ಟೋಕಿಯೋ ಒಲಿಂಪಿಕ್ಸ್: ಹೊಸ ಕೊರೊನಾ ನಿಯಮಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಭಾರತ

ಒಲಿಂಪಿಕ್ಸ್ ಆರಂಭಕ್ಕೆ ಇನ್ನು ಕೇವಲ 5 ವಾರಗಳು ಮಾತ್ರವೇ ಬಾಕಿಯಿದೆ. ಎಲ್ಲಾ ರಾಷ್ಟ್ರಗಳ ಕ್ರೀಡಾಪಟುಗಳು ಅಂತಿಮ ಹಂತದ ಸಿದ್ಧತೆಯನ್ನು ನಡೆಸುತ್ತಿವೆ. ಈ ಸಂದರ್ಭದಲ್ಲಿ ಒಲಿಂಪಿಕ್ಸ್ ಆಯೋಜಿಸುತ್ತಿರುವ ಜಪಾನ್ ಕೊರೊನಾವೈರಸ್‌ನ ಹಿನ್ನೆಲೆಯಲ್ಲಿ ಕೆಲ ಕಠಿಣ ನಿಯಮಗಳನ್ನು ಮಾಡಿದೆ. ಈ ನಿಯಮಗಳು ನ್ಯಾಯಯುತವಾಗಿಲ್ಲ ಎಂದು ಭಾರತದ ಒಲಿಂಪಿಕ್ಸ್ ಮಂಡಳಿ ಆಯೋಜಕರ ನಿರ್ಧಾರಕ್ಕೆ ಅಸಧಾನವನ್ನು ವ್ಯಕ್ತಪಡಿಸಿದೆ.

ಸೋಮವಾರ ಟೋಕಿಯೋ ಒಲಿಂಪಿಕ್ಸ್ ಆಯೋಜಕರು ಹೊಸ ನಿಯಮಗಳನ್ನು ಅಳವಡಿಸಿರುವುದಾಗಿ ತಿಳಿಸಿದ್ದಾರೆ. ಕೊರೊನಾವೈರಸ್‌ನ ರೂಪಾಂತರಗಳಿಂದ ಉಂಟಾದ ಗಂಭೀರ ಪರಿಣಾಮಗಳನ್ನು ಎದುರಿಸಿದ ಭಾರತ ಸೇರಿದಂತೆ ಹಲವಾರು ದೇಶಗಳಿಂದ ಸೋಂಕಿನ ಅಪಾಯವನ್ನು ಕಡಿಮೆ ಮಾಡಲು ಕೆಲ ಹೆಚ್ಚುವರಿ ಕ್ರಮಗಳನ್ನು ತೆಗೆದುಕೊಳ್ಳುವ ಬಗ್ಗೆ ಸಂಘಟಕರು ಮಾಹಿತಿ ನೀಡಿದ್ದಾರೆ.

 ಟೋಕಿಯೋ ಒಲಿಂಪಿಕ್ಸ್‌ ವೀಕ್ಷಣೆಗೆ 10,000 ಅಭಿಮಾನಿಗಳಿಗೆ ಅನುಮತಿ ಟೋಕಿಯೋ ಒಲಿಂಪಿಕ್ಸ್‌ ವೀಕ್ಷಣೆಗೆ 10,000 ಅಭಿಮಾನಿಗಳಿಗೆ ಅನುಮತಿ

ಹೊಸ ನಿಯಮದ ಪ್ರಕಾರ ಕ್ರೀಡಾಕೂಡದಲ್ಲಿ ಭಾಗಿಯಾಗುವ ಕ್ರೀಡಾಪಟುಗಳು ಒಂದು ವಾರಕ್ಕೂ ಮುನ್ನ ಒಂದು ವಾರದವರೆಗೆ ನಿತ್ಯವೂ ಕೊರೊನಾ ಪರೀಕ್ಷೆಗೆ ಒಳಗಾಗಬೇಕಿದೆ. ಅಲ್ಲದೆ ಜಪಾನ್‌ಗೆ ತೆರಳಿದ ಮೂರು ದಿನಗಳ ಕಾಲ ಇತರ ತಂಡಗಳೊಂದಿಗೆ ಸಂಪರ್ಕವಾಗುವುದನ್ನು ನಿರ್ಬಂಧಿಸಲಾಗುತ್ತದೆ.

ಭಾರತೀಯ ಒಲಿಂಪಿಕ್ಸ್ ಅಸೋಸೊಯೇಶನ್(ಐಒಸಿ) ಇದಕ್ಕೆ ಪ್ರತಿಕ್ರಿಯಿಸಿದೆ. ಈ ನಿಯಮದಿಂದಾಗಿ ಭಾರತದಂತಾ ರಾಷ್ಟ್ರಗಳ ಕ್ರೀಡಾಪಡುಗಳಿಗೆ ಮೂರು ದಿನಗಳ ಅಮೂಲ್ಯ ಅಭ್ಯಾಸದ ಅವಧಿ ನಷ್ಟವಾಗುತ್ತದೆ ಎಂದು ಐಒಸಿ ಅಸಮಾಧಾನವನ್ನು ವ್ಯಕ್ತಪಡಿಸಿದೆ. ಆಥ್ಲೀಟ್‌ಗಳು ಒಲಿಂಪಿಕ್ಸ್ ಗ್ರಾಮದೊಳಗೆ ಕೇವಲ 5 ದಿನಗಳ ಮುನ್ನ ಬರಲು ಅವಕಾಶವಿರುವುದಾಗಿ ಐಒಎಯ ಅಧ್ಯಕ್ಷ ನರೀಂದರ್ ಭಾತ್ರಾ ಹಾಗೂ ಕಾರ್ಯದರ್ಶಿ ರಾಜೀವ್ ಮೆಹ್ತಾ ಹೇಳಿದ್ದಾರೆ.

"ದೊರೆಯುವ ಐದು ದಿನಗಳಲ್ಲಿ ಮೂರು ದಿನಗಳು ವ್ಯರ್ಥವಾಗುತ್ತದೆ. ಈ ಅವಧಿ ಅಭ್ಯಾಸದ ದೃಷ್ಟಿಯಿಂದ ಬಹಳ ಮುಖ್ಯ. ವರ್ಷಗಳಿಂದ ಇದಕ್ಕಾಗಿ ಕಠಿಣ ಪರಿಶ್ರಮವನ್ನು ಪಡುತ್ತಿರುವ ಭಾರತೀಯ ಕ್ರೀಡಾಪಟುಗಳಿಗೆ ಇದರಿಂದಾ ತುಂಬಾ ಅನ್ಯಾಯವಾಗುತ್ತದೆ" ಎಂದು ಐಒಸಿ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

For Quick Alerts
Subscribe Now
For Quick Alerts
ALLOW NOTIFICATIONS
For Daily Alerts
Story first published: Monday, June 21, 2021, 16:55 [IST]
Other articles published on Jun 21, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X