ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ನಮ್ಮೂರ ಪ್ರತಿಭೆ: ತುಮಕೂರಿನ ಖೋ-ಖೋ ಸ್ಟಾರ್ ಪ್ರಜ್ವಲ್ K.H

Prajwal KH

ಪ್ರಜ್ವಲ್ ಕೆ.ಎಚ್‌ ಅಂತರಾಷ್ಟ್ರೀಯ ಮಟ್ಟದ ಖೋ-ಖೋ ಸ್ಟಾರ್ ಆಗಿದ್ದಾರೆ. ರಾಜ್ಯ ಅಷ್ಟೇ ಅಲ್ಲದೆ ರಾಷ್ಟ್ರದಾದ್ಯಂತ ತನ್ನನ್ನು ದೊಡ್ಡ ಮಟ್ಟದಲ್ಲಿ ಗುರುತಿಸಿಕೊಂಡ ಕರ್ನಾಟಕದ ಯುವ ಖೋ-ಖೋ ಪ್ರತಿಭೆ. ತುಮಕೂರು ಮೂಲದ ಪ್ರಜ್ವಲ್ ರಾಷ್ಟ್ರ ಮಟ್ಟದ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದು, ಅನೇಕ ಪ್ರಶಸ್ತಿಗಳು ಹಾಗೂ ಪದಕಗಳನ್ನ ತಮ್ಮದಾಗಿಸಿಕೊಂಡಿದ್ದಾರೆ.

ಮೈಖೇಲ್ ಕನ್ನಡದ ಎಕ್ಸ್‌ಕ್ಲೂಸಿವ್ ''ನಮ್ಮೂರ ಪ್ರತಿಭೆ'' ಸರಣಿ ಲೇಖನದಲ್ಲಿ ಈ ಬಾರಿ ಅಂತರಾಷ್ಟ್ರೀಯ ಮಟ್ಟದ ಖೋ-ಖೋ ಆಟಗಾರ ಕನ್ನಡಿಗ ಪ್ರಜ್ವಲ್ ಕೆ.ಎಚ್‌ ಕುರಿತಾಗಿ ಪ್ರಮುಖ ವಿಚಾರಗಳನ್ನ ತಿಳಿಸಿಕೊಡುವ ಪ್ರಯತ್ನ ನಡೆಸಲಾಗಿದೆ. ಪ್ರಜ್ವಲ್ ಕುರಿತು ಕೆಲವು ಪ್ರಮುಖ ಮಾಹಿತಿಗಳು ಈ ಕೆಳಗಿದೆ.

ಬಾಲ್ಯ ಜೀವನ ಮತ್ತು ಪರಿಚಯ

ಬಾಲ್ಯ ಜೀವನ ಮತ್ತು ಪರಿಚಯ

ತುಮಕೂರು ಮೂಲದ ಹೊನ್ನೇಶಪ್ಪ ಕೆ.ಆರ್. ಹಾಗೂ ಶಕುಂತಲಾ ದಂಪತಿಗೆ ಜನಿಸಿದ ಪುತ್ರನೇ ಪ್ರಜ್ವಲ್ ಕೆ.ಎಚ್. ಚಿಕ್ಕಂದಿನಿಂದಲೇ ಕ್ರೀಡೆಯಲ್ಲಿ ತೊಡಗಿಸಿಕೊಂಡಿದ್ದ ಪ್ರಜ್ವಲ್ ತನ್ನ 11ನೇ ವಯಸ್ಸಿನಲ್ಲಿ ಕ್ರೀಡೆಯಲ್ಲಿ ತೊಡಗಿಕೊಂಡರು. ತರಬೇತುದಾರ ವಿನಯ್ ಅವರ ಅಡಿಯಲ್ಲಿ ಪಳಗಿದ ಪ್ರಜ್ವಲ್ ಅಂತರಾಷ್ಟ್ರೀಯ ಮಟ್ಟದ ಖೋ-ಖೋ ಪಟು ಆಗುತ್ತಾನೆಂದು ಸ್ವತಃ ಮನೆಯವರೇ ಅಂದಾಜಿಸಿರಲಿಲ್ಲ.

ಚಿಕ್ಕವಯಸ್ಸಿನಲ್ಲೇ ಪ್ರಜ್ವಲ್ ಪ್ರತಿಭೆಯನ್ನ ಗುರುತಿಸಿದ ತರಬೇತುದಾರ ವಿನಯ್, ಎರಡು ವರ್ಷಗಳ ಕಾಲ ತರಬೇತಿ ನೀಡಿದರು. ಪರಿಣಾಮ 13ನೇ ವಯಸ್ಸಿಗೆ ಉತ್ತರ ಪ್ರದೇಶದಲ್ಲಿ ನಡೆದ ಸಬ್‌ ಜ್ಯೂನಿಯರ್ ನ್ಯಾಷನಲ್ ಚಾಂಪಿಯನ್‌ಶಿಪ್‌ನಲ್ಲಿ ಸ್ಥಾನ ಪಡೆದರು. ಅದೇ ರೀತಿಯಲ್ಲಿ ಮಧ್ಯಪ್ರದೇಶದಲ್ಲಿ ನಡೆದ ಸಿಬಿಎಸ್‌ಸಿ ಚಾಂಪಿಯನ್‌ಶಿಪ್‌ನಲ್ಲಿ ಭಾಗವಹಿಸಲು ಅರ್ಹತೆ ಪಡೆದರು. ಮುಂದಿನ ಹೆಚ್ಚಿನ ತರಬೇತಿಗೆ ವಿವೇಕಾನಂದ ಕ್ರೀಡಾ ಸಂಸ್ಥೆಯಲ್ಲಿ ಡಾ. ಕವೀಶ್ ಹಾಗೂ ಸೀನಿಯರ್ ಆಟಗಾರ ಕರೀಂ ಮಾರ್ಗದರ್ಶನ ಪಡೆದರು.

15 ವರ್ಷಗಳ ಹಿಂದಿನ ಸಚಿನ್ ತೆಂಡೂಲ್ಕರ್‌ ದಾಖಲೆ ಮುರಿದ ದೀಪಕ್ ಹೂಡಾ

9ನೇ ತರಗತಿಯಲ್ಲೇ ನ್ಯಾಷನಲ್ ಟೂರ್ನಮೆಂಟ್‌ನಲ್ಲಿ ಭಾಗಿ

9ನೇ ತರಗತಿಯಲ್ಲೇ ನ್ಯಾಷನಲ್ ಟೂರ್ನಮೆಂಟ್‌ನಲ್ಲಿ ಭಾಗಿ

ಹೌದು, ಪ್ರಜ್ವಲ್ ತನ್ನ 9ನೇ ತರಗತಿಯಲ್ಲೇ ಛತ್ತೀಸಘಡದಲ್ಲಿ ನಡೆದ ಸ್ಕೂಲ್ ನ್ಯಾಷನಲ್ಸ್‌ನಲ್ಲಿ ಭಾಗಿಯಾಗಿದ್ದಾರೆ. ಇದೇ ವೇಳೆಯಲ್ಲಿ ಕರ್ನಾಟಕ ಸರ್ಕಾರ ನೀಡುವ ಅಸಾಧಾರಣ ಪ್ರತಿಭೆ ಪ್ರಶಸ್ತಿ ಪಡೆದಿರುವುದ ಈತನಿಗೆ ಹೆಮ್ಮೆಯ ವಿಚಾರವಾಗಿದೆ. ಹೈಸ್ಕೂಲ್ ದಿನಗಳು ಮುಗಿದ ನಂತರ ಪಿಯುಸಿ ವಿದ್ಯಾಭ್ಯಾಸದ ವೇಳೆಯಲ್ಲಿ ಕ್ರೀಡೆ ಮತ್ತು ಓದನ್ನು ಬ್ಯಾಲೆನ್ಸ್ ಮಾಡುವ ಮೂಲಕ ಟೂರ್ನಮೆಂಟ್‌ಗಳಲ್ಲಿ ಭಾಗಿಯಾಗುತ್ತಿದ್ದರು.

ನಮ್ಮೂರ ಪ್ರತಿಭೆ: ಗಾಲ್ಫ್‌ನಲ್ಲಿ ಭಾರತದ ಭವಿಷ್ಯದ ಭರವಸೆ ಕನ್ನಡತಿ ಅದಿತಿ ಅಶೋಕ್

ಪ್ರಜ್ವಲ್ ಪ್ರಮುಖ ಸಾಧನೆಗಳು

ಪ್ರಜ್ವಲ್ ಪ್ರಮುಖ ಸಾಧನೆಗಳು

*ಪ್ರಥಮ ಪಿಯುಸಿ ಹಂತದಲ್ಲಿ ತುಮಕೂರಿನಲ್ಲಿ ನಡೆದ ರಾಜ್ಯ ಮಟ್ಟದ ಸ್ಪರ್ಧೆಯಲ್ಲಿ ಪ್ರಶಸ್ತಿ ಪಡೆದಿದ್ದಲ್ಲದೆ, ಮಹಾರಾಷ್ಟ್ರದಲ್ಲಿ ಪಲ್ತಾನದಲ್ಲಿ ನಡೆದ ಪಿಯು ಅಂಡರ್-19 ಖೋ-ಖೊ ಪಂದ್ಯಾವಳಿಯಲ್ಲಿ ರಾಜ್ಯಕ್ಕೆ ದ್ವಿತೀಯ ಪ್ರಶಸ್ತಿ ಗೆದ್ದುಕೊಟ್ಟರು.
* 17ನೇ ವಯಸ್ಸಿನಲ್ಲೇ 24ನೇ ಓಪನ್ ನ್ಯಾಷನಲ್ ಚಾಂಪಿಯನ್‌ಶಿಪ್‌ನಲ್ಲಿ ಭಾಗಿ ಪ್ರಥಮ ಸ್ಥಾನ
* ರಾಜಸ್ತಾನದ ಜೈಪುರದಲ್ಲಿ 52ನೇ ಸೀನಿಯರ್ ನ್ಯಾಷನಲ್ ಚಾಂಪಿಯನ್‌ಶಿಪ್‌ನಲ್ಲಿ ಭಾಗಿ
* ರಾಜ್ಯಮಟ್ಟದಲ್ಲಿ ಅತ್ಯುತ್ತಮ ಆಲ್‌ರೌಂಡರ್ ಪ್ರಶಸ್ತಿ
* 52ನೇ ಸೀನಿಯರ್ ನ್ಯಾಷನಲ್ ಚಾಂಪಿಯನ್‌ಶಿಪ್‌ನಲ್ಲಿ ಭಾಗಿ, ಒರಿಸ್ಸಾ ವಿರುದ್ಧ ಪಂದ್ಯಶ್ರೇಷ್ಟ ಪ್ರಶಸ್ತಿಯಲ್ಲಿ ಭಾಗಿ
* 2020ರಲ್ಲಿ ಜನವರಿಯಲ್ಲಿ ನಡೆಯಬೇಕಿದ್ದ ಏಷ್ಯನ್ ಖೊ-ಖೋ ಚಾಂಪಿಯನ್ ಅಂತರಾಷ್ಟ್ರೀಯ ಕ್ರೀಡಾ ಕೂಟದಲ್ಲಿ ಭಾಗಿ

ಹೀಗೆ ಕ್ರೀಡೆಯ ಜೊತೆಗೆ ಎಂಜಿನಿಯರಿಂಗ ಪದವಿ ಪಡೆದ ಪ್ರಜ್ವಲ್ ಪ್ರಸ್ತುತ ಪ್ರತಿಷ್ಠಿತ ಐಟಿ ಕಂಪನಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಜೊತೆಗೆ ಟೂರ್ನಮೆಂಟ್‌ಗಳಲ್ಲೂ ಸಹ ಭಾಗಿಯಾಗುತ್ತಿದ್ದಾರೆ. ಈಗಾಗಲೇ ಹಲವು ಕ್ರೀಡಾ ಸಂಘಟನೆಗಳು ಇವರಿಗೆ ಪ್ರಶಸ್ತಿ ನೀಡಿವೆ

ರಾಷ್ಟ್ರ ಮಟ್ಟದಲ್ಲಿ ದೊಡ್ಡ ಖೋ-ಖೋ ಸ್ಟಾರ್ ಆಗುವುದರ ಜೊತೆಗೆ, ಪ್ರಶಸ್ತಿಗಳನ್ನ ಗೆದ್ದಿರುವ ಪ್ರಜ್ವಲ್ ತಮ್ಮ ವೃತ್ತಿಜೀವನದಲ್ಲಿ ಮತ್ತಷ್ಟು ಯಶಸ್ಸು ಸಾಧಿಸಲಿ ಎಂಬುದು 'ಮೈಖೇಲ್ ಕನ್ನಡ'ದ ಆಶಯ.

Story first published: Wednesday, June 29, 2022, 13:20 [IST]
Other articles published on Jun 29, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X