ್ಒಲಿಂಪಿಕ್ಸ್: ಡಿಸ್ಕಸ್‌ ಎಸೆತದಲ್ಲಿ ಭಾರತಕ್ಕೆ ನಿರಾಸೆ, 6ನೇ ಸ್ಥಾನ ಪಡೆದ ಕಮಲ್‌ಪ್ರೀತ್‌ ಕೌರ್

41 ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ ಭಾರತ ಪುರುಷರ ಹಾಕಿ ತಂಡ ಒಲಿಂಪಿಕ್ಸ್‌ನಲ್ಲಿ ಫೈನಲ್‌ ಪ್ರವೇಶಿಸಿತ್ತು. ಆದರೆ 2016ರ ರಿಯೋ ಒಲಿಂಪಿಕ್ಸ್ ಕಂಚಿನ ಪದಕ ವಿಜೇತ ಬೆಲ್ಜಿಯಂ ತಂಡ ಈ ಬಾರಿ ಸೆಮಿಫೈನಲ್‌ನಲ್ಲಿ ಮುನ್ನಡೆ ಪಡೆದುಕೊಂಡಿದೆ. ಇದರೊಂದಿಗೆ ಪುರುಷರ ಹಾಕಿಯಲ್ಲಿ ಭಾರತದ ಚಿನ್ನದ ಪದಕದ ಆಸೆ ಇಲ್ಲಿಗೆ ಕೊನೆಗೊಂಡಿದೆ.

ಭಾರತದ ಖಾತೆ ತೆರೆದ ಮನ್‌ಪ್ರೀತ್‌ ಸಿಂಗ್‌

ಭಾರತದ ಖಾತೆ ತೆರೆದ ಮನ್‌ಪ್ರೀತ್‌ ಸಿಂಗ್‌

ಭಾರತ ಪರ 11ನೇ ನಿಮಿಷದಲ್ಲಿ ಮನ್‌ಪ್ರೀತ್‌ ಸಿಂಗ್‌ ಮೊದಲನೇ ಗೋಲ್ ಬಾರಿಸಿದರು. 13ನೇ ನಿಮಿಷದಲ್ಲಿ ಸಂದೀಪ್ ಸಿಂಗ್ ಗೋಲ್ ಬಾರಿಸಿ ಮೊದಲ ಕ್ವಾರ್ಟರ್ ಹೊತ್ತಿಗೆ ಭಾರತಕ್ಕೆ ಮುನ್ನಡೆ ನೀಡಿದ್ದರು. ಆದರೆ ಮುಂದಿನ ಕ್ವಾರ್ಟರ್‌ಗಳಲ್ಲಿ ಭಾರತಕ್ಕೆ ಗೋಲ್ ದಾಖಲಾಗಲಿಲ್ಲ. ಕ್ವಾರ್ಟರ್ ಫೈನಲ್‌ ಪಂದ್ಯದಲ್ಲಿ ಭಾರತೀಯ ತಂಡ ಗ್ರೇಟ್ ಬ್ರಿಟನ್ ವಿರುದ್ಧ 3-1ರ ಅಂತರದಿಂದ ಗೆದ್ದು ಸೆಮಿಫೈನಲ್‌ಗೆ ಪ್ರವೇಶಿಸಿತ್ತು. ಮತ್ತೊಂದು ಪಂದ್ಯದಲ್ಲಿ ಬೆಲ್ಜಿಯಂ ತಂಡ ಸ್ಪೇನ್ ವಿರುದ್ಧ 3-1ರ ಅಂತರದಿಂದ ಜಯ ಗಳಿಸಿ ಸೆಮಿಫೈನಲ್‌ಗೆ ಪ್ರವೇಶಿಸಿತ್ತು. ಆದರೆ ಸೆಮಿಫೈನಲ್‌ ಪಂದ್ಯದಲ್ಲಿ ಭಾರತಕ್ಕೆ ಸೋಲಾಗಿದೆ. ನೆಮ್ಮದಿಯ ಸಂಗತಿಯಂದರೆ, ಭಾರತಕ್ಕೆ ಇನ್ನೂ ಪದಕ ಗೆಲ್ಲಲು ಅವಕಾಶವಿದೆ. ಸೆಮಿಫೈನಲ್‌ನಲ್ಲಿ ಸೋತ ತಂಡಗಳಿಗೆ ಕಂಚಿನ ಪದಕಕ್ಕಾಗಿ ಪಂದ್ಯ ನಡೆಯುತ್ತದೆ. ಅದರಲ್ಲಿ ಗೆಲ್ಲುವ ತಂಡ ಕಂಚಿನ ಪದಕ ಪಡೆದುಕೊಳ್ಳಲಿದೆ.

ರಾಬಿ ಹೆಂಡ್ರಿಕ್ಸ್ ಬೆಲ್ಜಿಯಂ ಗೆಲುವಿನ ರುವಾರಿ

ರಾಬಿ ಹೆಂಡ್ರಿಕ್ಸ್ ಬೆಲ್ಜಿಯಂ ಗೆಲುವಿನ ರುವಾರಿ

ಬೆಲ್ಜಿಯಂ ತಂಡದ ಪರ ಅಲೆಕ್ಸಾಂಡರ್ ರಾಬಿ ಹೆಂಡ್ರಿಕ್ಸ್ ಮೂರು ಗೋಲ್ ಬಾರಿಸಿ ತಂಡದ ಗೆಲುವಿನ ರುವಾರಿ ಎನಿಸಿದರು. 19ನೇ ನಿಮಿಷ, 49 ನಿಮಿಷ ಮತ್ತು 53ನೇ ನಿಮಿಷಗಳಲ್ಲಿ ರಾಬಿ ಹೆಂಡ್ರಿಕ್ಸ್ ಗೋಲ್ ಬಾರಿಸಿ ಬೆಲ್ಜಿಯಂ ಭರ್ಜರಿ ಮುನ್ನಡೆಗೆ ಕಾರಣರಾದರು. ಇನ್ನು ಬೆಲ್ಜಿಯಂ ಪರ ಲೊಕ್ ಫ್ಯಾನಿ ಲ್ಯೂಪರ್ಟ್ ಪಂದ್ಯ ಆರಂಭದಲ್ಲೇ ಅಂದರೆ 2ನೇ ನಿಮಿಷದಲ್ಲೇ ಗೋಲ್ ಬಾರಿಸಿದರೆ, ಜಾನ್-ಜಾನ್ ಡೊಮಿನಿಕ್ ಡೊಹ್ಮೆನ್ ಪಂದ್ಯದ ಕೊನೇ ಕ್ಷಣ ಅಂದರೆ 60ನೇ ನಿಮಿಷದಲ್ಲಿ ಗೋಲ್ ಬಾರಿಸಿ ತಂಡದ ಗೆಲುವಿಗೆ ಕಾರಣರಾದರು. ಇಲ್ಲಿಗೆ ಪುರುಷರ ಹಾಕಿಯಲ್ಲಿ ಭಾರತದ ಚಿನ್ನದ ಪದಕದ ಬೇಟೆ ಕೊನೆಗೊಂಡಿದೆ. ಪಂದ್ಯದಲ್ಲಿ ಗೋಲ್‌ಕೀಪರ್ ಶ್ರೀಜಿತ್ ಪರತ್ತು ರವೀಂದ್ರನ್ ಉತ್ತಮ ಪ್ರಯತ್ನ ಕಂಡುಬಂತು.

ಭಾರತದ ಪದಕ ಖಾತೆಗೆ ಎರಡು ಪದಕಗಳು

ಭಾರತದ ಪದಕ ಖಾತೆಗೆ ಎರಡು ಪದಕಗಳು

ಭಾರತಕ್ಕೆ ಇಲ್ಲೀವರೆಗೆ (ಆಗಸ್ಟ್ 3, 10 AM) ಎರಡು ಪದಕಗಳು ಸಿಕ್ಕಿವೆ. ಮಹಿಳಾ ವೇಟ್ ಲಿಫ್ಟಿಂಗ್‌ನಲ್ಲಿ ಮೀರಾಬಾಯಿ ಚಾನು ಬೆಳ್ಳಿ ಪದಕ ಜಯಿಸಿದ್ದರೆ, ಮಹಿಳಾ ಬ್ಯಾಡ್ಮಿಂಟನ್ ಸಿಂಗಲ್ಸ್‌ನಲ್ಲಿ ವಿಶ್ವ ಚಾಂಪಿಯನ್ ಪಿವಿ ಸಿಂಧುಗೆ ಕಂಚಿನ ಪದಕ ಲಭಿಸಿದೆ. ಇನ್ನು ಮಹಿಳಾ 69 ಕೆಜಿ ಬಾಕ್ಸಿಂಗ್‌ನಲ್ಲಿ ಭಾರತಕ್ಕೆ ಕಂಚಿನ ಪದಕ ಖಾತ್ರಿಯಾಗಿದೆ. ಲವ್ಲಿನಾ ಬೊರ್ಗೊಹೈನ್ ಕಂಚಿನ ಪದಕ ಖಾತರಿಪಡಿಸಿದ್ದಾರೆ. ಭಾರತೀಯ ತಂಡದ ಬಗ್ಗೆ ಸಂಕ್ಷಿಪ್ತ ಮಾಹಿತಿ ನೀಡುವುದಾದರೆ, ಟೋಕಿಯೋ ಒಲಿಂಪಿಕ್ಸ್‌ಗಾಗಿ ಭಾರತದಿಂದ ಒಟ್ಟು 127 ಅಥ್ಲೀಟ್‌ಗಳು ತೆರಳಿದ್ದಾರೆ. ಇದರಲ್ಲಿ ಅಧಿಕಾರಿಗಳು, ಸಿಬ್ಬಂದಿಗಳೂ ಸೇರಿ ಒಟ್ಟಾರೆ 228 ಮಂದಿಯ ಬೃಹತ್ ತಂಡ ಪ್ರತಿಷ್ಠಿತ ಕ್ರೀಡಾಕೂಟಕ್ಕಾಗಿ ಟೋಕಿಯೋಗೆ ತೆರಳಿತ್ತು. ಒಲಿಂಪಿಕ್ಸ್ ಇತಿಹಾಸದಲ್ಲಿ ಪಾಲ್ಗೊಳ್ಳುತ್ತಿರುವ ಅತೀ ದೊಡ್ಡ ಭಾರತೀಯ ತಂಡವಿದು. ಒಟ್ಟು 17 ಕ್ರೀಡಾಸ್ಪರ್ಧೆಗಳಲ್ಲಿ ಭಾರತೀಯರು ಸ್ಪರ್ಧಿಸುತ್ತಿದ್ದಾರೆ. ಹಿಂದಿ ರಿಯೋ ಒಲಿಂಪಿಕ್ಸ್‌ನಲ್ಲಿ ಒಟ್ಟು 117 ಅಥ್ಲೀಟ್‌ಗಳು ಸ್ಪರ್ಧಿಸಿದ್ದರು. ಇದರಲ್ಲಿ 63 ಪುರುಷರು, 54 ಮಹಿಳಾ ಸ್ಪರ್ಧಿಗಳಿದ್ದರು.

For Quick Alerts
ALLOW NOTIFICATIONS
For Daily Alerts
Story first published: Tuesday, August 3, 2021, 9:13 [IST]
Other articles published on Aug 3, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X