ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ಯೋಗೇಶ್ವರ ದತ್ ಗೆ ಸೋಲು, ಭಾರತದ ಪದಕದಾಸೆ ಕೊನೆ

By Madhusoodhan

ರಿಯೊ ಡಿ ಜನೈರೊ: ಆಗಸ್ಟ್, 21: ಒಲಿಂಪಿಕ್ಸ್ ನಲ್ಲಿ ಭಾರತದ ಅಭಿಯಾನ ಕೊನೆಯಾಗಿದೆ. ಪುರುಷರ 65 ಕೆಜಿ ಕುಸ್ತಿ ವಿಭಾಗದ ಅರ್ಹತಾ ಸುತ್ತಿನಲ್ಲಿ ಭಾರತದ ಕುಸ್ತಿಪಟು ಯೋಗೇಶ್ವರ್ ದತ್ ಸೋಲನುಭವಿಸುವ ಮುಖಾಂತರ ಪದಕಗಳ ಆಸೆ ಮುಕ್ತಾಯವಾಗಿದೆ.

ಮಂಗೋಲಿಯಾದ ಮಂದಕ್ನರನ್ ವಿರುದ್ಧ 0-3 ಅಂತರದಿಂದ ಯೋಗೇಶ್ವರ ದತ್ ಪರಾಭವ ಕಂಡಿದ್ದಾರೆ. ಪುರುಷ ಕ್ರೀಡಾಪಟುಗಳು ಈ ಬಾರಿ ದೇಶಕ್ಕೆ ಪದಕ ತಂದುಕೊಡುವಲ್ಲಿ ವಿಫಲರಾಗಿದ್ದಾರೆ.[ಭಾರತದ ಬೆಳ್ಳಿ ಸಿಂಧುಗೆ ಕಡೆಗೆ ಹರಿದು ಬಂದ ಗಿಫ್ಟ್ ಗಳ ರಾಶಿ]

india

ಮಹಿಳೆಯರ ಸಿಂಗಲ್ಸ್ ಬ್ಯಾಡ್ಮಿಂಟನ್ ನಲ್ಲಿ ಪಿ.ವಿ.ಸಿಂಧುಗೆ ಬೆಳ್ಳಿ ಹಾಗೂ ಸಾಕ್ಷಿ ಮಲಿಕ್ ಗೆ ಮಹಿಳೆಯರ ಕುಸ್ತಿ ವಿಭಾಗದಲ್ಲಿ ಕಂಚಿನ ಪದಕ ಸಿಕ್ಕಿದ್ದು ಬಿಟ್ಟರೆ ಭಾರತಕ್ಕೆ ಪದಕ ಸಿಕ್ಕಿಲ್ಲ.[ಸಿಂಧು ಸಾಧನೆ ಹಿಂದಿನ ಪ್ರೇರಕ ಶಕ್ತಿ ಆಕೆ ತಂದೆ ರಮಣ]

ವಿಶ್ವದ ನಂಬರ್ 9 ಕುಸ್ತಿ ಪಟು ಮಂಗೋಲಿಯಾದ ಮಂದಕ್ನರನ್ ಭಾರತದ ಕುಸ್ತಿಪಟು ಗೆ ಯಾವ ಹಂತದಲ್ಲೂ ಮೇಲುಗೈ ಸಾಧಿಸಲು ಬಿಡಲೇ ಇಲ್ಲ. ಒಟ್ಟಿನಲ್ಲಿ ಈ ಬಾರಿ ಭಾರತಕ್ಕೆ ರಿಯೋ ಒಲಿಂಪಿಕ್ಸ್ ನಲ್ಲಿ ನಿರೀಕ್ಷಿತ ಪದಕಗಳು ಬರಲೇ ಇಲ್ಲ. ಆಗಸ್ಟ್ 5 ರಂದು ಆರಂಭವಾಗಿದ್ದ ಒಲಿಂಪಿಕ್ಸ್ ಗೆ ಆಗಸ್ಟ್ 21 ರಂದು ವೈಭವದ ತೆರೆ ಬೀಳಲಿದೆ.

Story first published: Wednesday, January 3, 2018, 10:16 [IST]
Other articles published on Jan 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X