ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ನಮ್ಮೂರ ಪ್ರತಿಭೆ: ಗಾಲ್ಫ್‌ನಲ್ಲಿ ಭಾರತದ ಭವಿಷ್ಯದ ಭರವಸೆ ಕನ್ನಡತಿ ಅದಿತಿ ಅಶೋಕ್

Nammura Pratibhe: Indian Golfer Aditi Ashok life story and her achivement

ಗಾಲ್ಫ್ ಭಾರತಕ್ಕೆ ಹೊಸ ಕ್ರೀಡೆ ಅಲ್ಲದಿದ್ದರೂ ಈ ಕ್ರೀಡೆಯಲ್ಲಿ ಭಾರತೀಯ ಕ್ರೀಡಾಪಟುಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿದ್ದು ವಿರಳ. ಇಂಥಾ ಕ್ರೀಡೆಯನ್ನು ಆರಿಸಿಕೊಂಡು ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತಕ್ಕೆ ಭರವಸೆ ಮೂಡಿಸಿರುವ ಆಟಗಾರ್ತಿ ಅದಿತಿ ಅಶೋಕ್. ಅದಿತಿ ಅಶೋಕ್ ಕುಟುಂಬ ಮೂಲತಃ ಬಾಗಲಕೋಟೆಯವರಾಗಿದ್ದು ಬೆಂಗಳೂರಿನಲ್ಲಿ ನೆಲೆಸಿದ್ದು ಇಡೀ ಕರ್ನಾಟಕವೇ ಹೆಮ್ಮೆ ಪಡುವಂತಾ ಸಾಧನೆ ಮಾಡುತ್ತಿದ್ದಾರೆ.

ಉದ್ಯಮಿಯಾಗಿರುವ ಅದಿತಿ ಅಶೋಕ್ ಅವರ ತಂದೆ ಸ್ವತಃ ಗಾಲ್ಫ್ ಆಟಗಾರರು ಹಾಗೂ ಕೋಚ್ ಆಗಿದ್ದಾರೆ. ಹೀಗಾಗಿ ಬಾಲ್ಯದಲ್ಲಿಯೇ ಗಾಲ್ಫ್ ಆಟದ ಮೇಲೆ ಆಸಕ್ತಿ ಬೆಳೆಸಿಕೊಂಡರು. ನಂತರ ಒಂದಾದ ಬಳಿಕ ಒಂದರಂತೆ ಸಾಧನೆ ಮಾಡುತ್ತಾ ಸಾಗಿದ್ದಾರೆ. ಕನ್ನಡತಿ ಅದಿತಿ ಅಶೋಕ್ ಅವರ ಸಾಧನೆಗಳ ಬಗ್ಗೆ ಕೆಲ ಕುತೂಹಲಕಾರಿ ಮಾಹಿತಿ ಇಲ್ಲಿದೆ. ಮುಂದೆ ಓದಿ..

ಐರ್ಲೆಂಡ್ vs ಭಾರತ: ನಾಯಕತ್ವದ ಮೊದಲ ಪಂದ್ಯದಲ್ಲೇ ಹೊಸ ದಾಖಲೆ ಬರೆದ ಹಾರ್ದಿಕ್ ಪಾಂಡ್ಯಐರ್ಲೆಂಡ್ vs ಭಾರತ: ನಾಯಕತ್ವದ ಮೊದಲ ಪಂದ್ಯದಲ್ಲೇ ಹೊಸ ದಾಖಲೆ ಬರೆದ ಹಾರ್ದಿಕ್ ಪಾಂಡ್ಯ

ಅದಿತಿ ಹುಟ್ಟಿದ್ದು ಬೆಂಗಳೂರಿನಲ್ಲಿಯೇ

ಅದಿತಿ ಹುಟ್ಟಿದ್ದು ಬೆಂಗಳೂರಿನಲ್ಲಿಯೇ

ಹೆತ್ತವರು ಜಮಖಂಡಿ ಮೂಲದವರಾಗದರೂ ಅದಿತಿ ಹುಟ್ಟಿದ್ದು ಬೆಂಗಳೂರಿನಲ್ಲಿಯೇ. ತಂದೆ ಅಶೋಕ್ ಗುಡ್ಲಮನಿ, ತಾಯಿ ಮಹೇಶ್ವರಿ. ತಂದೆ ಉದ್ಯಮಿಯಾಗಿ ಯಶಸ್ವಿಯಾಗಿರುವ ಜೊತೆಗೆ ಗಾಲ್ಫ್ ಕೋಚ್ ಆಗಿಯೂ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಬೆಂಗಳೂರಿನಲ್ಲಿಯೇ ಅದಿತಿ ವಿದ್ಯಾಭ್ಯಾಸ ಪೂರೈಸಿದ್ದಾರೆ.

ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಧನೆ

ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಧನೆ

13ನೇ ವಯಸ್ಸಿನಲ್ಲಿಯೇ ಸ್ಪರ್ಧಾತ್ಮಕ ಗಾಲ್ಫ್ ಸ್ಪರ್ಧೆಯಲ್ಲಿ ಸ್ಪರ್ಧಿಸಲು ಆರಂಭಿಸಿದ ಅದಿತಿ ಅಶೋಕ್ ಇದುವರೆಗೂ ಎಂಟಕ್ಕೂ ಹೆಚ್ಚು ಅಂತಾರಾಷ್ಟ್ರೀಯ ಪ್ರಶಸ್ತಿ ಪಡೆದಿದ್ದಾರೆ. ಲೇಡಿಸ್ ಯುರೋಪಿಯನ್ ಟೂರ್ಮಮೆಂಟ್​ನಲ್ಲಿ ಜಯ ಸಾಧಿಸಿದ ಮೊದಲ ಭಾರತೀಯ ಗಾಲ್ಫರ್ ಎಂಬ ಖ್ಯಾತಿಗೆ ಪಾತ್ರರಾಗಿದ್ದಾರೆ. 2017ರಲ್ಲಿ ಎಲ್​​ಪಿಜಿಎ ಟೂರ್ನಾಮೆಂಟ್​ನಲ್ಲಿ ಸ್ಪರ್ಧಿಸಿದ ಭಾರತದ ಮೊದಲ ಗಾಲ್ಫರ್ ಎಂಬ ಹೆಗ್ಗಳಿಕೆಗೂ ಅದಿತಿ ಪಾತ್ರವಾಗಿದ್ದಾರೆ. 2016ರಲ್ಲಿ ರಿಯೊ ಒಲಂಪಿಕ್​ನಲ್ಲಿ ಅದಿತಿ ಭಾಗಿಯಾಗಿ 60 ಸ್ಪರ್ಧಿಗಳಲ್ಲಿ 41ನೇ ಸ್ಥಾನ ಪಡೆದಿದ್ದರು‌. ಆ ಟೂರ್ನಿಯಲ್ಲಿ ಭಾಗವಹಿಸಿದ್ದ ಗಾಲ್ಫ್ ಸ್ಪರ್ಧಿಗಳಲ್ಲಿ ಅದಿತಿ ಅತಿ ಕಿರಿಯವರಾಗಿದ್ದರು.

ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಶ್ರೇಷ್ಠ ಸಾಧನೆ

ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಶ್ರೇಷ್ಠ ಸಾಧನೆ

ಕನ್ನಡತಿ ಅದಿತಿ ಅಶೋಕ್ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಅದ್ಭುತ ಪ್ರದರ್ಶನ ನೀಡಿ ಎಲ್ಲರ ಚಿತ್ತ ತನ್ನತ್ತ ಸೆಳೆಯುವಲ್ಲಿ ಯಶಸ್ವಿಯಾಗಿದ್ದರು. ಪದಕ ಗೆಲ್ಲುವ ಅವಕಾಶವೂ ಅದಿತಿ ಮುಂದಿತ್ತು. ಅತೀ ಸಮೀದಲ್ಲಿ ಎಡವಿದ ಅವರು 4ನೇ ಸ್ಥಾನದಲ್ಲಿ ಸ್ಪರ್ಧೆ ಮುಗಿಸಿದರು. ವಿಶೇಷವೆಂದರೆ ಮಹಿಳಾ ವೈಯಕ್ತಿಕ ಗಾಲ್ಫ್ ಸ್ಪರ್ಧೆಯ ವಿಶ್ವ ಶ್ರೇಯಾಂಕಪಟ್ಟಿಯಲ್ಲಿ ಅದಿತಿ 200ನೇ ಶ್ರೇಯಾಂಕದಲ್ಲಿದ್ದರು. ಆದರೆ ಒಲಿಂಪಿಕ್ಸ್‌ನಲ್ಲಿ ಅದಿತಿ 4ನೇ ಸ್ಥಾನದಲ್ಲಿ ಸ್ಪರ್ಧೆ ಮುಗಿಸಿರುವುದು ಉತ್ತಮ ಸಾಧನೆಯೆನಿಸಿದೆ.

ಮತ್ತಷ್ಟು ನಿರೀಕ್ಷೆಯಿದೆ ಯುವ ಗಾಲ್ಫರ್ ಮೇಲೆ

ಮತ್ತಷ್ಟು ನಿರೀಕ್ಷೆಯಿದೆ ಯುವ ಗಾಲ್ಫರ್ ಮೇಲೆ

ಕಿರಿಯ ವಯಸ್ಸಿನಲ್ಲಿಯೇ ಅದಿತಿ ಅಶೋಕ್ ಎರಡು ಒಲಿಂಪಿಕ್ಸ್‌ನಲ್ಲಿ ಭಾರತವನ್ನು ಪ್ರತಿನಿಧಿಸಿದ್ದಾರೆ. ಹೀಗಾಗಿ ಅವರ ಮೇಲಿನ ನಿರೀಕ್ಷೆ ಹೆಚ್ಚಾಗಿದೆ. ಪ್ರತಿ ಬಾರಿಯೂ ತಮ್ಮ ಬೆಳವಣಿಗೆಯನ್ನು ಸಾಧಿಸುತ್ತಲೇ ಬರುತ್ತಿರುವ ಅದಿತಿ ಅಶೋಕ್ ಮುಂದಿನ ದಿನಗಳಲ್ಲಿ ಭಾರತದ ಪರವಾಗಿ ಮತ್ತಷ್ಟು ಶ್ರೇಷ್ಠ ಸಾಧನೆ ಮಾಡುವ ವಿಶ್ವಾಸ ಮೂಡಿಸಿದ್ದಾರೆ.

Story first published: Tuesday, June 28, 2022, 18:08 [IST]
Other articles published on Jun 28, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X