ಕಾಮನ್‌ವೆಲ್ತ್‌: ಬ್ಯಾಡ್‌ಮಿಂಟನ್ ಅಂಗಳದಿಂದ ಭಾರತಕ್ಕೆ ಮೊದಲ ಚಿನ್ನ

Posted By:
India grabs another gold medal in Badminton

ಕಾಮನ್‌ವೆಲ್ತ್‌ ಗೇಮ್ಸ್ 2018ರ ಬ್ಯಾಡ್‌ಮಿಂಟನ್‌ ಅಂಗಳದಿಂದ ಭಾರತಕ್ಕೆ ಮೊದಲ ಚಿನ್ನ ಬಂದಿದೆ. ಭಾರತ ತಂಡವು ಗುಂಪು ಪಂದ್ಯದಲ್ಲಿ ಚಿನ್ನದ ಪದಕ ಗೆದ್ದಿದೆ.

ಸೈನಾ ನೆಹ್ವಾಲ್, ಕಿದಂಬಿ ಶ್ರೀಕಾಂತ್, ಅಶ್ವಿನಿ ಪೊನ್ನಪ್ಪ, ಸಾತ್ವಿಕ್ ರಾಂಕಿರೆಡ್ಡಿ, ಚಿರಾಗ್ ಶೆಟ್ಟಿ, ಪೊನ್ನಪ್ಪ ಅವರುಗಳ ತಂಡ ಮಲೇಷ್ಯಾವನ್ನು 3-1 ರಿಂದ ಸೋಲಿಸಿ ಚಿನ್ನಕ್ಕೆ ಕೊರಳೊಡ್ಡಿದ್ದಾರೆ.

ಇದು ಬ್ಯಾಡ್‌ಮಿಂಟನ್ ಮಿಕ್ಸ್‌ಡ್‌ ಗುಂಪು ಪಂದ್ಯದಲ್ಲಿ ಭಾರತ ಜಯಿಸುತ್ತಿರುವ ಮೊದಲ ಚಿನ್ನದ ಪದಕ ಭಾರಕ್ಕೆ ಈವರೆಗೆ ಕಾಮನ್‌ವೆಲ್ತ್‌ನಲ್ಲಿ ಮಿಕ್ಸಡ್‌ ಗುಂಪು ವಿಭಾಗದಲ್ಲಿ ಪದಕ ಲಭಿಸಿರಲಿಲ್ಲ.

ಸೈನಾ ನೆಹ್ವಾಲ್ ಮತ್ತು ಶ್ರೀಕಾಂತ್ ಅವರು ತಮ್ಮ ಅನುಭವಕ್ಕೆ ತಕ್ಕೆ ಆಟವಾಡಿ ಮಲೇಷ್ಯಾದ ಚಿನ್ನದ ಕನಸನ್ನು ಭಗ್ನ ಮಾಡಿದರು. ಮೊದಲಿಗೆ ಮಿಕ್ಸಡ್‌ ಡಬಲ್ಸ್‌ನಲ್ಲಿ ರಂಕಿ ರೆಡ್ಡಿ ಮತ್ತು ಪೊನ್ನಪ್ಪ ಅವರುಗಳು ಗೆದ್ದರು, ನಂತರ ಕದಿಂಬಿ ಶ್ರೀಕಾಂತ್ ಅವರು ಮೂರು ಬಾರಿ ಒಲಿಂಪಿಯನ್ ಕಂಚಿನ ಪದಕ ಗೆದ್ದಿರುವ ಲಿ ಚಾಂಗ್ ವೀ ಅವರನ್ನು ನೇರ ಸೆಟ್‌ಗಳಲ್ಲಿ ಸೋಲಿಸಿದರು.

ಆದರೆ ಆ ನಂತರ ಪುರುಷರ ಡಬಲ್ಸ್‌ನಲ್ಲಿ ರಂಕಿರೆಡ್ಡಿ ಮತ್ತು ಪೊನ್ನಪ್ಪ ಅವರು ಸೋತಿತು, ಆದರೆ ನಂತರ ಅಂಗಳಕ್ಕಿಳಿದ ಭಾರತದ ಸ್ಟಾರ್ ಬ್ಯಾಡ್‌ಮಿಂಟನ್ ಪ್ಲೇಯರ್ ಸೈನಾ ನೆಹ್ವಾಲ್ ಅವರು ಗೆದ್ದು ಭಾರತಕ್ಕೆ ಚಿನ್ನ ದೊರಕಿಸಿಕೊಟ್ಟರು.

ಬ್ಯಾಡ್‌ಮಿಂಟನ್ ಅಂಗಳದಿಂದ ಕನಿಷ್ಠ ನಾಲ್ಕು ಚಿನ್ನದ ಪದಕಗಳನ್ನು ನಿರೀಕ್ಷಿಸಲಾಗಿದ್ದು, ಮಹಿಳೆ ಸಿಂಗಲ್ಸ್‌, ಡಬಲ್ಸ್‌, ಮಿಕ್ಸಡ್‌ ಡಬಲ್ಸ್‌, ಪುರುಷ ಸಿಂಗಲ್ಸ್‌, ಡಬಲ್ಸ್‌ ಪಂದ್ಯಗಳಲ್ಲಿ ಚಿನ್ನ ಗೆಲ್ಲುವ ನಿರೀಕ್ಷೆ ಇದೆ.

Story first published: Monday, April 9, 2018, 19:06 [IST]
Other articles published on Apr 9, 2018

myKhel ನಿಂದ ತಾಜಾ ಸುದ್ದಿಗಳನ್ನು ಪಡೆಯಿರಿ